ಭಾರತದ ಮುಖ್ಯ ವಿವಿದೋದ್ದೇಶ ನದಿಕಣಿವೆ ಯೋಜನೆಗಳು
ದಾಮೋದರ್ ಅಣೆಕಟ್ಟು ಸ್ವತಂತ್ರ್ಯ ಭಾರತದ ಮೊಟ್ಟಮೊದಲ ಬೃಹತ್ ಅಣೆಕಟ್ಟು ಆಗಿದೆ. ದಾಮೋದರ್ ಕಣಿವೆ ಕಾರ್ಪೋರೇಷನ್ ನನ್ನುಜುಲೈ 7, 1948 ರಲ್ಲಿ ಸಂವಿಧಾನ ರಚನಾ ಸಭೆಯ ಕಾಯ್ದೆ ಮೂಲಕ ಸ್ಥಾಪಿಸಲಾಯಿತು. ಇದನ್ನು ಅಮೇರಿಕಾದ ಟೆನಿಸ್ಸಿ ಕಣಿವೆ ಯೋಜನೆ ಮಾದರಿಯಲ್ಲಿ ರಚಿಸಲಾಗಿದೆ.
ದಾಮೋದರ್ ಕಣಿವೆ ಯೋಜನೆಯನ್ನುಭಾರತದ ರೋರ್ ಎಂದು ಕರೆಯುತ್ತಾರೆ. ಏಕೆಂದರೇ ದಾಮೋದರ್ ಕಣಿವೆ ಪ್ರದೇಶದಲ್ಲಿ ಅತಿ ಹೆಚ್ಚು ಕೈಗಾರಿಕೆಗಳು ಕಂಡುಬರುತ್ತವೆ. ಆದ್ದರಿಂದ ಇದಕ್ಕೆ ಭಾರತದ ’ರೋರ್’ ಎಂದು ಕರೆಯುತ್ತಾರೆ.
ದಾಮೋದರ್ ಕಣಿವೆಯು ಭಾರತದ ಪ್ರಮುಖ ಕೈಗಾರಿಕಾ ಪ್ರದೇಶಗಳಲ್ಲಿ ಒಂದು. ಈ ಪ್ರದೇಶದಲ್ಲಿ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾದ ಕೈಗಾರಿಕೆಗಳಾದ ಬೋಕಾರೋ (ಜಾರ್ಕಂಡ್ ನಲ್ಲಿದೆ), ಬರ್ನಾಪೂರ, ದುರ್ಗಾಪುರ (ಪಶ್ಚಿಮ ಬಂಗಾಳ)ದಲ್ಲಿ ಸ್ಥಾಪನೆಯಾಗಿವೆ. ಇಲ್ಲಿ ಅಧಿಕ ಪ್ರಮಾಣಾದ ಕಲ್ಲಿದ್ದಲು ಗಣಿಗಳಿವೆ.
