Skip to main content

ಕವಿಗಳಾಧರಿತ ಪ್ರಶ್ನೆಗಳು

1."ಆದಿಕವಿ" ಮತ್ತು "ಕನ್ನಡದ ಕಾವ್ಯ ಪಿತಾಮಹ" ಎಂದು ಯಾರನ್ನು ಕರೆಯುತ್ತಾರೆ?
A). ಪಂಪ
B). ರನ್ನ
C). ಜನ್ನ
D). ಪೊನ್ನ
Correct Ans: (A)
Description:
ಪಂಪ
ಪಂಪ ಒಬ್ಬ ಪ್ರಸಿದ್ಧ ಕನ್ನಡದ ಕವಿ. ಪಂಪನ ಪ್ರಮುಖ ಎರಡು ಕಾವ್ಯಗಳೆಂದರೆ ಒಂದು ಆದಿಪುರಾಣ ಮತ್ತೊಂದು ವಿಕ್ರಮಾರ್ಜುನ ವಿಜಯ (ಪಂಪ ಭಾರತ). "ಆದಿಕವಿ", "ಕನ್ನಡದ ಕಾವ್ಯ ಪಿತಾಮಹ" ಮತ್ತು "ಕನ್ನಡದ ರತ್ನಾತ್ರಯ" ಎಂಬ ಬಿರುದುಗಳು ಇವೆ.
2.)
"ಪಂಪನು ಕನ್ನಡದ ಕಾಳಿದಾಸ" ಎಂದು ಕರೆದವರು ಯಾರು?
A). ದ.ರಾ.ಬೇಂದ್ರೆ
B). ಕುವೆಂಪು
C). ತಿ.ನಂ.ಶ್ರೀಕಂಠಯ್ಯ
D). ಬಿ.ಎಂ.ಶ್ರೀ.
Correct Ans: (C)
Description:
ತಿ.ನಂ.ಶ್ರೀಕಂಠಯ್ಯ
"ಪಂಪನು ಕನ್ನಡದ ಕಾಳಿದಾಸ" ಎಂದು ಕರೆದವರು ತಿ.ನಂ.ಶ್ರೀಕಂಠಯ್ಯ. ಪಂಪನಿಗೆ "ಕವಿತಾಗುಣಾರ್ಣವ ಸರಸ್ವತಿ ಮಣಿಹಾರ" ಮತ್ತು "ಕನ್ನಡದ ವ್ಯಾಸ" ಎಂಬ ಬಿರುದುಗಳಿವೆ. ಶತ್ರುಗಳಿಗೆ ತನ್ನನ್ನು ಒಪ್ಪಿಸಿಕೊಳ್ಳುವ ರಾಜನನ್ನು ಪಂಪ "ಪಗರಣದರಸ" ಎಂದು ಕಾವ್ಯಗಳಲ್ಲಿ ಉಲ್ಲೇಖಿಸಿದ್ದಾನೆ.
3.)
'ಕವಿ ಚಕ್ರವರ್ತಿ" ಮತ್ತು "ಉಭಯ ಚಕ್ರವರ್ತಿ' ಎಂಬ ಬಿರುದುಗಳನ್ನು ಹೊಂದಿರುವ ಕವಿ ಯಾರು?
A). ಪಂಪ
B). ಪೊನ್ನ
C). ರನ್ನ
D). ಕುವೆಂಪು
Correct Ans: (B)
Description:
ಪೊನ್ನ
ಕವಿ ರತ್ನಾತ್ರಯರಲ್ಲಿ ಪೊನ್ನ ಎರಡನೆಯವನು. ರಾಷ್ಟ್ರಕೂಟರ 3ನೇ ಕೃಷ್ಣನ ಆಸ್ಥಾನದ ಕವಿ. ಇವರ ಪ್ರಮುಖ ಕೃತಿಗಳು ಶಾಂತಿ ಪುರಾಣ, ಜಿನಾಕ್ಷರ ಮಾಲೆ. ಇವರಿಗೆ 'ಕವಿಚಕ್ರವರ್ತಿ', 'ಉಭಯ ಚಕ್ರವರ್ತಿ' ಮತ್ತು 'ಕುರುಳ್ಗಳ್ ಸವಣ' ಎಂಬ ಬಿರುದುಗಳಿವೆ.
4.)
'ಜಿನಧರ್ಮಪಾತಕೆ' ಎಂದು ಯಾರನ್ನು ಕವಿ ರನ್ನ ಹೊಗಳಿದ್ದಾರೆ?
A). ಅತ್ತಿಮಬ್ಬೆ
B). ಅಬ್ಬಲಬ್ಬೆ
C). ಶಾಂತಿ
D). ಜಿನವಲ್ಲಭ
Correct Ans: (A)
Description:
ಅತ್ತಿಮಬ್ಬೆ
ಕವಿ ರನ್ನ ತನ್ನ ಅಜಿತ ಪುರಾಣದ ಪೀಠಿಕಾ ಭಾಗದಲ್ಲಿ ಅತ್ತಿಮಬ್ಬೆಯ ಜಿನ ಭಕ್ತಿಯನ್ನು 'ಜಿನಧರ್ಮಪಾತಕೆ' ಎಂದು ಕೊಂಡಾಡಿದ್ದಾನೆ. ರನ್ನನ ಗುರುವಿನ ಹೆಸರು ಅಜಿತಸೇನಾಚಾರ್ಯರು. ಕನ್ನಡದ ರತ್ನಾತ್ರಯರಲ್ಲಿ ಕವಿ ರನ್ನನ್ನು ಸಹ ಒಬ್ಬರಾಗಿದ್ದಾರೆ.
5.)
'ಕವಿಕುಲ ಚಕ್ರವರ್ತಿ' ಮತ್ತು 'ಕವಿತಿಲಕ' ಎಂಬ ಬಿರುದುಗಳನ್ನು ಹೊಂದಿರುವ ಕವಿ ಯಾರು?
