Skip to main content

ಭಗತ್ ಸಿಂಗ್ ,ರಾಜಗುರು ಮತ್ತು ಸುಖದೇವ

ಭಾರತಾಂಬೆಯ ಪಾದ ಪದ್ಮಜಗಳಲ್ಲಿ ಪಾದಾರ್ಪಣೆ ಮಾಡಿದ ಕ್ರಾಂತಿಕಾರಿಗಳ ಪಟ್ಟಿಯಲ್ಲಿ ಭಗತ್ ಸಿಂಗ್ ರಾಜಗುರು ಮತ್ತು ಸುಖದೇವ್ ಇವರ ಹೆಸರು ಮುಂಚೂಣಿಯಲ್ಲಿ ಬರುತ್ತದೆ. ಸೌಂಡರ್ಸ್ ಎಂಬ ಆಂಗ್ಲ ಅಧಿಕಾರಿಯು ಪೀಡೆಯಿಂದ ಮುಕ್ತಿ ನೀಡಿದ ಈ ಮೂವರು ನಗುನಗುತ್ತಾ ನೇಣು ಕಂಬಕ್ಕೆ ತಲೆಯನ್ನು ಕೊಟ್ಟರು.

1928ರಲ್ಲಿ ಸೈಮನ್ ಕಮಿಷನ್ ಭಾರತಕ್ಕೆ ಆಗಮಿಸಿತ್ತು. ಭಾರತದ ಮುಂದಿನ ದಿಶೆಯನ್ನೇ ನಿರ್ಧರಿಸುವುದು ಈ ಮಂಡಳದ ಉದ್ದೇಶವಾಗಿತ್ತು . ಭಾರತದಾದ್ಯಂತ ಈ ಮಂಡಲಕ್ಕೆ ತೀವ್ರ ತೆರನಾದ ವಿರುದ್ಧ ವ್ಯಕ್ತವಾಯಿತು ಲಾಲಾ ಲಜ್‌ಪತ ರಾಯ್ ನೇತೃತ್ವದಲ್ಲಿ ಜನರು “ಸೈಮನ್ ಗೋ ಬ್ಯಾಕ್” ಎಂದು ನಿಷೇಧ ಯಾತ್ರೆಯೊಂದಿಗೆ ಬೀದಿಗಿಳಿದರು.!! ಪರಿಸ್ಥಿತಿಯನ್ನು ನಿಯಂತ್ರಿಸಲು ಬ್ರಿಟಿಷ್ ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಅಮಾನುಷ ಲಾಠಿಚಾರ್ಜ್ ಮಾಡಿದರು.;ಇದರಲ್ಲಿ ಲಾಲಾ ಲಜಪತ್ ರಾಯ್ ಅವರು ಪ್ರಾಣಾರ್ಪಣೆ ಮಾಡಿದರು. ಇದನ್ನು ಸಹಿಸದ ಕ್ರಾಂತಿಕಾರಿಗಳು ಲಾಲಾಜಿ ಸಾವಿಗೆ ಕಾರಣರಾದ ಬ್ರಿಟಿಷ್ ಅಧಿಕಾರಿ ಕೊಳ್ಳುವ ನಿರ್ಧಾರ ಮಾಡಿದರು. ಅದರಂತೆ ಭಗತ್ ಸಿಂಗ್,ರಾಜಗುರು ಮತ್ತು ಸುಖದೇವ್ ಸೇರಿ ಸ್ಕಾಟ್ ನಿವಾಸದ ಹೊರಗೆ ಸಂಚು ಹಾಕಿದ್ದರು. ಆದರೆ ಸ್ಕಾಕ್ ಬದಲು ಸೌಂಡರ್ಸ್ ಎಂಬ ಇನ್ನೊಬ್ಬ ಕೂರ ಬ್ರಿಟಿಷ್ ಅಧಿಕಾರಿ ಭಗತ್ ಸಿಂಗ್ ಅವರು ಹಾರಿಸಿದ ಗುಂಡೇಟಿಗೆ ಬಲಿಯಾದರು. ಬ್ರಿಟಿಷ್ ಅಧಿಕಾರಿಯನ್ನು ಕೊಂದ ಈ ಮೂವರನ್ನು ಹಿಡಿಯಲು ಬ್ರಿಟಿಷ್ ಸರಕಾರ ಹರಸಾಹಸ ಮಾಡಿತು ಆದರೆ ಪೊಲೀಸರ ಕಣ್ಣು ತಪ್ಪಿಸಿ ಇವರೆಲ್ಲರೂ ಭೂಗತರಾದರು ಮತ್ತು ಇತರ ಕ್ರಾಂತಿಕಾರಿಗಳಿಗೆ ಈ ಕಾರ್ಯವನ್ನು ಮುನ್ನಡೆಸಲು ಸ್ಫೂರ್ತಿ ನೀಡಿದರು ಮುಂದೊಂದು ದಿನ ಇವರನ್ನು ಇನ್ನೊಂದು ಪ್ರಕರಣದಲ್ಲಿ ಈ ಮೂವರನ್ನು 23-3-1930 ರಲ್ಲಿ ಗಲ್ಲಿಗೆ ಏರಿಸಲಾಯಿತು. ಭಾರತಾಂಬೆಯ ವೀರ ಪುತ್ರರನ್ನು ಕಳೆದುಕೊಂಡ ದೇಶಭಕ್ತ ಕಣ್ಣಿರು ಹಾಕಿದರು. ಈಗಲೂ ಆ ದಿನ ಬಂತೆಂದರೆ ದೇಶಭಕ್ತ ಯುವಕರಲ್ಲಿ ಕಣ್ಣಿರು ಜಿನುಗುತ್ತದೆ.

