ಸಿಂಗ್ - ನಮಸ್ಕಾರಪಾ ಮಾವ ಮತ್ತೇನ ಕರ್ನಾಟಕಕ ರತ್ನ ಸಿಕ್ಕೈತಿ ಅಂತ?
ಕಿಂಗ್ - ಹಂಗಂದ್ರೇನೊ?
ಸಿಂಗ್- ರಾಜ್ಯ ಸರ್ಕಾರದ ನೂತನ ಮುಖ್ಯಕಾರ್ಯದರ್ಶಿಯಾಗಿ ಕೆ. ರತ್ನಪ್ರಭಾ ಆಯ್ಕೆಯಾಗಿದಾರ.
ಕಿಂಗ್ - ಅದಕಿ ಮೊದಲ ಯಾರಿದ್ದರ ಮತ್ತ?
ಸಿಂಗ್ - ಸುಭಾಷಚಂದ್ರ. ಕುಂಟಿಯಾ ಇದ್ದರ. ಅವರು ನಿವೃತ್ತಿಯಾಗಾತಾರು.
ಕಿಂಗ್ - ಅದಕನೊ ವಯಸ್ಸಾದ ಮೇಲೆ ಕುಂಟಗೊತ ಬಿದ್ದುಕೊಂತ ಹೋಗೋದು.
ಸಿಂಗ್ - ಏಯ್ ಸಾಲ್ಯಾಗ ಹಾಜರಿ ತುಗೊಳ್ಳುವಾಗ ನೀ ಏನಂತಿದ್ದಿ?
ಕಿಂಗ್ - ಬಂದಿದ್ದೇನೆ ಸಾರ ಅಂತ ಹೇಳ್ತಿದ್ವಿ
ಸಿಂಗ್- ಮಧ್ಯಪ್ರದೇಶ ಸರ್ಕಾರದವ್ರು ಒಂದ ಆದೇಶ ಮಾಡಿದಾರಪಾ. ಎಸ್ ಸರ್/ ಪ್ರಸೆಂಟ್ ಸರ್ ಅನ್ನೊದನೆಲ್ಲಾ ಬಿಟ್ಟು ಜೈಹಿಂದ ಅಂತ ಹೇಳಬೇಕು.
ಕಿಂಗ್ - ಸಿಂಗ್...
ಸಿಂಗ್ - ಜೈ ಹಿಂದ ಸರ್
ಕಿಂಗ್ - ಮಸ್ತ ಐತಿ ನೋಡ ಇದ
ಸಿಂಗ್ - ಭಾರತದಾವ್ರು ಮನುಷ್ಯಾರಿಗೆ ಆಧಾರ ಕಾರ್ಡ ಮಾಡಿಸಿದ್ರ. ಪಾಕಿಸ್ತಾನದವ್ರು ಜಾನುವಾರುಗಳಿಗೆ ಮಾಡ್ಸಾತಾರಂತಪಾ
ಜಾನುವಾರುಗಳಿಗೆಲ್ಲಾ ವಿಶೇಷ ಗುರುತಿನ ಸಂಕೇತ ನೀಡಿ ಅವುಗಳ ಮಾಹಿತಿಯನ್ನು ಕಂಪ್ಯೂಟರ್ ನಲ್ಲಿ ಶೇಖರಿಸಿಡಲಾಗುತ್ತಿದೆ .
