Skip to main content

ರಾಷ್ಟ್ರಪತಿ ಚುನಾವಣೆ ಮತ್ತು ಅಧಿಕಾರಗಳು

ಸಂವಿಧಾನದ ಭಾಗ ೫ ರಲ್ಲಿರುವ ೫೨ ರಿಂದ ೬೨ ರವರೆಗಿನ ವಿಧಿಗಳು ರಾಷ್ಟ್ರಪತಿ ಹುದ್ದೆಯ ಬಗ್ಗೆ ವಿವರಣೆಯನ್ನು ನೀಡುತ್ತವೆ.
ರಾಷ್ಟ್ರಾಧ್ಯಕ್ಷರು ಭಾರತ ದೇಶದ ಪ್ರಥಮ ಪ್ರಜೆ
ರಾಷ್ಟ್ರಪತಿ ಹಾಗೂ ಉಪರಾಷ್ಟ್ರಪತಿಗಳ ಚುನಾವಣಾ ಕಾಯ್ದೆಯು ಮಾರ್ಚ ೧೪, ೧೯೫೨ ರಲ್ಲಿ ಜಾರಿಗೆ ಬಂದಿತು
ಪ್ರಥಮ ರಾಷ್ಟ್ರಪತಿ ಚುನಾವಣೆಯು ೧೯೫೨ರ ಮೇ ೨ ರಂದು ನಡೆಯಿತು
ಸಂವಿಧಾನದ ೫೨ನೆ ವಿಧಿಯು ಭಾರತಕ್ಕೊಬ್ಬ ರಾಷ್ಟ್ರಪತಿ ಇರಬೇಕೆಬುವುದನ್ನು ತಿಳಿಸುತ್ತದೆ.
೫೩ನೆ ವಿಧಿಯ ಪ್ರಕಾರ ಭಾರತದಲ್ಲಿನ ಪ್ರತಿಯೊಂದು ಕಾರ್ಯಾಂಗೀಯ ಅಧಿಕಾರಗಳು ರಾಷ್ಟ್ರಪತಿಯ ಅನುಮತಿಯ ಅನುಸಾರವಾಗಿ ನಡೆಯುತ್ತವೆ.
ಸಂಸತ್ತಿನಲ್ಲಿ ಅಂಗೀಕಾರವಾದ ಪ್ರತಿಯೊಂದು ಮಸೂದೆಯು ರಾಷ್ಟ್ರಪತಿಗಳ ಅಂಕಿತದ ನಂತರವೇ ಕಾಯ್ದೆಯಾಗುತ್ತದೆ.
೫೪ ನೆ ವಿಧಿಯು ರಾಷ್ಟ್ರಪತಿಯ ಚುನಾವಣೆ ಬಗೆಗೆ ತಿಳಿಸುತ್ತದೆ.
೫೪ನೆ ವಿಧಿಯ ಪ್ರಕಾರ ರಾಷ್ಟ್ರಪತಿಯವರನ್ನು ನಿರ್ವಾಚನ ಮಂಡಳಿಯ ಮೂಲಕ ಚುನಾಯಿಸಲಾಗುತ್ತದೆ.
ನಿರ್ವಾಚನಾ ಮಂಡಳಿಯು ಸಂಸತ್ತಿನ ಉಭಯ ಸದನಗಳ (ಲೋಕಸಭೆ ಮತ್ತು ವಿಧಾನಸಭೆ) ಚುನಾಯಿತ ಸದಸ್ಯರು,ರಾಜ್ಯಗಳ ವಿಧಾನಸಭೆಗಳ ಚುನಾಯಿತ ಪ್ರತಿನಿಧಿಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಚುನಾಯಿತ ವಿಧಾನಸಭೆ ಸದಸ್ಯರನ್ನು ಒಳಗೊಂಡಿರುತ್ತದೆ.
ಸಂವಿಧಾನದ ೫೫ ನೆ ವಿಧಿಯು ರಾಷ್ಟ್ರಾಧ್ಯಕ್ಷರ ಚುನಾವಣೆಗೆ ವಿಧಾನಸಭಾ ಸದಸ್ಯರ ಹಾಗೂ ಸಂಸತ್ ಸದಸ್ಯರ ಮತಗಳ ಮೌಲ್ಯವನ್ನು ನಿರ್ಧರಿಸುವ ಕುರಿತು ತಿಳಿಸುತ್ತದೆ.
