Skip to main content

ಸಂಧಿ ಪ್ರಕರಣ



ಪದಕ್ಕೆ ಪದ ಬಂದು ಸೇರುವಾಗ ಅಕ್ಷರಗಳು ಲೋಪವಾಗುವುದು,ಅಕ್ಷರ ಬಂದು ಸೇರುವುದು ಅಥವಾ ಒಂದು ಅಕ್ಷರದ ಬದಲಿಗೆ ಮತ್ತೊಂದು ಅಕ್ಷರ ಬಂದು ಸೇರುವುದಕ್ಕೆ ಸಂಧಿಕಾರ್ಯ ಎನ್ನುವರು
ಸಂಧಿಯಾಗುವಾಗ ಅಕ್ಷರ ಲೋಪವಾದರೆ ಅದನ್ನು ಲೋಪ ಸಂಧಿ ಎನ್ನುವರು.
ಉದಾ- ಊರು+ ಅಲ್ಲಿ = ಊರಲ್ಲಿ
ಕಾಡು + ಇಗೆ = ಕಾಡಿಗೆ
ದೇವರು + ಇಂದ =>ದೇವರಿಂದ
ಸಂಧಿಯಾಗುವಾಗ ಒಂದು ಅಕ್ಷರ ಹೊಸದಾಗಿ ಬಂದರೆ ಅದನ್ನು ಆಗಮ ಸಂಧಿ ಎನ್ನುವರು
ಉದಾ-ಮೊಟ್ಟೆ+ಇಡು=ಮೊಟ್ಟೆಯಿಡು
ಯಕಾರಾಮ ಸಂಧಿ
ಆ,ಇ,ಈ,ಎ,ಏ,ಐ ಎಂಬ ಸ್ವರಗಳ ಮುಂದೆ ಸ್ವರ ಬಂದರೆ ನಡುವೆ ಯ, ಕಾರವು ಆಗಮವಾದರೆ ಅದು ಯ ಕಾರಾಗಮ ಸಂಧಿ
ಉದಾ
ಕಾ+ಅದೆ= ಕಾಯದೆ
ಹಳ್ಳಿ + ಅಲ್ಲಿ = ಹಳ್ಳಿಯಲ್ಲಿ
ವಕಾರಾಗಮ ಸಂಧಿ
ಉ ಋ ಎಂಬ ಸ್ವರಗಳ ಮುಂದೆ ಸ್ವರವು ಬಂದರೆ ವಕಾರವು ಬರುತ್ತದೆ.
ಉದಾ
ಗೋ + ಇನ = ಗೋವಿನ
ಕುಲ+ ಅನ್ನು = ಕುಲವನ್ನು
ಸಂಧಿಯಾಗುವಾಗ ಒಂದು ಅಕ್ಷರದ ಬದಲಿಗೆ ಮತ್ತೊಂದು ಅಕ್ಷರ ಬಂದರೆ ಅದು ಆದೇಶ ಸಂಧಿ
ಉದಾ
ಬೆಟ್ಟ+ತಾವರೆ=ಬೆಟ್ಟದಾವರೆ
ಅಡಿ + ಕಲ್ಲು = ಅಡಿಗಲ್ಲು
ಕೆಳ + ತುಟಿ = ಕೆಳದುಟಿ
ಕಣ್ + ಪನಿ= ಕಂಬನಿ
ಸಂಸ್ಕೃತ ಸಂಧಿಗಳು
ಸಂಸ್ಕೃತ -ಸಂಸ್ಕೃತ ಪದಗಳು ಸೇರಿ ಸಂಧಿಯಾದರೆ ಅದು ಸಂಸ್ಕೃತ ಸಂಧಿ
ಸಂಸ್ಕೃತ ಸ್ವರ ಸಂಧಿಗಳು
ಸವರ್ಣದೀರ್ಘ ಸಂಧಿ
ಸಂಧಿಕಾರ್ಯ ನಡೆಯುವಾಗ ಒಂದೇ ರೀತಿಯ ಸ್ವರಾಕ್ಷರಗಳು ಪರಸ್ಪರ ಸೇರಿ ದೀರ್ಘ ಸ್ವರ ಆದೇಶವಾದರೆ ಅಂತಹ ಸಂಧಿಯನ್ನು ಸವರ್ಣಧೀರ್ಘ ಸಂಧಿ ಎನ್ನುವರು
ಉದಾ
ರವಿ+ಇಂದ್ರ = ರವೀಂದ್ರ.   (ಇ+ಇ=ಈ)
ದೇವ+ಆಲಯ= ದೇವಾಲಯ(ಅ+ಆ=ಆ)
ಗುರು+ ಉಪದೇಶ= ಗುರೂಪದೇಶ (ಉ+ಉ=ಊ)
ಮಹಾ+ ಆತ್ಮ = ಮಹಾತ್ಮ (ಆ+ಆ=ಆ)