A). ಜನ್ನ
B). ಪೊನ್ನ
C). ರನ್ನ
D). ಪಂಪ
Correct Ans: (C)
Description:
ರನ್ನ
ರನ್ನ ಒಬ್ಬ ಶ್ರೇಷ್ಟ ಕವಿ. ಇವರ ಪ್ರಮುಖ ಕೃತಿಗಳು ಅಜಿತ ಪುರಾಣ, ಚಕ್ರೇಶ್ವರ ಚರಿತೆ (ದೊರೆತಿಲ್ಲ), ಸಾಹಸ ಭೀಮ ವಿಜಯ ಮತ್ತು ಪರಶುರಾಮ ಚರಿತೆ. ಕವಿ ರನ್ನ ಇವರಿಗೆ ಇರುವ ಬಿರುದುಗಳು ಹೀಗಿವೆ: 'ಕವಿಕುಲಚಕ್ರವರ್ತಿ' 'ಕವಿಜನಚೂಡಾರತ್ನ', ಕವಿತಿಲಕ ಮತ್ತು ಕವಿ ಚರ್ತುಮುಖ.
6.)
'ವೀರ ಮಾರ್ತಾಂಡ ದೇವ' ಎಂಬ ಬಿರುದನ್ನು ಹೊಂದಿದವರು ಯಾರು?
A). ಒಂದನೇ ನಾಗವರ್ಮ
B). ಪೊನ್ನ
C). ನಯನಸೇನ
D). ಚಾವುಂಡರಾಯ
Correct Ans: (D)
Description:
ಚಾವುಂಡರಾಯ
ಚಾವುಂಡರಾಯ ಗಂಗ ದೊರೆ ರಾಜಮಲ್ಲನ ಮಂತ್ರಿ. ಇವರ ಪ್ರಮುಖ ಗ್ರಂಥ 'ತ್ರಿಷಷ್ಟಿಲಕ್ಷಣ ಮಹಾ ಪುರಾಣ'. ಚಾವುಂಡರಾಯನು 'ವೀರ ಮಾರ್ತಾಂಡ ದೇವ' ಮತ್ತು 'ಸಮ್ಯಕ್ತ್ವ ರತ್ನಾಕರ' ಎಂಬ ಬಿರುದ್ದನ್ನು ಹೊಂದಿದ್ದನ್ನು.
7.)
'ಅಭಿನವ ಪಂಪ' ಎಂದು ಯಾರನ್ನು ಕರೆಯುತ್ತಾರೆ?
A). ನಾಗಚಂದ್ರ
B). ನಯನಸೇನ
C). ದುರ್ಗಸಿಂಹ
D). ಕುವೆಂಪು
Correct Ans: (A)
Description:
ನಾಗಚಂದ್ರ
'ಹಿತಮಿತವಪ್ಪ ಲಲಿತ ಶೈಲಿಯಲ್ಲಿ ಕಾವ್ಯರಚಿಸಿರುವನೆಂದು ತನ್ನನ್ನು ಪಂಪನೊಂದಿಗೆ ಹೋಲಿಸಿಕೊಂಡು 'ಅಭಿನವ ಪಂಪ' ಎಂದು ಕೊಂಡಿದ್ದಾನೆ. ನಾಗಚಂದ್ರನ ಪ್ರಮುಖ ಗ್ರಂಥಗಳು 'ಮಲ್ಲಿನಾಥ ಪುರಾಣ' ಮತ್ತು 'ರಾಮಚಂದ್ರ ಚರಿತ ಪುರಾಣ (ಪಂಪ ರಾಮಾಯಣ)'.
8.)
'ವಿಡಂಬನಾ ಕವಿ' ಎಂದು ಯಾರನ್ನು ಕರೆಯುತ್ತಾರೆ?
A). ನಾಗಚಂದ್ರ
B). ನಾಗವರ್ಮ
C). ನಯನಸೇನ
D). ದುರ್ಗಸಿಂಹ
Correct Ans: (C)
Description:
ನಯನಸೇನ
'ಧರ್ಮಾಮೃತ' ನಯಸೇನ ರಚಿಸಿದ ಕೃತಿಯಾಗಿದೆ. ಧರ್ಮಾಮೃತದಲ್ಲಿ ಕವಿ ಸ್ವಧರ್ಮ ಮಂಡನೆಗಾಗಿ ಅನ್ಯ ಧರ್ಮವನ್ನು ಕಟುವಾಗಿ ಟೀಕಿಸಿದ್ದಾನೆ. ಈ ಕಾವ್ಯದಲ್ಲಿನ ವಿಡಂಬನೆಯಿಂದ ಇವನನ್ನು 'ವಿಡಂಬನಾ ಕವಿ' ಎಂದು ಕರೆಯಲಾಗಿದೆ. ಧರ್ಮಾಮೃತ ಸರಳ ಚಂಪೂ ಮಾರ್ಗದಲ್ಲಿ ರಚಿತವಾದ ಮೊದಲ ಜೈನ ಪುರಾಣ ಎಂದು ಪ್ರಸಿದ್ಧಿಯಾಗಿದೆ.
9.)
ದಕ್ಷಿಣ ಭಾರತದ ಮೀರಾದೇವಿ ಎಂದು ಯಾರನ್ನು ಕರೆಯುತ್ತಾರೆ?
A). ರಮಾದೇವಿ
B). ನಿರ್ಮಲ
C). ಅಕ್ಕ ಮಹಾದೇವಿ
D). ಸುಮತಿ
Correct Ans: (C)
Description:
ಅಕ್ಕಮಹಾದೇವಿ
ಅಕ್ಕಮಹಾದೇವಿಯವರನ್ನು ದಕ್ಷಿಣ ಭಾರತದ ಮೀರಾದೇವಿ ಎಂದು ಕರೆಯುವರು. ಇವರು ಕನ್ನಡ ಸಾಹಿತ್ಯದ ಮೊದಲ ಕವಯತ್ರಿ ಮತ್ತು ವಚನಕಾರ್ತಿ. ಚೆನ್ನಮಲ್ಲಿಕಾರ್ಜುನ ಎಂಬುದು ಇವರ ಅಂಕಿತನಾಮ. 'ಯೋಗಾಂಗ ತ್ರಿವಿಧಿ' ಎಂಬುದು ಅಕ್ಕಮಹಾದೇವಿಯವರ ತ್ರಿಪದಿಯಲ್ಲಿ ರಚಿತವಾಗಿರು ಕೃತಿ.
10.)
'ರಗಳೆ ಕವಿ' ಮತ್ತು 'ಶಿವ ಕವಿ' ಎಂಬ ಬಿರುದುಗಳನ್ನು ಹೊಂದಿರುವ ಕವಿ ಯಾರು?
