Skip to main content

ಸಾಮವೇದ, ಯಜುರ್ವೇದ, ಅಥರ್ವಣ ವೇದ.ಬ್ರಾಹ್ಮಣಕಗಳು,ಅರಣ್ಯಕಗಳು,ಉಪನಿಷತ್ತುಗಳು,ವೇದಾಂಗಗಳು

ಸಾಮವೇದ
೧೬೦೩ ಸೂತ್ರಗಳಿವೆ
ಇವುಗಳನ್ನು ಸೋಮಯಜ್ಞ ಮಾಡುವಾಗ ಹಾಡಲಾಗುತ್ತಿತ್ತು.
ಇವುಗಳನ್ನು ಉದ್ಗಾತ್ರ. ಎಂಬ ಪುರೋಹಿತರು ಹಾಡುತ್ತಿದ್ದರು.
ಇದರಿಂದ ಸಂಗೀತ ಶಾಸ್ತ್ರ ರೂಪುಗೊಂಡಿತೆಂದು ನಂಬಲಾಗಿದೆ.

ಯಜುರ್ವೇದ

ಇದು ೪೦ ಅಧ್ಯಾಯಗಳು ಮತ್ತು ೧೦೧ ಶಾಖೆಗಳನ್ನು ಹೊಂದಿದೆ
ಇದರಲ್ಲಿ ಕೃಷ್ಣ ಯಜುರ್ವೇದ ಮತ್ತು ಶುಕ್ಲ ಯಜುರ್ವೇದ ಎಂದು ಎರಡು ಭಾಗಗಳಿವೆ
ಅಶ್ವಮೇದದಂತಹ ಯಜ್ಞ ಯಾಗಾದಿಗಳ ಬಗ್ಗೆ ವಿವರಿಸುತ್ತದೆ.
ಇದರ ಶ್ಲೋಕಗಳನ್ನು ಪಠಿಸುವವರನ್ನು ಅದ್ವರ್ಯು ಎಂದು ಕರೆಯಲಾಗುತ್ತಿತ್ತು.
ಇದರ ೫ ಶಾಖೆಗಳು ಮಾತ್ರ ಲಭ್ಯವಾಗಿವೆ
ಕೃಷ್ಣ ಯಜುರ್ವೇದದಲ್ಲಿ ಯಾಗಗಳನ್ನು ಮಾಡುವ ವರ್ಣನೆ ಕಂಡು ಬಂದರೆ ,ಶುಕ್ಲ ಯಜುರ್ವೇದವು ಮಂತ್ರ ಹಾಗೂ ಯಾಗದ ನಿಯಮಗಳನ್ನು ಹೊಂದಿದೆ.

ಅಥರ್ವಣ ವೇದ

ಇದರ ಇನ್ನೊಂದು ಹೆಸರು ಮಾಯಸೂತ್ರ ಗ್ರಂಥ
೨೦ ಅಧ್ಯಾಯಗಳಲ್ಲಿ ೭೩೧ ಶ್ಲೋಕಗಳನ್ನು ಹೊಂದಿದೆ.
ಯಂತ್ರ,ತಂತ್ರ,,ಮಾಟ,ಮೋಡಿ,ಯಕ್ಷಿಣಿ ವಿದ್ಯೆ ಮೊದಲಾದವುಗಳನ್ನು ತಿಳಿಸುತ್ತದೆ.
ನಾಲ್ಕೂ ವೇದಗಳನ್ನು ಸಂಹಿತ ಎಂದರೆ,ಮೊದಲ ಮೂರು ವೇದಗಳಿಗೆ ತ್ರಯಿ ಎನ್ನುವರು.

