ಮಗಧ ರಾಜ್ಯದ ರಾಜಧಾನಿ - ಪಾಟಲೀಪುತ್ರ
ಮಗಧ ಎಂದರೆ - ಇಂದಿನ ಬಿಹಾರದ ಭಾಗ
ಮಗಧ ಸಾಮ್ರಾಜ್ಯ ರೂಪುಗೊಂಡ ಕಾಲ - ಕ್ರಿ.ಪೂ.೬ ನೆ ಶತಮಾನ
ಹರ್ಯಂಕ ವಂಶದ ಪ್ರಸಿದ್ಧ ದೊರೆಗಳು - ಬಿಂಬಸಾರ ಮತ್ತು ಅಜಾತ ಶತ್ರು
ಮಗಧ ಪ್ರಾಂತ್ಯದಲ್ಲಿದ್ದ ಒಟ್ಟು ಜನಪದ / ಗಣರಾಜ್ಯಗಳು - ೧೬
ಮಗಧದಲ್ಲಿ ಹರ್ಯಂಕ ವಂಶದ ನಂತರ ಆಳಿದ ವಂಶ- ನಂದವಂಶ
ನಂದವಂಶದ ಸ್ಥಾಪಕ - ಮಹಾ ಪದ್ಮನಂದ
ನಂದರಾಜರ ರಾಜಧಾನಿ - ಪಾಟಲೀಪುತ್ರ
ನಂದವಂಶದ ಕೊನೆಯ ದೊರೆ - ಧನನಂದ
ನಂದರ ನಂತರ ಮಗಧದಲ್ಲಿ ಅಧಿಕಾರಕ್ಕೆ ಬಂದವರು - ಮೌರ್ಯರು
ಮೌರ್ಯವಂಶದ ಸ್ಥಾಪಕ - ಚಂದ್ರಗುಪ್ತ ಮೌರ್ಯ
ಚಂದ್ರಗುಪ್ತ ಮೌರ್ಯನ ತಾಯಿ - ಮುರಾದೇವಿ
ಮೌರ್ಯರ ರಾಜಧಾನಿ - ಪಾಟಲೀಪುತ್ರ
ಚಂದ್ರಗುಪ್ತ ಮೌರ್ಯನಿಗೆ ರಾಜ್ಯ ಸ್ಥಾಪನೆಗೆ ಸಹಾಯ ಮಾಡಿದವರು - ಕೌಟಿಲ್ಯ
ಕೌಟಿಲ್ಯನ ಇತರ ಹೆಸರುಗಳು - ಚಾಣಕ್ಯ , ವಿಷ್ಣುಗುಪ್ತ
ಕೌಟಿಲ್ಯ ಬರೆದ ಗ್ರಂಥ - ಅರ್ಥಶಾಸ್ತ್ರ
ಅರ್ಥಶಾಸ್ತ್ರ ಹೊಂದಿರುವ ವಸ್ತು - ರಾಜಕೀಯ ಸಿದ್ಧಾಂತಗಳು
ಸೆಲ್ಯುಕಸ್ ನು ಚಂದ್ರಗುಪ್ತ ಮೌರ್ಯನ ಆಸ್ಥಾನಕ್ಕೆ ಕಳುಹಿಸಿದ ರಾಯಭಾರಿ - ಮೆಗಾಸ್ತನೀಸ್
ಮೆಗಾಸ್ತನೀಸ್ ಬರೆದ ಗ್ರಂಥ - ಇಂಡಿಕಾ
ಇಂಡಿಕಾ ಗ್ರಂಥ ಈ ಭಾಷೆಯಲ್ಲಿದೆ - ಗ್ರೀಕ್
ಚಂದ್ರಗುಪ್ತನ ಸಾಹಸ ಮತ್ತು ಚಾಣಕ್ಯನ ಚತುರೋಪಾಯಗಳನ್ನು ನಾಟಕೀಯವಾಗಿ ಚಿತ್ರಿಸಿರುವ ಪುಸ್ತಕ - ಮುದ್ರಾರಾಕ್ಷಸ
ಮುದ್ರಾರಾಕ್ಷಸ ಗ್ರಂಥದ ಕತೃ - ವಿಶಾಖದತ್ತ
ಚಂದ್ರಗುಪ್ತ ಮೌರ್ಯನ ಪ್ರಧಾನ ಮಂತ್ರಿ - ಕೌಟಿಲ್ಯ
ಪ್ರಪಥಮವಾಗಿ ಇಡೀ ಭಾರತ ದೇಶವನ್ನು ಸಂಘಟಿಸಿದವ ಎಂಬ ಕೀರ್ತಿ ಪಡೆದವನು - ಚಂದ್ರಗುಪ್ತ ಮೌರ್ಯ
ಸೌರಾಷ್ಟ್ರದಲ್ಲಿ ಸುದರ್ಶನ ಎಂಬ ಜಲಾಶಯ ನಿರ್ಮಿಸಿದವನು - ಪುಷ್ಯಗುಪ್ತ
