ದೂರದಿಂದ ಕಾಣುವ ಕೋಟೆಯ ದೃಶ್ಯ ವಿಜಯದಶಮಿಯ ದಿನ ವಿಜಯಯಾತ್ರೆಗೆ ಸಿದ್ದಗೊಂಡು ಹೊರಟಿದ್ದಾಯಿತು. ಮುರಗೋಡ ಮಾರ್ಗವಾಗಿ ಅದರ ಈಶಾನ್ಯಕ್ಕೆ ಹೊರಳಿದರೆ ಅಲ್ಲಿಂದ 9 ಕಿ.ಮೀ ನಲ್ಲಿ ಕಾಣಸಿಗುವುದೇ ಸುಬ್ಬಾಪೂರ.ಸುಬ್ಬಾಪೂರವು ಹಿಂದೆ ಸುಬ್ರಹ್ಮಣ್ಯಪುರವಾಗಿದ್ದು ಕಾಲಾನಂತರದಲ್ಲಿ ಸುಬ್ಬಾಪೂರಾಗಿ ಉಳಿದಿದೆ. ಸುಮಾರು 500 ಜನಸಂಖ್ಯೆಯಿರುವ ಪುಟ್ಟಗ್ರಾಮ. ಈ ಗ್ರಾಮಕ್ಕೆ ಹೋಗುವಾಗ ಮುಂಚೆಯೇ ರಾಮಾಪೂರವೆಂಬ ಇನ್ನೊಂದು ಗ್ರಾಮ ಸಿಗುವುದು. ಅಲ್ಲಿಂದಲೇ ನಮಗೆ ಸುಬ್ಬಾಪೂರದ ಗಿರಿದುರ್ಗ ಕಾಣತೊಡಗುತ್ತದೆ. ಮದುವೆ ಗಂಡಿಗೆ ತೊಡಿಸಿದ ಭಾಷಿಂಗದಂತೆ ಗುಡ್ಡದ ಮೇಲೆ ನಿಂತ ಐತಿಹಾಸಿಕ ಗಢ ನಮ್ಮನ್ನು ಆಕರ್ಷಿಸುತ್ತದೆ.ಅದನ್ನು ನೋಡಿ ನನಗೆ ಖುಷಿಯ ಜೊತೆಗೆ ಚೂರು ಭಯವೂ ಆಗಿ ನನ್ನ ಗೆಳೆಯನಿಗೆ ಬೈಕ್ ಸ್ಟಾಪ್ ಮಾಡಲು ಹೇಳಿದೆ. "ದೋಸ್ತ ಆ ಗುಡ್ಡಾ ಹತ್ತಾಕ ಆಗತೈತಿಲೋ ನೋಡೋ?" ಎಂದೆ. ಆತನೂ ಮತ್ತೊಮ್ಮೆ ನೋಡಿ "ಲೇ ಬೈಕ ಹೋಗಾಕ ದಾರಿ ಇರತೈತಿ ನಡೀ" ಅಂದ. ನನಗ ಸ್ವಲ್ಪ ಧೈರ್ಯ ಬಂತು. "ಹೌದೋ! ಈ ವಯಸ್ಸಿನ್ಯಾಗ ಈ ಗುಡ್ಡಾ ಹತ್ತಲಿಲ್ಲ ಅಂದ್ರ ಇನ್ನ ಯಾವತ್ತೂ ಹತ್ತಲಿಕ್ಕೆ ಆಗೋದಿಲ್ಲ ನಡೆದಬಿಡು" ಎಂದು ಮತ್ತೆ ಪಯಣ ಮುಂದುವರೆಸಿದವು. ಸುಬ್ಬಾಪೂರಕೆ ಹೋಗಿ ಸ್ಥಳೀಯರಿಗೆ "ಕೋಟೆ ನೋಡ್ಬೇಕಲ್ರಿ" ಅಂತ ಹೇಳಿದ್ವಿ. ಅವರು "ಹಿಂಗ ಹೋಗ್ರಿ ಸರ್..ಎಲ್ಲಿಂದ ಬಂದೇರಿ? ನೀರ ಬಾಟಲ್ ತುಗೊಂಡ ಹೋಗ್ರಿ...
EDUCATION | ENTERTAINMENT | INFOTAINMENT