A). ರಾಘವಾಂಕ
B). ಹರಿಹರ
C). ಸಿದ್ಧರಾಮ
D). ಚೆನ್ನ ಬಸವಣ್ಣ
Correct Ans: (B)
Description:
ಹರಿಹರ
ಶಿವ ಕವಿ, ಭಕ್ತಿ ಕವಿ, ಕ್ರಾಂತಿ ಕವಿ ಮತ್ತು ರಗಳೆ ಕವಿ ಎಂದು ಪ್ರಸಿದ್ಧವಾದ ಕವಿ ಹರಿಹರ. ವೀರಶೈವ/
ಸಾಹಿತ್ಯದಲ್ಲಿ ಹಿರಿಯನೂ ಪ್ರಮುಖನು ಆದ ಪ್ರಾಚೀನ ಕವಿ. ಕನ್ನಡ ಸಾಹಿತ್ಯಕ್ಕೆ ಮೊದಲು ರಗಳೆಗಳನ್ನು ಪರಿಚಯಿಸಿದವನು ಹರಿಹರ. ಗಿರಿಜಾ ಕಲ್ಯಾಣ, ಪಂಪಶತಕ, ರಕ್ಷಾ ಶತಕ, ಮುಡಿಗೆಯ ಅಷ್ಟಕ ಶಿವಶರಣರ ರಗಳೆಯನ್ನು ರಚಿಸಿದ್ದಾರೆ.
11.)
'ಷಟ್ಪದಿ ಬ್ರಹ್ಮ' ಎಂದು ಯಾರನ್ನು ಕರೆಯುತ್ತಾರೆ?
A). ರಾಘವಾಂಕ
B). ಕುಮಾರ ವ್ಯಾಸ
C). ಹರಿಹರ
D). ಜನ್ನ
Correct Ans: (A)
Description:
ರಾಘವಾಂಕ
ರಾಘವಾಂಕನು ತನ್ನ ಕೃತಿಗಳನ್ನು ವಾರ್ಧಕ ಷಟ್ಪಧಿಯಲ್ಲಿ ರಚಿಸಿ "ಷಟ್ಪದಿ ಬ್ರಹ್ಮ" ಎಂದು ಪ್ರಸಿದ್ಧಿಯನ್ನು ಹೊಂದಿದ್ದಾನೆ. ಉಭಯ ಕವಿ, ಕಮಲ ಕವಿ, ಕವಿ ಶರಭ ಭೇರುಂಡ, ಷಟ್ಪದಿಗಳ ಬ್ರಹ್ಮ ಎಂಬ ಬಿರುದುಗಳನ್ನು ಹೊಂದಿದ್ದಾನೆ. ಇವರ ಪ್ರಮುಖ ಕೃತಿಗಳು : ಹರಿಶ್ಚಂದ್ರ ಕಾವ್ಯ, ಸೋಮನಾಥ ಚರಿತೆ, ಸಿದ್ಧರಾಮ ಚರಿತೆ, ವೀರೇಶ ಚರಿತೆ, ಶರಭಚಾರಿತ್ರ್ಯ.
12.)
'ರೂಪಕ ಸಾಮ್ರಾಜ್ಯ ಚಕ್ರವರ್ತಿ' ಎಂದು ಪ್ರಸಿದ್ಧಿ ಪಡೆದ ಕವಿ ಯಾರು?
A). ಜನ್ನ
B). ರಾಘವಾಂಕ
C). ಕುಮಾರವ್ಯಾಸ
D). ಲಕ್ಷ್ಮೀಶ
Correct Ans: (C)
Description:
ಕುಮಾರ ವ್ಯಾಸ
ಕುಮಾರವ್ಯಾಸ ತನ್ನ ಕಾವ್ಯದಲ್ಲಿ ಹೆಚ್ಚು ರೂಪಕಗಳನ್ನು ಬಳಸಿದ್ದಾನೆ, ಆದ್ದರಿಂದ 'ರೂಪಕ ಸಾಮ್ರಾಜ್ಯ ಚಕ್ರವರ್ತಿ' ಎಂದು ಕರೆಯುತ್ತಾರೆ. ಕನ್ನಡ ಭಾರತ, ಗದುಗಿನ ಭಾರತ, ಕುಮಾರವ್ಯಾಸ ಭಾರತ ಎಂದು ಪ್ರಸಿದ್ಧವಾಗಿರುವ "ಕರ್ಣಾಟಕ ಭಾರತ ಕಥಾಮಂಜರಿ" ಎಂಬ ಭಾಮಿನಿ ಷಟ್ಪದಿಯ ಕಾವ್ಯವನ್ನು ರಚಿಸಿದವರು ಕುಮಾರವ್ಯಾಸ.
13.)
'ಶೃಂಗಾರ ಕವಿ' ಎಂದು ಯಾರನ್ನು ಕರೆಯುತ್ತಾರೆ?
A). ಚಾಮರಸ
B). ರತ್ನಾಕರವರ್ಣಿ
C). ಅಂಡಯ್ಯ
D). ಮಲ್ಲಿಕಾರ್ಜುನ
Correct Ans: (B)
Description:
ರತ್ನಾಕರವರ್ಣಿ
'ಶೃಂಗಾರ ಕವಿ' ಎಂದು ಪ್ರಸಿದ್ಧರಾಗಿರುವ ರತ್ನಾಕರವರ್ಣಿಯವರು ಮೂಡಬಿದರೆಯವರು. ಇವರ ಪ್ರಮುಖ ಕೃತಿಗಳೆಂದರೆ : ಭರತೇಶ ವೈಭವ (ಸಾಂಗತ್ಯ), ತ್ರಿಲೋಕ ಶತಕ (ಕಂದ ಪದ್ಯ), ರತ್ನಾಕರಾಧೀಶ್ವರ ಶತಕ, ಅಪರಾಜಿತೇಶ್ವರ ಶತಕ. ಇವರು ಕಾರ್ಕಳದ ಅರಸು ಭೈರವ ರಾಜನ ಆಸ್ಥಾನದ ಕವಿ.
14.)
'ನಾದಲೋಲ' ಮತ್ತು 'ಉಪಮಾ ಲೋಲ' ಎಂಬ ಬಿರುದುಗಳನ್ನು ಹೊಂದಿರುವ ಕವಿ ಯಾರು?
