Skip to main content

ಹೈದರಾಬಾದ್ ಕರ್ನಾಟಕ 371ಜೆ


ಹೈದ್ರಾಬಾದ-ಕರ್ನಾಟಕದ ಇತಿಹಾಸ



      ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ 565 ಸಂಸ್ಥಾನಗಳು ಇದ್ದು, ಆ ಎಲ್ಲ ಸಂಸ್ಥಾನಗಳನ್ನು ರಾಜ ಮಹಾರಾಜರು, ಅವರ ಮಾಂಡಲೀಕರು ಆಳುತಿದ್ದರು. ಬ್ರಿಟೀಷರು ಈ ದೇಶ ಬಿಟ್ಟು ಹೋಗುವಾಗ ಆ ಎಲ್ಲ ಸಂಸ್ಥಾನಗಳಿಗೆ ಒಂದು ಆಹ್ವಾನವನ್ನು ನೀಡಿದ್ದರು. ಯಾವುದೇ ಸಂಸ್ಥಾನಗಳು ತಾವು ಇಚ್ಚೆಪಟ್ಟರೇ ಭಾರತ ಒಕ್ಕೂಟದಲ್ಲಿ ಸೇರಬಹುದು ಅಥವಾ ಪಾಕಿಸ್ತಾನಕ್ಕೆ ಸೇರಬಹುದು ಇಲ್ಲದಿದ್ದರೆ ಪ್ರತ್ಯೇಕವಾಗಿ ಉಳಿಯಬಹುದು ಎಂದು ಅಡ್ಡ ಗೋಡೆಯ ಮೇಲೆ ದೀಪ ಇಟ್ಟ ಹಾಗೆ ರಾಜರಲ್ಲೇ ಅಧಿಕಾರದ ಆಸೆ ಬಿತ್ತಿ ಹೋದರು. ಈ ಹಿನ್ನಲೆಯಲ್ಲಿ ಭಾರತದ ಅವಿಭಾಜ್ಯ ಅಂಗವಾಗಿರುವ ಜಮ್ಮು-ಕಾಶ್ಮೀರದ ರಾಜ ಹರಿಸಿಂಗ್,ಪಂಜಾಬ ಪ್ರಾಂತ್ಯದ ಜುನಾಗಡ ಸಂಸ್ಥಾನದ ಮಹಾರಾಜ ಮೋಹಮ್ಮದ್ ಮಹಾಬಾತ್ ಕಣಜಿ ಹಾಗೂ ಹೈದ್ರಾಬಾದ ಸಂಸ್ಥಾನದ ನಿಜಾಮರಾದ ಮೀರ್ ಉಸ್ಮಾನ ಅಲೀ ಖಾನ ಇವರುಗಳು ಆಗಷ್ಟ 15,1947 ರಂದು ಭಾರತ ಒಕ್ಕೂಟದಲ್ಲಿ ಸೇರಲು ನಿರಾಕರಿಸಿ ಪ್ರತ್ಯೇಕವಾಗಿ ಉಳಿಯಲು ನಿರ್ಧರಿಸಿದರು. ಕಾಲ ಕ್ರಮೇಣ ಜಮ್ಮು ಕಾಶ್ಮೀರ ಸಂಸ್ಥಾನವು ಕೆಲವು ಶರತ್ತುಗಳನ್ನು ಒಡ್ಡಿ ಸಂವಿಧಾನದ ಅನುಛ್ಚೇದ 370ರ ಅಡಿಯಲ್ಲಿ ರಕ್ಷಣೆಯನ್ನು ಪಡೆದು ಭಾರತ ಒಕ್ಕೂಟದಲ್ಲಿ ಸೇರಿತು.ಅದೇ ರೀತಿ ಜುನಾಗಡ ಸಂಸ್ಥಾನವುಕೂಡ 24 ನೇ ಫೆಬ್ರವರಿ 1948ರಂದು ಭಾರತ ಒಕ್ಕೂಟದಲ್ಲಿ ಸೇರಲು ಒಪ್ಪಿಕೂಂಡಿತು. ಆದರೆ ಹೈದ್ರಾಬಾದ ಸಂಸ್ಥಾನದ ನಿಜಾಮರು ಪ್ರತ್ಯೇಕವಾಗಿ ಉಳಿಯುವ ಯೋಚನೆಯೂಂದಿಗೆ ಭಾರತ ಸರಕಾರಕ್ಕೆ ಒಂದು ವರ್ಷಗಳ ಕಾಲವಕಾಶವನ್ನು ‘ಶ್ಡ್ಯಾಂಡ್ ಸ್ಡಿಲ್ ಅಗ್ರೀಮೆಂಟ್’ ಮುಖಾಂತರ ಕೋರಿದರು. ಹಾಗಾಗಿ ಇಡೀ ದೇಶಕ್ಕೆ 15 ಆಗಷ್ಟ್ 1947 ರಂದು ಸ್ವಾತಂತ್ರ್ಯ ಸಿಕ್ಕರೂ ಈ ಸಂಸ್ಥಾನದ ಜನರಿಗೆ ಆ ಭಾಗ್ಯ ದೋರೆಯಲಿಲ್ಲ. ಆಗಷ್ಟ್ 15,1947 ರಂದು ದೇಶದಲ್ಲೆಡೆ ಜನ ಭಾರತದ ತ್ರೀವರ್ಣ ಧ್ವಜವನ್ನು ಹಾರಿಸುತ್ತ ಸ್ವಾತಂತ್ರ್ಯದ ಸಂತೋಷವನ್ನು ಅನುಭವಿಸುತ್ತಿದ್ದರೆ, ಹೈದ್ರಾಬಾದ ರಾಜ್ಯದ ಪ್ರಜೆಗಳು ಅದನ್ನು ನೋಡುತ್ತ ತಮಗಾದ ನೋವನ್ನು ನುಂಗಿಕೂಂಡು ಕುಳಿತರು. ಇದರಿಂದ ಈ ಸಂಸ್ಥಾನದ ಜನರು ಮತ್ತೂಂದು ಸ್ವತಂತ್ರ್ಯ ಸಂಗ್ರಾಮಕ್ಕೆ ತಯಾರಾಗುವುದು ಅನಿವಾರ್ಯವಾಯಿತು. ಈ ಪ್ರದೇಶದ ಅನೇಕ ರಾಷ್ಟ್ರೀಯ ನಾಯಕರು ಸಂಸ್ಥಾನವನ್ನು ಭಾರತ ಒಕ್ಕೂಟದಲ್ಲಿ ಸೇರಿಸಬೇಕು ಎಂದು ಎಲ್ಲ ರೀತಿಯ ಹೋರಾಟ ಮಾಡುತ್ತ ಬಂದರು ,ಆ ಹೋರಾಟದ ಫಲವಾಗಿ ಹೈದ್ರಾಬಾದ ಸಂಸ್ಥಾನವನ್ನು ಭಾರತ ಸರಕಾರ ಪೋಲಿಸ್ ಕಾರ್ಯಚರಣೆಯನ್ನು ‘ಆಪರೇಶನ್ ಪೋಲೋ’ ಎಂಬ ಹೆಸರಿನಿಂದ 13-09-1948 ರಂದು ಪ್ರಾರಂಭಿಸಿ ಕೇವಲ ನಾಲ್ಕುದಿನಗಳಲ್ಲಿ 19-09-1948 ರಂದು ಹೈದ್ರಾಭಾದ ನಗರಕ್ಕೆ ಮುತ್ತಿಗೆ ಹಾಕಲಾಯಿತು. ಈ ಸಂಧರ್ಭದಲ್ಲಿ ಪರಿಸ್ಥಿತಿಯ ಗಂಭೀರತೆಯನ್ನು ಅರಿತ ನಿಜಾಮ ಮೀರ್ ಉಸ್ಮಾನ ಅಲಿಖಾನ ಹೈದ್ರಾಭಾದ ಸಂಸ್ಥಾನವನ್ನು ಭಾರತ ಒಕ್ಕೂಟದಲ್ಲಿ ವಿಲೀನಗೋಳಿಸಿದರು. ಆಗ ದೇಶದಲ್ಲಿ ಹೈದ್ರಾಭಾದ ಸಂಸ್ಥಾನವು ಒಂದು ರಾಜ್ಯವಾಗಿ ಪೋಲಿಸ್ ಕಾರ್ಯಚರಣೆಯ ಮುಖ್ಯಸ್ಥರಾಗಿದ್ದ ಜನರಲ್ ಚೌದರಿಯವರೆ ಮಿಲಿಟರಿ ಗೌವರ್ನರ್ ಆಗಿ ಅಧಿಕಾರ ಸ್ವೀಕರಿಸಿದರು ಹಾಗೂ ಅವರು ಡಿಸೆಂಬರ್ 1949ವರೆಗೆ ಮುಂದುವರೆದರು,ಅವರ ನಂತರ ಹೈದ್ರಾಬಾದ ರಾಜ್ಯದ ಮುಖ್ಯಮಂತ್ರಿಯಾಗಿ ಎಮ್.ಕೆ.ವೆಲ್ಲೋಡಿ ಐ.ಸಿ.ಎಸ್ ಅಧಿಕಾರ ಸ್ವೀಕರಿಸಿದರು . ನಿಜಾಮ ಮೀರ್ ಉಸ್ಮಾನ ಅಲಿ ಖಾನ ಇವರನ್ನು ಕೇಂದ್ರ ಸರಕಾರ ಹೈದ್ರಾಭಾದ ರಾಜ್ಯದ ರಾಜ್ಯಪ್ರಮುಖರಾಗಿ ನೇಮಿಸಿತು .