ಚಂದ್ರಗುಪ್ತ ಮೌರ್ಯನ ಧರ್ಮ ಗುರು - ಭದ್ರಬಾಹು
ಚಂದ್ರಗುಪ್ತ ಮೌರ್ಯನು ತನ್ನ ಅಂತ್ಯಕಾಲದಲ್ಲಿ ನೆಲೆಸಿದ್ದ ದಕ್ಷಿಣ ಭಾರತದ ಸ್ಥಳ - ಶ್ರವಣಬೆಳಗೊಳ
ಚಂದ್ರಗುಪ್ತ ಮೌರ್ಯನ ಉತ್ತರಾಧಿಕಾರಿ - ಬಿಂದುಸಾರ
ಬಿಂದುಸಾರನ ಮಗ - ಅಶೋಕ
ವಿಶ್ವದ ಗಣ್ಯ ವ್ಯಕ್ತಿಗಳಲ್ಲಿ ಅಶೋಕ ಒಬ್ಬ ಎಂದು ಬಣ್ಣಿಸಿರುವ ಇತಿಹಾಸ ತಜ್ಞ - ಹೆಚ್.ಜಿ.ವೆಲ್ಸ್
ಅಶೋಕನನ್ನು ಪ್ರೀತಿಯ ಮೂಲಕ ವಿಜಯ ಸಾಧಿಸಿದ ನವಯುಗದ ಪ್ರವರ್ತಕ ಎಂದಿರುವರು - ಹೆಚ್.ಜಿ.ವೆಲ್ಸ್
ಅಶೋಕನು ಅಧಿಕಾರಕ್ಕೆ ಬಂದಿದ್ದು - ಕ್ರಿ.ಪೂ.೨೭೩
ಅಶೋಕನು ಮಾಡಿದ ಪ್ರಥಮ ಯುದ್ಧ - ಕಳಿಂಗ
ಕಳಿಂಗ ಯುದ್ಧ ನಡೆದ ಸ್ಥಳ- ಈಗಿನ ಓರಿಸ್ಸಾ
ಅಶೋಕನ ಶಾಸನಗಳು ರಚಿತವಾದ ಲಿಪಿ - ಪ್ರಾಕೃತ ಭಾಷೆಯ ಬ್ರಾಹ್ಮಿಲಿಪಿ
ವಾಯುವ್ಯ ಭಾರತದ ಅಶೋಕನ ಶಾಸನಗಳ ಲಿಪಿ - ಖರೋಷ್ಠಿ
ಅಶೋಕನು ಸ್ವೀಕರಿಸಿದ ಧರ್ಮ - ಬೌದ್ಧ
ಅಶೋಕನಿಂದ ನೇಮಿಸಲ್ಪಟ್ಟ ಪ್ರಮುಖ ಅಧಿಕಾರಿಗಳು - ಧರ್ಮ ಮಹಾಮಾತ್ರರು
ಕರ್ನಾಟಕದಲ್ಲಿ ಅಶೋಕನ ಶಾಸನಗಳು ದೊರೆತಿರುವ ಜಿಲ್ಲೆಗಳು - ಚಿತ್ರದುರ್ಗ,ಬಳ್ಳಾರಿ,ಕೊಪ್ಪಳ,ರಾಯಚೂರು,ಗುಲ್ಬರ್ಗಾ
ಅಶೋಕನ ಕಾಲದ ಗುಹಾಲಯಗಳು -ಬಿಹಾರದ ಬರಾಬರ ಬೆಟ್ಟ
ಅಶೋಕನ ಸ್ತೂಪಗಳಿರುವ ಸ್ಥಳಗಳು - ಸಾರಾನಾಥ,ಸಾಂಚಿ
ಭಾರತದ ರಾಷ್ಟ್ರೀಯ ಲಾಂಛನವನ್ನು ಪಡೆದಿರುವುದು - ಸಾರನಾಥದ ಸ್ತಂಭದಿಂದ
ಭಾರತದ ರಾಷ್ಟ್ರೀಯ ಲಾಂಛನದಲ್ಲಿ ರುವ ಪ್ರಾಣಿಗಳು
- ಕುದುರೆ,ಆನೆ,ಎತ್ತು,ಮತ್ತು ಸಿಂಹ
ಅಶೋಕನು ಬೌದ್ಧಧರ್ಮ ಪ್ರಚಾರಕ್ಕಾಗಿ ಪ್ರಚಾರಕರನ್ನು ಕಳುಹಿಸಲ್ಪಟ್ಟ ದೇಶಗಳು - ಸಿಂಹಳ,ಗಾಂಧಾರ,ಟಿಬೆಟ್ , ಚೀನಾ,ಮಧ್ಯ ಏಷ್ಯಾ, ಆಗ್ನೇಯ ಏಷ್ಯಾ
ಅಶೋಕನು ಬೌದ್ಧ ಧರ್ಮ ಪ್ರಚಾರಕ್ಕಾಗಿ ತನ್ನ ಮಕ್ಕಳನ್ನು ಕಳುಹಿಸಿದ ದೇಶ- ಶ್ರೀಲಂಕಾ
ಶ್ರೀಲಂಕಾಗೆ ಬೌದ್ಧ ಧರ್ಮ ಪ್ರಚಾರಕ್ಕಾಗಿ ತೆರಳಿದ ಅಶೋಕನ ಮಕ್ಕಳು - ಮಹೇಂದ್ರ ಮತ್ತು ಸಂಘಮಿತ್ರ
