Skip to main content

Posts

Showing posts from January, 2018

ಭಾರತದ ಮುಖ್ಯ ವಿವಿದೋದ್ದೇಶ ನದಿಕಣಿವೆ ಯೋಜನೆಗಳು

ಭಾರತದ ಮುಖ್ಯ ವಿವಿದೋದ್ದೇಶ ನದಿಕಣಿವೆ ಯೋಜನೆಗಳು 1) ದಾಮೋದರ್ ನದಿ ಕಣಿವೆ ಯೋಜನೆ:- ದಾಮೋದರ್ ಅಣೆಕಟ್ಟು ಸ್ವತಂತ್ರ್ಯ ಭಾರತದ ಮೊಟ್ಟಮೊದಲ ಬೃಹತ್ ಅಣೆಕಟ್ಟು ಆಗಿದೆ. ದಾಮೋದರ್ ಕಣಿವೆ ಕಾರ್ಪೋರೇಷನ್ ನನ್ನುಜುಲೈ 7, 1948 ರಲ್ಲಿ ಸಂವಿಧಾನ ರಚನಾ ಸಭೆಯ ಕಾಯ್ದೆ ಮೂಲಕ ಸ್ಥಾಪಿಸಲಾಯಿತು. ಇದನ್ನು ಅಮೇರಿಕಾದ ಟೆನಿಸ್ಸಿ ಕಣಿವೆ ಯೋಜನೆ ಮಾದರಿಯಲ್ಲಿ ರಚಿಸಲಾಗಿದೆ. ದಾಮೋದರ್ ಕಣಿವೆ ಯೋಜನೆಯನ್ನುಭಾರತದ ರೋರ್ ಎಂದು ಕರೆಯುತ್ತಾರೆ. ಏಕೆಂದರೇ ದಾಮೋದರ್ ಕಣಿವೆ ಪ್ರದೇಶದಲ್ಲಿ ಅತಿ ಹೆಚ್ಚು ಕೈಗಾರಿಕೆಗಳು ಕಂಡುಬರುತ್ತವೆ. ಆದ್ದರಿಂದ ಇದಕ್ಕೆ ಭಾರತದ ’ರೋರ್’ ಎಂದು ಕರೆಯುತ್ತಾರೆ. ದಾಮೋದರ್ ಕಣಿವೆಯು ಭಾರತದ ಪ್ರಮುಖ ಕೈಗಾರಿಕಾ ಪ್ರದೇಶಗಳಲ್ಲಿ ಒಂದು. ಈ ಪ್ರದೇಶದಲ್ಲಿ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾದ ಕೈಗಾರಿಕೆಗಳಾದ ಬೋಕಾರೋ (ಜಾರ್ಕಂಡ್ ನಲ್ಲಿದೆ), ಬರ್ನಾಪೂರ, ದುರ್ಗಾಪುರ (ಪಶ್ಚಿಮ ಬಂಗಾಳ)ದಲ್ಲಿ ಸ್ಥಾಪನೆಯಾಗಿವೆ. ಇಲ್ಲಿ ಅಧಿಕ ಪ್ರಮಾಣಾದ ಕಲ್ಲಿದ್ದಲು ಗಣಿಗಳಿವೆ. # ದಾಮೋದರ್ ನದಿಯ ಉಪನದಿಯಾದ ಬರ್ಕರ್ ನದಿಗೆ ಅಡ್ದಲಾಗಿ 1953 ರಲ್ಲಿತಿಲಾಯ ಅಣೆಕಟ್ಟು ಕಟ್ಟಲಾಗಿದೆ. # 1995 ರಲ್ಲಿ ದಾಮೋದರ್ ನದಿಯ ಇನ್ನೊಂದು ಉಪನದಿಯಾದ ಕೋನಾರ್ನದಿಗೆ ಅಣೆಕಟ್ಟು ಕಟ್ಟಲಾಗಿದೆ. # ದಾಮೋದರ್ ನದಿಯು ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳ ರಾಜ್ಯದಲ್ಲಿ ಹರಿಯುವ ನದಿಯಾಗಿದೆ. # ದಾಮೋದರ್ ನದಿಯನ್ನು ಪಶ್ಚಿಮ ಬಂಗಾಳದ ಕಣ್ಣೀರಿನ ನ

ಮೌರ್ಯ ಸಾಮ್ರಾಜ್ಯ ,ಆಡಳಿತ

ಮೌರ್ಯ ಸಾಮ್ರಾಜ್ಯದ ಆಡಳಿತ ಭಾರತದ ಮೆಕೈವರ ಎನಿಸಿದ್ದು - ಕೌಟಿಲ್ಯ ಕರ್ನಾಟಕದಲ್ಲಿ ದೊರೆತಿರುವ ಅಶೋಕನ ಒಟ್ಟು ಶಾಸನಗಳು - ೧೮ ಮೌರ್ಯರ ಆಡಳಿತದಲ್ಲಿ ನಗರಾಡಳಿತದ ಅಧಿಕಾರಿ - ನಗರ ವ್ಯವಹಾರಿಕ ಭೂಮಿಯ ಅಳತೆ, ಮಾಲೀಕತ್ವ, ಮತ್ತು ಭೂಕಂದಾಯ ಮೇಲ್ವಿಚಾರಣಾಧಿಕಾರಿ - ರಜ್ಜುಕ ಭೂಮಿಯ ಉತ್ಪನ್ನದಲ್ಲಿ ನೀಡಬೇಕಾದ ಭೂಕಂದಾಯ - ಆರನೆಯ ಒಂದು ಭಾಗ ಧರ್ಮ ಮಹಾಮಾತ್ರರ ಪ್ರಮುಖ ಕಾರ್ಯ - ನ್ಯಾಯ ತೀರ್ಮಾನ ಮತ್ತು ಧರ್ಮ ಪ್ರಚಾರ ಸಾರ್ವಜನಿಕ ಹಿತವನ್ನು ಗಮನಿಸುವ ಅಧಿಕಾರಿ - ವಜ್ರಭೂಮಿಕ ವಜ್ರಭೂಮಿಕನ ಮುಖ್ಯ  ಕಾರ್ಯಗಳು - ಭಾವಿ,ರಸ್ತೆ,ತೋಪುಗಳ ನಿರ್ಮಾಣ ಮೌರ್ಯರ ಕಾಲದಲ್ಲಿಯ ಪ್ರಾಂತ್ಯಗಳು - ಪ್ರಾಚ್ಯ, ( ತಕ್ಷಶಿಲೆ) ಉತ್ತರಾಪಥ (ಉಜ್ಜಯಿನಿ) ಅವಂತೀ ( ಕೋಸಲ) ದಕ್ಷಿಣಾಪಥ ( ಸುವರ್ಣಗಿರಿ) ಅಶೋಕನ ಕಾಲದಲ್ಲಿ ಸೇರಿಸಲ್ಪಟ್ಟ ೫ ನೇ ಪ್ರಾಂತ್ಯ - ಕಳಿಂಗ್ ಗ್ರಾಮಗಳ ಆಡಳಿತ ನಿರ್ವಹಣಾಧಿಕಾರಿ - ಗ್ರಾಮಿಕ ಹತ್ತು ಗ್ರಾಮಗಳ ಮೇಲ್ವಿಚಾರಕ - ಗೋಪ ಪ್ರಾಂತಗಳ ಕೆಳಗಿನ ಜನಪದಗಳ ಮೇಲ್ವಿಚಾರಕ - ಸಮಹರತೃ ಮೌರ್ಯರ ಆಡಳಿತ ಮೊಘಲರ ಆಡಳಿತಕ್ಕಿಂತ ಮೇಲಾಗಿತ್ತು ಎದಿರುವ ಇತಿಹಾಸಜ್ಞ - ವಿನ್ಸೆಂಟ್ ಸ್ಮಿತ್ ಕೌಟಿಲ್ಯನ ಅರ್ಥಶಾಸ್ತ್ರ  ಹಸ್ತಪ್ರತಿಯನ್ನು ಪತ್ತೆ ಹಚ್ಚಿ ಆದುನಿಕ ಜಗತ್ತಿಗೆ ಸಿಗುವಂತೆ ಮುದ್ರಿಸಿ ಪ್ರಕಟಿಸಿದವರು-ಮೈಸೂರಿನ ಶಾಮಾಶಾಸ್ತ್ರಿಗಳು ಮೌರ್ಯರ ಕಾಲದ ಶಿಕ್ಷೆ ಕ್ರಿಮಿನಲ್ ಅಪರಾಧ - ಮರಣದಂಡನೆ ನೀಡಲಾಗುತ್ತಿತ್ತು.ಇದರ ನ

