ಸಿಂಗ್ - ಬಾರೊ ಮಾವ ಏನ ಸಮಾಚಾರ
ಕಿಂಗ್ - ಸಿಂಗ್ ಅಕ್ಷಯ ಪಾತ್ರೆ ಬರಿದಾಗಿದ್ದ ಯಾವಾಗಾದರೂ ಕೇಳಿದಿ ಏನಪಾ
ಸಿಂಗ್ - ಇಲ್ಲ ಈಗೇನಾತ?
ಕಿಂಗ್- ಭಾರತೀಯ ಜೀವ ವಿಮಾ ನಿಗಮದವ್ರು ಜೀವನ ಅಕ್ಷಯ ಎಂಬ ಪಾಲಸಿಯನ್ನ. ಬಂದ ಮಾಡಾತಾರ
ಸಿಂಗ್ - ಹೊಯ್ಕೋರಿ ಅವನೌನ
ಕಿಂಗ್ - ಎಲ್ಲಿ ಹೊಯ್ಕೋತಿ ನಡಿ ಎಗ್ಗರೈಸ್ ತಿನಸ ನಡಿ
ಸಿಂಗ್ - ಎಗ್ಗರೈಸ್ ಅಂದಕೂಡಲೆ ನೆಂಪ ಆತ ನೋಡ ಸುಧಾಮೂರ್ತಿರವರು ಮಕ್ಕಳಿಗಾಗಿ ಒಂದ ಪುಸ್ತಕ ಬರದಾರಪಾ.
ಕಿಂಗ್- ಅದರ ಹೆಸರೇನ?
ಸಿಂಗ್- ದ ಮ್ಯಾನ ಫ್ರಂ ದ ಎಗ್ : ಅನಯೂಸುವಲ್ ಟೇಲ್ಸ್ ಅಬೌಟ ದ ಟ್ರಿನಿಟಿ
ಕಿಂಗ್- ಮಸ್ತ ಆತ ಬಿಡು
ಸಿಂಗ್- ಮಾವ ಇನ್ನ ಮ್ಯಾಲ ಮದ್ರಾಸದಿಂದ ಮಲೇಷ್ಯಾಕ ಲಿಂಕ್ ಆಗಾತೈತಿ ಪಾ
ಕಿಂಗ್- ಹೆಂಗ?
ಸಿಂಗ್ - ಅಕ್ರಮ ಮರಳುಗಾರಿಕೆ ತಡೆಯಲು ಮಲೇಷ್ಯಾದಿಂದ ಮರಳನ್ನು ಆಮದು ಮಾಡಿಕೊಳ್ಳಲು ಮದ್ರಾಸ ಹೈಕೋರ್ಟಿನ ಮಧುರೈ ಪೀಠ ಒಪ್ಪಿಗೆ ನೀಡೈತಿ.
ಕಿಂಗ್- ಹಂಗಾರ ಭಾರಸ್ ಭಜನಿ ಜಗ್ಗ ನಕ್ಕನ ಜಗ್ಗ ಜಗ್ಗನಕ್ಕನ ನಾ
ಸಿಂಗ್- ಭಜನಿ ಏನ್ ಭಾರಸ್ತಿ , ಐ ಎನ್ ಎಸ್ ಕಿಲ್ಟನ್ ಅಂದ್ರ ಗೊತ್ತನ ನಿಂಗ?
ಕಿಂಗ್ - ಗೊತ್ತಿಲ್ಲಪಾ
ಸಿಂಗ್ - ಹೇಳ್ತನಿ ಚಿತ್ತಗೊಟ್ಟ ಕೇಳ. ಇದು ದೇಶಿಯವಾಗಿ ನಿರ್ಮಿಸಿದ ಸಬ್ ಮರೀನ್ ನಿರೋಧಕ ರಹಸ್ಯ ಯುದ್ಧನೌಕೆ
ಕಿಂಗ್ - ನಾವು ಫವರ್ ಫುಲ್ ಆದು ಬಿಡ. ಕಿಲ್ಟನ್ ಟನ್ ಗಟ್ಟಲೆ ಸ್ಟ್ರಾಂಗ್ ಇದೆ ಅಂದಂಗಾತು
ಸಿಂಗ್ - ಭಾರತದಾಂವ ಯಾರೊ ಬ್ರಿಟನ್ನಿನ ಅತಿ ಕಿರಿಯ ಶ್ರೀಮಂತನೆಂಬ ಕೀರ್ತಿ ಪಡಕೊಂಡಾನಂತಲೊ
ಕಿಂಗ್- ಹ್ಞುಂ ಅವನ ಹೆಸರು ರುಪರೇಲಿಯಾ
ಸಿಂಗ್ - ಏನು ರೂಪಾಯಿ ಲೆ ಲಿಯಾನ?
