Skip to main content

ಮೂಲಭೂತ ಹಕ್ಕುಗಳು ಭಾಗ ೨(ಸಾಂಸ್ಕೃತೀಕ ಮತ್ತು ಶೈಕ್ಷಣಿಕ ಹಕ್ಕು ಹಾಗೂ ಸಂವಿಧಾನಾತ್ಮಕ ಪರಿಹಾರದ ಹಕ್ಕು)



ಸಾಂಸ್ಕೃತೀಕ ಮತ್ತು ಶೈಕ್ಷಣಿಕ ಹಕ್ಕು
ಅನುಚ್ಛೇದ ೨೯
ಭಾರತದಲ್ಲಿ ವಾಸಿಸುವ ವ್ಯಕ್ತಿಗೆ ಭಾರತದ ಯಾವುದೇ ಕ್ಷೇತ್ರದಲ್ಲಿ ವಾಸಿಸಬಹುದು.ಯಾವುದೇ ಭಾಷೆಯನ್ನಾದರೂ ಆಡಬಹುದು.ಯಾವುದೇ ಸಂಸ್ಕೃತಿಯನ್ನು ಸ್ವೀಕರಿಅಬಹುದು.
ಅನುಚ್ಛೇದ ೩೦
ಅಲ್ಪ.ಸಂಖ್ಯಾತರು,ಜಾತಿಯಾಧಾರಿತವಾಗಲಿ,ಭಾಷೆಯಾಧರಿತ ಶಿಕ್ಷಣ ಸಂಸ್ಥೆ ಸ್ಥಾಪಿಸುವ ಹಾಗೂ ಅವುಗಳ ಆಡಳಿತ ವನ್ನು ನಡೆಸಿಕೊಂಡು ಹೋಗಬಹುದು.
ಅನುಚ್ಛೇದ ೩೧
ಈ ಅನುಚ್ಛೇದವನ್ನು ೧೯೭೮ ರಲ್ಲಿ ೪೪ ನೆ ತಿದ್ದುಪಡಿ ಯನ್ವಯ ನಿರಸನಗೊಳಿಸಲಾಗಿದೆ.
ಸಂವಿಧಾನಾತ್ಮಕ ಪರಿಹಾರದ ಹಕ್ಕು
ಅನುಚ್ಛೇದ ೩೨
ಇದನ್ನು  ಅಂಬೇಡ್ಕರ್ ವರು ಸಂವಿಧಾನದ ಆತ್ಮ. ಎಂದು ಕರೆದರು.ಇದು ಮೂಲಭೂತ ಹಕ್ಕುಗಳ ಉಲ್ಲಂಘನೆಯಾದಾಗ ಪಡೆಯಬಹುದಾದ ಪರಿಹಾರಗಳನ್ನು ಸೂಚಿಸುವ ಹಕ್ಕನ್ನು ಪ್ರತಿಪಾದಿಸುತ್ತದೆ.
ಮೂಲಭೂತ ಹಕ್ಕುಗಳಿಗೆ ಚ್ಯುತಿ ಬಂದಾಗ ವ್ಯಕ್ಯಿ  ನ್ಯಾಯಾಲಯದ ಮೊರೆ ಹೋಗಲು ಅವಕಾಶ ನೀಡಿದೆ.ಇಂತಹ ಸಂಧರ್ಭದಲ್ಲಿ ಸರ್ವೊಚ್ಛ ನ್ಯಾಯಾಲಯವು ಆದೇಶ,ಆಜ್ಞೆ,ರಿಟ್ ಮೂಲಕ ನಿರ್ದೇಶನ ನೀಡುವುದು.ಅವು ಈ ಕೆಳಗಿನಂತಿವೆ.
ಇಂಜೆಕ್ಷನ ( ಪರಮಾದೇಶ)
ಯಾವುದೇ ಅಧಿಕಾರಿಯಿಂದ ಕರ್ತವ್ಯ ಲೋಪವಾದಾಗ ಸುಪ್ರೀಂ ಕೋರ್ಟ ಕರೆದು ಸರಿಪಡಿಸಿಕೊಳ್ಳಲು ನೀಡುವ ಆದೇಶ
ಹೆಬಿಯಸ್ ಕಾರ್ಪಸ್ ( ಬಂಧೀ ಪ್ರತ್ಯಕ್ಷಿಕರಣ)
ಯಾವುದೇ ವ್ಯಕ್ತಿಯನ್ನು ಅಕ್ರಮವಾಗಿ ಬಂಧಿಸಿದ್ದರೆ ೨೪ ಗಂಟೆಯೊಳಗೆ ಬಿಡುಗಡೆಗೊಳಿಸಬೇಕು.
ಮ್ಯಾಂಡಮಸ್ ( ಪರಮಾದೇಶ)