ಸಮಾನ ಪ್ರಾತಿನಿಧ್ಯ. ತತ್ವದ ಆಧಾರದ ಮೇಲೆ ನಡೆಯುವ ರಾಷ್ಟ್ರಪತಿ ಚುನಾವಣೆಯಲ್ಲಿ ಮತಗಳ ಮೌಲ್ಯವು ಆಯಾ ರಾಜ್ಯದ ವಿಧಾನಸಭೆಗಳ ಸದಸ್ಯರ ಸಂಖ್ಯೆ ಹಾಗೂ ಆಯಾ ರಾಜ್ಯದಲ್ಲಿನ ಜನಸಂಖ್ಯೆಯನ್ನು ಆಧರಿಸಿರುತ್ತದೆ
೫೬ ನೆ ವಿಧಿಯ ಪ್ರಕಾರ ರಾಷ್ಟ್ರಪತಿ ತನ್ನ ಅಧಿಕಾರವನ್ನು ವಹಿಸಿಕೊಂಡ ದಿನಾಂಕದಿಂದ ೫ ವರ್ಷಗಳವರೆಗೆ ಅಧಿಕಾರದಲ್ಲಿರುತ್ತಾರೆ.
ಸುಪ್ರಿಂಕೋರ್ಟನ ಮುಖ್ಯ  ನ್ಯಾಯಾಧೀಶರು ರಾಷ್ಟ್ರಪತಿಗಳಿಗೆ ಪ್ರಮಾಣ ವಚನ ಬೋಧಿಸುತ್ತಾರೆ.
ರಾಷ್ಟ್ರಪತಿಗಳನ್ನು ಪದಚ್ಯುತಗೊಳಿಸುವುದೆ ಮಹಾಭಿಯೋಗ
ಭಾರತದಲ್ಲಿ ಇದುವರೆಗೆ ಮಹಾಭಿಯೋಗ ನಡೆದಿರುವುದಿಲ್ಲ
೬೩ ನೆ ವಿಧಿ ಮಹಾಭಿಯೋಗಕ್ಕೆ  ಅವಕಾಶ ಮಾಡಿಕೊಟ್ಟಿದೆ
ಪ್ರಧಾನ ಮಂತ್ರಿ,ಅಟಾರ್ನಿ ಜನರಲ್,ಕಂಟ್ರೋಲರ್ ಆಂಡ್ ಅಡಿಟರ್ ಜನರಲ್,ಸುಪ್ರೀಂಕೋರ್ಟನ ನ್ಯಾಯಾಧೀಶರು,ಹೈಕೋರ್ಟ ನ್ಯಾಯಾಧೀಶರು,ರಾಜ್ಯಪಾಲರು,ಹಣಕಾಸು ಆಯೋಗದ ಅಧ್ಯಕ್ಷರು,ಸದಸ್ಯರು,ಚುನಾವಣಾ ಆಯುಕ್ತರು,ರಕ್ಷಣಾ ಪಡೆಗಳ ದಂಡನಾಯಕರು ಹಾಗೂ ವಿವಿಧ ರಾಷ್ಟ್ರಗಳಿಗೆ ರಾಷ್ಟ್ರಪತಿಯವರನ್ನು ನೇಮಿಸುವ ಮತ್ತು ಪದಚ್ಯುತಗೊಳಿಸುವ ಅಧಿಕಾರ ರಾಷ್ಟ್ರಪತಿಗಳಿಗಿದೆ.
ಸಂಸತ್ತಿನ ಅಧಿವೇಶನ ಕರೆಯುವುದು,ಮುಂದೂಡುವುದು,ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡುವುದು ಹಾಗೂ ಲೋಕಸಭೆಯನ್ನು ವಿಸರ್ಜಿಸುವ ಅಧಿಕಾರ ರಾಷ್ಟ್ರಪತಿಗಳಿಗಿದೆ.