ಅವರು 1956ರ ವರೆಗೆ ಅಧಿಕಾರದಲ್ಲಿದ್ದರು. ಹೈದ್ರಾಭಾದ ರಾಜ್ಯವನ್ನು ರಾಜ್ಯ ಪುನರ್ವಿಂಗಡಣೆಯ ಸಂದರ್ಭದಲ್ಲಿ ಮೂರು ಭಾಗಗಳನ್ನಾಗಿ ವಿಭಜಿಸಿ ಬೇರೆ ರಾಜ್ಯಗಳ ಜತೆ ವಿಲೀನಗೋಳಿಸಿದರು. ಈ ಸಂದರ್ಭದಲ್ಲಿ ಹೈದ್ರಾಭಾದ ರಾಜ್ಯ ತನ್ನ ಅಸ್ತಿತ್ವ ಕಳೆದುಕೋಂಡಿತು ಹೀಗಾಗಿ ಹೈದ್ರಾಭಾದ ಕರ್ನಾಟಕದ ನಾಗರೀಕರು ವರ್ಷದಲ್ಲಿ ಎರಡು ಸಲ ಸ್ವತಂತ್ರ್ಯ ದಿನಾಚರಣೆಯನ್ನು ಆಚರಿಸುವಂತಾಯಿತು. ಒಂದು ಭಾರತಕ್ಕೆ ಸಿಕ್ಕ ಸ್ವಾತಂತ್ರ್ಯಕ್ಕಾಗಿ 15ನೆ ಆಗಷ್ಟ್ ರಂದು ಇನ್ನೂಂದು ಹೈದ್ರಾಭಾದ ಸಂಸ್ಥಾನ ಭಾರತ ಒಕ್ಕೂಟದಲ್ಲಿ ಸೇರಿದ ದಿನ 17ನೇ ಸೆಪ್ಟೆಂಬರ್ ರಂದು ಹೈದ್ರಾಭಾದ-ಕರ್ನಾಟಕ ವಿಮೋಚನಾ ದಿನಾಚರಣೆ ಎಂದು ಆಚರಿಸಲಾಗುತ್ತದೆ.
ವಿಶೇಷ ಸ್ಥಾನಮಾನ
ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನವನ್ನು ನೀಡುವ ಅಗತ್ಯತೆ ಬಗ್ಗೆ 1998 ನೇ ಇಸವಿಯಿಂದೀಚೆಗೆ ರಾಜ್ಯ ಸರ್ಕಾರಗಳು ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನಗಲ್ಲಿ ಅಂಗೀಕೃತವಾದ ಠರಾವುಗಳು, ಜ್ಞಾಪನಾ ಪತ್ರಗಳನ್ನು ಕೇಂದ್ರ ಸರ್ಕಾರಕ್ಕೆ ಕಾಲ ಕಾಲಕ್ಕೆ ಸಲ್ಲಿಸಿತು. ಇವುಗಳ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು 2012 ರ ಚಳಿಗಾಲದ ಅಧಿವೇಶನದಲ್ಲಿ 371(ಜೆ) ಅನುಚ್ಛೇದವನ್ನು ಸೇರಿಸುವುದರೊಂದಿಗೆ ಭಾರತದ ಸಂವಿಧಾನಕ್ಕೆ ತಿದ್ದುಪಡಿ ಮಾಡಿತು. ವಿಧೇಯಕವು ಲೋಕಸಭೆಯಲ್ಲಿ 2012ರ ಸೆಪ್ಟೆಂಬರ್ 7ರಂದು ಮಂಡನೆಯಾಗಿ, ಡಿಸೆಂಬರ್ 18ರಂದು ಲೋಕಸಭೆಯಲ್ಲಿ ಮತ್ತು ಡಿಸೆಂಬರ್ 19ರಂದು ರಾಜ್ಯಸಭೆಯಲ್ಲಿ ಅನುಮೋದನೆಗೊಂಡು 2013ರ ಜನವರಿ 1ರಂದು ಭಾರತ ಸರ್ಕಾರದ ಗಜೆಟ್‌ನಲ್ಲಿ ಪ್ರಕಟವಾಯಿತು.