*ಭಗತ್ ಸಿಂಗ್ ಅವರ ಪರಿಚಯ*

27-9-1907ರಂದು ಪಂಜಾಬಿನ ಒಂದು ದೇಶಭಕ್ತರ ಕುಟುಂಬದಲ್ಲಿ ಭಗತ್ ಸಿಂಗ್ ಅವರು ಜನಿಸಿದರು.

ಭಗತ್ ಅವರ ಬಾಲ್ಯದ ದಿನಗಳು : ಸ್ವಾತಂತ್ರ್ಯ ಪೂರ್ವದ ಘಟನೆ . ಪಂಜಾಬಿನ ಒಂದು ಹಳ್ಳಿ 3 ವರ್ಷದ ಬಾಲಕನೊಬ್ಬ ತನ್ನ ತಂದೆಯೊಂದಿಗೆ ಸುತ್ತಾಡಿ ಬರಲು ಮನೆಯಿಂದ ಹೊರಟ. ಅವರೊಂದಿಗೆ ತಂದೆಯ ಮಿತ್ರರೊಬ್ಬರು ಇದ್ದರು ಅವರು ಮಾತನಾಡುತ್ತಾ ಮುಂದೆ ಹೋಗಿ ಅವರು ಊರನ್ನು ಗಡಿಯಾಚೆ ಸಾಗಿದರು. ಊರಿನ ಹೊರಗಿನ ಹೊಲ ಗದ್ದೆಗಳ ನಡುವೆ ನಡೆದುಕೊಂಡು ಹೋಗುತ್ತಿದ್ದ ಹಿರಿಯರು ಬಾಲಕನ ನೆನಪಾಗಿ ವಾಪಸ್ ತಿರುಗಿ ನೋಡಿದರು. ಅವನು ಹೊಲದಲ್ಲಿ ಕುಳಿತು ಏನೋ ಮಾಡುತ್ತಿರುವುದನ್ನು ಕಂಡು ಅವನತ್ತ ಸಾಗಿದರು. ಭಗತ್ ನ ತಂದೆ ಕೂತುಹಲದಿಂದ “ಏನು ಮಾಡುತ್ತಿದ್ದಿಯಾ” ಎಂದು ಬಾಲಕನನ್ನು ಕೇಳಿದರು. ಬಾಲಕನ ಉತ್ತರ ಹೀಗಿತ್ತು “ಈ ಹೊಲದ ತುಂಬೆಲ್ಲಾ ನಾನು ಬಂದೂಕುಗಳನ್ನು ನೆಡುತ್ತೇನೆ” ಎಂದು ಮುಗ್ದತೆಯಿಂದ ಉತ್ತರಿಸಿದ. ಈ ಮಾತುಗಳನ್ನು ಹೇಳುವಾಗ ಅವನ ಕಣ್ಣಂಚಲಿ ‘ನೆಟ್ಟಿರುವ ಬಂದೂಕುಗಳು ಹೊಲದ ತುಂಬೆಲ್ಲಾ ಬೆಳಯಲಿವೆ” ಎಂಬ ಅಪಾರವಾದ ನಂಬಿಕೆ ಆ ಬಾಲಕನ ಕಣ್ಣಲ್ಲಿ ಕಾಣುತ್ತಿತ್ತು..!! ಯಾಕೆ ಎಂದು ಪ್ರಶ್ನೆ ಮಾಡಿದ್ದಕ್ಕೆ “ಈ ಬಂದೂಕುಗಳಿಂದ ನಾವು ಬ್ರಿಟಿಷರನ್ನು ನಮ್ಮ ದೇಶದಿಂದ ಹೊರಗೆ ಹಾಕಬಹುದು” ಎಂಬ ಉತ್ತರವನ್ನು ಆ ಬಾಲಕ ನೀಡಿದ.‌!! ಇದನ್ನು ಕೇಳಿದ ಅವನ ತಂದೆ ಮತ್ತು ಅವರ ಮಿತ್ರ ಬಾಲಕ ಭಗತ್ ನ ದೇಶಭಕ್ತಿಗೆ ಮೂಕ ವಿಸ್ಮಿತ ರಾದರು.