ಕಿಂಗ್ - ಅಲ್ಲೊ ಮಾರಾಯಾ ರುಪರೇಲಿಯಾ.ರಿಯಲ್ ಎಸ್ಟೇಟ್ ಕಮೀಷನ್ ಬ್ಯುಸಿನೆಸ ಮಾಡ್ತಿದಾನಂತ
ಸಿಂಗ್ - ಲಕ್ಷ್ಮೀ ಪುತ್ರ ಬಿಡು.
ಕಿಂಗ್- ಮ್ಯಾನ್ಮಾರನಲ್ಲಿ ಯಾವುದೊ ಕಂಪನಿ ಎಣ್ಣಿ ಮಾರಾಕ ಹೋಗೈತಂತಲ
ಸಿಂಗ್- ಎಂತಹ ಎಣ್ಣೆ ? ನಡಿಯೊ ಮಾರಾಯಾ ಎಣ್ಣಿ ಹೊಡಸ ನಡಿ.
ಕಿಂಗ್ - ಮಾರಾಯಾ ಅಂಥ ಎಣ್ಣೆ ಅಲ್ಲ. ಗಾಡಿಗೆ ಹಾಕೊ ತೈಲ
ಸಿಂಗ್- ಹಿಂಗನ. ಯಾವ ಕಂಪನಿ ಅದ?
ಕಿಂಗ್- ಹಿಂದೂಸ್ತಾನ ಪೆಟ್ರೋಲಿಯಂ ಕಂಪನಿ
ಸಿಂಗ್- ಸಾರೆ ಜಹಾಂಸೆ ಅಚ್ಚಾ . ಹಿಂದೂಸ್ತಾನ ಎಣ್ಣೆ ಬಚ್ಚಾ .
ಕಿಂಗ್ - ಮಸ್ತ ಹಾಡ ಕಟ್ಟತಿ ಬಿಡ
ಸಿಂಗ್ - ಅದೆಲ್ಲಾ ಇರವಾತು ಇಂದ್ರಾನಗರದೊಳಗ ಯಾವುದೊ ಮನಿ ಬಿದ್ದೈತಿ ಅಂತಲೊ
ಕಿಂಗ್ - ಹ್ಞುಂ ಆ ನಿಂಗನ ಮನಿಪಾ ಅದು. ಅಲ್ಲಿ ಭಾರತ ಮತ್ತು ರಷ್ಯಾ ತ್ರಿವಳಿ ಸಮರಾಭ್ಯಾಸ ನಡಿಸಿದು. ಅದರ ಹೆಸರ ಇಂದ್ರಾ ಅಂತ ಇಟ್ಟಿದ್ರು ತಿಳಿತೆನ.
ಸಿಂಗ್ - ಪಕ್ಕಾ ತಿಳಿತ ನೋಡ ಈಗ
ಕಿಂಗ್ - ಇಲ್ಲಿ ನೋಡೊ ಮೊಬೈಲ್ ದಾಗ ಹೆಂಗ ಹೆಣ್ಮಕ್ಕಳ ಕುಸ್ತಿ ಹಿಡದ್ದಾರು.
ಸಿಂಗ್ - ಮಳ್ಳ ಹಳೆ ಮಳ್ಳ ಇದು ಕುಸ್ತಿ ಅಲ್ಲ ಡಬ್ಲು ಡಬ್ಲು ಇ ಅಂತಾರ ಇದಕ. ಇದರೊಳಗ ಸ್ಪರ್ಧಾ ಮಾಡಲಿಕ ಭಾರತದ ಕವಿತಾದೇವಿ ಹೆಸರ ಕೊಟ್ಟಾರ.ಇದರೊಳಗ ಸ್ಪರ್ಧಾ ಮಾಡೊ ಮೊದಲ ಮಹಿಳೆ ಇವಳ ಪಾ
ಕಿಂಗ್ - ಮೊದಲ ಒನಕೆ ಓಬವ್ವ ಕಿತ್ತೂರ ಚೆನ್ನವ್ವನ ನಾಡ ಇದ.ಇಂತಹ ನಾಡನ್ಯಾಗ ಹೆಣ್ಣುಲಿಗಳು ಗರ್ಜಿಸಲೆಬೇಕು.
