Skip to main content

Posts

Showing posts from December, 2021

ಪೈಲ್ವಾನ‌ ಮಾಸ್ತರ್ @ ಸಂದೀಪ ಕುಲಕರ್ಣಿ

ಮಾದಾಪೂರದ ಬೋರೆಗೌಡ್ರು ಊರಿಗೆನೇ ದೊಡ್ಡ ದನಿಗಳು..ತಮ್ಮ ಮಕ್ಕಳನ್ನ ಚೆನ್ನಾಗಿ ಉಗಿತ್ತಿದ್ದರು..ನೋಡರೋ ಆ ಮುದುಕಪ್ಪನ್ನ ಮಕ್ಕಳನ್ನ..ಎಷ್ಟೇ ಬಡತನದಲ್ಲಿದ್ದರೂ ಚೆನ್ನಾಗಿ ತಿಂದು ಕೊಬ್ಬಿದ,ಮಥಿಸಿದ ಗಜಾ ಇದ್ದಂಗ ಇದ್ದರಲ್ಲೋ..ನೀವು ಅದಿರಿ..ಎನ್ ತಿಂದರೂ ಬಡಶುಂಠಿ ಬೇರ ಆಗಿದಿರಲ್ಲೊ..?? ಚಪಾತಿ,ರೊಟ್ಡಿ,ಮುದ್ದೆ,ಗೋದಿ ಪಾಯಸ ಯಾವುದು ನಾಟತಾ ಇಲ್ಲ ನಿಮಗೆ..ನಿಮ್ಮ ಮೊಖಕ್ಕೊಂದು ಉಗಿಯಾ..ಎಂದು ಮಕ್ಕಳನ್ನ ತರಾಟೆಗೆ ತೊಗಿಂಡಿದ್ರು ಊರಗೌಡ್ರು. ಆ ಕಡೆ ಮುದುಕಪ್ಪನ ಮಗ ಮಲ್ಲೇಶ ಒತ್ತಾರೆನೆ ಇದ್ದು ಮೇವು ತಂದಿ ಹೊಳಿ ಕಡೆ ಹೋಗಿ ಒಂದ ಗಂಟೆ ಈಜಾಡಿ ಬಂದು ಗೋದಿ ಪಾಯಸ,ಶೇಂಗಾ ಬೆಲ್ಲ ಎನ ಕೊಟ್ಟಿದ್ದು ಚೆನ್ನಾಗಿ ಚಚ್ಚಿ ಒಳ್ಳೆ ಜವಾರಿ ಎತ್ತಿನ ಮೈಕಟ್ಟನಂಗ ಆಗಿದ್ದ...ಸಾಲಿ ಕಲಿತಿದ್ದು ಟಿ‌ಸಿಎಚ್ ವರೆಗೆ..ಆದರೆ ಕಡಿಮೆ ಅಂಕ ಬಂದಿದ್ದರಿಂದ ನೌಕರಿ ಗಿಟ್ಟಿರಲಿಲ್ಲ..ಹೀಗಾಗಿ ಅಲ್ಲೆ ಇಲ್ಲಿ ನಡಿಯೋ ಕುಸ್ತಿ ಸ್ಪರ್ದೆ ಲಿ ಭಾಗವಹಿಸಿ ಅವರು ಇವರಿಗೆ ಕುಸ್ತಿ ತರಬೇತಿ ಕೊಟ್ಡು ಜೀವನ ಸಾಗಸ್ತಾ ಇದ್ದ..  ಅವನ ಊಟಾ ಮಾಡೋ ಪದ್ದತಿನೂ ಅದ್ಭುತ...ಹಾಲನ್ಯಾಗ ನಾಲ್ಕ ರೊಟ್ಟಿ,ಮೊಸರನ್ಯಾಗ ನಾಲ್ಕ ರೊಟ್ಟಿ,ಮಜ್ಜಗ್ಯಾಗ ನಾಲ್ಕ ರೊಟ್ಡಿ.ಜೊತೆಗೆ ಒಂದ ತಾಟ ಅನ್ನ ಊಟಾ ಮಾಡತಿದ್ದ...ಹಿಂಗ ದೂಸಾ ಕಳದವೂ..ಆದರೂ ನೌಕರಿ ಹತ್ತಲಿಲ್ಲ..       ನೌಕರಿ ನನಗ ಸಿಗೊದಿಲ್ಲ ಅಂತ ಅನ್ನಕೊಂಡು ಬೆಂಗಳೂರಿಗೆ ಬರ್ತಾನೆ ಮಲ್ಲೇಶಪ್ಪ..ಪ್ರಭಾವಿ ರಾಜಕಾರಣಿ ಯೊಬ್ಬರ ಪರಿಚಯವ