ಮೌರ್ಯ ಸಾಮ್ರಾಜ್ಯ. ,ಅಶೋಕ

ಚಂದ್ರಗುಪ್ತ ಮೌರ್ಯನ ಧರ್ಮ ಗುರು - ಭದ್ರಬಾಹು ಚಂದ್ರಗುಪ್ತ ಮೌರ್ಯನು ತನ್ನ ಅಂತ್ಯಕಾಲದಲ್ಲಿ ನೆಲೆಸಿದ್ದ  ದಕ್ಷಿಣ ಭಾರತದ ಸ್ಥಳ - ಶ್ರವಣಬೆಳಗೊಳ ಚಂದ್ರಗುಪ್ತ ಮೌರ್ಯನ ಉತ್ತರಾಧಿಕಾರಿ - ಬಿಂದುಸಾರ ಬಿಂದುಸಾರನ ಮಗ - ಅಶೋಕ ವಿಶ್ವದ ಗಣ್ಯ ವ್ಯಕ್ತಿಗಳಲ್ಲಿ ಅಶೋಕ ಒಬ್ಬ  ಎಂದು ಬಣ್ಣಿಸಿರುವ ಇತಿಹಾಸ ತಜ್ಞ - ಹೆಚ್.ಜಿ. ವೆಲ್ಸ್ ಅಶೋಕನನ್ನು  ಪ್ರೀತಿಯ ಮೂಲಕ ವಿಜಯ ಸಾಧಿಸಿದ ನವಯುಗದ ಪ್ರವರ್ತಕ ಎಂದಿರುವರು - ಹೆಚ್.ಜಿ.ವೆಲ್ಸ್ ಅಶೋಕನು ಅಧಿಕಾರಕ್ಕೆ ಬಂದಿದ್ದು - ಕ್ರಿ.ಪೂ.೨೭೩ ಅಶೋಕನು ಮಾಡಿದ ಪ್ರಥಮ ಯುದ್ಧ - ಕಳಿಂಗ ಕಳಿಂಗ ಯುದ್ಧ ನಡೆದ ಸ್ಥಳ- ಈಗಿನ ಓರಿಸ್ಸಾ ಅಶೋಕನ ಶಾಸನಗಳು ರಚಿತವಾದ ಲಿಪಿ - ಪ್ರಾಕೃತ ಭಾಷೆಯ ಬ್ರಾಹ್ಮಿ‌ಲಿಪಿ ವಾಯುವ್ಯ  ಭಾರತದ ಅಶೋಕನ ಶಾಸನಗಳ ಲಿಪಿ - ಖರೋಷ್ಠಿ ಅಶೋಕನು ಸ್ವೀಕರಿಸಿದ ಧರ್ಮ - ಬೌದ್ಧ ಅಶೋಕನಿಂದ ನೇಮಿಸಲ್ಪಟ್ಟ  ಪ್ರಮುಖ ಅಧಿಕಾರಿಗಳು - ಧರ್ಮ ಮಹಾಮಾತ್ರರು ಕರ್ನಾಟಕದಲ್ಲಿ ಅಶೋಕನ ಶಾಸನಗಳು ದೊರೆತಿರುವ ಜಿಲ್ಲೆಗಳು - ಚಿತ್ರದುರ್ಗ,ಬಳ್ಳಾರಿ,ಕೊಪ್ಪಳ,ರಾಯಚೂರು,ಗುಲ್ಬರ್ಗಾ ಅಶೋಕನ ಕಾಲದ ಗುಹಾಲಯಗಳು -ಬಿಹಾರದ ಬರಾಬರ ಬೆಟ್ಟ ಅಶೋಕನ ಸ್ತೂಪಗಳಿರುವ ಸ್ಥಳಗಳು - ಸಾರಾನಾಥ, ಸಾಂಚಿ ಭಾರತದ ರಾಷ್ಟ್ರೀಯ ಲಾಂಛನವನ್ನು ಪಡೆದಿರುವುದು - ಸಾರನಾಥದ ಸ್ತಂಭದಿಂದ ಭಾರತದ ರಾಷ್ಟ್ರೀಯ ಲಾಂಛನದಲ್ಲಿ ರುವ ಪ್ರಾಣಿಗಳು - ಕುದುರೆ,ಆನೆ,ಎತ್ತು,ಮತ್ತು ಸಿಂಹ ಅಶೋಕನು ಬೌದ್ಧಧರ್ಮ ಪ್ರಚಾರಕ್ಕ

ಮೌರ್ಯ ಸಾಮ್ರಾಜ್ಯ ,ಚಂದ್ರಗುಪ್ತ ಮೌರ್ಯ,ಕೌಟಿಲ್ಯ,

ಮಗಧ ರಾಜ್ಯದ ರಾಜಧಾನಿ - ಪಾಟಲೀಪುತ್ರ ಮಗಧ ಎಂದರೆ - ಇಂದಿನ ಬಿಹಾರದ ಭಾಗ ಮಗಧ ಸಾಮ್ರಾಜ್ಯ  ರೂಪುಗೊಂಡ ಕಾಲ - ಕ್ರಿ.ಪೂ.೬ ನೆ ಶತಮಾನ ಹರ್ಯಂಕ ವಂಶದ ಪ್ರಸಿದ್ಧ ದೊರೆಗಳು - ಬಿಂಬಸಾರ ಮತ್ತು ಅಜಾತ ಶತ್ರು ಮಗಧ ಪ್ರಾಂತ್ಯದಲ್ಲಿದ್ದ  ಒಟ್ಟು  ಜನಪದ / ಗಣರಾಜ್ಯಗಳು - ೧೬ ಮಗಧದಲ್ಲಿ ಹರ್ಯಂಕ ವಂಶದ ನಂತರ ಆಳಿದ ವಂಶ- ನಂದವಂಶ ನಂದವಂಶದ ಸ್ಥಾಪಕ - ಮಹಾ ಪದ್ಮನಂದ ನಂದರಾಜರ ರಾಜಧಾನಿ  - ಪಾಟಲೀಪುತ್ರ ನಂದವಂಶದ ಕೊನೆಯ ದೊರೆ - ಧನನಂದ ನಂದರ ನಂತರ ಮಗಧದಲ್ಲಿ ಅಧಿಕಾರಕ್ಕೆ ಬಂದವರು - ಮೌರ್ಯರು ಮೌರ್ಯವಂಶದ ಸ್ಥಾಪಕ - ಚಂದ್ರಗುಪ್ತ ಮೌರ್ಯ ಚಂದ್ರಗುಪ್ತ ಮೌರ್ಯನ ತಾಯಿ - ಮುರಾದೇವಿ ಮೌರ್ಯರ ರಾಜಧಾನಿ - ಪಾಟಲೀಪುತ್ರ ಚಂದ್ರಗುಪ್ತ ಮೌರ್ಯನಿಗೆ ರಾಜ್ಯ ಸ್ಥಾಪನೆಗೆ ಸಹಾಯ ಮಾಡಿದವರು - ಕೌಟಿಲ್ಯ ಕೌಟಿಲ್ಯನ ಇತರ ಹೆಸರುಗಳು - ಚಾಣಕ್ಯ , ವಿಷ್ಣುಗುಪ್ತ ಕೌಟಿಲ್ಯ  ಬರೆದ ಗ್ರಂಥ - ಅರ್ಥಶಾಸ್ತ್ರ ಅರ್ಥಶಾಸ್ತ್ರ ಹೊಂದಿರುವ ವಸ್ತು - ರಾಜಕೀಯ ಸಿದ್ಧಾಂತಗಳು ಸೆಲ್ಯುಕಸ್ ನು ಚಂದ್ರಗುಪ್ತ ಮೌರ್ಯನ ಆಸ್ಥಾನಕ್ಕೆ  ಕಳುಹಿಸಿದ ರಾಯಭಾರಿ - ಮೆಗಾಸ್ತನೀಸ್ ಮೆಗಾಸ್ತನೀಸ್ ಬರೆದ ಗ್ರಂಥ - ಇಂಡಿಕಾ ಇಂಡಿಕಾ ಗ್ರಂಥ ಈ ಭಾಷೆಯಲ್ಲಿದೆ - ಗ್ರೀಕ್ ಚಂದ್ರಗುಪ್ತನ ಸಾಹಸ ಮತ್ತು ಚಾಣಕ್ಯನ ಚತುರೋಪಾಯಗಳನ್ನು ನಾಟಕೀಯವಾಗಿ ಚಿತ್ರಿಸಿರುವ ಪುಸ್ತಕ - ಮುದ್ರಾರಾಕ್ಷಸ ಮುದ್ರಾರಾಕ್ಷಸ ಗ್ರಂಥದ  ಕತೃ - ವಿಶಾಖದತ್ತ ಚಂದ್ರಗುಪ್ತ ಮೌರ್ಯನ ಪ್ರಧಾನ ಮಂತ

