Skip to main content

ಪ್ರಚಲಿತ ಘಟನೆಗಳು ಡಿಸೆಂಬರ್ ೧೪

ಸಿಂಗ್- ವಾಯ್ ದಿಸ್ ಕೊಲೆವರಿ ಕೊಲೆವರಿ ಡಿ
ವಾಯ್ ದಿಸ್ ಕೊಲೆವರಿ ಕೊಲೆವರಿ ಡಿ
ಕಿಂಗ್- ಏನಪಾ ಅಳ್ಯಾ  ಮಸ್ತ  ಮೂಡ್ನ್ಯಾಗ ಅದಿ
ಸಿಂಗ್- ಹು ಮತ್ತ . ಐ ಎನ್ ಎಸ್ ಕಲವರಿ ಅನ್ನೊ ಮೊದಲ ಸ್ವದೇಶಿ ನಿರ್ಮಿತ ಜಲಾಂತರ್ಗಾಮಿ ಇಂದು ನಮ್ಮ ಸೇನೆಗೆ ಸೇರೈತಿ.ಆನೆ ಬಲ ಬಂದೈತಿ.
ಕಿಂಗ್- ಇನ್ಯಾಕ ತಡ ಹೊಡಿ ಟುಮಕಿ.ಟುಮ್ ಟುಮ್ ಟುಮಕ್
ಸಿಂಗ್ - ವೈರಿಗಳು ಇನ್ನ ಮುಂದೆ ಕಮಕ್ ಕಿಮಕ್ ಅನ್ನಾಂಗಿಲ್ಲ
ಕಿಂಗ್-ಮೊನ್ನೆ  ಮಾನುಷಿ ಚಿಲ್ಲರ್ ಫೋಟೋ ನೋಡಿನಪಾ.ಚೆಂದ ಅದಾಳು
ಸಿಂಗ್ - ಮಳ್ಳ ಹಳೆ ಮಳ್ಳ. ಚೆಂದ ಇರೊದಕ್ಕ. ವಿಶ್ವಸುಂದರಿ ಆಗಿದಾಳು.ಅವಳ ಪೋಟೊ ಎಲ್ಲಿ ಸಿಕ್ಕಿತ ಪಾ?
ಕಿಂಗ್- ಗೂಗಲ್ ನ್ಯಾಗ ಹುಡುಕಿದನ
ಸಿಂಗ್- ನಿನ್ನಂಗ ಇಡೀ ದೇಶದೊಳಗ ಅತೀ ಹೆಚ್ಚ ಮಂದಿಯಿಂದ ಹುಡುಕಲ್ಪಟ್ಟ. ವ್ಯಕ್ತಿ  ಯಾರಪಾ ಅಂದರ ಮಾನುಷಿ
ಕಿಂಗ್- ನಿನಗ ಹ್ಯಾಂಗ ಗೊತ್ತಾತ ಇದ?
ಸಿಂಗ್- ಮಾರಾಯಾ ಗೂಗಲ್ ನವರ ಅಂಕಿ ಅಂಶ ಬಿಡುಗಡೆ ಮಾಡ್ಯಾರ. ಬಾಹುಬಲಿ ೨ ಫಿಲಂ ಅತಿ ಹೆಚ್ಚು ಸರ್ಚ ಮಾಡಿದ ಫಿಲಂ ಅನ್ನಿಸ್ಕೊಂಡೈತಿ.
ಕಿಂಗ್ - ಮಸ್ತ ಫಿಲಂ ಐತಿ.ಟಿ ವಿ ಯೊಳಗ ಎರಡ ಮೂರ ಸಲ ಹಾಕಿದ್ರ
ಸಿಂಗ್- ಹಾಕಿ ಅಂದಕೂಡಲೆ ನೆಂಪ ಆತ ನೋಡ.೨೦೧೭ ರ ಹಾಕಿ ಏಷ್ಯಾ ಕಪ್ ಗೆದ್ದವರ ಯಾರ ಗೊತ್ತನ?
ಸಿಂಗ್- ಇಲ್ಲೊ ಪಾ
ಕಿಂಗ್- ನಮ್ಮ ಭಾರತದವರು ಗೆದ್ದುಕೊಂಡಾರ
ಸಿಂಗ್ - ಹುರ್ರಾ
ಕಿಂಗ್- ರೊ ರೊ ದಾಗ ಹೊಗೋಣು ನಡಿ
ಸಿಂಗ್- ರೊ ರೊ ಅಂದರೇನೊ ಪಾ?
ಕಿಂಗ್ - ಅದೊಂದ ರೀತಿ ದೋಣಿ ಪ್ರಯಾಣ.ಭಾರತದ ಮೊದಲ ರೊ ರೊ ಸೇವೆಯು ಸೌರಾಷ್ಟ್ರ ದ ಭಾವನಗರ ಜಿಲ್ಲೆಯ ಘೋಗದಿಂದ ದಕ್ಷಿಣ ಗುಜರಾತನ  ದಹೇಜ್ ನಡುವೆ ಪ್ರಾರಂಭವಾಗಿದೆ.
ಸಿಂಗ್- ದಹೇಜ್ ದೇನಾ ಮೆ ರೋನಾ ಆತಾ ಹೈ
ಕಿಂಗ್- ಓಹೊ ಟ್ರಿಕ್ಕು ನೆಂಪ ಇಡುವ ಟ್ರಿಕ್ಕು ಸಖತ್ ಆಗಿದೆ.
ಕಿಂಗ್- ವಿಶ್ವದ ಮೊದಲ ಹೈಡ್ರೋಜನ್ ಟ್ರಾಮ್ ಸೇವೆ ಎಲ್ಲಿ ಆರಂಭವಾಗಿದೆ ಅಂತ ಗೊತ್ತೆನೊ?
ಸಿಂಗ್- ಚೀನಾ ಅಂತ ಎಲ್ಲಿಯೊ ಓದಿದ ನೆನಪು
ಕಿಂಗ್- ಕರೆಕ್ಟಾಗಿ ಹೇಳಿದಿ ನೋಡ.ಹೇಬಿ ನಗರದ ತಂಗ್ವಾನ ಪ್ರಾಂತ್ಯದ ಲ್ಲಿ  ಈ ಸೇವೆ ಪ್ರಾರಂಭವಾಗಿದೆ.
ಸಿಂಗ್- ಈ ರೋ ರೋ ಈ ಟ್ರಾಮ್ ಎಲ್ಲಾ ನೋಡೇನ ಇಲ್ಲ .ನಾ ನೋಡಿರೋದು ಹಡಗ ಮಾತ್ರ
ಕಿಂಗ್- ಹಡಗ ಅಂದಕೂಡಲೆ ನೆಂಪ ಆತ ನೋಡ. ಭಾರತ ದೇಶದ ಮೊದಲ ಖಾಸಗಿ ಯುದ್ಧ ಹಡಗು ಯಾವುದು ಗೊತ್ತೆನ?
ಸಿಂಗ್ - ಹೇಳೋ ಮಾರಾಯಾ
ಕಿಂಗ್ - ವಿಕ್ರಂ ಅಂತ ಅದರ ಹೆಸರು.ಇದನ್ನು ಲಾರ್ಸನ್ ಆಂಡ್  ಟೊರ್ಕೊ ನಿರ್ಮಾಣ ಮಾಡಿದ್ದು.ತಮಿಳುನಾಡಿನ ಎಲ್ ಆಂಡ್ ಟಿ  ಕಟ್ಟುಪಳ್ಳಿ ಶಿಪಯಾರ್ಡನಲ್ಲಿ ತಯಾರಾಗಿದೆ.