A). ಲಕ್ಷ್ಮೀಶ
B). ನಂಜುಂಡ ಕವಿ
C). ಕೇಶಿರಾಜ
D). ಶಿಶುಮಾಯಣ
Correct Ans: (A)
Description:
ಲಕ್ಷ್ಮೀಶ
ಲಕ್ಷ್ಮೀಶನು ಭಾರದ್ವಾಜ ಗೋತ್ರದ ಬ್ರಾಹ್ಮಣನಾಗಿದ್ದವನು. ಇವನಿಗಿದ್ದ ಪ್ರಮುಖ ಬಿರುದುಗಳೆಂದರೆ: 'ಕರ್ಣಾಟಕ ಚೂತವನ ಚೈತ್ರ', 'ನಾದಲೋಲ' ಮತ್ತು 'ಉಪಮಾಲೋಲ'. ಲಕ್ಷೀಶನು ರಚಿಸಿದ ಪ್ರಮುಖ ಕೃತಿಗಳು 'ಜೈಮಿನಿ ಭಾರತ'(ವಾರ್ದಕ ಷಟ್ಪದಿಯಲ್ಲಿ ರಚನೆಯಾಗಿದೆ),
15.)
'ಕವಿತಾಸಾರ' ಮತ್ತು 'ತತ್ವ ವಿದ್ಯಾಕಲಾಪ' ಎಂಬ ಬಿರುದುಗಳನ್ನು ಹೊಂದಿರುವ ಕವಿ ಯಾರು?
A). ಅಂಬಿಗರ ಚೌಡಯ್ಯ
B). ಪಾಲ್ಕುರಿಕೆ ಸೋಮ
C). ಕುಮದೇಂದು
D). ಚೌಂಡರಸ
Correct Ans: (B)
Description:
ಪಾಲ್ಕುರಿಕೆ ಸೋಮ
ಪಾಲ್ಕುರಿಕೆ ಸೋಮ ತೆಲುಗು ಕವಿಯಾಗಿದ್ದ, ಸಂಸ್ಕೃತ ಪ್ರಾಕೃತ, ಕನ್ನಡ ಭಾಷೆಗಳಲ್ಲಿಯೂ ಗ್ರಂಥ ರಚನೆ ಮಾಡಿದ್ದಾನೆ ಈತನಿಗಿರುವ ಬಿರುದುಗಳು: ಕವಿತಾಸಾರ, ತತ್ವ ವಿದ್ಯಾಕಲಾಪ ಮತ್ತು ಅನ್ಯದೇವ ಕೋಲಾಹಲ.
16.)
'ಕವಿರಾಜಹಂಸ' ಎಂಬ ಬಿರುದು ಹೊಂದಿರುವ ಕವಿ ಯಾರು?
A). ಕುಮಾರ ವಾಲ್ಮೀಕಿ
B). ಭೀಮಕವಿ
C). ಷಡಕ್ಷರಿ
D). ತಿರುಮಲಾರ್ಯ
Correct Ans: (A)
Description:
ಕುಮಾರ ವಾಲ್ಮೀಕಿ
ಕುಮಾರ ವಾಲ್ಮೀಕಿ ಇವನ ನಿಜನಾಮ ನರಹರಿ. ಈತನಿಗೆ ಕವಿರಾಜಹಂಸ ಎಂಬ ಬಿರುದು ಇದೆ. ಈತನು ತೊರೆವ ರಾಮಾಯಣ (ಭಾಮಿನಿ ಷಟ್ಪದಿಯಲ್ಲಿದ್ದು ರಾಮಾಯಣದ ಕಥಾ ಅಂಧರವನ್ನು ಒಳಗೊಂಡಿದೆ) ಮತ್ತು ಐರಾವಣ ಕಾಳಗ ಎಂಬ ಕಾವ್ಯಗಳನ್ನು ರಚಿಸಿದ್ದಾನೆ.
17.)
'ಕರ್ನಾಟಕ ಸಂಗೀತ ಪಿತಾಮಹ' ಎಂದು ಯಾರನ್ನು ಕರೆಯುತ್ತಾರೆ?
A). ಕನಕದಾಸ
B). ವಾದಿರಾಜ
C). ಬಸವಣ್ಣ
D). ಪುರಂದರ ದಾಸ
Correct Ans: (D)
Description:
ಪುರಂದರ ದಾಸ
ಗಣಪತಿಯ ಸ್ತುತಿಯಾದ ಪಿಳ್ಳಾರಿಗೀತೆಗಳ ಮೂಲಕ 'ಕರ್ನಾಟಕ ಸಂಗೀತ ಪಿತಾಮಹ' ಎಂದು ಜನಪ್ರಿಯರಾದರು. ಇವರ ಕೀರ್ತನೆಗಳ ಅಂಕಿತ 'ಪುರಂದರ ವಿಠಲ'.ಪುರಂದರ ದಾಸರ ಪೂರ್ವದ ಹೆಸರು ಶ್ರೀನಿವಾಸ ನಾಯಕ. ಇವರ ಕೀರ್ತನೆಗಳು ಶ್ರೀ ಕೃಷ್ಣನ ಬಾಲಲೀಲೆಗಳನ್ನು, ವಾತ್ಸಲ್ಯ ಭಾವದ ಗೀತೆಗಳನ್ನು ಮುಂತಾದವುಗಳ ಬಗ್ಗೆ ತಿಳಿಸಿದ್ದಾರೆ.
18.)
'ಸರಸ ಸಾಹಿತ್ಯದ ವರದೇವತೆ' ಎಂದು ಯಾರನ್ನು ಕರೆಯುತ್ತಾರೆ?
A). ಅತ್ತಿಮಬ್ಬೆ
B). ಸಂಚಿಯಹೊನ್ನಮ್ಮ
C). ಅಕ್ಕಮಹಾದೇವಿ
D). ಮಂಜುಳಾ
Correct Ans: (B)
Description:
ಸಂಚಿಯಹೊನ್ನಮ್ಮ
'ಸರಸ ಸಾಹಿತ್ಯದ ವರದೇವತೆ' ಎಂಬ ಬಿರುದಿಗೆ ಪಾತ್ರವಾಗಿರುವ ಸಂಚಿಯಹೊನ್ನಮ್ಮ ಕನ್ನಡ ಸಾಸಸತ್ವ ಲೋಕದ ಕವಿಯತ್ರಿಯರಲ್ಲಿ ಪ್ರಮುಖರು. ಇವರು ರಚಿಸಿದ ಪ್ರಮುಖ ಗ್ರಂಥ 'ಹದಿಬದೆಯ ಧರ್ಮ'(ಸಾಂಗತ್ಯ). ಹದಿಬದೆಯ ಧರ್ಮ ಕಾವ್ಯದಲ್ಲಿ ಪತಿವೃತಾ ಸ್ತ್ರೀಯ ಧರ್ಮವು ವಿಶದವಾಗಿ ರೂಪಿತವಾಗಿದೆ.