ಸಾಮವೇದ, ಯಜುರ್ವೇದ, ಅಥರ್ವಣ ವೇದ.ಬ್ರಾಹ್ಮಣಕಗಳು,ಅರಣ್ಯಕಗಳು,ಉಪನಿಷತ್ತುಗಳು,ವೇದಾಂಗಗಳು

ಸಾಮವೇದ ೧೬೦೩ ಸೂತ್ರಗಳಿವೆ ಇವುಗಳನ್ನು ಸೋಮಯಜ್ಞ ಮಾಡುವಾಗ ಹಾಡಲಾಗುತ್ತಿತ್ತು. ಇವುಗಳನ್ನು ಉದ್ಗಾತ್ರ. ಎಂಬ ಪುರೋಹಿತರು ಹಾಡುತ್ತಿದ್ದರು. ಇದರಿಂದ ಸಂಗೀತ ಶಾಸ್ತ್ರ ರೂಪುಗೊಂಡಿತೆಂದು ನಂಬಲಾಗಿದೆ. ಯಜುರ್ವೇದ ಇದು ೪೦ ಅಧ್ಯಾಯಗಳು ಮತ್ತು ೧೦೧ ಶಾಖೆಗಳನ್ನು ಹೊಂದಿದೆ ಇದರಲ್ಲಿ ಕೃಷ್ಣ ಯಜುರ್ವೇದ ಮತ್ತು ಶುಕ್ಲ ಯಜುರ್ವೇದ ಎಂದು ಎರಡು ಭಾಗಗಳಿವೆ ಅಶ್ವಮೇದದಂತಹ ಯಜ್ಞ ಯಾಗಾದಿಗಳ ಬಗ್ಗೆ ವಿವರಿಸುತ್ತದೆ. ಇದರ ಶ್ಲೋಕಗಳನ್ನು ಪಠಿಸುವವರನ್ನು ಅದ್ವರ್ಯು ಎಂದು ಕರೆಯಲಾಗುತ್ತಿತ್ತು. ಇದರ ೫ ಶಾಖೆಗಳು ಮಾತ್ರ ಲಭ್ಯವಾಗಿವೆ ಕೃಷ್ಣ ಯಜುರ್ವೇದದಲ್ಲಿ ಯಾಗಗಳನ್ನು ಮಾಡುವ ವರ್ಣನೆ ಕಂಡು ಬಂದರೆ ,ಶುಕ್ಲ ಯಜುರ್ವೇದವು ಮಂತ್ರ ಹಾಗೂ ಯಾಗದ ನಿಯಮಗಳನ್ನು ಹೊಂದಿದೆ. ಅಥರ್ವಣ ವೇದ ಇದರ ಇನ್ನೊಂದು ಹೆಸರು ಮಾಯಸೂತ್ರ ಗ್ರಂಥ ೨೦ ಅಧ್ಯಾಯಗಳಲ್ಲಿ ೭೩೧ ಶ್ಲೋಕಗಳನ್ನು ಹೊಂದಿದೆ. ಯಂತ್ರ,ತಂತ್ರ,,ಮಾಟ,ಮೋಡಿ,ಯಕ್ಷಿಣಿ ವಿದ್ಯೆ ಮೊದಲಾದವುಗಳನ್ನು ತಿಳಿಸುತ್ತದೆ. ನಾಲ್ಕೂ ವೇದಗಳನ್ನು ಸಂಹಿತ ಎಂದರೆ,ಮೊದಲ ಮೂರು ವೇದಗಳಿಗೆ ತ್ರಯಿ ಎನ್ನುವರು. ಬ್ರಾಹ್ಮಣಕಗಳು ವೇದಗಳ ಶ್ಲೋಕಗಳ ಗದ್ಯರೂಪಗಳಾಗಿವೆ ಋಗ್ವೇದ - ಐತರೇಯ,ಕೌಷೀತಕಿ ಬ್ರಾಹ್ಮಣಕಗಳು ಸಾಮವೇದ- ತಾಂಡ್ಯ ಮಹಾ ಅಥವಾ ಪಂಚವೀಶ, ಷಡ್ಕಿಂಶ, ಜೈಮಿನಿಯ ಬ್ರಾಹ್ಮಣಕಗಳು. ಯಜುರ್ವೇದ - ತೈತರೀಯ  ಮತ್ತು ಶತಪಥ ಬ್ರಾಹ್ಮಣಕಗಳು ಅಥರ್ವಣ ವೇದ - ಗೋಪಥ ಬ್ರಾಹ್ಮಣಕಗಳು ಅರಣ್ಯಕಗಳು ಬ್ರ

ಬಾಬರನ ದಂಡಯಾತ್ರೆಗಳು (ಪಾಣಿಪತ್,ಖಾನುವಾ,ಚಾಂದೇರಿ,ಗೋಗ್ರಾ ಕದನಗಳು)