ಸಿಂಗ್ - ಮಾರಾಯಾ ಹೆಣ್ಣುಲಿ ಅಂದಕೂಡಲೆ ನೆಂಪ ಆತ ನೋಡ.ನನ್ನ ಹೆಂಡತಿ ಚಟ್ನಿ ಮಾಡಾಕ ತೆಂಗಿನಕಾಯಿ ತರಾಕ ಕಳಸಿದ್ಲು. ಈಗ ಹಂಗ ಹೋದರ ನನ್ನ ಚಟ್ನಿ ಮಾಡ್ತಾಳ. ನಾ ಬರ್ತೆನ ಮಾವ . ನಮ್ಮ ನಮ್ಮ ನಮಸ್ಕಾರ
ವರ್ಧನ ಸಾಮ್ರಾಜ್ಯದ ಇತಿಹಾಸ ಗುಪ್ತ ಸಾಮ್ರಾಜ್ಯದ ಅವನತಿಯ ನಂತರ ಉತ್ತರ ಭಾರತದಲ್ಲಿ ಅನೇಕ ಚಿಕ್ಕ ಚಿಕ್ಕ ಸಂಸ್ಥಾನಗಳು ಸ್ಥಾಪಿಸಲ್ಪಟ್ಟವು. ಅವುಗಳಲ್ಲಿ ವರ್ಧನ ಸಾಮ್ರಾಜ್ಯವೂ ಒಂದು. ಈ ಸಾಮ್ರಾಜ್ಯದ ಸ್ಥಾಪಕ ಪ್ರಭಾಕರ ವರ್ಧನ. ಅವನ ರಾಜಧಾನಿ ಥಾನೇಶ್ವರ. ಹೀಗಾಗಿ ಇವರನ್ನು ಥಾನೇಶ್ವರದ ವರ್ಧನರೆಂದೂ ಕರೆಯುತ್ತಿದ್ದರು. ಪ್ರಭಾಕರ ವರ್ಧನ ಶಕ್ತಿಶಾಲಿಯೂ ಶೂರನೂ ಆಗಿದ್ದನು. ಆತನಿಗೆ ರಾಜವರ್ಧನ, ಹರ್ಷವರ್ಧನ ಹಾಗೂ ರಾಜಶ್ರೀಯೆಂಬ ಮೂವರು ಮಕ್ಕಳಿದ್ದರು. ಪ್ರಭಾಕರ ವರ್ಧನನ ಮರಣದ ನಂತರ ರಾಜವರ್ಧನನು ಪಟ್ಟಕ್ಕೆ ಬಂದನು. ಆದರೆ ಧುರ್ಧೈವದಿಂದ ಆತನ ಕೊಲೆಯಾಗುತ್ತದೆ. ಹೀಗಾಗಿ ಹರ್ಷವರ್ಧನನು ಕ್ತಿ.ಶ.606 ರಿಂದ ಕ್ರಿ.ಶ 647 ರವರೆಗೆ ರಾಜ್ಯಭಾರ ಮಾಡುತ್ತಾನೆ. ಹರ್ಷವರ್ಧನನು ಮಾಳ್ವ ಹಾಗೂ ಕನೋಜದ ಮೇಲೆ ದಂಡೆತ್ತಿ ಹೋಗಿ ಸದೆಬಡಿಯುತ್ತಾನೆ.ಹರ್ಷವರ್ಧನನ ತಂಗಿ ರಾಜಶ್ರೀಯನ್ನು ಮೌಖೇರಿಯ ಗೃಹವರ್ಮನಿಗೆ ವಿವಾಹ ಮಾಡಿ ಕೊಡಲಾಗಿರುತ್ತದೆ. ಮಾಳ್ವದ ದೇವಗುಪ್ತನು ಗೃಹವರ್ಮನನ್ನು ಕೊಲೆಗೈದು, ರಾಜಶ್ರಿಯನ್ನು ಬಂಧನದಲ್ಲಿಟ್ಟಿರುತ್ತಾನೆ. ಇದನ್ನು ಸಹಿಸದ ಅಂದಿನ ರಾಜ ರಾಜವರ್ಧನನು ಆತನ ಮೇಲೆ ದಂಡೆತ್ತಿಹೋಗಿ ಸೋಲಿಸಿರುತ್ತಾನೆ. ಮುಂದೆ ಗೌಡ ದೇಶದ ಶಶಾಂಕನು ಮಿತ್ರನ ವೇಷ ಧರಿಸಿ ಬಂದು ರಾಜವರ್ಧನನ ಕೊಲೆ ಮಾಡುತ್ತಾನೆ. ಹರ್ಷವರ್ಧನ ಹರ್ಷವರ್ಧನನು ಬಲುಶಕ್ತಿಶಾಲಿ ಸಾಮ್ರಾಟನಾಗಿದ್ದು ಸುಮಾರು 40 ವರ್ಷಗಳ ಕಾಲ ಆಳ್ವಿಕೆ ನಡೆಸಿದ. ಆತನ ಸಾಮ್ರಾಜ್ಯವು ಉತ್ತರದಲ...
Comments
Post a Comment
ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