ಕಿಂಗ್ - ಹೊಯ್ಕೋರಿ ಅವನೌನ
ಸಿಂಗ್ -ಮನುಷ್ಯನ ರೋಗಗಳನ್ನು ಪತ್ತೆ ಹಚ್ಚಿ ಅದನ್ನು ದತ್ತಾಂಶ ರೂಪದಲ್ಲಿ ಸಂಗ್ರಹಿಸುವ ನೈಸರ್ಗಿಕ ಬ್ಯಾಕ್ಟೀರಿಯಾ ವನ್ನು ಕೊಲಂಬಿಯಾ ವಿಶ್ವವಿದ್ಯಾಲಯ ದ ಸಂಶೋಧಕರು ಕಂಡ ಹಿಡದಾರ
ಕಿಂಗ್ - ಏ ತೊ ಕೊಲಂಬಿಯಾ ಕಾ ಬಹುತ ಲಂಬಾ ಸಮಾಚಾರ ಹೈ
ಸಿಂಗ್- ಆ ಎದರ ಮನಿ ಮಲ್ಯಾ ನೆಗಲಾ ಹೊಡ್ಯಾಕ ನೇಗಲಾ ತುಗೊಂಡ ಹೋಗ್ಯಾನ ವಾಪಸ್ ಕೊಡವಾಲ್ಲ
ಕಿಂಗ್- ಮಳ್ಳ ಹಳೆ ಮಳ್ಳ. ಇಸಗೊ ಬಿಡಾಕ ಹೋಗಬ್ಯಾಡ . ಈಗಿನ ಕಾಲದಾಗ ಕೊಟ್ಟ ಪ್ರಶಸ್ತಿನ ಹಿಂದಕ ಇಸ್ಗೋತಾರು
ಸಿಂಗ್ - ಯಾರದ ಇಸಗೊಂಡರೊ ಮಾರಾಯಾ?
ಕಿಂಗ್- ಆಂಗ ಸಾನ್ ಸೂಕಿ ಮ್ಯಾನ್ಮಾರನ ಲೀಡರ್. ರೋಹಿಂಗ್ಯಾಗಳ ಸಮಸ್ಯೆಯನ್ನು ಬಗೆ ಹರಿಸುವಲ್ಲಿ ವಿಫಲರಾಗಿರೋದಕ್ಕ ಅವರಿಗೆ ನೀಡಲಾಗಿದ್ದ ಫ್ರೀಡಂ ಆಫ್ ಆಕ್ಸ್ ಫರ್ಡ್ ಪ್ರಶಸ್ತಿಯನ್ನು ಹಿಂದ ಪಡ್ಯಾಕತಾರ.
ಸಿಂಗ್ - ಹಿಂಗ ಆಗಬಾರದಿತ್ತ ಬಿಡ.
ಕಿಂಗ್ - ಇಂಡೋನೇಷ್ಯಾ ದ ಬಾಲಿ ಏರ್ಪೋರ್ಟ್ ಯಾಕ ಬಂದ ಮಾಡ್ಯಾರ?
ಸಿಂಗ್-ಮಾರಾಯಾ ಜ್ವಾಲಾಮುಖಿ ಎದ್ದೈತೊ ಅಲ್ಲಿ.
ಕಿಂಗ್ - ಎಲ್ಲಿ?
ಸಿಂಗ್- ಅಲ್ಲಿ ಮೌಂಟ ಅಗುಂಗ ಎಂಬ ಪರ್ವತವಿದೆ. ಅಲ್ಲಿ ಸ್ಪೋಟ ಆಗೈತಿ.
ಕಿಂಗ್- ಅಗುಂಗ್ ಅಂಗಾಂಗ ಎಲ್ಲಾ ಸುಟ್ಟಿತಂತ ಎಚ್ಚರಿಕೆ ಯಾಗಿ ಬಂದ ಮಾಡ್ಯಾರ
ಸಿಂಗ್- ಕರೆಕ್ಟ ಹೇಳಿದಿ ನೋಡ
ಕಿಂಗ್- ಸಿಡ್ನಿ ಮೂಲದ ಅರ್ಥಶಾಸ್ತ್ರ ಮತ್ತು ಶಾಂತಿ ಸಂಸ್ಥೆಯ ಸಮೀಕ್ಷೆ ಭಾರತದ ಬಗ್ಗೆ ಏನೋ ಬಾಯಿ ಬಿಟ್ಟೈತಿ ಅಂತ ಹೇಳಾತಾರು ಏನದು?