# ದಾಮೋದರ್ ನದಿಯ ಉಪನದಿಯಾದ ಬರ್ಕರ್ ನದಿಗೆ ಅಡ್ದಲಾಗಿ 1953 ರಲ್ಲಿತಿಲಾಯ ಅಣೆಕಟ್ಟು ಕಟ್ಟಲಾಗಿದೆ.
# 1995 ರಲ್ಲಿ ದಾಮೋದರ್ ನದಿಯ ಇನ್ನೊಂದು ಉಪನದಿಯಾದ ಕೋನಾರ್ನದಿಗೆ ಅಣೆಕಟ್ಟು ಕಟ್ಟಲಾಗಿದೆ.
# ದಾಮೋದರ್ ನದಿಯು ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳ ರಾಜ್ಯದಲ್ಲಿ ಹರಿಯುವ ನದಿಯಾಗಿದೆ.
# ದಾಮೋದರ್ ನದಿಯನ್ನು ಪಶ್ಚಿಮ ಬಂಗಾಳದ ಕಣ್ಣೀರಿನ ನದಿಎಂದು ಕರೆಯುತ್ತಾರೆ.
# ಈ ನದಿಯು ಛೋಟಾ ನಾಗಪೂರ್ ಪ್ರದೇಶದ ಚಾಂಡ್ವಾದಲ್ಲಿ ಉಗಮಿಸಿ ನಂತರ ಹೂಗ್ಲ್ಲಿ ನದಿ ಸೇರುತ್ತದೆ.
# ದಾಮೋದರ್ ನದಿಯು ಸುಮಾರು 592 ಕಿ. ಮೀ ಉದ್ದ ಹರಿಯುತ್ತದೆ.
◾️ದಾಮೋದರ್ ನದಿಯ ಉಪನದಿಗಳು :-
# ಬಲಭಾಗದ ಉಪನದಿಗಳು :- ಶಿಲಾಬಾಟಿ ಮತ್ತು ಕಾಲಿ ಘಾಟಿ.
# ಎಡಭಾಗದ ಉಪನದಿಗಳು :- ಬರ್ಕಾರ್, ಕೋನಾರ್ ಮತ್ತು ಜಮುನಿಯಾ.
# ದಾಮೋದರ್ ನದಿಯ ದಡದ ಮೇಲಿರುವ ನಗರಗಳು :-ದುರ್ಗಾಪುರ, ರಾಣಿಗಂಜ, ಬರ್ದಮನ್, ಬೊಕಾರೊ, ಅಸಾನ್ ಸೋಲ್.
2) ಭಾಕ್ರಾ ನಂಗಲ್ ಯೋಜನೆ:-
# ಇದು ಭಾರತದಲ್ಲಿಯೇ ಅತ್ಯಂತ ಎತ್ತರವಾದ ಮತ್ತು ಪ್ರಮುಖವಾದ ವಿವಿಧೋದ್ದೇಶ ನದಿ ಕಣಿವೆ ಯೋಜನೆಯಾಗಿದೆ.
# ಇದು ಪಂಜಾಬ್, ಹರಿಯಾಣ ಮತ್ತು ರಾಜಸ್ಥಾನ ರಾಜ್ಯಗಳ ಸಂಯುಕ್ತ ಯೋಜನೆಯಾಗಿದೆ.
# ಹಿಮಾಚಲ ಪ್ರದೇಶದ ಭಾಕ್ರಾ ಮತ್ತು ನಂಗಲ್ ಎಂಬಲ್ಲಿ ಸಟ್ಲೆಜ್ ನದಿಗೆ ಅಣೆಕಟ್ಟುಗಳನ್ನು ಕಟ್ಟಲಾಗಿದೆ.
# ಭಾಕ್ರಾ ಅಣೆಕಟ್ಟು ಏಷ್ಯಾದಲ್ಲಿಯೇ ಅತ್ಯಂತ ಎತ್ತರವಾದ (226 ಮೀ ಎತ್ತರ) ಅಣೆಕಟ್ಟೆಯಾಗಿದೆ.
# ಇದು 3402 ಕಿ.ಮೀ ಉದ್ದವಾದ ಕಾಲುವೆಗಳ ಜಾಲವನ್ನು ಹೊಂದಿದ್ದು 14.6 ಲಕ್ಷ ಹೆಕ್ಟೇರ್ ಭೂಮಿಗೆ ನೀರಾವರಿ ಸೌಲಭ್ಯವನ್ನು ಒದಗಿಸುತ್ತದೆ.
# ಈ ಯೋಜನೆಯಿಂದ ದೆಹಲಿ, ಹಿಮಾಚಲ ಪ್ರದೇಶಗಳು ಸಹ ನೀರಾವರಿ ಮತ್ತು ಜಲವಿದ್ಯುಚ್ಛಕ್ತಿ ಸೌಲಭ್ಯವನ್ನು ಪಡೆದಿವೆ. ಇದರ ಜಲಾಶಯವನ್ನು ಗೋವಿಂದ ಸಾಗರ ಎಂದು ಕರೆಯಲಾಗುತ್ತಿತ್ತು
3) ಕೋಸಿ ಯೋಜನೆ:-
# ಪ್ರವಾಹದ ನಿಯಂತ್ರಣ ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
# ಕೋಸಿ ನದಿಯನ್ನು ಬಿಹಾರದ ಕಣ್ಣೀರಿನ ನದಿ ಎಂದು ಕರೆಯುತ್ತಾರೆ.
# ಇದು ಭಾರತ ಮತ್ತು ನೇಪಾಳ ದೇಶಗಳ ಜಂಟಿ ಯೋಜನೆಯಾಗಿದೆ.
# ಭಾರತ ಮತ್ತು ನೇಪಾಳ ದೇಶಗಳ ಗಡಿಯಲ್ಲಿ ಬರುವ ’ಹನುಮಾನ ನಗರ’ ಎಂಬಲ್ಲಿ ಕೋಸಿ ನದಿಗೆ ಅಣೆಕಟ್ಟನ್ನು ನಿರ್ಮಿಸಲಾಗಿದೆ.
# ಈ ಯೋಜನೆಯು ಸುಮಾರು 8.75 ಲಕ್ಷ ಹೆಕ್ಟೇರ್ ಭೂಮಿಗೆ ನೀರಾವರಿ ಸೌಲಭ್ಯ ಪಡೆದಿವೆ. ಇದರಿಂದ ಉತ್ಪಾದಿಸಲಾಗುವ ವಿದ್ಯುಚ್ಛಕ್ತಿಯಲ್ಲಿ ಶೇ50 ರಷ್ಟನ್ನು ನೇಪಾಳಕ್ಕೆ ಒದಗಿಸಲಾಗುತ್ತಿದೆ.
4) ಹಿರಾಕುಡ್ ಯೋಜನೆ:-
# ಒರಿಸ್ಸಾದ ಸಾಂಬಾಲಪುರ ಜಿಲ್ಲೆಯಿಂದ 10 ಕಿ.ಮೀ ದೂರದಲ್ಲಿ ಮಹಾನದಿಗೆ ಈ ಅಣೆಕಟ್ಟನ್ನು ಕಟ್ಟಲಾಗಿದೆ.
# ಹಿರಾಕುಡ್ 4801 ಮೀ ಉದ್ದವಾಗಿದ್ದು, ಇದು ಭಾರತ ದೇಶದ ಅತಿ ಉದ್ದವಾದ ಅಣೆಕಟ್ಟಾಗಿದೆ.
# ಮಹಾನದಿಯನ್ನು ’ಒರಿಸ್ಸಾದ ಕಣ್ಣೀರಿನ ನದಿ’ ಎಂದು ಕರೆಯಲಾಗುತ್ತದೆ.
# ಈ ಮಹಾನದಿಯು ಛತ್ತೀಸಘಡ್ ರಾಜ್ಯದ ಧಮತ್ರಿ ಸಿಹವಾದಲ್ಲಿ ಉಗಮವಾಗಿ ಛತ್ತೀಸಘಡ್ ಮತ್ತು ಒರಿಸ್ಸಾ ರಾಜ್ಯಗಳಲ್ಲಿ ಹರಿಯುತ್ತದೆ
# ಮಹಾನದಿಯು ಒರಿಸ್ಸಾ, ಛತ್ತೀಸಘಡ ಮತ್ತು ಒರಿಸ್ಸಾ ರಾಜ್ಯಗಳಿಗೆ ಕುಡಿಯುವ ನೀರು, ನೀರಾವರಿಗೆ ಮತ್ತು ಜಲ ವಿದ್ಯುತ್ ಉತ್ಪಾದನೆಗೆ ಸಹಕಾರಿಯಾಗಿದೆ.
# ಮಹಾನದಿಯ ಪ್ರವಾಹವನ್ನು ನಿಯಂತ್ರಿಸಲು ಒರಿಸ್ಸಾದಲ್ಲಿ ಹಿರಾಕುಡ್ ಅಣೆಕಟ್ಟನ್ನು ಕಟ್ಟಲಾಗಿದೆ.
# ಇದು ಒಟ್ಟು 2.54 ಲಕ್ಷ ಹೆಕ್ಟೇರ್ ಭೂಮಿಗೆ ನೀರಾವರಿ ಸೌಲಭ್ಯವನ್ನು ಒದಗಿಸಿದೆ.
5) ತುಂಗಭದ್ರಾ ಯೋಜನೆ:-
# ನೀರಾವರಿ ಜಲವಿದ್ಯುಕ್ತಿ ಉತ್ಪಾದನೆ ಈ ಯೋಜನೆಯ ಮುಖ್ಯ ಉದ್ದೇಶವಾಗಿದ್ದು, ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳ ಸಂಯುಕ್ತ ಯೋಜನೆಯಾಗಿದೆ.