ಪಾಣಿಪತ್ ಕದನ ೨೧ ,೧೫೨೬ ಸ್ಥಳ - ಪಾಣಿಪತ್ , ಹರಿಯಾಣ ಕದನಕಾರರು - ಬಾಬರ್ ( ಮೊಗಲ್ ಸಾಮ್ರಾಜ್ಯ) ಮತ್ತು ಇಬ್ರಾಹಿಂ ಲೋದಿ ( ದೆಹಲಿ ಸುಲ್ತಾನ) ಫಲಿತಾಂಶ - ಮೊಗಲರಿಗೆ ಜಯ ಪರಿಣಾಮಗಳು ಲೋದಿ ಮನೆತನದ ಅಂತ್ಯ ದೆಹಲಿ ಸುಲ್ತಾನದ ಅವನತಿ ಮೊಗಲ ಸಾಮ್ರಾಜ್ಯದ ಸ್ಥಾಪನೆ ಖಾನುವಾ ಕಾಳಗ ಕಾಲ - ೧೫೨೭ ಸ್ಥಳ - ಖಾನುವಾ ,ಆಗ್ರಾ ಸಮೀಪ ಕದನಕಾರರು - ಬಾಬರ ಮತ್ತು ರಜಪೂತರ ರಾಣಾಸಂಗ ಕಾರಣಗಳು ಪಾಣಿಪತ ಯುದ್ಧದಲ್ಲಿ ಬಾಬರನಿಗೆ ಸಹಾಯ ಮಾಡುತ್ತೇನೆಂದು ಒಪ್ಪಿಕೊಂಡಿದ್ದ ರಾಣಾಸಂಗ ಬಾಬರನಿಗೆ ಕೈ ಕೊಟ್ಟಿದ್ದು ಬಾಬರನು ದಾಳಿಕೋರನಂತೆ ಬಂದು ಹೋಗದೆ,ಇಲ್ಲಿಯೆ ನೆಲೆಸಲಿಚ್ಚಿಸಲು ಕಾರಣವಾದ ಅವನ ದುರಾಸೆ ಪರಿಣಾಮಗಳು ರಜಪೂತರು ಸೋತಿದ್ದರಿಂದ ಅವರ ಪ್ರತಿಷ್ಠೆಗೆ ಧಕ್ಕೆಯಾಯಿತು. ಈ ಯುದ್ದ ಬಾಬರನಿಗೆ ಶಾಶ್ವತವಾಗಿ ಭಾರತದಲ್ಲಿ ನೆಲೆಸಲು ಸಹಾಯವಾಯಿತು ಈ ಯುದ್ಧದಲ್ಲಿ ಹಲವು ಅರಸರ ಒಕ್ಕೂಟವನ್ನು  ಬಾಬರ ಸೋಲಿಸಿದ್ದರಿಂದ ಮೊಗಲ ಸಾಮ್ರಾಜ್ಯದ ಗಟ್ಟಿ ಅಡಿಪಾಯಕೆ ಸಹಾಯವಾಯಿತು. ಬಾಬರನ ಅಲೆಮಾರಿ ಜೀವನ ಅಂತ್ಯವಾಯಿತು. ಚಾಂದೇರಿ ಕದನ ಕಾಲ - ೧೫೨೮ ಸ್ಥಳ - ಚಾಂದೇರಿ ,ಭೂಪಾಲ ಸಮೀಪ ಕದನಕಾರರು - ಬಾಬರ್ ಮತ್ತು ಮೇದಿನರಾಯ ಕಾರಣ - ಮೇದಿನರಾಯ ಖಾನುವಾ ಯುದ್ಧದಲ್ಲಿ ರಾಣಾಸಂಗನಿಗೆ ಸಹಾಯ ಮಾಡಿದ್ದು ಫಲಿತಾಂಶ - ಬಾಬರನ ಜಯ ಘಾಗ್ರಾ ಕದನ ಕಾಲ - ೧೫೨೯ ಸ್ಥಳ - ಗಂಗಾ ಮತ್ತು ಅದರ ಉಪನದಿ ಗೋಗ್ರಾ ಇವುಗಳ ಸಂಗಮ ಸ್ಥಳ ಕದನಕ

ಋಗ್ವೇದ

ಪುರುಷಸೂಕ್ತವನ್ನು ಇದರಲ್ಲಿ ಕಾಣಬಹುದು - ಋಗ್ವೇದ ಋಗ್ವೇದ ಧರ್ಮದ ವಿಶಿಷ್ಟ ಲಕ್ಷಣ -ಪ್ರಕೃತಿಯ ಆರಾಧನೆ ಋಗ್ವೇದ ಕಾಲದ ಆರ್ಯರು ಆರಾಧಿಸುತ್ತಿದ್ದ ಪ್ರಮುಖ ದೈವ - ಇಂದ್ರ ಜಾತಿ ವ್ಯವಸ್ಥೆ ಯ ಉಗಮದ ಬಗ್ಗೆ ಈ ವೇದದಲ್ಲಿ ಉಲ್ಲೇಖವಿದೆ- ಋಗ್ವೇದ ಋಗ್ವೇದ ಆರ್ಯರ ಪ್ರಮುಖ ಉದ್ಯೋಗ - ಕೃಷಿ ಮತ್ತು ಪಶುಪಾಲನೆ ಋಗ್ವೇದ ದಲ್ಲಿ ಕೃಷಿಯನ್ನು ಈ ಹೆಸರಿನಿಂದ ಕರೆಯಲಾಗಿದೆ - ಚರ್ಷಾಣಿ ಋಗ್ವೇದ ಕಾಲದ ವ್ಯಾಪಾರದ ಪ್ರಮುಖ ಸರಕುಗಳು- ಬಟ್ಟೆ,ಹೊದಿಕೆ,ವಸ್ತ್ರ,ಚರ್ಮದ ವಸ್ತುಗಳು ನಾಣ್ಯ  ಚಲಾವಣೆಯ ಮಧ್ಯವರ್ತಿಯಾಗಿ ಇದ್ದುದ್ದು - ನಿಷ್ಕ ಅಗ್ನಿ ದೇವರನ್ನು ಹೀಗೆ ಕರೆಯುತ್ತಿದ್ದರು - ಪಥಿಕೃತ ಜೀವರಾಶಿಗಳ ಅಧಿಪತಿಯನ್ನು ಹೀಗೆ ಕರೆಯುತ್ತಿದ್ದರು - ಪ್ರಜಾಪತಿ ವರುಣ ದೇವತೆಗಳಿಗಿದ್ದ ಮತ್ತೊಂದು ಹೆಸರು - ಅಸುರ ಇಂದ್ರನನ್ನು  ಹೀಗೂ ಕರೆಯುತ್ತಿದ್ದರು - ಪುರಂದರ ಅಥವಾ ಕೋಟೆಗಳ ನಾಶಕ ಋಗ್ವೇದ ಕಾಲದಲ್ಲಿ ಮಿಂಚು ಮತ್ತು ಗುಡುಗಿನ ದೇವತೆ - ರುದ್ರ ಋಗ್ವೇದ ಕಾಲದಲ್ಲಿ ಇಂದ್ರನನ್ನು ಕುರಿತು ಇರುವ ಶ್ಲೋಕಗಳ ಸಂಖ್ಯೆ - ೨೫೦ ಋಗ್ವೇದ ಕಾಲದಲ್ಲಿದ್ದ ಪ್ರಮುಖ ಸ್ತ್ರೀ ದೇವತೆಗಳು - ಅಧಿತಿ ಮತ್ತು ಉಷಸ್ ಋಗ್ವೇದ ದಲ್ಲಿರುವ ಸ್ತೋತ್ರಗಳ ಸಂಖ್ಯೆ - ೧೦೨೮ ಉತ್ತರ ವೈದಿಕ ಯುಗದ ಬಗ್ಗೆ ತಿಳಿಸುವ ಪ್ರಮುಖ ಸಾಹಿತ್ಯಗಳು - ಸಾಮವೇದ , ಯಜುರ್ವೇದ ಮತ್ತು ಅಥರ್ವಣವೇದ ಋಗ್ವೇದವು ಹೊಂದಿರುವ ಬ್ರಾಹ್ಮಣಕಗಳು - ಐತರೇಯ ಮತ್ತು ಕೌಶೀತಕಿ