19.)
'ಕನ್ನಡದ ವರ್ಡ್ಸ್ವರ್ತ್' ಎಂಬ ಬಿರುದನ್ನು ಹೊಂದಿರುವ ಕವಿ ಯಾರು?
A). ಕುವೆಂಪು
B). ದ.ರಾ.ಬೇಂದ್ರೆ
C). ವಿನಾಯಕ
D). ಬಿ.ಎಂ.ಶ್ರೀ.
Correct Ans: (A)
Description:
ಕುವೆಂಪು
ಕುವೆಂಪು ಇವರ ಪೂರ್ಣ ಹೆಸರು ಕುಪ್ಪಳ್ಲಿ ವೆಂಕಟ್ಟಪ್ಪ ಪುಟ್ಟಪ್ಪ. ಕನ್ನಡದ ಮೊದಲ ಜ್ಞಾನಪೀಠ ಪ್ರಶಸ್ತಿ(1967) ಪಡೆದವರು ಮತ್ತು ಎರಡನೇ ರಾಷ್ಟ್ರಕವಿ (1964). ಇವರಿಗೆ ಕನ್ನಡದ ವರ್ಡ್ಸ್ವರ್ತ್ ಮತ್ತು ರಸ ಋಷಿ ಎಂಬ ಬಿರುದುಗಳಿವೆ. ಇವರ ಪ್ರಮುಖ ಕೃತಿಗಳು ಶ್ರೀ ರಾಮಾಯಣ ದರ್ಶನಂ, ನೆನಪಿನ ದೋಣಿಯಲ್ಲಿ (ಆತ್ಮಕಥನ).
20.)
'ಕನ್ನಡದ ವರಕವಿ' ಎಂಬ ಬಿರುದನ್ನು ಪಡೆದ ಕವಿ ಯಾರು?
A). ಕುವೆಂಪು
B). ವಿ.ಕೃ.ಗೋಕಾಕ್
C). ಶಿವರಾಮ ಕಾರಂತ
D). ದ.ರಾ.ಬೇಂದ್ರೆ
Correct Ans: (D)
Description:
ದ.ರಾ.ಬೇಂದ್ರೆ
ದ.ರಾ.ಬೇಂದ್ರೆ ಇವರ ಪೂರ್ಣ ಹೆಸರು ದತ್ತಾತ್ರೇಯ ರಾಮಚಂದ್ರ ಬೇಂದ್ರೆ. ಇವರ ಕಾವ್ಯನಾಮ ಅಂಬಿಕಾತನಯ ದತ್ತ. ಇವರ ನಾಕುತಂತಿ ಎಂಬ ಕೃತಿಗೆ 1973ರಲ್ಲಿ ಜ್ಞಾನಪೀಠ ಪ್ರಶಸ್ತಿ ಲಭಿಸಿತು. ಇವರನ್ನು ಕನ್ನಡದ ವರಕವಿ ಎಂದು ಕರೆಯುತ್ತಾರೆ. ಇವರ ಪ್ರಮುಖ ಕೃತಿಗಳು ಮೇಘದೂತ, ನಾದ ಲೀಲೆ, ಅರಳು ಮರಳು, ಉಯ್ಯಾಲೆ ಇತ್ಯಾದಿ.
21.)
'ಕಡಲ ತೀರ ಭಾರ್ಗವ' ಎಂಬ ಬಿರುದನ್ನು ಹೊಂದಿರುವ ಕವಿ ಯಾರು?
A). ಶಿವರಾಮ ಕಾರಂತ
B). ದ.ರಾ.ಬೇಂದ್ರೆ
C). ವಿನಾಯಕ
D). ಬಿ.ಎಂ.ಶ್ರೀ.
Correct Ans: (A)
Description:
ಶಿವರಾಮ ಕಾರಂತ
ಶಿವರಾಮ ಕಾರಂತರು ಮೊದಲು ಪ್ರಕಟಿಸಿದ ಪುಸ್ತಕ 'ರಾಷ್ಟ್ರಗೀತೆ ಸುಧಾಕರ' ಎಂಬ ಕವನ ಸಂಕಲನ. ಶಿವರಾಮ ಕಾರಂತರು 10 ಅಕ್ಟೋಬರ್ 1902ರಂದು ಜನಿಸಿದರು. "ಕಡಲತೀರದ ಭಾರ್ಗವ", "ನಡೆದಾಡುವ ವಿಶ್ವಕೋಶ" ಎಂದೇ ಖ್ಯಾತರಾಗಿದ್ದ ಕನ್ನಡ ಸಾಹಿತ್ಯ-ಸಂಸ್ಕೃತಿಯ ವಕ್ತಾರ, ಆಡುಮುಟ್ಟದ ಸೊಪ್ಪಿಲ್ಲ. ಹಾಗೇಯೆ ಕಾರಂತರು ಬರೆಯದ ಸಾಹಿತ್ಯ ಪ್ರಕಾರವೇ ಇಲ್ಲವೆನ್ನಲಾಗಿದೆ. ಪಂಪ ಪ್ರಶಸ್ತಿ, ಪದ್ಮಭೂಷಣ, ಜ್ಞಾನಪೀಠ (ಮೂಕಜ್ಜಿಯ ಕನಸು ಎಂಬ ಕೃತಿಗೆ) ಮತ್ತು ಎಂಟು ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್ಗಳನ್ನ
ಿತ್ತು ಪುರಸ್ಕರಿಸಿವೆ.
22.)
ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ರವರಿಗೆ ಇದ್ದ ಬಿರುದು?
A). ಕನ್ನಡದ ಶ್ರೀನಿವಾಸ
B). ಕನ್ನಡದ ಆಸ್ತಿ
C). ಕನ್ನಡದ ಮೇಸ್ಟ್ರು
D). ಕವಿ ವಲ್ಲಭ
Correct Ans: (B)
Description:
ಕನ್ನಡದ ಆಸ್ತಿ
ಮಾಸ್ತಿ ಕನ್ನಡದ ಆಸ್ತಿ ಎಂದೇ ಜನಪ್ರಿಯವಾಗಿದ್ದವರು ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ರವರು. ಇವರು ಚಿಕ್ಕವೀರ ರಾಜೇಂದ್ರ ಎಂಬ ಕೃತಿಗೆ 1983ರಲ್ಲಿ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ. ಇವರು ರಚಿಸಿದ ಪ್ರಮುಖ ಕೃತಿಗಳು ಶ್ರೀ ರಾಮ ಪಟ್ಟಾಭಿಷೇಕ, ಗೌಡರ ಮಲ್ಲಿ, ರಾಮನವಮಿ, ತಾವರೆ ಮಲಾರ ನವರಾತ್ರಿ, ಒಂದು ಹಳೆಯ ಕಥೆ.