ಸಂವಿಧಾನದ ಅನುಚ್ಛೇದ 371(ಜೆ)(1) (ಎ) ನಲ್ಲಿ ದತ್ತಕವಾಗಿರುವ ಅಧಿಕಾರದಂತೆ ರಾಜ್ಯದಲ್ಲಿ ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಸ್ಥಾಪಿಸಲಾಗುವುದು. ಮಂಡಳಿಯ ಸೂಚಿತ ಪ್ರಕಾರ್ಯಗಳು ಈ ಕೆಳಕಂಡಂತಿವೆ:
*ಸಲಹಾ ಪರಿಷತ್ತು ಶಿಫಾರಸು ಮಾಡುವ ಅಭಿವೃದ್ಧಿ ಯೋಜನೆ ಹಾಗೂ ನೀತಿ ನಿಯಮಗಳನ್ನು ಪರಿಗಣಿಸುವುದು.
*ವಿವಿಧ ವಲಯಗಳ ಸಾಂದರ್ಭಿಕ ಮಟ್ಟವನ್ನು ತಿಳಿದುಕೊಳ್ಳುವುದು ಹಾಗೂ ಅಭಿವೃದ್ಧಿ ವೆಚ್ಚದ ಮಟ್ಟದ ಬಗ್ಗೆ ಸಲಹೆ ನೀಡುವುದು
*ರಾಜ್ಯಪಾಲರಿಗೆ ಆ ಪ್ರದೇಶಕ್ಕೆ ಅಗತ್ಯವಿರುವ ನೀತಿ ನಿಯಮಗಳ ಬಗ್ಗೆ ಸಲಹೆ ನೀಡುವುದು ಹಾಗೂ ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ಹಣ ಒದಗಿಸುವುದು.
*ಹುದ್ದೆಗಳ ಸೃಜನೆ ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಅನುಮತಿ ನೀಡುವ ಬಗ್ಗೆ ಸಲಹೆ ನೀಡುವುದು.
*ಉದ್ಯೋಗ ಮತ್ತು ಶಿಕ್ಷಣದಲ್ಲಿ ಈ ಪ್ರದೇಶದ ಜನರಿಗೆ ಮೀಸಲಾತಿ ಒದಗಿಸುವುದು.
ಸಂವಿಧಾನದ ಅನುಚ್ಛೇದ 371 (ಜೆ) (1)ರ ಅನ್ವಯ ರಾಷ್ಟ್ರಪತಿಗಳಿಗೆ ಪ್ರದತ್ತವಾದ ಅಧಿಕಾರದಂತೆ ಹೈದರಾಬಾದ್ ಕರ್ನಾಟಕ ಅಭಿವೃದ್ಧಿಗಾಗಿ ಪ್ರತ್ಯೇಕ ಮಂಡಳಿ ರಚನೆ, ಅಭಿವೃದ್ಧಿಗೆ ಅನುದಾನ ಹಂಚಿಕೆ ಹಾಗೂ ಉದ್ಯೋಗ, ಶಿಕ್ಷಣ, ವೃತ್ತಿಕೌಶಲ ತರಬೇತಿಗಳಲ್ಲಿ ಮೀಸಲಾತಿ ಕಲ್ಪಿಸುವ ಬಗ್ಗೆ ರಾಜ್ಯಪಾಲರಿಗೆ ಅಧಿಕಾರ ನೀಡುವ ಅಧಿಸೂಚನೆಗೆ 2013ರ ಅಕ್ಟೋಬರ್ ೮ರಂದು ಕೇಂದ್ರ ಸಚಿವ ಸಂಪುಟವು ಅನುಮೋದನೆ ನೀಡಿದ್ದು, ಇದಕ್ಕೆ 2013ರ ಅಕ್ಟೋಬರ್ 24ರಂದು ರಾಷ್ಟ್ರಪತಿಗಳ ಅಂಕಿತ ದೊರೆಯಿತು.