ಸಂಸತ್ತಿನ ಉಭಯ ಸದನಗಳಿಂದ ಅಂಗೀಕರಿಸಲ್ಪಟ್ಟ ಮಸೂದೆಗಳಿಗೆ ಒಪ್ಪಿಗೆ ನೀಡುವ ಪುನರ್ ಪರಿಶೀಲಿಸುವ,ಹಿಂದಿರುಗಿಸುವ ಅಥವಾ ತಡೆಹಿಡಿಯುವ ಅಧಿಕಾರ ಹೊಂದಿದ್ದಾರೆ.
ಲೋಕಸಭೆಗೆ ಇಬ್ಬರು ಆಂಗ್ಲೋ ಇಂಡಿಯನ್ ರನ್ನು  ಮತ್ತು ರಾಜ್ಯಸಭೆಗೆ ೧೨ ಜನರನ್ನು ನಾಮಕರಣ ಮಾಡುತ್ತಾರೆ.ಈ ಎಲ್ಲ ಅಧಿಕಾರಗಳನ್ನು  ಪ್ರಧಾನಿ ಮತ್ತು ಮಂತ್ರಿಮಂಡಲದ ಸಲಹೆಯಂತೆ ನಿರ್ವಹಿಸುತ್ತಾರೆ.
ನ್ಯಾಯಾಲಯವು ಅಪರಾಧಿಗಳಿಗೆ ನೀಡಿದ ಶಿಕ್ಷೆಯನ್ನು ಕಟಿಮೆ ಮಾಡುವ ,ಮರಣ ದಂಡನೆಯನ್ನು ರದ್ದು ಪಡಿಸುವ ಅಧಿಕಾರ ಹೊಂದಿದ್ದಾರೆ.ರಾಷ್ಟ್ರದ ಕಾನೂನುಗಳಿಗೆ ಸಂಬಂಧಿಸಿದ ಮಹತ್ವದ ವಿಷಯಗಳಿಗೆ ಸರ್ವೋಚ್ಛ ನ್ಯಾಯಾಲಯದ ಸಲಹೆ ಕೇಳಬಹುದು.
ರಾಷ್ಟ್ರಪತಿಯವರ ಅನುಮತಿಯಿಲ್ಲದೆ ಹಣಕಾಸಿನ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸುವಂತಿಲ್ಲ
ಹಣಕಾಸು ಆಯೋಗದ ವರದಿ,ಮಹಾಲೇಖಪಾಲರು ಮತ್ತು ಪರಶೋಧಕರು ನೀಡಿದ ವರದಿಯನ್ನು ಸಂಸತ್ತಿನಲ್ಲಿ ಚರ್ಚಿಸುವಂತೆ ರಾಷ್ಟ್ರಪತಿಗಳು ಶಿಫಾರಸ್ಸು ಮಾಡುತ್ತಾರೆ
ಸಂಚಿತ ನಿಧಿಯು ರಾಷ್ಟ್ರಪತಿಗಳ ಹೆಸರಿನಲ್ಲಿರುತ್ತದೆ
ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರು ಮತ್ತು ಲೋಕಸೇವಾ ಆಯೋಗದ ಅಧ್ಯಕ್ಷರು,ಸದಸ್ಯರಿಗೆ ಈ ನಿಧಿಯಿಂದ ವೇತನ ಬಿಡುಗಡೆಯಾಗುತ್ತದೆ.
ರಾಷ್ಟ್ರಪತಿಗಳು ಸಮಸ್ತ ಸೇನಾ ಪಡೆಗಳ ಮಹಾದಂಡನಾಯಕರಾಗಿದ್ದು,ಭೂಪಡೆ,ವಾಯುಪಡೆ ಮತ್ತು ನೌಕಾಪಡೆಯ ದಂಡನಾಯಕರನ್ನು ಸಚಿವ ಸಂಪುಟದ ಸಲಹೆ ಮೇರೆಗೆ ಯುದ್ಧ ಮತ್ತು ಶಾಂತಿಯನ್ನು ಘೋಷಿಸುವ ಅಧಿಕಾರ ಇವರಿಗಿದೆ.