23.)
'ಕನ್ನಡದ ಕಣ್ವ' ಎಂದು ಯಾರನ್ನು ಕರೆಯುತ್ತಾರೆ?
A). ತ್ರೀ.ನಂ.ಶ್ರೀ.
B). ಬಿ.ಎಂ.ಶ್ರೀ
C). ಗೋವಿಂದ ಪೈ
D). ವಾಸುದೇವಚಾರ್ಯ
Correct Ans: (B)
Description:
ಬಿ.ಎಂ.ಶ್ರೀ.
ಬಿ.ಎಂ.ಶ್ರೀ ಇವರ ಪೂರ್ಣ ಹೆಸರು ಬೆಳ್ಳಾವೆ ಮೈಲಾರಯ್ಯ ಶ್ರೀಕಂಠಯ್ಯ. ಇವರ ಕಾವ್ಯನಾಮ ಶ್ರೀ. ಇವರನ್ನು ಕನ್ನಡದ ಕಣ್ವ ಎಂಉದ ಕರೆಯುತ್ತಾರೆ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಂದ 'ರಾಜ ಸೇವಾಸಕ್ತ' ಎಂಬ ಬಿರುದನ್ನು ಪಡೆದುಕೊಂಡಿದ್ದಾರೆ. 1941 ರಲ್ಲಿ ಶಷ್ಯರು ಹಾಗೂ ಮಿತ್ರರಿಗೆ 'ಸಂಭಾವನೆ' ಎಂಬ ಅಭಿನಂದನಾ ಗ್ರಂಥ ಅರ್ಪಿಸಿದರು. ಇದು ಕನ್ನಡದ ಮೊದಲ ಅಭಿನಂದನಾ ಗ್ರಂಥವಾಗಿದೆ.
24.)
ಬಸವಪ್ಪ ಶಾಸ್ತ್ರೀಯವರಿಗಿರುವ ಬಿರುದು ಯಾವುದು?
A). ಅಭಿನವ ಕವಿ
B). ಅಭಿನವ ಕಾಳಿದಾಸ
C). ಅಭಿನಯ ತಾರೆ
D). ಕನ್ನಡ ತಾರೆ
Correct Ans: (B)
Description:
ಅಭಿನವ ಕಾಳಿದಾಸ
ಬಸವಪ್ಪ ಶಾಸ್ತ್ರಿಯವರು ಕಾಳಿದಾಸನ ಶಾಂಕುತಲಾ ಹಾಗೂ ಇತರ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದರು. ಆದ್ದರಿಂದ ಇವರನ್ನು ಅಭಿನವ ಕಾಳಿದಾಸ ಎಂದು ಕರೆಯುತ್ತಾರೆ. ಮುಮ್ಮಡಿ ಕೃಷ್ಣರಾಜ ಒಡೆಯರ ಅನುಗ್ರಹದಿಂದ ಶಿಕ್ಷಣ ಪಡೆದು ಆಸ್ಥಾನದ ಕವಿಯಾದರು. ಇವರ ಪ್ರಮುಖ ಕೃತಿಗಳು 'ಕೃಷ್ಣರಾಜಾಭ್ಯುದಯ', ಸಾವಿತ್ರಿ ಚರಿತ್ರೆ, ಶಾಕುಂತಲಾ ನಾಟಕದ ಭಾಷಾಂತರ.
25.)
'ಪ್ರಾಕ್ತಾನ ವಿಮರ್ಶೆ ವಿಚಕ್ಷಣ' ಎಂದು ಯಾರನ್ನು ಕರೆಯುತ್ತಾರೆ?
A). ಆರ್.ನರಸಿಂಹಾಚಾರ್
B). ಎಸ್.ಜಿ.ನರಸಿಂಹಾಚಾರ್
C). ಡಿ.ವಿ.ಜಿ
D). ಉತ್ತಂಗಿ ಚೆನ್ನಪ್ಪ
Correct Ans: (A)
Description:
ಆರ್.ನರಸಿಂಹಾಚಾರ್
1913ರಲ್ಲಿ ಆಗಿನ ಮೈಸೂರು ಮಹಾರಾಜರು ಆರ್.ನರಸಿಂಹಾಚಾರ್ ರವರನ್ನು 'ಪ್ರಾಕ್ತನ ವಿಮರ್ಶೆ ವಿಚಕ್ಷಣ' ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸಿದರು. 1934ರಲ್ಲಿ ಕೊಲ್ಕತ್ತಾದ ಅಖಿಲ ಭಾರತ ಸಾಹಿತ್ಯ ಸಂಘ ಇವರಿಗೆ 'ಪ್ರಾಚ್ಯ ವಿದ್ಯಾ ವೈಭವ' ಬಿರುದನ್ನು ನೀಡಿತು. ಜೊತೆಗೆ ಇವರನ್ನು ಕರ್ನಾಟಕ ಕವಿ ಚರಿತ್ರಕಾರರು ಎಂದು ಸಹ ಕರೆಯುತ್ತಾರೆ.
26.)
'ಆಧುನಿಕ ಸರ್ವಜ್ಞ' ಎಂಬ ಬಿರುದನ್ನು ಹೊಂದಿರುವ ಕನ್ನಡದ ಕವಿ ಯಾರು?
A). ಮಧುರ ಚೆನ್ನ
B). ಬೆನಗಲ್ ರಾಮರಾವ್
C). ಪು.ತಿ.ನ
D). ಡಿ.ವಿ.ಜಿ
Correct Ans: (D)
Description:
ಡಿ.ವಿ.ಜಿ
ಡಿ.ವಿ.ಜಿ. ಇವರ ಪೂರ್ಣ ಹೆಸರು ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ. ಮಂಕುತ್ತಿಮ್ಮನ ಕಗ್ಗ ಇದರಲ್ಲಿ ಜೀವನುಭವದ ರಸಪಾಕ ಸೂತ್ರ ರೂಪವಾಗಿ ಹೊರಹೊಮ್ಮಿದೆ ಡಿ.ವಿ.ಜಿಯವರಿಗೆ ಆಧುನಿಕ ಸರ್ವಜ್ಞ ಎಂಬ ಅಭಿದಾನವನ್ನು ತಂದು ಕೊಟ್ಟಿದೆ. ಪ್ರಮುಖ ಪದ್ಯ ಕಾವ್ಯಗಳು ಶ್ರೀರಾಮ ಪರೀಕ್ಷಣಂ, ಅನಂತಪುರಗೀತೆ, ಗೀತ ಶಾಕುಂತಲ.
