Skip to main content

ಪ್ರಚಲಿತ ಘಟನೆಗಳು

ಸಿಂಗ್ -  ಸ್ವೀಟ್ ತುಗೊ ಸ್ವೀಟ್
ಕಿಂಗ್ - ಸ್ವೀಟ ಯಾಕಪಾ?
ಸಿಂಗ್ - ಏಷ್ಯನ ಕಬಡ್ಡಿ ಚಾಂಪಿಯನ್ ಶಿಪ್ ನಲ್ಲಿ ನಮ್ಮ ದೇಶದ ಪುರುಷ ಮತ್ತು ಮಹಿಳಾ ತಂಡ ಚಾಂಪಿಯನ್ ಆಗೈತಿ
ಕಿಂಗ್ - ಮತ್ತ ನಾವು ಕಬಡ್ಡಿ ಆಡಾಕ ಮುಂದ .ಬರತಿಯೆನ ಒಂದ ಕೈ ನೋಡೆ ಬಿಡುಣು
ಸಿಂಗ್ - ಏ ಮಾವ ಬ್ಯಾಡ ಬಿಡೊಪಾ ನಿನ್ನ ಜೊತೆ ಏನ ಆಡುದು
ಕಿಂಗ್  - ವಿಮಾನ ನೋಡಲ್ಲಿ ಹೆಂಗ ಭೌಂವ ಅಂತ ಹೊಂಟೈತಿ
ಸಿಂಗ್ - ಸುದ್ಧಿ ಕೇಳಿದಿಯಿಲೊ ಮುಂಬಯಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ೨೨ ತಾಸುಗಳಲ್ಲಿ ಒಂದೇ ರನ್ ವೇ ಬಳಸಿಕೊಂಡು ೯೬೯ ವಿಮಾನಗಳ ಸಚಾರ ನಿರ್ವಹಣೆ ಮಾಡಿ ದಾಖಲೆ ಬರದೈತಿ
ಕಿಂಗ್ - ಭಪ್ಪರೆ ಮಗನ ಮಸ್ತ ಆತ ಬಿಡು.
ಸಿಂಗ್ - ಒಂದ ಮಸ್ತ ಸುದ್ಧಿ ಕೇಳಿಲ್ಲಿ
ಕಿಂಗ್- ಏನಪಾ
ಸಿಂಗ್- ೨೦೧೭ ರ ನೊಬೆಲ್ ಶಾಂತಿ ಪುರಸ್ಕಾರವನ್ನು ಐಕ್ಯಾನ ಸಂಸ್ಥೆ ಗೆ ನೀಡಲಾಗಿದೆ.
ಕಿಂಗ್- ಹಾಲಿನ ಕ್ಯಾನ ಗೊತ್ತ. ಐಕ್ಯಾನ ಇದಾವ ಸಂಸ್ಥೆ?
ಸಿಂಗ್ - ಮಳ್ಳ  ಹಳೆ ಮಳ್ಳ  ಇದು ವಿಶ್ವವನ್ನು ಅಣ್ವಸ್ತ್ರ ಮುಕ್ತ ವಾಗಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಅಣ್ವಸ್ತ್ರ ವಿರೋಧಿ ಅಂತರಾಷ್ಟ್ರೀಯ ಆಂದೋಲನ ಸಂಘಟನೆ.
ಕಿಂಗ್- ಹಂಗನ ಮತ್ತ ಐಕ್ಯಾನದ ವಿಸ್ತೃತ ರೂಪವೇನು?
ಸಿಂಗ್- international campaign to abolish nuclear weopons.ಈ ಸಂಸ್ಥೆ ಜಿನೆವಾ ಮೂಲದ್ದಾಗಿದೆ.
ಕಿಂಗ್- ಮತ್ತ ಅರ್ಥಶಾಸ್ತ್ರದ ನೊಬೆಲ್ ಯಾರಿಗೆ ಬಂತಪಾ?
ಸಿಂಗ್- ಅದು ಡಾ.ರಿಚರ್ಡ ಎಚ್ ಥಾಲೇರ್ ರವರೆಗೆ ದೊರೆತಿದೆ.ಇವರು ಜಾಗತಿಕವಾಗಿ ಅತಿ ಹೆಚ್ಚು ಮಾರಾಟಗೊಂಡ ದಿ ನ್ಯೂಡ್ಜ್ ಎಂಬ ಪುಸ್ತಕದ ಲೇಖಕರಾಗಿದ್ದಾರೆ.ಇವರ ವರ್ತನಾ ಅರ್ಥಶಾಸ್ತ್ರ  ಸಿದ್ದಾಂತಕ್ಕೆ ಈ ಪ್ರಶಸ್ತಿ ನೀಡಲಾಗಿದೆ.