ಬ್ರಾಹ್ಮಣಕಗಳು

ವೇದಗಳ ಶ್ಲೋಕಗಳ ಗದ್ಯರೂಪಗಳಾಗಿವೆ
ಋಗ್ವೇದ - ಐತರೇಯ,ಕೌಷೀತಕಿ ಬ್ರಾಹ್ಮಣಕಗಳು
ಸಾಮವೇದ- ತಾಂಡ್ಯ ಮಹಾ ಅಥವಾ ಪಂಚವೀಶ, ಷಡ್ಕಿಂಶ, ಜೈಮಿನಿಯ ಬ್ರಾಹ್ಮಣಕಗಳು.
ಯಜುರ್ವೇದ - ತೈತರೀಯ  ಮತ್ತು ಶತಪಥ ಬ್ರಾಹ್ಮಣಕಗಳು
ಅಥರ್ವಣ ವೇದ - ಗೋಪಥ ಬ್ರಾಹ್ಮಣಕಗಳು

ಅರಣ್ಯಕಗಳು

ಬ್ರಾಹ್ಮಣಕಗಳ ಕೊನೆಯ ಭಾಗಗಳಾಗಿವೆ
ಇವು ಅರಣ್ಯಗಳಲ್ಲಿ ವಾಸಿಸುವ ಋಷಿಗಳಿಂದ ರಚಿಸಲ್ಪಟ್ಟಿವೆ.
ಧ್ಯಾನಕ್ಕೆ ಪ್ರಾಮುಖ್ಯತೆ ನೀಡಿವೆ.

ಉಪನಿಷತ್ತುಗಳು

ಇವು ವೈದಿಕ ಸಾಹಿತ್ಯದ ಕೊನೆಯ ಭಾಗ ಆದ್ದರಿಂದ ವೇದಾಂತವೆಂತಲೂ ಕರೆಯುತ್ತಾರೆ.

ಉಪನಿಷತ್ ಪದದ ಅರ್ಥ ನಿಗೂಢ ಜ್ಞಾನ

ಉಪ ಎಂದರೆ ಹತ್ತಿರ ನಿಷತ್ ಎಂದರೆ ಕುಳಿತು ಕಲಿಯುವಿಕೆ

ಛಾಂದೋಗ್ಯ, , ಕೇನ, ಮಂಡೂಕ, ಬ್ರಹದಾರಣ್ಯಕ,ಈಶ,ಪ್ರಶ್ನೆ, ,ತೈತರೀಯ,ಕೌಶೀತಕ,ಮೈತ್ರಿ,ಮಾಂಡೂಕ್ಯ. ಉಪನಿಷತ್ ಗಳು ಪ್ರಮುಖವೆನಿಸಿವೆ.

ಸಾಂಖ್ಯ, ,ಯೋಗ, ನ್ಯಾಯ, ವೃಶಷೀಕ, ಪೂರ್ವ ಮೀಮಾಂಸ, ಮತ್ತು ಉತ್ತರ ಮೀಮಾಂಸ ಎಂಬ ಆರು ದರ್ಶನಗಳಿಗೆ  ಉಪನಿಷತ್ತುಗಳೆ ಆಧಾರ.