ಅಶೋಕನು ಮೂರನೆಯ ಬೌದ್ಧ ಸಮ್ಮೇಳನವನ್ನು ಏರ್ಪಡಿಸಿದ್ದು - ಪಾಟಲಿಪುತ್ರದಲ್ಲಿ
ಭಾರತದ ಮುಖ್ಯ ವಿವಿದೋದ್ದೇಶ ನದಿಕಣಿವೆ ಯೋಜನೆಗಳು 1) ದಾಮೋದರ್ ನದಿ ಕಣಿವೆ ಯೋಜನೆ:- ದಾಮೋದರ್ ಅಣೆಕಟ್ಟು ಸ್ವತಂತ್ರ್ಯ ಭಾರತದ ಮೊಟ್ಟಮೊದಲ ಬೃಹತ್ ಅಣೆಕಟ್ಟು ಆಗಿದೆ. ದಾಮೋದರ್ ಕಣಿವೆ ಕಾರ್ಪೋರೇಷನ್ ನನ್ನುಜುಲೈ 7, 1948 ರಲ್ಲಿ ಸಂವಿಧಾನ ರಚನಾ ಸಭೆಯ ಕಾಯ್ದೆ ಮೂಲಕ ಸ್ಥಾಪಿಸಲಾಯಿತು. ಇದನ್ನು ಅಮೇರಿಕಾದ ಟೆನಿಸ್ಸಿ ಕಣಿವೆ ಯೋಜನೆ ಮಾದರಿಯಲ್ಲಿ ರಚಿಸಲಾಗಿದೆ. ದಾಮೋದರ್ ಕಣಿವೆ ಯೋಜನೆಯನ್ನುಭಾರತದ ರೋರ್ ಎಂದು ಕರೆಯುತ್ತಾರೆ. ಏಕೆಂದರೇ ದಾಮೋದರ್ ಕಣಿವೆ ಪ್ರದೇಶದಲ್ಲಿ ಅತಿ ಹೆಚ್ಚು ಕೈಗಾರಿಕೆಗಳು ಕಂಡುಬರುತ್ತವೆ. ಆದ್ದರಿಂದ ಇದಕ್ಕೆ ಭಾರತದ ’ರೋರ್’ ಎಂದು ಕರೆಯುತ್ತಾರೆ. ದಾಮೋದರ್ ಕಣಿವೆಯು ಭಾರತದ ಪ್ರಮುಖ ಕೈಗಾರಿಕಾ ಪ್ರದೇಶಗಳಲ್ಲಿ ಒಂದು. ಈ ಪ್ರದೇಶದಲ್ಲಿ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾದ ಕೈಗಾರಿಕೆಗಳಾದ ಬೋಕಾರೋ (ಜಾರ್ಕಂಡ್ ನಲ್ಲಿದೆ), ಬರ್ನಾಪೂರ, ದುರ್ಗಾಪುರ (ಪಶ್ಚಿಮ ಬಂಗಾಳ)ದಲ್ಲಿ ಸ್ಥಾಪನೆಯಾಗಿವೆ. ಇಲ್ಲಿ ಅಧಿಕ ಪ್ರಮಾಣಾದ ಕಲ್ಲಿದ್ದಲು ಗಣಿಗಳಿವೆ. # ದಾಮೋದರ್ ನದಿಯ ಉಪನದಿಯಾದ ಬರ್ಕರ್ ನದಿಗೆ ಅಡ್ದಲಾಗಿ 1953 ರಲ್ಲಿತಿಲಾಯ ಅಣೆಕಟ್ಟು ಕಟ್ಟಲಾಗಿದೆ. # 1995 ರಲ್ಲಿ ದಾಮೋದರ್ ನದಿಯ ಇನ್ನೊಂದು ಉಪನದಿಯಾದ ಕೋನಾರ್ನದಿಗೆ ಅಣೆಕಟ್ಟು ಕಟ್ಟಲಾಗಿದೆ. # ದಾಮೋದರ್ ನದಿಯು ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳ ರಾಜ್ಯದಲ್ಲಿ ಹರಿಯುವ ನದಿಯಾಗಿದೆ. # ದಾಮೋದರ್ ನದಿಯನ್ನು ಪಶ್ಚಿಮ ಬಂಗಾಳದ ಕಣ್ಣೀರಿನ ನ...
Super
ReplyDeleteNice Thankyou,🙏
ReplyDelete