Skip to main content

ವರ್ಧನ ಸಾಮ್ರಾಜ್ಯದ ಇತಿಹಾಸ

ವರ್ಧನ ಸಾಮ್ರಾಜ್ಯದ ಇತಿಹಾಸ

vardhana dynasty in kannada


ಗುಪ್ತ ಸಾಮ್ರಾಜ್ಯದ ಅವನತಿಯ ನಂತರ ಉತ್ತರ ಭಾರತದಲ್ಲಿ ಅನೇಕ ಚಿಕ್ಕ ಚಿಕ್ಕ ಸಂಸ್ಥಾನಗಳು ಸ್ಥಾಪಿಸಲ್ಪಟ್ಟವು. ಅವುಗಳಲ್ಲಿ ವರ್ಧನ ಸಾಮ್ರಾಜ್ಯವೂ ಒಂದು. ಈ ಸಾಮ್ರಾಜ್ಯದ ಸ್ಥಾಪಕ ಪ್ರಭಾಕರ ವರ್ಧನ. ಅವನ ರಾಜಧಾನಿ ಥಾನೇಶ್ವರ. ಹೀಗಾಗಿ ಇವರನ್ನು ಥಾನೇಶ್ವರದ ವರ್ಧನರೆಂದೂ ಕರೆಯುತ್ತಿದ್ದರು. ಪ್ರಭಾಕರ ವರ್ಧನ ಶಕ್ತಿಶಾಲಿಯೂ ಶೂರನೂ ಆಗಿದ್ದನು. ಆತನಿಗೆ ರಾಜವರ್ಧನ, ಹರ್ಷವರ್ಧನ ಹಾಗೂ ರಾಜಶ್ರೀಯೆಂಬ ಮೂವರು ಮಕ್ಕಳಿದ್ದರು. ಪ್ರಭಾಕರ ವರ್ಧನನ ಮರಣದ ನಂತರ ರಾಜವರ್ಧನನು ಪಟ್ಟಕ್ಕೆ ಬಂದನು. ಆದರೆ ಧುರ್ಧೈವದಿಂದ ಆತನ ಕೊಲೆಯಾಗುತ್ತದೆ. ಹೀಗಾಗಿ ಹರ್ಷವರ್ಧನನು ಕ್ತಿ.ಶ.606 ರಿಂದ ಕ್ರಿ.ಶ 647 ರವರೆಗೆ ರಾಜ್ಯಭಾರ ಮಾಡುತ್ತಾನೆ. 
ಹರ್ಷವರ್ಧನನು ಮಾಳ್ವ ಹಾಗೂ ಕನೋಜದ ಮೇಲೆ ದಂಡೆತ್ತಿ ಹೋಗಿ ಸದೆಬಡಿಯುತ್ತಾನೆ.ಹರ್ಷವರ್ಧನನ ತಂಗಿ ರಾಜಶ್ರೀಯನ್ನು ಮೌಖೇರಿಯ ಗೃಹವರ್ಮನಿಗೆ ವಿವಾಹ ಮಾಡಿ ಕೊಡಲಾಗಿರುತ್ತದೆ. ಮಾಳ್ವದ ದೇವಗುಪ್ತನು ಗೃಹವರ್ಮನನ್ನು ಕೊಲೆಗೈದು, ರಾಜಶ್ರಿಯನ್ನು ಬಂಧನದಲ್ಲಿಟ್ಟಿರುತ್ತಾನೆ. ಇದನ್ನು ಸಹಿಸದ ಅಂದಿನ ರಾಜ ರಾಜವರ್ಧನನು ಆತನ ಮೇಲೆ ದಂಡೆತ್ತಿಹೋಗಿ ಸೋಲಿಸಿರುತ್ತಾನೆ. ಮುಂದೆ ಗೌಡ ದೇಶದ ಶಶಾಂಕನು ಮಿತ್ರನ ವೇಷ ಧರಿಸಿ ಬಂದು ರಾಜವರ್ಧನನ ಕೊಲೆ ಮಾಡುತ್ತಾನೆ.