ಭಗತ್ ರ ಯುವಾವಸ್ಥೆ : ಉನ್ನತ ಶಿಕ್ಷಣ, ಶ್ರೀಮಂತ ಮನೆಯ ಸರ್ವ ಅನುಕೂಲಗಳೆಲ್ಲವನ್ನು ತ್ಯಜಿಸಿ, ದೇಶಕ್ಕಾಗಿ ಮದುವೆ ಆಗಲಾರೆನೆಂದು ನಿರ್ಧರಿಸಿದ ಭಗತ್ ಸಿಂಗ್ ದೇಶ ಕಂಡ ಮಹಾನ್ ಕ್ರಾಂತಿಕಾರಿಯಾದನು. “ನೌಜವಾನ್ ಭಾರತ ಸಭಾ”, ” ಕೀರ್ತಿ ಕಿಸಾನ್ ಪಾರ್ಟಿ” ಮತ್ತು ಹಿಂದೂಸ್ಥಾನ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್” ಮುಂತಾದ ಹಲವಾರು ಸಂಘಟನೆಗಳನ್ನು ಸ್ಥಾಪಿಸುವ ಮೂಲಕ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಕೃತಿಶೀಲನಾದನು.

ಭಗತ್ ಜೀವನದ ಘಟನೆಗಳು : ತನಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ ಎಂದು ತಿಳಿದ ಮೇಲೆ ಭಗತ್ ಅವರ ತಾಯಿಗೆ ಪತ್ರದಲ್ಲಿ ಹೀಗೆ ಬರೆಯುತ್ತಾನೆ ” ಅಮ್ಮಾ ಚಿಂತಿಸಬೇಡ!! ಗಲ್ಲು ಆದರೇನು! ಬ್ರಿಟಿಷ್ ಸರಕಾರವನ್ನು ಕಿತ್ತೊಗೆಯಲು ಒಂದೇ ವರ್ಷದಲ್ಲಿ ಮತ್ತೆ ಜನ್ಮ ತಾಳುವೇನು!”

*ಶಿವರಾಮ ಹರಿ ರಾಜಗುರು*

24-8-1908ರಲ್ಲಿ ಮಹಾರಾಷ್ಟ್ರದ ದೇಶಸ್ಥ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಇವರು, ಅನೇಕ ಗ್ರಂಥಗಳ ಅಧ್ಯಯನ ಮಾಡಿದ್ದರು. ಇವರು ಹಿಂದೂಸ್ಥಾನ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್ ಸದಸ್ಯರಾಗಿದ್ದರು.