ಬಾಬರ

ಬಾಬರನ ಹುಟ್ಟು ಹೆಸರು ಜಹೀರುದ್ದೀನ ಮಹಮದ್.ಬಾಬರನು ೧೪೮೩ ಫೆಬ್ರುವರಿ ೧೪ ರಂದು ಜನಿಸಿದನು. ೧೪೯೪ರಲ್ಲಿ ಬಾಬರನ ತಂದೆ ಉಮರ್ ಷೇಕ್ ಮಿರ್ಜಾ ಮರಣ ಹೊಂದಿದ್ದರಿಂದ ಬಾಬರನ ೧೨ ನೆ ವಯಸ್ಸಿನಲ್ಲಿ ಫರ್ಗಾನ ಪ್ರಾಂತ್ಯವು ಬಾಬರನಿಗೆ ದಕ್ಕಿತು. ೧೪೯೭ ರಲ್ಲಿ ಬಾಬರನು ಸಮರ್ ಖಂಡವನ್ನು ವಶಪಡಿಸಿಕೊಂಡನು.೧೫೦೪ ರಲ್ಲಿ ಬಾಬರನು ಯಾವುದೇ ವಿರೋಧವಿಲ್ಲದೆ ಕಾಬೂಲನ್ನು ವಶಪಡಿಸಿಕೊಂಡನು.ನಂತರ ಘಜ್ನಿಯನ್ನು  ವಶಪಡಿಸಿಕೊಂಡು ಪೂರ್ಣ ಅಪಘಾನಿಸ್ತಾನದ ಅಧಿಪತಿಯಾಗಿ ೧೫೦೭ ರಲ್ಲಿ ಬಾದಶಹಾ ಎಂಬ ಬಿರುದನ್ನು ಧರಿಸಿದನು. ಬಾಬರನು ಐದು ಬಾರಿ ಭಾರತದ ಮೇಲೆ ಆಕ್ರಮಣ ವೆಸಗಿದನು.ಬಾಬರನು ೧೫೧೯ರಲ್ಲಿ ಮೊದಲ ದಾಳಿಯನ್ನಾರಂಭಿಸಿ ಬಜೌರ ಮತ್ತು ಬೇರಗಳನ್ನು ವಶಪಡಿಸಿಕೊಂಡನು. ೧೫೨೦ರಲ್ಲಿ ಮೂರನೆಯ ದಾಳಿ ನಡೆಸಿ ಪಂಜಾಬ್ ಪ್ರಾಂತ್ಯಕ್ಕೂ ಪ್ರವೇಶಿಸಿ ಸೈಲಕೋಟ್ ಮತ್ತು ಸಯ್ಯದಪುರಗಳನ್ನು ವಶಪಡಿಸಿಕೊಂಡನು. ನಾಲ್ಕನೆ ಬಾರಿ ದಾಳಿಯನ್ನು ೧೫೨೪ ರಲ್ಲಿ ಪಂಜಾಬಿನ ಲಾಹೋರ ಮತ್ತು ದಿಪಾಲಪುರಗಳವರೆಗಿನ ಪ್ರದೇಶಗಳನ್ನು ವಶಪಡಿಸಿಕೊಂಡನು. Best historical books for competitive exam preparation

ಭಾರತಕ್ಕೆ ಸಂಬಂಧಿಸಿದಂತೆ ನೆನಪಿಡುವ ಮಾಹಿತಿ

ವಿಸ್ತೀರ್ಣ ದಲ್ಲಿ  ಭಾರತ ವಿಶ್ವದಲ್ಲಿ ಏಳನೆಯ ಅತೀ ದೊಡ್ಡ ರಾಷ್ಟ್ರ ಭಾರತ ಒಟ್ಟು ೩೨೮೭೭೮೨ ಚ.ಕಿ.ಮೀ ವಿಸ್ತೀರ್ಣ ಹೊಂದಿದೆ ಭಾರತದ ಕರಾವಳಿಯ ಉದ್ದ ೧೫೨೦೦ ಕಿ.ಮೀ ಭಾರತದ ಭೌಗೋಳಿಕ ಕೇಂದ್ರ. ಜಬ್ಬಲ್ ಪುರ ಭಾರತವು ಬಾಂಗ್ಲಾ ದೇಶದೊಡನೆ ಅತ್ಯಂತ ಹೆಚ್ವಿನ ಉದ್ದದ ಗಡಿರೇಖೆಯನ್ನು ಹೊಂದಿದೆ. ವಿಸ್ತೀರ್ಣದಲ್ಲಿ ರಾಜಸ್ತಾನವು ದೊಡ್ಡ ರಾಜ್ಯವಾದರೆ ಗೋವಾ ಅತ್ಯಂತ ಚಿಕ್ಕ  ರಾಜ್ಯ ವಿಸ್ತೀರ್ಣದಲ್ಲಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ದೊಡ್ಡ ಕೇಂದ್ರಾಡಳಿತ ಪ್ರದೇಶವಾದರೆ ಲಕ್ಷದ್ವೀಪ ಚಿಕ್ಕ  ಕೇಂದ್ರಾಡಳಿತ ಪ್ರದೇಶ ಅತ್ಯಂತ ಹೆಚ್ಚು ಉದ್ಧದ ಕರಾವಳಿಯನ್ನು ಹೊಂದಿರುವ ರಾಜ್ಯ. ಗುಜರಾತ್ ಭಾರತದ ಮೂಲಕ ೨೩ ೧/೨. ಡಿಗ್ರಿ ಉತ್ತರ ಅಕ್ಷಾಂಶವು ಹಾದು ಹೋಗುತ್ತದೆ ಇದನ್ನು ಕರ್ಕಾಟಕ ಸಂಕ್ರಾಂತಿ  ವೃತ್ತ.   ಎನ್ನುವರು. ಭಾರತದ ಆದರ್ಶ ಕಾಲಮಾನವು ೮೨ ೧/೨ ಡಿಗ್ರಿ ಪೂರ್ವ ರೇಖಾಂಶದಲ್ಲಿ ಲೆಕ್ಕಾಚಾರ ಮಾಡುವರು. ಭಾರತದ ಆದರ್ಶ ಕಾಲಮಾನವು ಗ್ರೀನವಿಚ್ ಕಾಲಮಾನಕ್ಕಿಂತ ೫ ಗಂಟೆ ೩೦ ನಿಮಿಷ ಮುಂದೆ ಇದೆ. ಭಾರತವು ನೆರೆಯ ರಾಷ್ಟ್ರಗಳೊಂದಿಗೆ ಹಂಚಿಕೊಂಡಿರುವ ಒಟ್ಟು ಭೂಗಡಿಯ ಉದ್ದ. ೧೫೨೦೦ ಕಿ.ಮೀ ಜನಸಂಖ್ಯೆ ಯಲ್ಲಿ ಉತ್ತರ ಪ್ರದೇಶ ಅತಿದೊಡ್ಡ ರಾಜ್ಯ ವಾಗಿದೆ. ಜನಸಂಖ್ಯೆಯ ಲ್ಲಿ  ಸಿಕ್ಕಿಂ ಅತೀ ಚಿಕ್ಕ ರಾಜ್ಯವಾಗಿದೆ. ಜನಸಾಂದ್ರತೆಯಲ್ಲಿ ದೆಹಲಿ ಅತೀ ಹೆಚ್ಚಿನ ಜನಸಾಂದ್ರತೆಯನ್ನು ಹೊಂದಿದ್ದರೆ,ಅರುಣಾಚಲ ಪ್ರದೇಶ ಅತೀ ಕಡಿಮ