Best books for competitive exam preparation

Comments

ಇವುಗಳನ್ನೂ ಓದಿ

ಭಾರತದ ಮುಖ್ಯ ವಿವಿದೋದ್ದೇಶ ನದಿಕಣಿವೆ ಯೋಜನೆಗಳು

ಭಾರತದ ಮುಖ್ಯ ವಿವಿದೋದ್ದೇಶ ನದಿಕಣಿವೆ ಯೋಜನೆಗಳು 1) ದಾಮೋದರ್ ನದಿ ಕಣಿವೆ ಯೋಜನೆ:- ದಾಮೋದರ್ ಅಣೆಕಟ್ಟು ಸ್ವತಂತ್ರ್ಯ ಭಾರತದ ಮೊಟ್ಟಮೊದಲ ಬೃಹತ್ ಅಣೆಕಟ್ಟು ಆಗಿದೆ. ದಾಮೋದರ್ ಕಣಿವೆ ಕಾರ್ಪೋರೇಷನ್ ನನ್ನುಜುಲೈ 7, 1948 ರಲ್ಲಿ ಸಂವಿಧಾನ ರಚನಾ ಸಭೆಯ ಕಾಯ್ದೆ ಮೂಲಕ ಸ್ಥಾಪಿಸಲಾಯಿತು. ಇದನ್ನು ಅಮೇರಿಕಾದ ಟೆನಿಸ್ಸಿ ಕಣಿವೆ ಯೋಜನೆ ಮಾದರಿಯಲ್ಲಿ ರಚಿಸಲಾಗಿದೆ. ದಾಮೋದರ್ ಕಣಿವೆ ಯೋಜನೆಯನ್ನುಭಾರತದ ರೋರ್ ಎಂದು ಕರೆಯುತ್ತಾರೆ. ಏಕೆಂದರೇ ದಾಮೋದರ್ ಕಣಿವೆ ಪ್ರದೇಶದಲ್ಲಿ ಅತಿ ಹೆಚ್ಚು ಕೈಗಾರಿಕೆಗಳು ಕಂಡುಬರುತ್ತವೆ. ಆದ್ದರಿಂದ ಇದಕ್ಕೆ ಭಾರತದ ’ರೋರ್’ ಎಂದು ಕರೆಯುತ್ತಾರೆ. ದಾಮೋದರ್ ಕಣಿವೆಯು ಭಾರತದ ಪ್ರಮುಖ ಕೈಗಾರಿಕಾ ಪ್ರದೇಶಗಳಲ್ಲಿ ಒಂದು. ಈ ಪ್ರದೇಶದಲ್ಲಿ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾದ ಕೈಗಾರಿಕೆಗಳಾದ ಬೋಕಾರೋ (ಜಾರ್ಕಂಡ್ ನಲ್ಲಿದೆ), ಬರ್ನಾಪೂರ, ದುರ್ಗಾಪುರ (ಪಶ್ಚಿಮ ಬಂಗಾಳ)ದಲ್ಲಿ ಸ್ಥಾಪನೆಯಾಗಿವೆ. ಇಲ್ಲಿ ಅಧಿಕ ಪ್ರಮಾಣಾದ ಕಲ್ಲಿದ್ದಲು ಗಣಿಗಳಿವೆ. # ದಾಮೋದರ್ ನದಿಯ ಉಪನದಿಯಾದ ಬರ್ಕರ್ ನದಿಗೆ ಅಡ್ದಲಾಗಿ 1953 ರಲ್ಲಿತಿಲಾಯ ಅಣೆಕಟ್ಟು ಕಟ್ಟಲಾಗಿದೆ. # 1995 ರಲ್ಲಿ ದಾಮೋದರ್ ನದಿಯ ಇನ್ನೊಂದು ಉಪನದಿಯಾದ ಕೋನಾರ್ನದಿಗೆ ಅಣೆಕಟ್ಟು ಕಟ್ಟಲಾಗಿದೆ. # ದಾಮೋದರ್ ನದಿಯು ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳ ರಾಜ್ಯದಲ್ಲಿ ಹರಿಯುವ ನದಿಯಾಗಿದೆ. # ದಾಮೋದರ್ ನದಿಯನ್ನು ಪಶ್ಚಿಮ ಬಂಗಾಳದ ಕಣ್ಣೀರಿನ ನ...