*ರಾಜಗುರು ಜೀವನದ ಕೆಲವು ಘಟನೆಗಳು:*

*ಘಟನೆ 1* : ಒಮ್ಮೆ ಕ್ರಾಂತಿಕಾರಿಗಳು ಊಟಕ್ಕಾಗಿ ಸೇರಿದಲ್ಲಿ ರಾಜಗುರು ರೊಟ್ಟಿಯನ್ನು ತಯಾರಿಸುತ್ತಿದ್ದನು. ತಂದೂರ ಒಳಗೆ ಬೇಯಿಸಿದ ಬಿಸಿರೊಟ್ಟಿ ಯನ್ನು ಬರಿಗೈಯಿಂದ ಹೊರಗೆ ತೇಗೆಯುತ್ತಿದ್ದ ರಾಜಗುರುಣನನ್ನು ನೋಡಿದ ಒಬ್ಬ ಕ್ರಾಂತಿಕಾರಿ ಅವನನ್ನು ಹೊಗಲಿದನು. ಆಗ ಮತ್ತೊಂದ ಕ್ರಾಂತಿಕಾರಿ ತಮಾಷೆ ಮಾಡುತ್ತಾ “ತಂದೂರ ಒಳಗೆ ಕೈ ಹಾಕುವುದು ದೊಡ್ಡ ಕೆಲಸವೇನಲ್ಲಾ. ಪೋಲಿಸರ್ ಅತ್ಯಾಚಾರಗಳನ್ನು ಇಷ್ಟು ಸಹಿಷ್ಣುತೆಯಿಂದ ಎದುರಿಸಿದರೆ ಮಾತ್ರ ಇದು ಪ್ರಶಂಸನೀಯ” ಎಂದನು ಇದನ್ನು ಕೇಳಿದ ರಾಜಗುರು ಶಾಂತವಾಗಿ ಒಂದು ಬಾಣಲರಯನ್ನು ಬಿಸಿ ಮಾಡಿ ಅವನ ಎದೆಗೆ ಇಟ್ಟುಕೊಂಡನು, ಚರ್ಮ ಸುಟ್ಟು ಹೋಯಿತು, ಮತ್ತೆ ಹಾಗೆ ಮಾಡಿದನು! ನಗುತ್ತಾ “ಈಗ ಹೇಳು ನಾನು ಕಾರ್ಯಾಗೃಹದಲ್ಲಿ ನೀಡುವ ಅತ್ಯಚಾರವನ್ನು ಎದುರಿಸಲು ಸಿದ್ದನಿದ್ದೆನೇ ಎಂಬುದಕ್ಕೆ ಏನಾದರೂ ಸಂದೇಹ ಊಂಟೆ? ಎಂದು ಕೇಳಿದನು. ಆ ಕ್ರಾಂತಿಕಾರಿಗೆ ತನ್ನ ತಪ್ಪಿನ ಅರಿವಾಯಿತು. ” ರಾಜಗುರು ನಿನ್ನ ಪ್ರಖರ ದೇಶಭಕ್ತಿಯ ಬಗ್ಗೆ ನನಗೆ ಸ್ವಲ್ಲವೂ ಅನುಮಾನವಿಲ್ಲಾ, ನನ್ನನ್ನು ಕ್ಷಮಿಸಿಬಿಡು” ಎಂದು ಕ್ಷಮೇ ಕೇಳಿದನು.

*ಘಟನೆ 2 *: ರಾಜಗುರು ಕಾರಾಗೃಹದಲ್ಲಿರುವಾಗ ಅವರ ಮೇಲೆ ಅಮಾನುಷ ರೀತಿಯಲ್ಲಿ ಅತ್ಯಾಚಾರಗಳಾದವು. ಲಾಹೋರನಲ್ಲಿ ತೀವ್ರ ಬೇಸಿಗೆಯಲ್ಲೂ ಸುತ್ತಲೂ ಬೆಂಕಿಯನ್ನು ಹಚ್ಚಿ ಅವರನ್ನು ನಡುವೆ ಕೂರಿಸಿದರು. ಮುಂಜುಗಡ್ಡೆಯ “ಹಾಸಿಗೆ” ಯ ಮೇಲೆ ಮಲಗಿಸಿದರು. ಅವಯವಗಳು ನಿಷ್ಕ್ರಿಯವಾದವು. ಅದ್ಯಾವುದಕ್ಕೂ ಜಗ್ಗದ ರಾಜಗುರು ತೆಲೆಯ ಮೇಲೆ ಮಲದ ಧಾರೆ ಕೂಡ ಎರೆದರು. ಇಷ್ಟೆಲ್ಲಾ ಚಿತ್ರಹಿಂಸೆ ಕೊಟ್ಟರು ಸಹಿಸಿದ ರಾಜಗುರು ಮಾತ್ರ ಬಾಯಿ ಬಿಟ್ಟು ತನ್ನ ಸಹಕ್ರಾಂತಿಕಾರಿಗಳ ಹೆಸರನ್ನು ಹೇಳಲಿಲ್ಲಾ..!!