ರಾಷ್ಟ್ರಪತಿ ಚುನಾವಣೆ ಮತ್ತು ಅಧಿಕಾರಗಳು

ಸಂವಿಧಾನದ ಭಾಗ ೫ ರಲ್ಲಿರುವ ೫೨ ರಿಂದ ೬೨ ರವರೆಗಿನ ವಿಧಿಗಳು ರಾಷ್ಟ್ರಪತಿ ಹುದ್ದೆಯ ಬಗ್ಗೆ ವಿವರಣೆಯನ್ನು ನೀಡುತ್ತವೆ. ರಾಷ್ಟ್ರಾಧ್ಯಕ್ಷರು ಭಾರತ ದೇಶದ ಪ್ರಥಮ ಪ್ರಜೆ ರಾಷ್ಟ್ರಪತಿ ಹಾಗೂ ಉಪರಾಷ್ಟ್ರಪತಿಗಳ ಚುನಾವಣಾ ಕಾಯ್ದೆಯು ಮಾರ್ಚ ೧೪, ೧೯೫೨ ರಲ್ಲಿ ಜಾರಿಗೆ ಬಂದಿತು ಪ್ರಥಮ ರಾಷ್ಟ್ರಪತಿ ಚುನಾವಣೆಯು ೧೯೫೨ರ ಮೇ ೨ ರಂದು ನಡೆಯಿತು ಸಂವಿಧಾನದ ೫೨ನೆ ವಿಧಿಯು ಭಾರತಕ್ಕೊಬ್ಬ ರಾಷ್ಟ್ರಪತಿ ಇರಬೇಕೆಬುವುದನ್ನು ತಿಳಿಸುತ್ತದೆ. ೫೩ನೆ ವಿಧಿಯ ಪ್ರಕಾರ ಭಾರತದಲ್ಲಿನ ಪ್ರತಿಯೊಂದು ಕಾರ್ಯಾಂಗೀಯ ಅಧಿಕಾರಗಳು ರಾಷ್ಟ್ರಪತಿಯ ಅನುಮತಿಯ ಅನುಸಾರವಾಗಿ ನಡೆಯುತ್ತವೆ. ಸಂಸತ್ತಿನಲ್ಲಿ ಅಂಗೀಕಾರವಾದ ಪ್ರತಿಯೊಂದು ಮಸೂದೆಯು ರಾಷ್ಟ್ರಪತಿಗಳ ಅಂಕಿತದ ನಂತರವೇ ಕಾಯ್ದೆಯಾಗುತ್ತದೆ. ೫೪ ನೆ ವಿಧಿಯು ರಾಷ್ಟ್ರಪತಿಯ ಚುನಾವಣೆ ಬಗೆಗೆ ತಿಳಿಸುತ್ತದೆ. ೫೪ನೆ ವಿಧಿಯ ಪ್ರಕಾರ ರಾಷ್ಟ್ರಪತಿಯವರನ್ನು ನಿರ್ವಾಚನ ಮಂಡಳಿಯ ಮೂಲಕ ಚುನಾಯಿಸಲಾಗುತ್ತದೆ. ನಿರ್ವಾಚನಾ ಮಂಡಳಿಯು ಸಂಸತ್ತಿನ ಉಭಯ ಸದನಗಳ (ಲೋಕಸಭೆ ಮತ್ತು ವಿಧಾನಸಭೆ) ಚುನಾಯಿತ ಸದಸ್ಯರು,ರಾಜ್ಯಗಳ ವಿಧಾನಸಭೆಗಳ ಚುನಾಯಿತ ಪ್ರತಿನಿಧಿಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಚುನಾಯಿತ ವಿಧಾನಸಭೆ ಸದಸ್ಯರನ್ನು ಒಳಗೊಂಡಿರುತ್ತದೆ. ಸಂವಿಧಾನದ ೫೫ ನೆ ವಿಧಿಯು ರಾಷ್ಟ್ರಾಧ್ಯಕ್ಷರ ಚುನಾವಣೆಗೆ ವಿಧಾನಸಭಾ ಸದಸ್ಯರ ಹಾಗೂ ಸಂಸತ್ ಸದಸ್ಯರ ಮತಗಳ ಮೌಲ್ಯವನ್ನು ನಿರ್ಧರಿಸುವ ಕುರಿತು ತಿಳಿಸುತ್ತದೆ.

ಸಂಧಿ ಪ್ರಕರಣ

ಪದಕ್ಕೆ ಪದ ಬಂದು ಸೇರುವಾಗ ಅಕ್ಷರಗಳು ಲೋಪವಾಗುವುದು,ಅಕ್ಷರ ಬಂದು ಸೇರುವುದು ಅಥವಾ ಒಂದು ಅಕ್ಷರದ ಬದಲಿಗೆ ಮತ್ತೊಂದು ಅಕ್ಷರ ಬಂದು ಸೇರುವುದಕ್ಕೆ ಸಂಧಿಕಾರ್ಯ ಎನ್ನುವರು ಸಂಧಿಯಾಗುವಾಗ ಅಕ್ಷರ ಲೋಪವಾದರೆ ಅದನ್ನು ಲೋಪ ಸಂಧಿ ಎನ್ನುವರು. ಉದಾ- ಊರು+ ಅಲ್ಲಿ = ಊರಲ್ಲಿ ಕಾಡು + ಇಗೆ = ಕಾಡಿಗೆ ದೇವರು + ಇಂದ =>ದೇವರಿಂದ ಸಂಧಿಯಾಗುವಾಗ ಒಂದು ಅಕ್ಷರ ಹೊಸದಾಗಿ ಬಂದರೆ ಅದನ್ನು ಆಗಮ ಸಂಧಿ ಎನ್ನುವರು ಉದಾ-ಮೊಟ್ಟೆ+ಇಡು=ಮೊಟ್ಟೆಯಿಡು ಯಕಾರಾಮ ಸಂಧಿ ಆ,ಇ,ಈ,ಎ,ಏ,ಐ ಎಂಬ ಸ್ವರಗಳ ಮುಂದೆ ಸ್ವರ ಬಂದರೆ ನಡುವೆ ಯ, ಕಾರವು ಆಗಮವಾದರೆ ಅದು ಯ ಕಾರಾಗಮ ಸಂಧಿ ಉದಾ ಕಾ+ಅದೆ= ಕಾಯದೆ ಹಳ್ಳಿ + ಅಲ್ಲಿ = ಹಳ್ಳಿಯಲ್ಲಿ ವಕಾರಾಗಮ ಸಂಧಿ ಉ ಋ ಎಂಬ ಸ್ವರಗಳ ಮುಂದೆ ಸ್ವರವು ಬಂದರೆ ವಕಾರವು ಬರುತ್ತದೆ. ಉದಾ ಗೋ + ಇನ = ಗೋವಿನ ಕುಲ+ ಅನ್ನು = ಕುಲವನ್ನು ಸಂಧಿಯಾಗುವಾಗ ಒಂದು ಅಕ್ಷರದ ಬದಲಿಗೆ ಮತ್ತೊಂದು ಅಕ್ಷರ ಬಂದರೆ ಅದು ಆದೇಶ ಸಂಧಿ ಉದಾ ಬೆಟ್ಟ+ತಾವರೆ=ಬೆಟ್ಟದಾವರೆ ಅಡಿ + ಕಲ್ಲು = ಅಡಿಗಲ್ಲು ಕೆಳ + ತುಟಿ = ಕೆಳದುಟಿ ಕಣ್ + ಪನಿ= ಕಂಬನಿ ಸಂಸ್ಕೃತ ಸಂಧಿಗಳು ಸಂಸ್ಕೃತ -ಸಂಸ್ಕೃತ ಪದಗಳು ಸೇರಿ ಸಂಧಿಯಾದರೆ ಅದು ಸಂಸ್ಕೃತ ಸಂಧಿ ಸಂಸ್ಕೃತ ಸ್ವರ ಸಂಧಿಗಳು ಸವರ್ಣದೀರ್ಘ ಸಂಧಿ ಸಂಧಿಕಾರ್ಯ ನಡೆಯುವಾಗ ಒಂದೇ ರೀತಿಯ ಸ್ವರಾಕ್ಷರಗಳು ಪರಸ್ಪರ ಸೇರಿ ದೀರ್ಘ ಸ್ವರ ಆದೇಶವಾದರೆ ಅಂತಹ ಸಂಧಿಯನ್ನು ಸವರ್ಣಧೀರ್