ಕಿಂಗ್ - ಅದೆ ರೀತಿ ಕಲ್ಯಾಣ ಅರ್ಥಶಾಸ್ತ್ರ ಎಂಬ ಪದವನ್ನು ಎಲ್ಲಿಯೂ ಕೇಳಿದಂಗ ಅನಸಾತೈತಿ
ಸಿಂಗ್-ಸರಿಯಾಗಿ ನೆಂಪ ಮಾಡ್ಕೊಂಡಿ ನೋಡ.ಅದು ಭಾರತದ ಅರ್ಥಶಾಸ್ತ್ರ ಜ್ಞ. ಅಮರ್ತ್ಯಸೇನ ರ ಪರಿಕಲ್ಪನೆ ಯಾಗಿದೆ.ಇದಕ್ಕಾಗಿಯೆ ೧೯೯೮ರಲ್ಲಿ ಇವರಿಗೆ ನೊಬೆಲ್ ಬಂದಿತ್ತು.
ಕಿಂಗ್ - ಮೊದಮೊದಲು ಅರ್ಥಶಾಸ್ತ್ರ ಕ ನೊಬೆಲ್ ಕೊಡ್ತಿರಲಿಲ್ಲ. ಯಾವಾಗಿಂದ ಕೊಡಾಕತಾರ?
ಸಿಂಗ್-ಇದನ್ನ ೧೯೬೯ರಿಂದ ಕೊಡಾಕತಾರು
ಕಿಂಗ್ - ಒಳ್ಳೆಯ ವಿಚಾರ ತಿಳಿಸಿದಿ
ಸಿಂಗ್- ಯಾವರ ಹೊಸಾ ಚಲನಚಿತ್ರ ಬಂದಾವನ?
ಕಿಂಗ್-ಈಗಿನ ಚಲನಚಿತ್ರ ಎಂತಾವ ಬಿಡೊ ಮಾರಾಯಾ.ಜಾಹೀರಾತಿನಂಗ ತುಂಡ ತುಂಡ ಕಥಿ ಇರ್ತಾವು.
ಸಿಂಗ್ - ಅನುಪಮಖೇರ್ ಹೆಸರ ಕೇಳಿದಿಯಿಲೊ?
ಕಿಂಗ್ - ಕೇಳಿದೇನ ಯಾಕ ಏನಾತ?
ಸಿಂಗ್- ಅವರು ಭಾರತದ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯ ಅಧ್ಯಕ್ಷ ರಾಗಿದಾರ
ಕಿಂಗ್-ಮಸ್ತ ಆತಲಾ
ಸಿಂಗ್ - ಟೈಮ್ ಎಷ್ಟ ಆತ?
ಕಿಂಗ್ - ವಾಚ ಬಿಟ್ಟ ಬಂದೇನ
ಸಿಂಗ್- ವಾಚ್ ಅಂದಕೂಡಲೆ ನೆಂಪ ಆತ ನೋಡ.ಭಾರತೀಯ ವಾಯುದಳವು ಮೆಡ್ ವಾಚ್ ಎಂಬ ಮೊಬೈಲ್ ಆ್ಯಪ ಗೆ ಚಾಲನೆ ನೀಡಿದೆ.ಇದರಿಂದ ವಾಯುದಳ ದ ಎಲ್ಲ ಸಿಬ್ಬಂದಿ ಗೆ  ಆರೋಗ್ಯದ ಬಗ್ಗೆ ಮಾಹಿತಿ ಸಿಗಲಿದೆ.
ಕಿಂಗ್- ನಮಗು ಅಂತಾದ್ದ ಒಂದ ಆ್ಯಪ ಇದ್ದರ ಚೆನ್ನಾಗಿತ್ತ ನೋಡ
ಸಿಂಗ್ - ಮಾರಾಯಾ ಭಾಳ ಹೊಟ್ಟಿ ಹಸ್ಯಾಕತೈತಿ ಗಿರಮಿಟ್ ತಿನಸ ನಡಿ
ಕಿಂಗ್ - ಜಾಗತೀಕ ಹಸಿವಿನ ಸೂಚ್ಯಂಕ ದಲ್ಲಿ ಭಾರತ ೧೦೦ ನೇ ಸ್ಥಾನ ಪಡಕೊಂಡೈತಿ
ಸಿಂಗ್ - ನಮ್ಮ ರೈತರೆಲ್ಲಾ ಮಳಿಬೆಳಿ ಇಲ್ಲದ ಸಾಲ ಮಾಡಿ ಕಂಗಾಲ ಆಗಿ ಉರಲ ಹಾಕೋತಿದ್ದರ ಇನ್ನೇನಾಕ್ಕೈತಿ
ಕಿಂಗ್- ಬೀಜಮಾತ ಹೇಳಿದಿ ನೋಡ. ನಡಿ ಗಿರಮಿಟ್ ತಿಂದ ಮಿರ್ಚಿ ಭಜ್ಜಿ ಹೊಡೆಯೋಣು.ನಮ್ಮ ನಮ್ಮ ನಮಸ್ಕಾರ್.