ಅ,ಆ,ಇ,ಈ,ಉ,ಊ ಇವು ಸವರ್ಣ ಸ್ವರಗಳು
ಗುಣಸಂಧಿ
ಅ ಅಥವಾ ಆ ಎಂಬ ಸ್ವರಗಳಿಗೆ ಇ ಅಥವಾ ಈ ಎಂಬ ಸ್ವರ ಸೇರಿದಾಗ ಏ ಕಾರವೂ , ಉ ಅಥವಾ ಊ ಸ್ವರ ಸೇರಿದಾಗ ಓ ಕಾರವೂ ಋ ಎಂಬ ಸ್ವರ ಸೇರಿದಾಗ ಅರ್ ಕಾರವೂ ಆದೇಶವಾಗಿ ಬರುವುದನ್ನು ಗುಣಸಂಧಿ ಎಂದು ಕರೆಯುತ್ತೇವೆ
ಉದಾ
ದೇವ+ ಇಂದ್ರ=ದೇವೇಂದ್ರ ( ಅ+=ಏ)
ಮಹಾ+ ಈಶ್ವರ = ಮಹೇಶ್ವರ ( ಆ+ಈ= ಏ)
ಚಂದ್ರ+ ಉದಯ = ಚಂದ್ರೋದಯ ( ಅ+ಉ=ಓ)
Samanya Kannada Adhyayana Kaipidi - Useful For PDO, TET, SDA, FDA, KPSC Group C, Morarji Desayi, Abakari Police And All Other Technical And Non Technical Exams ವೃದ್ಧಿ ಸಂಧಿ
ಅ,ಆ,ಕಾರಗಳಿಗೆ ಏ,ಐ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ಐ ಕಾರವೂ ,ಒ,ಔ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ಔ ಕಾರವೂ ಆದೇಶಗಳಾಗಿ ಬರುತ್ತವೆ.ಇದಕ್ಕೆ ವೃದ್ಧಿ ಸಂಧಿ ಎನ್ನುವರು
ಉದಾ
ವನ+ಔಷಧ=ವನೌಷಧ ( ಅ+ ಔ= ಔ)
ಮಹಾ + ಔನತ್ಯ = ಮಹೌನ್ನತ್ಯ ( ಆ+ಔ =ಔ)
ಯಣ್ ಸಂಧಿ
ಇ,ಈ,ಉ,ಋ ಕಾರಗಳಿಗೆ ಸವರ್ಣವಲ್ಲದ ಸ್ವರ ಪರವಾದರೆ ಇ, ಈ ಕಾರಗಳಿಗೆ ಯ ಕಾರವೂ,ಉ ಕಾರಕ್ಕೆ ವ ಕಾರವೂ,ಋ ಕಾರಕ್ಕೆ ರ ಕಾರವೂ ಆದೇಶವಾಗಿ ಬರುತ್ತವೆ.ಇದಕ್ಕೆ ಯಣ್ ಸಂಧಿ ಎನ್ನುವರು
ಉದಾ
ಅತಿ+ಅಂತ= ಅತ್ಯಂತ (ಇ ಕಾರಕ್ಕೆ ಯ ಕಾರ ಆದೇಶ)
ಪ್ರತಿ + ಉತ್ತರ = ಪ್ರತ್ಯುತ್ತರ ( ಇ ಕಾರಕ್ಕೆ ಯ ಕಾರ ಆದೇಶ)
ಅಧಿ + ಆತ್ಮ = ಅಧ್ಯಾತ್ಮ ( ಇ ಕಾರಕ್ಕೆ ಯ ಕಾರ ಆದೇಶ)
ಮನು + ಅಂತರ = ಮನ್ವಂತರ ( ಉ ಕಾರಕ್ಕೆ ವ ಕಾರ ಆದೇಶ)
ಪಿತೃ + ಅರ್ಜಿತ = ಪಿತ್ರಾರ್ಜಿತ( ಋ ಕಾರಕ್ಕೆ ರ ಆದೇಶ)