ಕದಂಬರು

#ಕದಂಬರು ಕರ್ನಾಟಕದಲ್ಲಿ ಮೊದಲು ಹುಟ್ಟು ಹಾಕಿದ ಕನ್ನಡ ಸಾಮ್ರಾಜ್ಯ - ಕದಂಬರು . ಕದಂಬರು ಆಳಿದ್ದ ಕ್ರಿ.ಶ.4 ನೇ ಶತಮಾನದಿಂದ 6 ನೇ ಶತಮಾನದವರೆಗೆ ಕದಂಬರ ರಾಜಧಾನಿ - ಬನವಾಸಿ . ಬನವಾಸಿ ಪ್ರಸ್ತುತ ಈ ಜಿಲ್ಲೆಯಲ್ಲಿದೆ - ಉತ್ತರ ಕನ್ನಡ . ಕದಂಬರ ವಂಶದ ಸ್ಥಾಪಕ ದೊರೆ - ಮಯೂರ ವರ್ಮ . ಕದಂಬರ ಲಾಂಛನ - ಸಿಂಹ . ಕದಂಬರ ಧ್ವಜ - ವಾನರ . ಮಹಾಭಾರತ ಕಾಲದಲ್ಲಿ ಬನವಾಸಿಯನ್ನು ಈ ಹೆಸರಿನಿಂದ ಕರೆಯಲಾಗುತ್ತಿತ್ತು - ವೈಜಯಂತಿ ಅಥವಾ ವನವಾಸಿ . ಟಾಲೆಮಿಯು ತನ್ನ ಕೃತಿ Geography ಯಲ್ಲಿ ಬನವಾಸಿಯನ್ನು ಈ ಹೆಸರಿನಿಂದ ಕರೆದಿದ್ದಾನೆ - ಬೈಜಾಂಟಿಯನ್ . ಕದಂಬರ ಮೂಲ ದೈವಾಂಶ ಸಿದ್ದಾಂತ ನಾಗ ಸಿದ್ದಾಂತ ಜೈನ ಸಿದ್ದಾಂತ ನಂದಾ ಮೂಲ ತಮಿಳು ಮೂಲ ಕನ್ನಡ ಮೂಲ ಕದಂಬರ ಮೂಲ ಪುರುಷ - ಮಯೂರ ವರ್ಮ . ಮಯೂರವರ್ಮನ ತಂದೆಯ ಹೆಸರು - ವೀರಶರ್ಮ . ಮಯೂರವರ್ಮನ ಗುರುವಿನ ಹೆಸರು - ವೀರಶರ್ಮ . ಮಯೂರವರ್ಮನನ್ನ ಅವಮಾನಿಸಿದ ಕಂಚಿಯ ಪಲ್ಲವ ದೊರೆ - ಶಿವಸ್ಕಂದ ವರ್ಮ . ಚಂದ್ರವಳ್ಳಿ ಶಾಸನದ ಕರ್ತೃ - ಮಯೂರವರ್ಮ ಚಂದ್ರವಳ್ಳಿಯ ಬಳಿ ಕೆರೆಯನ್ನು ನಿರ್ಮಿಸಿದ ಕದಂಬ ದೊರೆ - ಮಯೂರವರ್ಮ ಮಯೂರವರ್ಮನ ಸೈನಿಕ ಸಾಧನೆಯನ್ನು ತಿಳಿಸುವ ಶಾಸನ - ಚಂದ್ರವಳ್ಳಿ ಶಾಸನ . ಕರ್ನಾಟಕದ ಪ್ರಥಮ ಚಕ್ರವರ್ತಿ ಎಂಬ ಹೆಗ್ಗಳಿಕೆಗೆ ಪಾತ್ರನಾದ ಅರಸ - ಮಯೂರವರ್ಮ ಮಯೂರವರ್ಮನ ನಂತರ ಕದಂಬ ವಂಶವನ್ನು ಆಳಿದವರು - ಕಂಗವರ್ಮ . ಧರ್ಮರಾಜ , ಧರ್ಮಮಹಾರಾಜ ಎಂಬ ಬ

ವಾಣಿಜ್ಯ ಬೆಳೆಗಳು

ಮೆಕ್ಕೆಜೋಳ ವೈಜ್ಞಾನಿಕ ಹೆಸರು- ಜೀಯಾ ಮೇಜ್ ಕುಟುಂಬ- ಗ್ರಾಮಿನೆ/ಪೊಯೇಸಿ ಖಾರೀಫ್ ಬೆಳೆ,ಸಮತಟ್ಟಲ್ಲದ ಪ್ರದೇಶದಲ್ಲಿ ಸಾಮಾನ್ಯ. ಹಾಗೂ ಹೆಚ್ಚು ಮಳೆಯಾಗುವ ಪ್ರದೇಶಗಳಲ್ಲಿ  ಬೆಳೆಯುತ್ತದೆ. ಮೆಕ್ಕೆಜೋಳದ ಮೂಲಸ್ಥಾನ ಅಮೇರಿಕಾ ಕೋಲಂಬಸ್ ನಿಂದ ಯುರೋಪಗೆ  ಪರಿಚಯವಾಯಿತು. ಬೇಸಿಗೆಯಲ್ಲಿ ೧೫ ರಿಂದ ೨೭ ಡಿಗ್ರಿ ಸೆ ಉಷ್ಣಾಂಶ ಶರತ್ಕಾಲದಲ್ಲಿ ೮ ರಿಂದ ೧೫ ಡಿಗ್ರಿ ಸೆ ಉಷ್ಣಾಂಶ ಬೇಕು ವಾರ್ಷಿಕ ೭೫ ರಿಂದ ೧೦೦ ಸೆ.ಮಿ ಮಳೆ ಅಗತ್ಯ ಪ್ರಪಂಚದಲ್ಲೇ ಅತ್ಯಧಿಕ ಮೆಕ್ಕೆಜೋಳ ಉತ್ಪಾದಿಸುವ ದೇಶ ಅಮೇರಿಕಾ ಭಾರತದಲ್ಲಿ ಮೆಕ್ಕೆಜೋಳ ಬೆಳೆಯುವ ರಾಜ್ಯಗಳು ಉತ್ತರ ಪ್ರದೇಶ,ಬಿಹಾರ,ರಾಜಸ್ಥಾನ ಕರ್ನಾಟಕದಲ್ಲಿ ಮೆಕ್ಕೆಜೋಳ ಬೆಳೆಯುವ ಪ್ರಮುಖ ಜಿಲ್ಲೆಗಳು ದಾವಣಗೆರೆ, ಬೆಳಗಾವಿ,ಹಾವೇರಿ ಕಬ್ಬು ವೈಜ್ಞಾನಿಕ ಹೆಸರು - ಸ್ಯಾಕರಮ್ ಅಫಿಸೀಯಾ ಕುಟುಂಬ- ಗ್ರಾಮಿನೇ ಕಬ್ಬಿನ ಉತ್ಪಾದನೆಯಲ್ಲಿ ಬ್ರೆಜಿಲ್ ಪ್ರಥಮ ಭಾರತ ದ್ವಿತೀಯ ಏಷ್ಯಾ ಖಂಡದಲ್ಲೇ ಭಾರತ ಪ್ರಥಮ ಸ್ಥಾನ ಪಡೆದಿದ ಹೆಚ್ಚು ಉಷ್ಣತೆ ಮತ್ತು ತೇವಾಂಶ ಅಗತ್ ೨೧ ರಿಂದ ೨೭ ಡಿಗ್ರಿ ಸೆ ಉಷ್ಣಾಂಶ,೧೦೦ ರಿಂದ ೧೫೦ ಸೆ.ಮಿ ವಾರ್ಷಿಕ ಮಳೆ ಅಗತ್ ಮೆಕ್ಕಲು ಮಣ್ಣು ಮತ್ತು ಕಪ್ಪು ಮಣ್ಣಿನಲ್ಲಿ ಚೆನ್ನಾಗಿ ಬೆಳೆಯುವುದು. ಭಾರತದಲ್ಲಿ ಅತಿ ಹೆಚ್ವು ಕಬ್ಬು ಉತ್ಪಾದಿಸುವ ರಾಜ್ಯ  - ಉತ್ತರ ಪ್ರದೇಶ ಕರ್ನಾಟಕದಲ್ಲಿ ಕಬ್ಬಿನ ಉತ್ಪಾದನೆಯಲ್ಲಿ ಬೆಳಗಾವಿ,ಬಾಗಲಕೋಟೆ ಮತ್ತು ಮಂಡ್