ಹರ್ಷವರ್ಧನ
ಹರ್ಷವರ್ಧನನು ಬಲುಶಕ್ತಿಶಾಲಿ ಸಾಮ್ರಾಟನಾಗಿದ್ದು ಸುಮಾರು 40 ವರ್ಷಗಳ ಕಾಲ ಆಳ್ವಿಕೆ ನಡೆಸಿದ. ಆತನ ಸಾಮ್ರಾಜ್ಯವು ಉತ್ತರದಲ್ಲಿ ಹಿಮಾಲಯದಿಂದ ಹಿಡಿದು ದಕ್ಷಿಣಕ್ಕಿರುವ ನರ್ಮದಾ ತೀರದವರೆಗೂ, ಪೂರ್ವದಲ್ಲಿ ಬಂಗಾಳಕೊಲ್ಲಿಯಿಂದ ಪಶ್ಚಿಮದಲ್ಲಿ ಅರಬ್ಬಿ ಸಮುದ್ರದವರೆಗೂ ವಿಸ್ತರಿಸಿತ್ತು.
ಹರ್ಷವರ್ಧನನ ಧರ್ಮ
ಹರ್ಷವರ್ಧನನು ಹಿಂದೂಧರ್ಮದ ಅನುಯಾಯಿ ಆಗಿದ್ದರೂ ಮುಂದೆ ಬೌದ್ಧ ಮಹಾಯಾನ ಪಂಥದ ಅನುಯಾಯಿಯಾಗಿರುವುದನ್ನು ಗಮನಿಸಬಹುದು.
ಹರ್ಷವರ್ಧನನ ಧರ್ಮ ಸಮ್ಮೇಳನ
ಕ್ರಿ.ಶ 644ರಲ್ಲಿ ಕನೋಜದಲ್ಲಿ ಬೃಹತ್ ಬೌದ್ಧ ಸಮ್ಮೇಳನವನ್ನು ನಡೆಸಿದ. ಈ ಅವಧಿಯಲ್ಲಿ ಭಾರತಕ್ಕೆ ಭೇಟಿ ನೀಡಿದ ಚೀನಿ ಯಾತ್ರಿಕ ಹ್ಯೂಯೆನ್ ತ್ಸಾಂಗನನ್ನು ಗೌರವಿಸಿದ. ಸಮ್ಮೇಳನವು 23 ದಿನಗಳವರೆಗೂ ವಿಜೃಂಭಣೆಯಿಂದ ನಡೆಯಿತು. ಕ್ರಿ.ಶ 647 ರಲ್ಲಿ ಹರ್ಷವರ್ಧನನ ಮರಣದ ನಂತರ ಸಾಮ್ರಾಜ್ಯವು ಒಡೆದು ಹೋಳಾಯಿತು.
ವರ್ಧನ ಸಾಮ್ರಾಜ್ಯದ ಇತಿಹಾಸಕ್ಕೆ ಸಂಬಂಧಿಸಿದ ಮುಖ್ಯಾಂಶಗಳು
ವರ್ಧನರ ಪ್ರಸಿದ್ದ ದೊರೆ - ಹರ್ಷವರ್ಧನ
ವರ್ಧನರ ರಾಜಧಾನಿ - ಥಾನೇಶ್ವರ
ತನ್ನ ರಾಜಧಾನಿಯನ್ನು ಥಾನೇಶ್ವರದಿಂದ ಕನೋಜಕ್ಕೆ ವರ್ಗಾಯಿಸಿದವನು - ಹರ್ಷವರ್ಧನ
ಹರ್ಷಚರಿತೆ ಬರೆದವನು - ಬಾಣ
ಹರ್ಷವರ್ಧನನ ಸಹೋದರಿ- ರಾಜಶ್ರೀ
ಹರ್ಷವರ್ಧನನನ್ನು ಸೋಲಿಸಿದ ದೊರೆ- ಇಮ್ಮಡಿ ಪುಲಿಕೇಶಿ