ಇವುಗಳನ್ನೂ ಓದಿ

ಭಾರತದ ಮುಖ್ಯ ವಿವಿದೋದ್ದೇಶ ನದಿಕಣಿವೆ ಯೋಜನೆಗಳು

ಭಾರತದ ಮುಖ್ಯ ವಿವಿದೋದ್ದೇಶ ನದಿಕಣಿವೆ ಯೋಜನೆಗಳು 1) ದಾಮೋದರ್ ನದಿ ಕಣಿವೆ ಯೋಜನೆ:- ದಾಮೋದರ್ ಅಣೆಕಟ್ಟು ಸ್ವತಂತ್ರ್ಯ ಭಾರತದ ಮೊಟ್ಟಮೊದಲ ಬೃಹತ್ ಅಣೆಕಟ್ಟು ಆಗಿದೆ. ದಾಮೋದರ್ ಕಣಿವೆ ಕಾರ್ಪೋರೇಷನ್ ನನ್ನುಜುಲೈ 7, 1948 ರಲ್ಲಿ ಸಂವಿಧಾನ ರಚನಾ ಸಭೆಯ ಕಾಯ್ದೆ ಮೂಲಕ ಸ್ಥಾಪಿಸಲಾಯಿತು. ಇದನ್ನು ಅಮೇರಿಕಾದ ಟೆನಿಸ್ಸಿ ಕಣಿವೆ ಯೋಜನೆ ಮಾದರಿಯಲ್ಲಿ ರಚಿಸಲಾಗಿದೆ. ದಾಮೋದರ್ ಕಣಿವೆ ಯೋಜನೆಯನ್ನುಭಾರತದ ರೋರ್ ಎಂದು ಕರೆಯುತ್ತಾರೆ. ಏಕೆಂದರೇ ದಾಮೋದರ್ ಕಣಿವೆ ಪ್ರದೇಶದಲ್ಲಿ ಅತಿ ಹೆಚ್ಚು ಕೈಗಾರಿಕೆಗಳು ಕಂಡುಬರುತ್ತವೆ. ಆದ್ದರಿಂದ ಇದಕ್ಕೆ ಭಾರತದ ’ರೋರ್’ ಎಂದು ಕರೆಯುತ್ತಾರೆ. ದಾಮೋದರ್ ಕಣಿವೆಯು ಭಾರತದ ಪ್ರಮುಖ ಕೈಗಾರಿಕಾ ಪ್ರದೇಶಗಳಲ್ಲಿ ಒಂದು. ಈ ಪ್ರದೇಶದಲ್ಲಿ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾದ ಕೈಗಾರಿಕೆಗಳಾದ ಬೋಕಾರೋ (ಜಾರ್ಕಂಡ್ ನಲ್ಲಿದೆ), ಬರ್ನಾಪೂರ, ದುರ್ಗಾಪುರ (ಪಶ್ಚಿಮ ಬಂಗಾಳ)ದಲ್ಲಿ ಸ್ಥಾಪನೆಯಾಗಿವೆ. ಇಲ್ಲಿ ಅಧಿಕ ಪ್ರಮಾಣಾದ ಕಲ್ಲಿದ್ದಲು ಗಣಿಗಳಿವೆ. # ದಾಮೋದರ್ ನದಿಯ ಉಪನದಿಯಾದ ಬರ್ಕರ್ ನದಿಗೆ ಅಡ್ದಲಾಗಿ 1953 ರಲ್ಲಿತಿಲಾಯ ಅಣೆಕಟ್ಟು ಕಟ್ಟಲಾಗಿದೆ. # 1995 ರಲ್ಲಿ ದಾಮೋದರ್ ನದಿಯ ಇನ್ನೊಂದು ಉಪನದಿಯಾದ ಕೋನಾರ್ನದಿಗೆ ಅಣೆಕಟ್ಟು ಕಟ್ಟಲಾಗಿದೆ. # ದಾಮೋದರ್ ನದಿಯು ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳ ರಾಜ್ಯದಲ್ಲಿ ಹರಿಯುವ ನದಿಯಾಗಿದೆ. # ದಾಮೋದರ್ ನದಿಯನ್ನು ಪಶ್ಚಿಮ ಬಂಗಾಳದ ಕಣ್ಣೀರಿನ ನ...