27.)
'ಕನ್ನಡದ ಕಾಳಿದಾಸ' ಎಂಬ ಬಿರುದನ್ನು ಪಡೆದಿರುವ ಕವಿ ಯಾರು?
A). ಎಸ್.ವಿ.ಪರಮೇಶ್ವರ ಭಟ್ಟ
B). ಮಿರ್ಜಿ ಅಣ್ನಾರಾಯ
C). ಕುವೆಂಪು
D). ಆರ್.ಸಿ.ಹಿರೇಮಠ
Correct Ans: (A)
Description:
ಎಸ್.ವಿ.ಪರಮೇಶ್ವರ ಭಟ್ಟ
ಎಸ್.ವಿ.ಪರಮೇಶ್ವರ ಭಟ್ಟ ಇವರನ್ನು 'ಕನ್ನಡದ ಕಾಳಿದಾಸ' ಎಂದು ಕರೆಯುತ್ತಾರೆ. ಇವರು ರಚಿಸಿರುವ ಪ್ರಮುಖ ಕೃತಿಗಳು - ಕನ್ನಡ ಕಾಳಿದಾಸ, ಮಹಾಸಂಪುಟ, ಗಾಥಾಸಪ್ತಸತಿ, ಗೀತಗೋವಿಂದ, ಭಾಸ ಸಂಪುಟ, ಭವ ಭೂತಿ ಸಂಪುಟ ಇತ್ಯಾದಿ. ಕರ್ನಾಟಕ ಸಾಹಿತ್ಯ ಪ್ರಶಸ್ತಿ 1970ರಲ್ಲಿ ಲಭಿಸಿತು.
28.)
'ಸಂತ ಕವಿ' ಎಂದು ಖ್ಯಾತಿ ಪಡೆದಿರುವ ಕವಿ ಯಾರು?
A). ಬಿ.ಎಂ.ಶ್ರಿ
B). ಸರ್ವಜ್ಞ
C). ಪು.ತಿ.ನ
D). ತ್ರೀ.ನಂ.ಶ್ರೀ
Correct Ans: (C)
Description:
ಪು.ತಿ.ನ
ಪು.ತಿ.ನ ಇವರ ಪೂರ್ಣ ಹೆಸರು ಪುರೋಹಿತ ತಿರುನಾರಾಯಣಯ್ಯಂಗಾರ ನರಸಿಂಹಾಚಾರ್ಯ. ಇವರನ್ನು ಸಂತಕವಿ ಎಂದು ಕರೆಯುತ್ತಾರೆ. ಇವರು ರಚಿಸಿದ ಪ್ರಮುಖ ಗೀತ ನಾಟಕಗಳು ಅಹಲ್ಯೆ, ಶಬರಿ, ಸತ್ಯಾಯನ ಹರಿಶ್ಚಂದ್ರ, ವಿಕಟಕವಿ ವಿಜಯ. ಇವರಿಗೆ 1965ರಲ್ಲಿ ಕೇಂಧ್ರ ಸಾಹಿತ್ಯ ಪ್ರಶಸ್ತಿ (ಹಂಸದಮಯಂತಿ ಕೃತಿಗೆ).
29.)
ಕೆ.ಎಸ್.ನರಸಿಂಹಸ್ವಾಮಿ ಅವರಿಗೆ ಇರುವ ಬಿರುದು ಏನು?
A). ಸ್ನೇಹ ಕವಿ
B). ಮೈಸೂರು ಕವಿ
C). ಪ್ರೇಮ ಕವಿ
D). ಮೇಲಿನ ಯಾವುದು ಅಲ್ಲ
Correct Ans: (C)
Description:
ಪ್ರೇಮ ಕವಿ
ಇವರು ಪ್ರೇಮಗೀತೆಗಳಿಗೆ ಸ್ಪೂರ್ತಿ ನೀಡಿದರು. ಇವರ ಮೊದಲ ಕವನ 'ಕಬ್ಬಿಗನ ಕೂಗು'. 1977 ರಲ್ಲಿ ‘ತೆರೆದ ಬಾಗಿಲು’ ಕವನ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ರಾಜ್ಯ ಸಂಸ್ಕೃತ ಪ್ರಸಾರ ಶಾಖೆ ಬಹುಮಾನ (1957 ರಲ್ಲಿ ಶಿಲಾಲತೆ ಕೃತಿಗೆ). ಪ್ರಮುಖ ಕವನ ಸಂಕಲನಗಳು ಮೈಸೂರು ಮಲ್ಲಿಗೆ (1943) ಮೊದಲ ಕವನ ಸಂಗ್ರಹ. ಐರಾವತ, ದೀಪದಮಲ್ಲಿ, ಉಂಗುರ, ಇರುವಂತಿಗೆ.
30.)
'ಕರ್ನಾಟಕ ನಾಟಕ ಪ್ರಹಸನ ಪಿತಾಮಹ' ಎಂದು ಖ್ಯಾತಿ ಪಡೆದವರು ಯಾರು?
A). ಜಿ.ಪಿ.ರಾಜರತ್ನಂ
B). ಸಿಂಪಿ ಲಿಂಗಣ್ಣ
C). ಪರ್ವತರಾಣಿ
D). ಟಿ.ಪಿ.ಕೈಲಾಸಂ
Correct Ans: (D)
Description:
ಟಿ.ಪಿ.ಕೈಲಾಸಂ
ಮಕ್ಕಳ ಸ್ಕೂಲು, ಮನೇಲಲ್ವೆ, ಟೊಳ್ಳುಗಟ್ಟಿ, ಏಕಾಂತದಿಂದ ಕರ್ನಾಟಕ ನಾಟಕ ಪ್ರಹಸನ ಪಿತಾಮಹರೆನಿಸಿಕೊಂಡರು. ಜೊತೆಗೆ ಕನ್ನಡ ಸಾಹಿತ್ಯದಲ್ಲಿ ನವ್ಯ ನಾಟಕಗಳ ಪಿತಾಮಹರಿವರು. ಇವರ ಪ್ರಮುಖ ನಾಟಕಗಳು ಬಹಿಷ್ಕಾರ, ಗಂಡಸ್ಕತ್ರಿ, ನಮ್ಬ್ರೂಹ್ಮಣ್ಕೆ, ನಮ್ ಕ್ಳಬ್ಬು, ಅಮ್ಮಾವ್ರ ಗಂಡ, ಸತ್ತವನ ಸಂತಾಪ, ಶೂರ್ಪನಖಾ.