ಇವುಗಳನ್ನೂ ಓದಿ

ವರ್ಧನ ಸಾಮ್ರಾಜ್ಯದ ಇತಿಹಾಸ

ವರ್ಧನ ಸಾಮ್ರಾಜ್ಯದ ಇತಿಹಾಸ ಗುಪ್ತ ಸಾಮ್ರಾಜ್ಯದ ಅವನತಿಯ ನಂತರ ಉತ್ತರ ಭಾರತದಲ್ಲಿ ಅನೇಕ ಚಿಕ್ಕ ಚಿಕ್ಕ ಸಂಸ್ಥಾನಗಳು ಸ್ಥಾಪಿಸಲ್ಪಟ್ಟವು. ಅವುಗಳಲ್ಲಿ ವರ್ಧನ ಸಾಮ್ರಾಜ್ಯವೂ ಒಂದು. ಈ ಸಾಮ್ರಾಜ್ಯದ ಸ್ಥಾಪಕ ಪ್ರಭಾಕರ ವರ್ಧನ. ಅವನ ರಾಜಧಾನಿ ಥಾನೇಶ್ವರ. ಹೀಗಾಗಿ ಇವರನ್ನು ಥಾನೇಶ್ವರದ ವರ್ಧನರೆಂದೂ ಕರೆಯುತ್ತಿದ್ದರು. ಪ್ರಭಾಕರ ವರ್ಧನ ಶಕ್ತಿಶಾಲಿಯೂ ಶೂರನೂ ಆಗಿದ್ದನು. ಆತನಿಗೆ ರಾಜವರ್ಧನ, ಹರ್ಷವರ್ಧನ ಹಾಗೂ ರಾಜಶ್ರೀಯೆಂಬ ಮೂವರು ಮಕ್ಕಳಿದ್ದರು. ಪ್ರಭಾಕರ ವರ್ಧನನ ಮರಣದ ನಂತರ ರಾಜವರ್ಧನನು ಪಟ್ಟಕ್ಕೆ ಬಂದನು. ಆದರೆ ಧುರ್ಧೈವದಿಂದ ಆತನ ಕೊಲೆಯಾಗುತ್ತದೆ. ಹೀಗಾಗಿ ಹರ್ಷವರ್ಧನನು ಕ್ತಿ.ಶ.606 ರಿಂದ ಕ್ರಿ.ಶ 647 ರವರೆಗೆ ರಾಜ್ಯಭಾರ ಮಾಡುತ್ತಾನೆ.  ಹರ್ಷವರ್ಧನನು ಮಾಳ್ವ ಹಾಗೂ ಕನೋಜದ ಮೇಲೆ ದಂಡೆತ್ತಿ ಹೋಗಿ ಸದೆಬಡಿಯುತ್ತಾನೆ.ಹರ್ಷವರ್ಧನನ ತಂಗಿ ರಾಜಶ್ರೀಯನ್ನು ಮೌಖೇರಿಯ ಗೃಹವರ್ಮನಿಗೆ ವಿವಾಹ ಮಾಡಿ ಕೊಡಲಾಗಿರುತ್ತದೆ. ಮಾಳ್ವದ ದೇವಗುಪ್ತನು ಗೃಹವರ್ಮನನ್ನು ಕೊಲೆಗೈದು, ರಾಜಶ್ರಿಯನ್ನು ಬಂಧನದಲ್ಲಿಟ್ಟಿರುತ್ತಾನೆ. ಇದನ್ನು ಸಹಿಸದ ಅಂದಿನ ರಾಜ ರಾಜವರ್ಧನನು ಆತನ ಮೇಲೆ ದಂಡೆತ್ತಿಹೋಗಿ ಸೋಲಿಸಿರುತ್ತಾನೆ. ಮುಂದೆ ಗೌಡ ದೇಶದ ಶಶಾಂಕನು ಮಿತ್ರನ ವೇಷ ಧರಿಸಿ ಬಂದು ರಾಜವರ್ಧನನ ಕೊಲೆ ಮಾಡುತ್ತಾನೆ. ಹರ್ಷವರ್ಧನ ಹರ್ಷವರ್ಧನನು ಬಲುಶಕ್ತಿಶಾಲಿ ಸಾಮ್ರಾಟನಾಗಿದ್ದು ಸುಮಾರು 40 ವರ್ಷಗಳ ಕಾಲ ಆಳ್ವಿಕೆ ನಡೆಸಿದ. ಆತನ ಸಾಮ್ರಾಜ್ಯವು ಉತ್ತರದಲ...