ನರ್ಮದಾ ಯುದ್ಧ ನಡೆದ ವರ್ಷ- ಕ್ರಿ.ಶ 630
ನರ್ಮದಾ ಯುದ್ದ ನಡೆದದ್ದು - ಹರ್ಷವರ್ಧನ ಮತ್ತು ಇಮ್ಮಡಿ ಪುಲಿಕೇಶಿ ನಡುವೆ
ಹರ್ಷವರ್ಧನನು ರಚಿಸಿದ ಗ್ರಂಥಗಳು - ರತ್ನಾವಳಿ,ನಾಗಾನಂದ,ಪ್ರಿಯದರ್ಶಿಕ
ವರ್ದನರ ಕಾಲದಲ್ಲಿ
ಸೇನಾಧಿಪತಿಗೆ -ಉಪಬಲಾಧಿಕೃತ. ಕಂದಾಯಮಂತ್ರಿಗೆ ಭೋಗಪತಿ ಎಂಬ ಹೆಸರಿತ್ತು
ವರ್ಧನ ಸಾಮ್ರಾಜ್ಯವನ್ನು ಭುಕ್ತಿ,ವಿಷಯ,ಪಥಕ,ಗ್ರಾಮ ಎಂದು ವಿಂಗಡಿಸಲಾಗಿತ್ತು
ಹರ್ಷವರ್ಧನ ಏರ್ಪಡಿಸಿದ ಧರ್ಮ ಸಮ್ಮೇಳನ - ಪ್ರಯಾಗ (ಅಲಹಾಬಾದ) ಸಮ್ಮೇಳನ
ಕನೋಜನಲ್ಲಿ ಹರ್ಷ ನಡೆಸಿದ ಧಾರ್ಮಿಕ ಸಮ್ಮೇಳನ - ಕ್ರಿ.ಶ 643-44
ವರ್ಧನರ ಕಾನೂನು ಅಧಿಕಾರಿಗಳು-ದಂಡಪಾಕ್ಷಿಕ
ಮಹಾಸಂಧಿವಿಗ್ರಹಕನ ಕೆಲಸ - ವಿದೇಶಿ ವ್ಯವಹಾರ
ರಾಜಶ್ರಿಯ ವಿವಾಹವಾದವರು - ಕನೋಜದ ಗೃಹವರ್ಮ
ಪ್ರಭಾಕರ ವರ್ಧನನ ಮಕ್ಕಳು- ರಾಜವರ್ಧನ, ಹರ್ಷವರ್ಧನ ಮತ್ತು ರಾಜಶ್ರಿ
ಪ್ರಭಾಕರ ವರ್ಧನನ ತಂದೆ - ಆದಿತ್ಯವರ್ಧನ
ಕನೋಜದ ಮೇಲೆ ದಾಳಿ ಮಾಡಿ ಗೃಹವರ್ಮನನ್ನು ಕೊಂದು ರಾಜಶ್ರಿಯನ್ನು ಬಂಧಿಸಿದ ದೊರೆ - ದೇವಗುಪ್ತ
ಓದುಗರೆ ತಾವು ವರ್ಧನ ಸಾಮ್ರಾಜ್ಯದ ಇತಿಹಾಸವನ್ನು ತಿಳಿದುಕೊಂಡಿರುವಿರಿ. ಈ ಲೇಖನವು ಇಷ್ಟವಾಗಿದ್ದರೆ ಬ್ಲಾಗ್ ನ ಫಾಲೋ ಬಟನ್ ಒತ್ತಿ..
ಈ ಲೇಖನಗಳನ್ನೂ ಓದಿ


Comments

Post a Comment

ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