ತತ್ಪುರುಷ ಸಮಾಸ
ಎರಡು ನಾಮಪದಗಳು ಸೇರಿ ಸಮಾಸವಾದಾಗ ಉತ್ತರ ಪದದ ಅರ್ಥವು ಪ್ರಧಾನವಾಗಿದ್ದರೆ ಅದು ತತ್ಪುರುಷ ಸಮಾಸ
ಉದಾ
ಮಳೆಯ +ಕಾಲ -ಮಳೆಗಾಲ
ತಲೆಯಲ್ಲಿ +ನೋವು -ತಲೆನೋವು
ಮಲ್ಲಿಗೆಯ +ಹೂವು -ಮಲ್ಲಿಗೆ ಹೂವು
ಮನೆಯ +ಕೆಲಸ -ಮನೆಗೆಲಸ
ಅರಸನ +ಮನೆ -ಅರಮನೆ
Samanya Kannada Adhyayana Kaipidi - Useful For PDO, TET, SDA, FDA, KPSC Group C, Morarji Desayi, Abakari Police And All Other Technical And Non Technical Exams
*************
ಕರ್ಮಧಾರೆಯ ಸಮಾಸ
ಪೂರ್ವೊತ್ತರ ಪದಗಳು ವಿಶೇಷಣ ಮತ್ತು ವಿಶೇಷ್ಯ ಸಂಬಂಧದಿಂದ ಕೂಡಿ ಆಗುವ ಸಮಾಸವೆ ಕರ್ಮಧಾರೆಯ ಸಮಾಸ
ಉದಾ
ಹಿರಿದು +ಮರ- ಹೆಮ್ಮರ
ಕೆಂಪಾದ+ ತಾವರೆ- ಕೆಂದಾವರೆ
ಮೆಲ್ಲಿತು +ನುಡಿ -ಮೆಲ್ನುಡಿ
***********
ಅಂಶಿ ಸಮಾಸ
ಪೂರ್ವೋತ್ತರ ಪದಗಳು ಅಂಶಿ ಅಂಶ ಭಾವದಿಂದ ಸೇರಿ ಸಮಾಸವಾದರೆ ಅದುವೆ ಅಂಶಿ ಸಮಾಸ
ಉದಾ
ಕೈಯ +ಅಡಿ- ಅಂಗೈ
ತಲೆಯ+ ಮುಂದು -ಮುಂದಲೆ
ಕೆಲಗಿನ +ತುಟಿ -ಕೆಳದುಟಿ
ಕಾಲಿನ +ಮುಂದು -ಮುಂಗಾಲು
*****************
ದ್ವಂದ್ವ ಸಮಾಸ
ಎರಡು ಅಥವಾ ಎರಡಕ್ಕಿಂತಲೂ ಹೆಚ್ಚು ನಪದಗಳು ಸೇರಿ ಸಮಾಸವಾಗುವಾಗ ಎಲ್ಲ ಪದಗಳ ಅರ್ಥವೂ ಪ್ರಧಾನವಾಗಿದ್ದರೆ ಅದು ದ್ವಂದ್ವ ಸಮಾಸ
ಉದಾ
ರಾಮನು+ ಲಕ್ಷ್ಮಣನು -ರಾಮಲಕ್ಷ್ಮಣರು
ಕೃಷ್ಣನು +ಅರ್ಜುನನು -ಕೃಷ್ಣಾರ್ಜುನರು
ಗಿಡಗಳು +ಮರಗಳು +ಬಳ್ಳಿಗಳು -ಗಿಡಮರಬಳ್ಳಿಗಳು
******************
ಬಹುವ್ರಿಹಿ ಸಮಾಸ
ಸಮಾಸವಾಗುವಾಗ ಪೂರ್ವೋತ್ತರ ಪದಗಳು ಪ್ರಧಾನವಾಗದೆ ಬೇರೊಂದು ಪದ ಪ್ರಧಾನವಾದರೆ ಅಂತಹ ಸಮಾಸಗಳಿಗೆ ಬಹುವ್ರಿಹಿ ಸಮಾಸ ಎಂದು ಕರೆಯುತ್ತಾರೆ
ಉದಾ
ಮೂರು+ ಕಣ್ಣುಳ್ಳವನು -ಮುಕ್ಕಣ್ಣ
ಹಣೆಯಲ್ಲಿ +ಕಣ್ಣುಳ್ಳವನು- ಹಣೆಗಣ್ಣ
ಚಕ್ರವನ್ನು +ಹಿಡಿದಿರುವನು- ಚಕ್ರಪಾಣಿ
ಚಂದ್ರನಂತೆ +ಮುಖವುಳ್ಳವನು- ಚಂದ್ರಮುಖಿ
*********************
ಕ್ರಿಯಾ ಸಮಾಸ
ಸಮಾಸದಲ್ಲಿ ಪೂರ್ವಪದವು ನಾಮಪದವಾಗಿದ್ದು ಉತ್ತರ ಪದವು ಕ್ರಿಯಾಪದವಾಗಿದ್ದರೆ ಅದು ಕ್ರಿಯಾ ಸಮಾಸ
ಉದಾ
ಕೈಯನ್ನು +ತೊಳೆ -ಕೈತೊಳೆ
ಮರವನ್ನು+ ಹತ್ತು- ಮರಹತ್ತು
ಕಳೆಯನ್ನು +ಕೀಳು -ಕಳೆಕೀಳು
ಊಟವನ್ನು +ಮಾಡು- ಊಟಮಾಡು
ತಲೆಯನ್ನು +ಬಾಚು -ತಲೆಬಾಚು
ಕಾಲನ್ನು +ಎಳೆ -ಕಾಲೆಳೆ
*******************
ಗಮಕ ಸಮಾಸ
ಪೂರ್ವ ಪದವು ಸರ್ವನಾಮ ಕೃದಾಂತಗಳಲ್ಲಿ ಒಂದಾಗಿದ್ದು ಉತ್ತರ ಪದದಲ್ಲಿರುವ ನಾಮಪದದೊಡನೆ ಸೇರಿ ಆಗುವ ಸಮಾಸವೆ ಗಮಕ ಸಮಾಸ
ಉದಾ
ಅವನು +ಹುಡುಗ- ಆ ಹುಡುಗ
ಇದು +ಕಲ್ಲು -ಈ ಕಲ್ಲು
ಕಡೆಯುವುದು +ಕೋಲು -ಕಡೆಗೋಲು
ಮಾಡಿದುದು +ಅಡುಗೆ -ಮಾಡಿದಡಿಗೆ
*******************
ದ್ವಿಗು ಸಮಾಸ
ಪೂರ್ವಪದವು ಸಂಖ್ಯಾವಾಚಕವಾಗಿದ್ದು ಉತ್ತರದಲ್ಲಿರುವ ನಾಮಪದದೊಡನೆ ಸೇರಿ ಆಗುವ ಸಮಾಸವೆ ದ್ವಿಗು ಸಮಾಸ
ಉದಾ
ಎರಡು ಮಡಿ ಇಮ್ಮಡಿ
ಒಂದು ಮಡಿ ಒಗ್ಗಟ್ಟು
ನಾಲ್ಕು ಮಡಿ ನಾಲ್ವಡಿ
Comments
Post a Comment
ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