31.)
'ಚುಟುಕು ಬ್ರಹ್ಮ' ಎಂದು ಹೆಸರುವಾಸಿಯಾಗಿದ್ದವರು ಯಾರು?
A). ದಿನಕರ ದೇಸಾಯಿ
B). ಜಿ.ಎಸ್.ಅಮೂರ
C). ಕಯ್ಯಾರಕಿಞ್ಞಣ್ಣ ರೈ
D). ಸುನಂದಮ್ಮ
Correct Ans: (A)
Description:
ದಿನಕರ ದೇಸಾಯಿ
ಚುಟುಕು ಬ್ರಹ್ಮರೆಂದು ಹೆಸರು ಪಡೆದಿರುವ ಮಕ್ಕಳ ಸಾಹಿತ್ಯದಲ್ಲಿ ಪ್ರಮುಖರು. ದಿನಕರನ ಚೌಪದಿ ಕೃತಿಗೆ 1980ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಇವರ ಪ್ರಮುಖ ಕವನಗಳು ಹೂಗೊಂಚಲು, ದಾಸಾಳ, ನನ್ನ ದೇಹದ ಬೂದಿ, ಆತ್ಮ ವಿಶ್ವಾಸ, ಬಿರುಗಾಳಿ ಇತ್ಯಾದಿ. ಇವರು 'ಜನಸೇವಕ' ಎಂಬ ಪತ್ರಿಕೆಯನ್ನು ನಡೆಸಿದರು

Comments

ಇವುಗಳನ್ನೂ ಓದಿ

ವರ್ಧನ ಸಾಮ್ರಾಜ್ಯದ ಇತಿಹಾಸ

ವರ್ಧನ ಸಾಮ್ರಾಜ್ಯದ ಇತಿಹಾಸ ಗುಪ್ತ ಸಾಮ್ರಾಜ್ಯದ ಅವನತಿಯ ನಂತರ ಉತ್ತರ ಭಾರತದಲ್ಲಿ ಅನೇಕ ಚಿಕ್ಕ ಚಿಕ್ಕ ಸಂಸ್ಥಾನಗಳು ಸ್ಥಾಪಿಸಲ್ಪಟ್ಟವು. ಅವುಗಳಲ್ಲಿ ವರ್ಧನ ಸಾಮ್ರಾಜ್ಯವೂ ಒಂದು. ಈ ಸಾಮ್ರಾಜ್ಯದ ಸ್ಥಾಪಕ ಪ್ರಭಾಕರ ವರ್ಧನ. ಅವನ ರಾಜಧಾನಿ ಥಾನೇಶ್ವರ. ಹೀಗಾಗಿ ಇವರನ್ನು ಥಾನೇಶ್ವರದ ವರ್ಧನರೆಂದೂ ಕರೆಯುತ್ತಿದ್ದರು. ಪ್ರಭಾಕರ ವರ್ಧನ ಶಕ್ತಿಶಾಲಿಯೂ ಶೂರನೂ ಆಗಿದ್ದನು. ಆತನಿಗೆ ರಾಜವರ್ಧನ, ಹರ್ಷವರ್ಧನ ಹಾಗೂ ರಾಜಶ್ರೀಯೆಂಬ ಮೂವರು ಮಕ್ಕಳಿದ್ದರು. ಪ್ರಭಾಕರ ವರ್ಧನನ ಮರಣದ ನಂತರ ರಾಜವರ್ಧನನು ಪಟ್ಟಕ್ಕೆ ಬಂದನು. ಆದರೆ ಧುರ್ಧೈವದಿಂದ ಆತನ ಕೊಲೆಯಾಗುತ್ತದೆ. ಹೀಗಾಗಿ ಹರ್ಷವರ್ಧನನು ಕ್ತಿ.ಶ.606 ರಿಂದ ಕ್ರಿ.ಶ 647 ರವರೆಗೆ ರಾಜ್ಯಭಾರ ಮಾಡುತ್ತಾನೆ.  ಹರ್ಷವರ್ಧನನು ಮಾಳ್ವ ಹಾಗೂ ಕನೋಜದ ಮೇಲೆ ದಂಡೆತ್ತಿ ಹೋಗಿ ಸದೆಬಡಿಯುತ್ತಾನೆ.ಹರ್ಷವರ್ಧನನ ತಂಗಿ ರಾಜಶ್ರೀಯನ್ನು ಮೌಖೇರಿಯ ಗೃಹವರ್ಮನಿಗೆ ವಿವಾಹ ಮಾಡಿ ಕೊಡಲಾಗಿರುತ್ತದೆ. ಮಾಳ್ವದ ದೇವಗುಪ್ತನು ಗೃಹವರ್ಮನನ್ನು ಕೊಲೆಗೈದು, ರಾಜಶ್ರಿಯನ್ನು ಬಂಧನದಲ್ಲಿಟ್ಟಿರುತ್ತಾನೆ. ಇದನ್ನು ಸಹಿಸದ ಅಂದಿನ ರಾಜ ರಾಜವರ್ಧನನು ಆತನ ಮೇಲೆ ದಂಡೆತ್ತಿಹೋಗಿ ಸೋಲಿಸಿರುತ್ತಾನೆ. ಮುಂದೆ ಗೌಡ ದೇಶದ ಶಶಾಂಕನು ಮಿತ್ರನ ವೇಷ ಧರಿಸಿ ಬಂದು ರಾಜವರ್ಧನನ ಕೊಲೆ ಮಾಡುತ್ತಾನೆ. ಹರ್ಷವರ್ಧನ ಹರ್ಷವರ್ಧನನು ಬಲುಶಕ್ತಿಶಾಲಿ ಸಾಮ್ರಾಟನಾಗಿದ್ದು ಸುಮಾರು 40 ವರ್ಷಗಳ ಕಾಲ ಆಳ್ವಿಕೆ ನಡೆಸಿದ. ಆತನ ಸಾಮ್ರಾಜ್ಯವು ಉತ್ತರದಲ...