ರಾಜ್ಯಪಾಲರು ಹೊರಡಿಸುವ ಸುಗ್ರಿವಾಜ್ಞೆಯ ಅತಿ ಹೆಚ್ಚು ಕಾಲಾವಧಿ- ೬ ತಿಂಗಳು
ರಾಜ್ಯದ ರಾಜಪಾಲರು - ರಾಜ್ಯದ ಮುಖ್ಯಸ್ಥರು
ಜಮ್ಮು ಕಾಶ್ಮೀರಕ್ಕೆ ವಿಶೇಷ ಉಪಬಂಧಗಳನ್ನು ಕೊಟ್ಟಿರುವ ಅನುಬಂಧ ೩೭೦ ನ್ನು ಸಂವಿಧಾನದ ಈ ಭಾಗದಲ್ಲಿ ಸೇರಿಸಲಾಗಿದೆ - xxi
ರಾಜ್ಯಗಳಲ್ಲಿ ರಾಜ್ಯಪಾಲರ ಪದವಿಗಾಗಿ ಉಪಬಂಧ ಮಾಡಿದ ಅನುಚ್ಛೇದ - ೧೫೩
ರಾಜ್ಯದ ಮುಖ್ಯ ಕಾರ್ಯ ನಿರ್ವಾಹಕರು - ರಾಜ್ಯಪಾಲರು
ರಾಜ್ಯಪಾಲರನ್ನು ನೇಮಕ ಮಾಡುವವರು - ರಾಷ್ಟ್ರಪತಿಗಳು
ರಾಜ್ಯಪಾಲರು ರಾಜೀನಾಮೆ ಪತ್ರವನ್ನು ನೀಡುವುದು - ರಾಷ್ಟ್ರಪತಿಗಳಿಗೆ
ರಾಜ್ಯಪಾಲರಾಗಲು ಬೇಕಾದ ವಯೋಮಿತಿ -೩೫ ವರ್ಷ
ರಾಜ್ಯಪಾಲರು ತನ್ನ ಅಧಿಕಾರ ಮತ್ತು ಗೌಪ್ಯತೆ ಯ ಪ್ರಮಾಣ ವಚನವನ್ನು ಇವರ ಮುಂದೆ ಸ್ವೀಕರಿಸುವರು - ಉಚ್ಛನ್ಯಾಯಾಲಯದ ಮುಖ್ಯ ನ್ಯಾಯಾಧೀಶರು
ಮುಖ್ಯಮಂತ್ರಿ ಮತ್ತು ಮಂತ್ರಿಮಂಡಲವನ್ನು ನೇಮಕ ಮಾಡುವವರು - ರಾಜ್ಯಪಾಲರು
ರಾಜ್ಯದ ಅಡ್ವೋಕೇಟ್ ಜನರಲ್ ರನ್ನು ನೇಮಕ ಮಾಡುವವರು - ರಾಜ್ಯಪಾಲರು
ರಾಜ್ಯ ಚುನಾವಣಾ ಆಯುಕ್ತರನ್ನು ನೇಮಕ ಮಾಡಿ ಅವರ ಸೇವಾ ಷರತ್ತು ಅವಧಿಗಳನ್ನು ನಿರ್ಧರಿಸುವರು - ರಾಜ್ಯಪಾಲರು
ಅಡ್ವೋಕೇಟ್ ಜನರಲ್ ಆಯ್ಕೆಗೆ ಬೇಕಾದ ಅರ್ಹತೆ - ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಲು ಇರುವ ಅರ್ಹತೆ
ರಾಜ್ಯ ಲೋಕಸೇವಾ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕ ಮಾಡುವವರು - ರಾಜ್ಯಪಾಲರು
ರಾಜ್ಯ ಲೋಕಸೇವಾ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರನ್ನು ವಜಾ ಮಾಡುವವರು - ರಾಷ್ಟ್ರಪತಿಗಳು
ವಿಧಾನಮಂಡಲ ಅಧಿವೇಶನವನ್ನು ಕರೆಯುವ,ಮುಕ್ತಾಯಗೊಳಿಸುವ ಮತ್ತು ರಾಜ್ಯ ವಿಧಾನಸಭೆಯನ್ನು ವಿಸರ್ಜಿಸುವ ಅಧಿಕಾರವಿರುವುದು - ರಾಜ್ಯಪಾಲರಿಗೆ