Comments

ಇವುಗಳನ್ನೂ ಓದಿ

ಮೌರ್ಯ ಸಾಮ್ರಾಜ್ಯ ,ಆಡಳಿತ

ಮೌರ್ಯ ಸಾಮ್ರಾಜ್ಯದ ಆಡಳಿತ ಭಾರತದ ಮೆಕೈವರ ಎನಿಸಿದ್ದು - ಕೌಟಿಲ್ಯ ಕರ್ನಾಟಕದಲ್ಲಿ ದೊರೆತಿರುವ ಅಶೋಕನ ಒಟ್ಟು ಶಾಸನಗಳು - ೧೮ ಮೌರ್ಯರ ಆಡಳಿತದಲ್ಲಿ ನಗರಾಡಳಿತದ ಅಧಿಕಾರಿ - ನಗರ ವ್ಯವಹಾರಿಕ ಭೂಮಿಯ ಅಳತೆ, ಮಾಲೀಕತ್ವ, ಮತ್ತು ಭೂಕಂದಾಯ ಮೇಲ್ವಿಚಾರಣಾಧಿಕಾರಿ - ರಜ್ಜುಕ ಭೂಮಿಯ ಉತ್ಪನ್ನದಲ್ಲಿ ನೀಡಬೇಕಾದ ಭೂಕಂದಾಯ - ಆರನೆಯ ಒಂದು ಭಾಗ ಧರ್ಮ ಮಹಾಮಾತ್ರರ ಪ್ರಮುಖ ಕಾರ್ಯ - ನ್ಯಾಯ ತೀರ್ಮಾನ ಮತ್ತು ಧರ್ಮ ಪ್ರಚಾರ ಸಾರ್ವಜನಿಕ ಹಿತವನ್ನು ಗಮನಿಸುವ ಅಧಿಕಾರಿ - ವಜ್ರಭೂಮಿಕ ವಜ್ರಭೂಮಿಕನ ಮುಖ್ಯ  ಕಾರ್ಯಗಳು - ಭಾವಿ,ರಸ್ತೆ,ತೋಪುಗಳ ನಿರ್ಮಾಣ ಮೌರ್ಯರ ಕಾಲದಲ್ಲಿಯ ಪ್ರಾಂತ್ಯಗಳು - ಪ್ರಾಚ್ಯ, ( ತಕ್ಷಶಿಲೆ) ಉತ್ತರಾಪಥ (ಉಜ್ಜಯಿನಿ) ಅವಂತೀ ( ಕೋಸಲ) ದಕ್ಷಿಣಾಪಥ ( ಸುವರ್ಣಗಿರಿ) ಅಶೋಕನ ಕಾಲದಲ್ಲಿ ಸೇರಿಸಲ್ಪಟ್ಟ ೫ ನೇ ಪ್ರಾಂತ್ಯ - ಕಳಿಂಗ್ ಗ್ರಾಮಗಳ ಆಡಳಿತ ನಿರ್ವಹಣಾಧಿಕಾರಿ - ಗ್ರಾಮಿಕ ಹತ್ತು ಗ್ರಾಮಗಳ ಮೇಲ್ವಿಚಾರಕ - ಗೋಪ ಪ್ರಾಂತಗಳ ಕೆಳಗಿನ ಜನಪದಗಳ ಮೇಲ್ವಿಚಾರಕ - ಸಮಹರತೃ ಮೌರ್ಯರ ಆಡಳಿತ ಮೊಘಲರ ಆಡಳಿತಕ್ಕಿಂತ ಮೇಲಾಗಿತ್ತು ಎದಿರುವ ಇತಿಹಾಸಜ್ಞ - ವಿನ್ಸೆಂಟ್ ಸ್ಮಿತ್ ಕೌಟಿಲ್ಯನ ಅರ್ಥಶಾಸ್ತ್ರ  ಹಸ್ತಪ್ರತಿಯನ್ನು ಪತ್ತೆ ಹಚ್ಚಿ ಆದುನಿಕ ಜಗತ್ತಿಗೆ ಸಿಗುವಂತೆ ಮುದ್ರಿಸಿ ಪ್ರಕಟಿಸಿದವರು-ಮೈಸೂರಿನ ಶಾಮಾಶಾಸ್ತ್ರಿಗಳು ಮೌರ್ಯರ ಕಾಲದ ಶಿಕ್ಷೆ ಕ್ರಿಮಿನಲ್ ಅಪರಾಧ - ಮರಣದಂಡನೆ ನೀಡಲಾಗುತ್ತಿತ...