*ಘಟನೆ 3 *: ದೇಶ ಸೇವೆಗಾಗಿ ಹಂಬಲಿಸುವ ರಾಜಗುರು : ನೇಣು ಕಂಬವನ್ನು ಏರುವ ಮೊದಲು ಇತರ ಕ್ರಾಂತಿಕಾರಿಗಳೊಂದಿಗೆ ಮಾತನಾಡುತ್ತಾ ರಾಜಗುರು ಅವರು ಹೀಗೆ ಹೇಳುತ್ತಾರೆ “ನೀವೆಲ್ಲರೂ ಇನ್ನಷ್ಟು ವರ್ಷಗಳ ಭಾರತಾಂಬೆಯ ಸೇವೆ ಮಾಡಲಿರುವಿರಿ ಆದರೇ ನೇಣು ಕಂಬ ಏರಿದ ತಕ್ಷಣ ನಮ್ಮ ಪ್ರವಾಸ ಅಂತ್ಯಗೊಳ್ಳುತ್ತದೆ ಎಂದು ಯೋಚಿಸಿ ದುಃಖವಾಗುತ್ತಿದೆ.

*ಸುಖದೇವ್ ಥಾಪರ್*

15-5-1907 ರಲ್ಲಿ ಪಂಜಾಬ್ ಪ್ರಾಂತ್ಯದಲ್ಲಿ ಸುಖದೇವ ಜನಿಸಿದರು. ” ನೌಜವಾನ್ ಭಾರತ ಸಭಾ” ಸಂಸ್ಥಾಪಕ ಮತ್ತು ಹಿಂದೂಸ್ಥಾನ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್ ಕಾರ್ಯಕರ್ತರಾಗಿದ್ದರು.

ಸುಖದೇವ ಅವರ ಜೀವನ : ಸುಖದೇವ ಮೇಲೆ ಭಗತ್ ಸಿಂಗ್ ನ ಅವರ ಕ್ರಾಂತಿಕಾರಿ ವಿಚಾರಗಳು ಅತೀವ ಪರಣಾಮ ಬೀರಿದವು. ಲಾಹೋರಿನ ನ್ಯಾಷನಲ್ ಕಾಲೇಜಿನಲ್ಲಿ ‘ ಭಾರತದ ಗೌರವಶಾಲಿ ಇತಿಹಾಸ, ಜಗತ್ತಿನ ಕ್ರಾಂತಿಕಾರಿ ಘಟನೆಗಳ ಅಧ್ಯಯನ, ರಶ್ಯಿಯಾದಲ್ಲಿ ನಡೆದ ಕ್ರಾಂತಿ’ ಇವೆಲ್ಲವುಗಳ ಅಧ್ಯಯನಕ್ಕಾಗಿ ವಿಚಾರವಾದಿಗಳನ್ನು ಸೇರಿಸಿದರು. ಸ್ವಾತಂತ್ರ್ಯ ಸಮರದಲ್ಲಿ ಸಹಭಾಗಿಯಾಗುವಂತೆ ಯುವಕರನ್ನು ಪ್ರೇರೆಪಿಸಿಸುವುದು. ಶಾಸ್ತ್ರೀಯ ಅಧ್ಯಯನ, ಕ್ರಾಂತಿಕಾರಿ ಹೋರಾಟ, ಅಸ್ಪೃಶ್ಯತೆಯ ನಿವಾರಣೆ ಇತ್ಯಾದಿ ಧ್ಯೇಯಗಳನ್ನು ಪೂರೈಸಲು “ನೌಜವಾನ್ ಭಾರತ ಸಭಾ” ಸ್ಥಾಪಿಸಿದರು. ಕ್ರಾಂತಿಕಾರಿಗಳ ಮೇಲೆ ನಡೆಯುವ ಅತ್ಯಾಚಾರಗಳ ವಿರುದ್ಧ 1929ರಲ್ಲಿ ಆರಂಭವಾದ ಅಮರಣಾಂತ ಉಪವಾಸದಲ್ಲಿ ಸುಖದೇವ ಸಹ ಭಾಗವಹಿಸಿದ್ದರು.

*ಭಾರತಾಂಬೆಗೆ ಪ್ರಾಣಾರ್ಪಣೆ*

23 ಮಾರ್ಚ 1931 ರಂದು ಲಾಹೋರಿನ ಸೆಂಟ್ರಲ್ ಜೈಲ್‌ನಲ್ಲಿ ಸಂಜೆ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ ಈ ಮೂವರನ್ನು ನಗುಮುಖದಿಂದ ನೇಣು ಕುಣಿಕೆಗೆ ಕತ್ತನ್ನು ನೀಡಿದರು.