ವೇದಾಂಗಗಳು

ಶಿಕ್ಷಾ, ವ್ಯಾಕರಣ, ಛಾಂದ, ಕಲ್ಪ, ನಿರುಕ್ತ.  , ಜ್ಯೋತಿಷ್ಯ

ಉಪವೇದಗಳು
ಧನುರ್ವೇದ, ಗಂಧರ್ವವೇದ, ಶಿಲ್ಪವೇದ , ಆಯುರ್ವೇದ

Comments

ಇವುಗಳನ್ನೂ ಓದಿ

ವರ್ಧನ ಸಾಮ್ರಾಜ್ಯದ ಇತಿಹಾಸ

ವರ್ಧನ ಸಾಮ್ರಾಜ್ಯದ ಇತಿಹಾಸ ಗುಪ್ತ ಸಾಮ್ರಾಜ್ಯದ ಅವನತಿಯ ನಂತರ ಉತ್ತರ ಭಾರತದಲ್ಲಿ ಅನೇಕ ಚಿಕ್ಕ ಚಿಕ್ಕ ಸಂಸ್ಥಾನಗಳು ಸ್ಥಾಪಿಸಲ್ಪಟ್ಟವು. ಅವುಗಳಲ್ಲಿ ವರ್ಧನ ಸಾಮ್ರಾಜ್ಯವೂ ಒಂದು. ಈ ಸಾಮ್ರಾಜ್ಯದ ಸ್ಥಾಪಕ ಪ್ರಭಾಕರ ವರ್ಧನ. ಅವನ ರಾಜಧಾನಿ ಥಾನೇಶ್ವರ. ಹೀಗಾಗಿ ಇವರನ್ನು ಥಾನೇಶ್ವರದ ವರ್ಧನರೆಂದೂ ಕರೆಯುತ್ತಿದ್ದರು. ಪ್ರಭಾಕರ ವರ್ಧನ ಶಕ್ತಿಶಾಲಿಯೂ ಶೂರನೂ ಆಗಿದ್ದನು. ಆತನಿಗೆ ರಾಜವರ್ಧನ, ಹರ್ಷವರ್ಧನ ಹಾಗೂ ರಾಜಶ್ರೀಯೆಂಬ ಮೂವರು ಮಕ್ಕಳಿದ್ದರು. ಪ್ರಭಾಕರ ವರ್ಧನನ ಮರಣದ ನಂತರ ರಾಜವರ್ಧನನು ಪಟ್ಟಕ್ಕೆ ಬಂದನು. ಆದರೆ ಧುರ್ಧೈವದಿಂದ ಆತನ ಕೊಲೆಯಾಗುತ್ತದೆ. ಹೀಗಾಗಿ ಹರ್ಷವರ್ಧನನು ಕ್ತಿ.ಶ.606 ರಿಂದ ಕ್ರಿ.ಶ 647 ರವರೆಗೆ ರಾಜ್ಯಭಾರ ಮಾಡುತ್ತಾನೆ.  ಹರ್ಷವರ್ಧನನು ಮಾಳ್ವ ಹಾಗೂ ಕನೋಜದ ಮೇಲೆ ದಂಡೆತ್ತಿ ಹೋಗಿ ಸದೆಬಡಿಯುತ್ತಾನೆ.ಹರ್ಷವರ್ಧನನ ತಂಗಿ ರಾಜಶ್ರೀಯನ್ನು ಮೌಖೇರಿಯ ಗೃಹವರ್ಮನಿಗೆ ವಿವಾಹ ಮಾಡಿ ಕೊಡಲಾಗಿರುತ್ತದೆ. ಮಾಳ್ವದ ದೇವಗುಪ್ತನು ಗೃಹವರ್ಮನನ್ನು ಕೊಲೆಗೈದು, ರಾಜಶ್ರಿಯನ್ನು ಬಂಧನದಲ್ಲಿಟ್ಟಿರುತ್ತಾನೆ. ಇದನ್ನು ಸಹಿಸದ ಅಂದಿನ ರಾಜ ರಾಜವರ್ಧನನು ಆತನ ಮೇಲೆ ದಂಡೆತ್ತಿಹೋಗಿ ಸೋಲಿಸಿರುತ್ತಾನೆ. ಮುಂದೆ ಗೌಡ ದೇಶದ ಶಶಾಂಕನು ಮಿತ್ರನ ವೇಷ ಧರಿಸಿ ಬಂದು ರಾಜವರ್ಧನನ ಕೊಲೆ ಮಾಡುತ್ತಾನೆ. ಹರ್ಷವರ್ಧನ ಹರ್ಷವರ್ಧನನು ಬಲುಶಕ್ತಿಶಾಲಿ ಸಾಮ್ರಾಟನಾಗಿದ್ದು ಸುಮಾರು 40 ವರ್ಷಗಳ ಕಾಲ ಆಳ್ವಿಕೆ ನಡೆಸಿದ. ಆತನ ಸಾಮ್ರಾಜ್ಯವು ಉತ್ತರದಲ್ಲಿ