ಸಿಂಗ್ - ಹೌದೊ ಮಾರಾಯಾ ಜಾಗತೀಕ ಭಯೋತ್ಪಾದನೆ ಸೂಚ್ಯಂಕ ದಲ್ಲಿ ಭಾರತಕ್ಕೆ ೮ ನೆ ಸ್ಥಾನ ಸಿಕ್ಕೈತಿ
ಕಿಂಗ್- ಮಗ್ಗಲದಾಗ ಮುಳ್ಳ ಇಟಗೊಂಡರ ಚುಚ್ಚದ ಇರತೈತೆನೊ
ಸಿಂಗ್ - ಹೌದೊ ಮಾವ ನಿನ್ನ ಮಾತ ಖರೆ ಐತಿ.
ಕಿಂಗ್ - ೪೮ ನೆ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಗೋವಾದಾಗ ಮುಗಿತಂತಲ್ಲೊ ಅದರ ಬಗ್ಗೆ ಏನರ ಮಾಹಿತಿ ಐತೆನ?
ಸಿಂಗ್- ಹ್ಞುಂ ಮತ್ತ ವಿವಿಧ ಪ್ರಶಸ್ತಿಗಳನ್ನ ನೀಡಿದಾರ.ಹೇಳ್ತೇನಿ ಚಿತ್ತಗೊಟ್ಟ ಕೇಳ
ಐಸಿಎಫಟಿ ಯುನಿಸ್ಕೊ ಗಾಂಧಿ ಅವಾರ್ಡ್ ನ್ನು ಮನೋಜ ಕದಂರವರ ಕ್ಷಿತಿಜ ಚಲನಚಿತ್ರಕ್ಕೆ ನೀಡಲಾಯಿತಪಾ
ಡಾರ್ಕಸ್ಕಲ್ ಚಿತ್ರಕ್ಕಾಗಿ ಚೊಚ್ಚಲ ನಿರ್ದೇಶಕ ಪ್ರಶಸ್ತಿಯನ್ನು ಕಿರೊರಸೊ ಪಡೆದರು.
ಟೇಕ್ ಆಫ್ ಚಿತ್ರದ ನಟನೆಗೆ ಪಾರ್ವತಿಯವರಿಗೆ ಉತ್ತಮ ನಟಿ ಪ್ರಶಸ್ತಿ ನೀಡಿದರು.
ಗೋಲ್ಡನ್ ಪೀಕಾಕ್ ಪ್ರಶಸ್ತಿ ಅಥವಾ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯು ೧೨೦ ಬಿಪಿಎಂ ಚಿತ್ರಕ್ಕೆ ಲಭಿಸಿತು
ಇದೆ ಚಲನಚಿತ್ರದ ನಟನೆಗೆ ನಾವೆಲ್ ಪರೇಜ್ ರವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ. ಏಂಜಲ್ಸ ವೇರ ವೈಟ್ ಚಿತ್ರಕ್ಕೆ ವಿವೈನ ಕ್ಯು ರವರಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಸಿಕ್ಕಿದೆ., ಪರ್ಸನಾಲಿಟಿ ಆಫ್ ದ ಇಯರ್ ಪ್ರಶಸ್ತಿ ಬಿಗ್ ಬಿ ಅಮಿತಾಬ ಬಚ್ಚನಗೆ ಸಿಕ್ಕಿದೆ
ಕಿಂಗ್- ಹೋಡಿರಿ ಟುಮಕಿ ಟುಮ್ ಟುಮ್ ಟುಮಕ್
ಸಿಂಗ್ - ಏ ಆ ಮಲ್ಯಾನ ಮನಿತನಕ ಹೋಗಿ ಬರತೇನ. ನೆಗಲಾ ಇಸಕೊಂಡ ಬರತೆನ ತಡಿ.ನಮ್ಮ ನಮ್ಮ ನಮಸ್ಕಾರ