ಓಮುಮಾಮುವಾ

ವೇದಗಳ ಕಾಲ

ವೇದ ಎಂದರೆ ಜ್ಞಾನ ವೇದಗಳ ಕಾಲದ ನಾಗರೀಕತೆಯ ಕತೃಗಳು -ಆರ್ಯರು ಆರ್ಯ ಎಂದರೆ - ಶ್ರೇಷ್ಠ ವೇದಗಳನ್ನು ರಚಿಸಲಾಗಿರುವ ಭಾಷೆ- ಸಂಸ್ಕೃತ ಋಗ್ವೇದದಲ್ಲಿರುವ ಮಂತ್ರಗಳು - ಋಕ್ಕುಗಳು ದೇವತೆಗಳನ್ನು ಪ್ರಾರ್ಥಿಸಲು ರೂಪಿಸಿರುವ ಮಂತ್ರಗಳ ಸಂಕಲನವೆ ಋಗ್ವೇದ ಭಾರತದಲ್ಲಿ ಆರ್ಯರು ಅಧಿಕ ಸಂಖ್ಯೆಯಲ್ಲಿ ನೆಲೆಸಿದ ಪ್ರದೇಶ- ಪಂಜಾಬ ಪ್ರಾಂತ್ಯ ವೈಧಿಕ ಸಾಹಿತ್ಯದ ಪ್ರಥಮ ಗ್ರಂಥ - ಋಗ್ವೇದ ವೇದಗಳ ಕಾಲದ ದೊಡ್ಡ ನದಿ - ಸಿಂಧೂ ಋಗ್ವೇದ ಕಾಲದ ರಾಜ್ಯದ ಮುಖ್ಯಸ್ಥ - ರಾಜನ್ ಋಗ್ವೇದ ಕಾಲದ ರಾಜನ್ ನ ಮುಖ್ಯ  ಕರ್ತವ್ಯ. - ಗೋ ರಕ್ಷಣೆ ಋಗ್ವೇದ ಕಾಲದ ತೆರಿಗೆ - ಬಲಿ ಭಾರತ ಎಂಬ ಹೆಸರಿನ ಮೂಲ - ಭರತ ಪಂಗಡ ರಾಜನ್ ನಿಗೆ ಆಡಳಿತದಲ್ಲಿ ಸಹಾಯ ನೀಡುತ್ತಿದ್ದವರು - ಪುರೋಹಿತ, ಸೇನಾನಿ,ಗ್ರಾಮಿಣಿ ಗ್ರಾಮದ ಮುಖ್ಯಸ್ಥ - ಗ್ರಾಮಿಣಿ ಋಗ್ವೇದದಲ್ಲಿ ಆಡಳಿತದ ಎರಡು ಭಾಗಗಳು - ಸಭಾ ಮತ್ತು ಸಮಿತಿ ಋಗ್ವೇದ ಕಾಲದ ಮಹಿಳಾ ವಿದ್ವಾಂಸರು - ಘೋಷಾ ಅಪಲಾ ವಿಶ್ವವರಾ ಗಾರ್ಗಿ ಮೈತ್ರೈಯಿ ಋಗ್ವೇದ ಕಾಲದಲ್ಲಿ ಜನರು ತೊಡುತ್ತಿದ್ದ ಬಟ್ಟೆಗಳು- ಹತ್ತಿ ಮತ್ತು ಉಣ್ಣೆ ಋಗ್ವೇದ ಕಾಲದಲ್ಲಿ ಕುಟುಂಬದ ಮುಖ್ಯಸ್ಥ - ತಂದೆ ಋಗ್ವೇದ ಕಾಲದಲ್ಲಿ ಅರಸರಲ್ಲಿ ಸಾಮಾನ್ಯವಾಗಿದ್ದ ಪದ್ಧತಿ - ಬಹುಪತ್ನಿತ್ವ ಋಗ್ವೇದ ಜನರ ಪ್ರಮುಖ ಆಹಾರ ಪದಾರ್ಥಗಳು - ಬಾರ್ಲಿ ಮತ್ತು ಅಕ್ಕಿ ಋಗ್ವೇದ ಕಾಲದಲ್ಲಿ ಗೋವನ್ನು ಅಘನ್ಯ  ಎನ್ನುತ್ತಿದ್ದರು ಅದರ ಅರ್ಥ - ಕೊಲ್ಲಲಾಗದ್ದು ಋಗ್ವೇದ ಕ

ಮೂಲಭೂತ ಹಕ್ಕುಗಳು ಭಾಗ ೨(ಸಾಂಸ್ಕೃತೀಕ ಮತ್ತು ಶೈಕ್ಷಣಿಕ ಹಕ್ಕು ಹಾಗೂ ಸಂವಿಧಾನಾತ್ಮಕ ಪರಿಹಾರದ ಹಕ್ಕು)

ಸಾಂಸ್ಕೃತೀಕ ಮತ್ತು ಶೈಕ್ಷಣಿಕ ಹಕ್ಕು ಅನುಚ್ಛೇದ ೨೯ ಭಾರತದಲ್ಲಿ ವಾಸಿಸುವ ವ್ಯಕ್ತಿಗೆ ಭಾರತದ ಯಾವುದೇ ಕ್ಷೇತ್ರದಲ್ಲಿ ವಾಸಿಸಬಹುದು.ಯಾವುದೇ ಭಾಷೆಯನ್ನಾದರೂ ಆಡಬಹುದು.ಯಾವುದೇ ಸಂಸ್ಕೃತಿಯನ್ನು ಸ್ವೀಕರಿಅಬಹುದು. ಅನುಚ್ಛೇದ ೩೦ ಅಲ್ಪ.ಸಂಖ್ಯಾತರು,ಜಾತಿಯಾಧಾರಿತವಾಗಲಿ,ಭಾಷೆಯಾಧರಿತ ಶಿಕ್ಷಣ ಸಂಸ್ಥೆ ಸ್ಥಾಪಿಸುವ ಹಾಗೂ ಅವುಗಳ ಆಡಳಿತ ವನ್ನು ನಡೆಸಿಕೊಂಡು ಹೋಗಬಹುದು. ಅನುಚ್ಛೇದ ೩೧ ಈ ಅನುಚ್ಛೇದವನ್ನು ೧೯೭೮ ರಲ್ಲಿ ೪೪ ನೆ ತಿದ್ದುಪಡಿ ಯನ್ವಯ ನಿರಸನಗೊಳಿಸಲಾಗಿದೆ. ಸಂವಿಧಾನಾತ್ಮಕ ಪರಿಹಾರದ ಹಕ್ಕು ಅನುಚ್ಛೇದ ೩೨ ಇದನ್ನು  ಅಂಬೇಡ್ಕರ್ ವರು ಸಂವಿಧಾನದ ಆತ್ಮ. ಎಂದು ಕರೆದರು.ಇದು ಮೂಲಭೂತ ಹಕ್ಕುಗಳ ಉಲ್ಲಂಘನೆಯಾದಾಗ ಪಡೆಯಬಹುದಾದ ಪರಿಹಾರಗಳನ್ನು ಸೂಚಿಸುವ ಹಕ್ಕನ್ನು ಪ್ರತಿಪಾದಿಸುತ್ತದೆ. ಮೂಲಭೂತ ಹಕ್ಕುಗಳಿಗೆ ಚ್ಯುತಿ ಬಂದಾಗ ವ್ಯಕ್ಯಿ  ನ್ಯಾಯಾಲಯದ ಮೊರೆ ಹೋಗಲು ಅವಕಾಶ ನೀಡಿದೆ.ಇಂತಹ ಸಂಧರ್ಭದಲ್ಲಿ ಸರ್ವೊಚ್ಛ ನ್ಯಾಯಾಲಯವು ಆದೇಶ,ಆಜ್ಞೆ,ರಿಟ್ ಮೂಲಕ ನಿರ್ದೇಶನ ನೀಡುವುದು.ಅವು ಈ ಕೆಳಗಿನಂತಿವೆ. ಇಂಜೆಕ್ಷನ ( ಪರಮಾದೇಶ) ಯಾವುದೇ ಅಧಿಕಾರಿಯಿಂದ ಕರ್ತವ್ಯ ಲೋಪವಾದಾಗ ಸುಪ್ರೀಂ ಕೋರ್ಟ ಕರೆದು ಸರಿಪಡಿಸಿಕೊಳ್ಳಲು ನೀಡುವ ಆದೇಶ ಹೆಬಿಯಸ್ ಕಾರ್ಪಸ್ ( ಬಂಧೀ ಪ್ರತ್ಯಕ್ಷಿಕರಣ) ಯಾವುದೇ ವ್ಯಕ್ತಿಯನ್ನು ಅಕ್ರಮವಾಗಿ ಬಂಧಿಸಿದ್ದರೆ ೨೪ ಗಂಟೆಯೊಳಗೆ ಬಿಡುಗಡೆಗೊಳಿಸಬೇಕು. ಮ್ಯಾಂಡಮಸ್ ( ಪರಮಾದೇಶ) ಯಾವುದೇ ಅಧ