ವರ್ಧನ ಸಾಮ್ರಾಜ್ಯದ ಇತಿಹಾಸ ಗುಪ್ತ ಸಾಮ್ರಾಜ್ಯದ ಅವನತಿಯ ನಂತರ ಉತ್ತರ ಭಾರತದಲ್ಲಿ ಅನೇಕ ಚಿಕ್ಕ ಚಿಕ್ಕ ಸಂಸ್ಥಾನಗಳು ಸ್ಥಾಪಿಸಲ್ಪಟ್ಟವು. ಅವುಗಳಲ್ಲಿ ವರ್ಧನ ಸಾಮ್ರಾಜ್ಯವೂ ಒಂದು. ಈ ಸಾಮ್ರಾಜ್ಯದ ಸ್ಥಾಪಕ ಪ್ರಭಾಕರ ವರ್ಧನ. ಅವನ ರಾಜಧಾನಿ ಥಾನೇಶ್ವರ. ಹೀಗಾಗಿ ಇವರನ್ನು ಥಾನೇಶ್ವರದ ವರ್ಧನರೆಂದೂ ಕರೆಯುತ್ತಿದ್ದರು. ಪ್ರಭಾಕರ ವರ್ಧನ ಶಕ್ತಿಶಾಲಿಯೂ ಶೂರನೂ ಆಗಿದ್ದನು. ಆತನಿಗೆ ರಾಜವರ್ಧನ, ಹರ್ಷವರ್ಧನ ಹಾಗೂ ರಾಜಶ್ರೀಯೆಂಬ ಮೂವರು ಮಕ್ಕಳಿದ್ದರು. ಪ್ರಭಾಕರ ವರ್ಧನನ ಮರಣದ ನಂತರ ರಾಜವರ್ಧನನು ಪಟ್ಟಕ್ಕೆ ಬಂದನು. ಆದರೆ ಧುರ್ಧೈವದಿಂದ ಆತನ ಕೊಲೆಯಾಗುತ್ತದೆ. ಹೀಗಾಗಿ ಹರ್ಷವರ್ಧನನು ಕ್ತಿ.ಶ.606 ರಿಂದ ಕ್ರಿ.ಶ 647 ರವರೆಗೆ ರಾಜ್ಯಭಾರ ಮಾಡುತ್ತಾನೆ. ಹರ್ಷವರ್ಧನನು ಮಾಳ್ವ ಹಾಗೂ ಕನೋಜದ ಮೇಲೆ ದಂಡೆತ್ತಿ ಹೋಗಿ ಸದೆಬಡಿಯುತ್ತಾನೆ.ಹರ್ಷವರ್ಧನನ ತಂಗಿ ರಾಜಶ್ರೀಯನ್ನು ಮೌಖೇರಿಯ ಗೃಹವರ್ಮನಿಗೆ ವಿವಾಹ ಮಾಡಿ ಕೊಡಲಾಗಿರುತ್ತದೆ. ಮಾಳ್ವದ ದೇವಗುಪ್ತನು ಗೃಹವರ್ಮನನ್ನು ಕೊಲೆಗೈದು, ರಾಜಶ್ರಿಯನ್ನು ಬಂಧನದಲ್ಲಿಟ್ಟಿರುತ್ತಾನೆ. ಇದನ್ನು ಸಹಿಸದ ಅಂದಿನ ರಾಜ ರಾಜವರ್ಧನನು ಆತನ ಮೇಲೆ ದಂಡೆತ್ತಿಹೋಗಿ ಸೋಲಿಸಿರುತ್ತಾನೆ. ಮುಂದೆ ಗೌಡ ದೇಶದ ಶಶಾಂಕನು ಮಿತ್ರನ ವೇಷ ಧರಿಸಿ ಬಂದು ರಾಜವರ್ಧನನ ಕೊಲೆ ಮಾಡುತ್ತಾನೆ. ಹರ್ಷವರ್ಧನ ಹರ್ಷವರ್ಧನನು ಬಲುಶಕ್ತಿಶಾಲಿ ಸಾಮ್ರಾಟನಾಗಿದ್ದು ಸುಮಾರು 40 ವರ್ಷಗಳ ಕಾಲ ಆಳ್ವಿಕೆ ನಡೆಸಿದ. ಆತನ ಸಾಮ್ರಾಜ್ಯವು ಉತ್ತರದಲ...
Comments
Post a Comment
ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