ಯಾವುದೇ ಅಧಿಕಾರಿ ತನ್ನ ಕಾರ್ಯವನ್ನು  ಸರಿಯಾಗಿ ನಡೆಸಿಕೊಂಡು ಹೋಗದ ಸಂದರ್ಭದಲ್ಲಿ ನ್ಯಾಯಾಲಯ ಅವನಿಗೆ ನೀಡುವ ಆಜ್ಞೆ
ಸರ್ಷಿಯೋರರಿ
ಕೆಳ ನ್ಯಾಯಾಲಯದಿಂದ ಮೂಲಭೂತ ಹಕ್ಕಿಗೆ ಚ್ಯುತಿ ಬಂದಾಗ ಅಂಥ ಪ್ರಕರಣವನ್ನು ಮೇಲಿನ ನ್ಯಾಯಾಲಯಕೆ ವರ್ಗಾಯಿಸಲು ನೀಡುವ ಆಜ್ಞೆ
ಪ್ರೋಹಿಬಿಷನ್ ( ನಿಷೇಧಾಜ್ಞೆ)
ಕೆಳ ನ್ಯಾಯಾಲಯವು ತನ್ನ ಅಧಿಕಾರ ವ್ಯಾಪ್ತಿಯನ್ನು ಮೀರಿ ವಿಚಾರಣೆ ನಡೆಸುತ್ತಿದ್ದಲ್ಲಿ,ಅಂಥ ವಿಚಾರಣೆಯನ್ನು ನಿಲ್ಲಿಸುವಂತೆ ಸುಪ್ರೀಂ ಕೋರ್ಟ ನೀಡುವ ಆದೇಶ
ಕೋ ವಾರಂಟ್
ಅರ್ಹತೆ ಇಲ್ಲದ ವ್ಯಕ್ತಿಗೆ ಆತನ ಅರ್ಹತೆ ಮೀರಿ ಉನ್ನತ ಹುದ್ದೆಯನ್ನು ನೀಡಿದ್ದರೆ, ಅದನ್ನು ಹಿಂದಿರುಗಿಸುವಂತೆ ನೀಡುವ ಆದೇಶ
ಅನುಚ್ಛೇದ ೩೩
ಈ ಅನುಚ್ಛೇದ ವು ಸಶಸ್ತ್ರ. ಸೇನೆ ಅಥವಾ ನಾಗರಿಕ ಸಂರಕ್ಷಣಾ ದಳಗಳ ಅಧಿಕಾರ ಶಿಸ್ತು ಕರ್ತವ್ಯ  ಕುರಿತಂತೆ ಕಾನೂನು ರಚಿಸಲು ಸಂಸತ್ತಿನ ವಿಧಿಯನ್ವಯ ನಿರ್ಧರಿಸಬಹುದಾಗಿದೆ
ಅನುಚ್ಛೇದ ೩೪
ಲಷ್ಕರಿ ಕಾನೂನು ಜಾರಿಯಲ್ಲಿರುವಾಗ ಈ ಭಾಗದ ಪ್ರದತ್ತವಾದ ಹಕ್ಕುಗಳ ಮೇಲೆ ನಿರ್ಬಂಧ.
ಅನುಚ್ಛೇದ ೩೫
ಈ ಭಾಗದ ಉಪಬಂಧಗಳನ್ನು ಜಾರಿಗೆ ತರಲು ಕಾನೂನು ರಚನೆ ಮಾಡುವ ಅಧಿಕಾರ ಸಂಸತ್ತಿಗಿದೆ.
ಅನುಚ್ಛೇದ ೩೬
ಈ ಭಾಗದಲ್ಲಿ ಅನ್ಯ ಥಾ ಗೊತ್ತುಪಡಿಸಿದ ಹೊರತು ರಾಜ್ಯವೆಂಬ ಪದದ ಅರ್ಥವನ್ನೆ ಹೇಳುತ್ತದೆ.
ಅನುಚ್ಛೇದ ೩೭
ಈ ಭಾಗದಲ್ಲಿ ಹೇಳಲಾಗಿರುವ ಅಂಶಗಳು ನ್ಯಾಯಾಲಯದ ಮೂಲಕ ಜಾತಿಗೆ ತರುವಂತಹುದಲ್ಲ ಅದಾಗ್ಯೂ  ದೇಶದ ಆಡಳಿಯ ನಿರ್ವಹಣೆಯಲ್ಲಿ ಮೂಲಭೂತವಾಗಿರುತ್ತವೆ.
************************************
ನಾಳೆಯ ಪೋಸ್ಟ್ - ವೇದಗಳ ಕಾಲದ ಜೀವನ
Best books for competitive exam preparation