Comments

ಇವುಗಳನ್ನೂ ಓದಿ

ವರ್ಧನ ಸಾಮ್ರಾಜ್ಯದ ಇತಿಹಾಸ

ವರ್ಧನ ಸಾಮ್ರಾಜ್ಯದ ಇತಿಹಾಸ ಗುಪ್ತ ಸಾಮ್ರಾಜ್ಯದ ಅವನತಿಯ ನಂತರ ಉತ್ತರ ಭಾರತದಲ್ಲಿ ಅನೇಕ ಚಿಕ್ಕ ಚಿಕ್ಕ ಸಂಸ್ಥಾನಗಳು ಸ್ಥಾಪಿಸಲ್ಪಟ್ಟವು. ಅವುಗಳಲ್ಲಿ ವರ್ಧನ ಸಾಮ್ರಾಜ್ಯವೂ ಒಂದು. ಈ ಸಾಮ್ರಾಜ್ಯದ ಸ್ಥಾಪಕ ಪ್ರಭಾಕರ ವರ್ಧನ. ಅವನ ರಾಜಧಾನಿ ಥಾನೇಶ್ವರ. ಹೀಗಾಗಿ ಇವರನ್ನು ಥಾನೇಶ್ವರದ ವರ್ಧನರೆಂದೂ ಕರೆಯುತ್ತಿದ್ದರು. ಪ್ರಭಾಕರ ವರ್ಧನ ಶಕ್ತಿಶಾಲಿಯೂ ಶೂರನೂ ಆಗಿದ್ದನು. ಆತನಿಗೆ ರಾಜವರ್ಧನ, ಹರ್ಷವರ್ಧನ ಹಾಗೂ ರಾಜಶ್ರೀಯೆಂಬ ಮೂವರು ಮಕ್ಕಳಿದ್ದರು. ಪ್ರಭಾಕರ ವರ್ಧನನ ಮರಣದ ನಂತರ ರಾಜವರ್ಧನನು ಪಟ್ಟಕ್ಕೆ ಬಂದನು. ಆದರೆ ಧುರ್ಧೈವದಿಂದ ಆತನ ಕೊಲೆಯಾಗುತ್ತದೆ. ಹೀಗಾಗಿ ಹರ್ಷವರ್ಧನನು ಕ್ತಿ.ಶ.606 ರಿಂದ ಕ್ರಿ.ಶ 647 ರವರೆಗೆ ರಾಜ್ಯಭಾರ ಮಾಡುತ್ತಾನೆ.  ಹರ್ಷವರ್ಧನನು ಮಾಳ್ವ ಹಾಗೂ ಕನೋಜದ ಮೇಲೆ ದಂಡೆತ್ತಿ ಹೋಗಿ ಸದೆಬಡಿಯುತ್ತಾನೆ.ಹರ್ಷವರ್ಧನನ ತಂಗಿ ರಾಜಶ್ರೀಯನ್ನು ಮೌಖೇರಿಯ ಗೃಹವರ್ಮನಿಗೆ ವಿವಾಹ ಮಾಡಿ ಕೊಡಲಾಗಿರುತ್ತದೆ. ಮಾಳ್ವದ ದೇವಗುಪ್ತನು ಗೃಹವರ್ಮನನ್ನು ಕೊಲೆಗೈದು, ರಾಜಶ್ರಿಯನ್ನು ಬಂಧನದಲ್ಲಿಟ್ಟಿರುತ್ತಾನೆ. ಇದನ್ನು ಸಹಿಸದ ಅಂದಿನ ರಾಜ ರಾಜವರ್ಧನನು ಆತನ ಮೇಲೆ ದಂಡೆತ್ತಿಹೋಗಿ ಸೋಲಿಸಿರುತ್ತಾನೆ. ಮುಂದೆ ಗೌಡ ದೇಶದ ಶಶಾಂಕನು ಮಿತ್ರನ ವೇಷ ಧರಿಸಿ ಬಂದು ರಾಜವರ್ಧನನ ಕೊಲೆ ಮಾಡುತ್ತಾನೆ. ಹರ್ಷವರ್ಧನ ಹರ್ಷವರ್ಧನನು ಬಲುಶಕ್ತಿಶಾಲಿ ಸಾಮ್ರಾಟನಾಗಿದ್ದು ಸುಮಾರು 40 ವರ್ಷಗಳ ಕಾಲ ಆಳ್ವಿಕೆ ನಡೆಸಿದ. ಆತನ ಸಾಮ್ರಾಜ್ಯವು ಉತ್ತರದಲ...