# ಈ ಅಣೆಕಟ್ಟನ್ನು ಬಳ್ಳಾರಿ ಜಿಲ್ಲೆಯ ಹೊಸಪೇಟೆ ಬಳಿ ಮಲ್ಲಾಪುರ ಎಂಬಲ್ಲಿ ತುಂಗಭದ್ರಾ ನದಿಗೆ ಕಟ್ಟಲಾಗಿದೆ.
# ಈ ಜಲಾಶಯವನ್ನು ’ಪಂಪಸಾಗರ’ ಎಂದು ಕರೆಯುವರು.
# ಇದು ಆಂಧ್ರಪ್ರದೇಶ ಮತ್ತು ಕರ್ನಾಟಕದ 5.5 ಲಕ್ಷ ಹೆಕ್ಟೇರ್ ಭೂಮಿಗೆ ನೀರಾವರಿ ಹಾಗೂ ವಿದ್ಯುಚ್ಛಕ್ತಿ ಒದಗಿಸಿದೆ.
6) ನಾಗಾರ್ಜುನ ಸಾಗರ:-
# ಆಂಧ್ರಪ್ರದೇಶದ ನಂದಿಕೊಂಡ ಗ್ರಾಮದ ಬಳಿ ಕೃಷ್ನಾನದಿಗೆ ಈ ಅಣೆಕಟ್ಟನ್ನು ನಿರ್ಮಿಸಲಾಗಿದೆ.
# ನೀರಾವರಿ ಮತ್ತು ಜಲವಿದ್ಯುಚ್ಛಕ್ತಿ ಉತ್ಪಾದನೆ ಈ ಯೋಜನೆಯ ಮುಖ್ಯ ಉದ್ದೇಶಗಳಾಗಿವೆ.
# ಇದು ಸುಮಾರು 8.30 ಲಕ್ಷ ಹೆಕ್ಟೇರ್ ಭೂಮಿಗೆ ನೀರಾವರಿ ಸೌಲಭ್ಯವನ್ನು ಒದಗಿಸಿದೆ.
7) ಕೃಷ್ಣಾ ಮೇಲ್ದಂಡೆ ಯೋಜನೆ:-
# ಈ ಯೋಜನೆಯು ಕರ್ನಾಟಕದ ಅತಿ ದೊಡ್ಡ ಯೋಜನೆಯಾಗಿದೆ. ವಿಜಾಪುರ, ಬಾಗಲಕೋಟ, ರಾಯಚೂರ, ಗುಲ್ಬರ್ಗಾ ಜಿಲ್ಲೆಗಳಿಗೆ ನೀರಾವರಿ ಸೌಲಭ್ಯ ಹಾಗೂ ಕುಡಿಯುವ ನೀರಿನ ಯೋಜನೆಯಾಗಿದೆ.
# ಇದನ್ನು ಬಿಜಾಪುರ ಜಿಲ್ಲೆಯ ಆಲಮಟ್ಟಿ ಬಳಿ ಕೃಷ್ಣಾ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸಲಾಗಿದೆ.
# ಇದರಿಂದ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯನಿರ್ಮಿತವಾಗಿದೆ, ಹಾಗೂ ನಾರಾಯಣಪುರ ಬಳಿ ಮತ್ತೊಂದು ಅಣೆಕಟ್ಟು ನಿರ್ಮಿಸಲಾಗಿದೆ. ಇದರ ಜಲಾಶಯದ ಹೆಸರು ಬಸವ ಸಾಗರ.
ಭಾರತದ ಮುಖ್ಯ ವಿವಿದೋದ್ದೇಶ ನದಿಕಣಿವೆ ಯೋಜನೆಗಳ ಈ ಲೇಖನವು ಇಷ್ಟವಾಗಿರಬಹುದೆಂದು ಭಾವಿಸಿಕೊಳ್ಳುತ್ತೇನೆ. ಇನ್ನೂ ಇಂತಹ ಲೇಖನಗಳಿಗಾಗಿ ಬ್ಲಾಗಗೆ ಸಬಸ್ಕ್ರೈಬ್ ಆಗಿ
ಈ ಲೇಖನವನ್ನೂ ಓದಿ
Comments
Post a Comment
ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