ಇವುಗಳನ್ನೂ ಓದಿ

ವರ್ಧನ ಸಾಮ್ರಾಜ್ಯದ ಇತಿಹಾಸ

ವರ್ಧನ ಸಾಮ್ರಾಜ್ಯದ ಇತಿಹಾಸ ಗುಪ್ತ ಸಾಮ್ರಾಜ್ಯದ ಅವನತಿಯ ನಂತರ ಉತ್ತರ ಭಾರತದಲ್ಲಿ ಅನೇಕ ಚಿಕ್ಕ ಚಿಕ್ಕ ಸಂಸ್ಥಾನಗಳು ಸ್ಥಾಪಿಸಲ್ಪಟ್ಟವು. ಅವುಗಳಲ್ಲಿ ವರ್ಧನ ಸಾಮ್ರಾಜ್ಯವೂ ಒಂದು. ಈ ಸಾಮ್ರಾಜ್ಯದ ಸ್ಥಾಪಕ ಪ್ರಭಾಕರ ವರ್ಧನ. ಅವನ ರಾಜಧಾನಿ ಥಾನೇಶ್ವರ. ಹೀಗಾಗಿ ಇವರನ್ನು ಥಾನೇಶ್ವರದ ವರ್ಧನರೆಂದೂ ಕರೆಯುತ್ತಿದ್ದರು. ಪ್ರಭಾಕರ ವರ್ಧನ ಶಕ್ತಿಶಾಲಿಯೂ ಶೂರನೂ ಆಗಿದ್ದನು. ಆತನಿಗೆ ರಾಜವರ್ಧನ, ಹರ್ಷವರ್ಧನ ಹಾಗೂ ರಾಜಶ್ರೀಯೆಂಬ ಮೂವರು ಮಕ್ಕಳಿದ್ದರು. ಪ್ರಭಾಕರ ವರ್ಧನನ ಮರಣದ ನಂತರ ರಾಜವರ್ಧನನು ಪಟ್ಟಕ್ಕೆ ಬಂದನು. ಆದರೆ ಧುರ್ಧೈವದಿಂದ ಆತನ ಕೊಲೆಯಾಗುತ್ತದೆ. ಹೀಗಾಗಿ ಹರ್ಷವರ್ಧನನು ಕ್ತಿ.ಶ.606 ರಿಂದ ಕ್ರಿ.ಶ 647 ರವರೆಗೆ ರಾಜ್ಯಭಾರ ಮಾಡುತ್ತಾನೆ.  ಹರ್ಷವರ್ಧನನು ಮಾಳ್ವ ಹಾಗೂ ಕನೋಜದ ಮೇಲೆ ದಂಡೆತ್ತಿ ಹೋಗಿ ಸದೆಬಡಿಯುತ್ತಾನೆ.ಹರ್ಷವರ್ಧನನ ತಂಗಿ ರಾಜಶ್ರೀಯನ್ನು ಮೌಖೇರಿಯ ಗೃಹವರ್ಮನಿಗೆ ವಿವಾಹ ಮಾಡಿ ಕೊಡಲಾಗಿರುತ್ತದೆ. ಮಾಳ್ವದ ದೇವಗುಪ್ತನು ಗೃಹವರ್ಮನನ್ನು ಕೊಲೆಗೈದು, ರಾಜಶ್ರಿಯನ್ನು ಬಂಧನದಲ್ಲಿಟ್ಟಿರುತ್ತಾನೆ. ಇದನ್ನು ಸಹಿಸದ ಅಂದಿನ ರಾಜ ರಾಜವರ್ಧನನು ಆತನ ಮೇಲೆ ದಂಡೆತ್ತಿಹೋಗಿ ಸೋಲಿಸಿರುತ್ತಾನೆ. ಮುಂದೆ ಗೌಡ ದೇಶದ ಶಶಾಂಕನು ಮಿತ್ರನ ವೇಷ ಧರಿಸಿ ಬಂದು ರಾಜವರ್ಧನನ ಕೊಲೆ ಮಾಡುತ್ತಾನೆ. ಹರ್ಷವರ್ಧನ ಹರ್ಷವರ್ಧನನು ಬಲುಶಕ್ತಿಶಾಲಿ ಸಾಮ್ರಾಟನಾಗಿದ್ದು ಸುಮಾರು 40 ವರ್ಷಗಳ ಕಾಲ ಆಳ್ವಿಕೆ ನಡೆಸಿದ. ಆತನ ಸಾಮ್ರಾಜ್ಯವು ಉತ್ತರದಲ...