ಭಾರತದ ಮುಖ್ಯ ವಿವಿದೋದ್ದೇಶ ನದಿಕಣಿವೆ ಯೋಜನೆಗಳು 1) ದಾಮೋದರ್ ನದಿ ಕಣಿವೆ ಯೋಜನೆ:- ದಾಮೋದರ್ ಅಣೆಕಟ್ಟು ಸ್ವತಂತ್ರ್ಯ ಭಾರತದ ಮೊಟ್ಟಮೊದಲ ಬೃಹತ್ ಅಣೆಕಟ್ಟು ಆಗಿದೆ. ದಾಮೋದರ್ ಕಣಿವೆ ಕಾರ್ಪೋರೇಷನ್ ನನ್ನುಜುಲೈ 7, 1948 ರಲ್ಲಿ ಸಂವಿಧಾನ ರಚನಾ ಸಭೆಯ ಕಾಯ್ದೆ ಮೂಲಕ ಸ್ಥಾಪಿಸಲಾಯಿತು. ಇದನ್ನು ಅಮೇರಿಕಾದ ಟೆನಿಸ್ಸಿ ಕಣಿವೆ ಯೋಜನೆ ಮಾದರಿಯಲ್ಲಿ ರಚಿಸಲಾಗಿದೆ. ದಾಮೋದರ್ ಕಣಿವೆ ಯೋಜನೆಯನ್ನುಭಾರತದ ರೋರ್ ಎಂದು ಕರೆಯುತ್ತಾರೆ. ಏಕೆಂದರೇ ದಾಮೋದರ್ ಕಣಿವೆ ಪ್ರದೇಶದಲ್ಲಿ ಅತಿ ಹೆಚ್ಚು ಕೈಗಾರಿಕೆಗಳು ಕಂಡುಬರುತ್ತವೆ. ಆದ್ದರಿಂದ ಇದಕ್ಕೆ ಭಾರತದ ’ರೋರ್’ ಎಂದು ಕರೆಯುತ್ತಾರೆ. ದಾಮೋದರ್ ಕಣಿವೆಯು ಭಾರತದ ಪ್ರಮುಖ ಕೈಗಾರಿಕಾ ಪ್ರದೇಶಗಳಲ್ಲಿ ಒಂದು. ಈ ಪ್ರದೇಶದಲ್ಲಿ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾದ ಕೈಗಾರಿಕೆಗಳಾದ ಬೋಕಾರೋ (ಜಾರ್ಕಂಡ್ ನಲ್ಲಿದೆ), ಬರ್ನಾಪೂರ, ದುರ್ಗಾಪುರ (ಪಶ್ಚಿಮ ಬಂಗಾಳ)ದಲ್ಲಿ ಸ್ಥಾಪನೆಯಾಗಿವೆ. ಇಲ್ಲಿ ಅಧಿಕ ಪ್ರಮಾಣಾದ ಕಲ್ಲಿದ್ದಲು ಗಣಿಗಳಿವೆ. # ದಾಮೋದರ್ ನದಿಯ ಉಪನದಿಯಾದ ಬರ್ಕರ್ ನದಿಗೆ ಅಡ್ದಲಾಗಿ 1953 ರಲ್ಲಿತಿಲಾಯ ಅಣೆಕಟ್ಟು ಕಟ್ಟಲಾಗಿದೆ. # 1995 ರಲ್ಲಿ ದಾಮೋದರ್ ನದಿಯ ಇನ್ನೊಂದು ಉಪನದಿಯಾದ ಕೋನಾರ್ನದಿಗೆ ಅಣೆಕಟ್ಟು ಕಟ್ಟಲಾಗಿದೆ. # ದಾಮೋದರ್ ನದಿಯು ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳ ರಾಜ್ಯದಲ್ಲಿ ಹರಿಯುವ ನದಿಯಾಗಿದೆ. # ದಾಮೋದರ್ ನದಿಯನ್ನು ಪಶ್ಚಿಮ ಬಂಗಾಳದ ಕಣ್ಣೀರಿನ ನ...
Comments
Post a Comment
ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