ಸಿಂಗ್ - ಮಸ್ತ ಮಾಹಿತಿ ನೀಡಿದಿ ನೋಡ. ನಾ ಸಂತಿ ಮಾಡಬೇಕಪಾ ಬರ್ತೆನಿ.ನಮ್ಮ ನಮ್ಮ ನಮಸ್ಕಾರ


Comments

ಇವುಗಳನ್ನೂ ಓದಿ

ವರ್ಧನ ಸಾಮ್ರಾಜ್ಯದ ಇತಿಹಾಸ

ವರ್ಧನ ಸಾಮ್ರಾಜ್ಯದ ಇತಿಹಾಸ ಗುಪ್ತ ಸಾಮ್ರಾಜ್ಯದ ಅವನತಿಯ ನಂತರ ಉತ್ತರ ಭಾರತದಲ್ಲಿ ಅನೇಕ ಚಿಕ್ಕ ಚಿಕ್ಕ ಸಂಸ್ಥಾನಗಳು ಸ್ಥಾಪಿಸಲ್ಪಟ್ಟವು. ಅವುಗಳಲ್ಲಿ ವರ್ಧನ ಸಾಮ್ರಾಜ್ಯವೂ ಒಂದು. ಈ ಸಾಮ್ರಾಜ್ಯದ ಸ್ಥಾಪಕ ಪ್ರಭಾಕರ ವರ್ಧನ. ಅವನ ರಾಜಧಾನಿ ಥಾನೇಶ್ವರ. ಹೀಗಾಗಿ ಇವರನ್ನು ಥಾನೇಶ್ವರದ ವರ್ಧನರೆಂದೂ ಕರೆಯುತ್ತಿದ್ದರು. ಪ್ರಭಾಕರ ವರ್ಧನ ಶಕ್ತಿಶಾಲಿಯೂ ಶೂರನೂ ಆಗಿದ್ದನು. ಆತನಿಗೆ ರಾಜವರ್ಧನ, ಹರ್ಷವರ್ಧನ ಹಾಗೂ ರಾಜಶ್ರೀಯೆಂಬ ಮೂವರು ಮಕ್ಕಳಿದ್ದರು. ಪ್ರಭಾಕರ ವರ್ಧನನ ಮರಣದ ನಂತರ ರಾಜವರ್ಧನನು ಪಟ್ಟಕ್ಕೆ ಬಂದನು. ಆದರೆ ಧುರ್ಧೈವದಿಂದ ಆತನ ಕೊಲೆಯಾಗುತ್ತದೆ. ಹೀಗಾಗಿ ಹರ್ಷವರ್ಧನನು ಕ್ತಿ.ಶ.606 ರಿಂದ ಕ್ರಿ.ಶ 647 ರವರೆಗೆ ರಾಜ್ಯಭಾರ ಮಾಡುತ್ತಾನೆ.  ಹರ್ಷವರ್ಧನನು ಮಾಳ್ವ ಹಾಗೂ ಕನೋಜದ ಮೇಲೆ ದಂಡೆತ್ತಿ ಹೋಗಿ ಸದೆಬಡಿಯುತ್ತಾನೆ.ಹರ್ಷವರ್ಧನನ ತಂಗಿ ರಾಜಶ್ರೀಯನ್ನು ಮೌಖೇರಿಯ ಗೃಹವರ್ಮನಿಗೆ ವಿವಾಹ ಮಾಡಿ ಕೊಡಲಾಗಿರುತ್ತದೆ. ಮಾಳ್ವದ ದೇವಗುಪ್ತನು ಗೃಹವರ್ಮನನ್ನು ಕೊಲೆಗೈದು, ರಾಜಶ್ರಿಯನ್ನು ಬಂಧನದಲ್ಲಿಟ್ಟಿರುತ್ತಾನೆ. ಇದನ್ನು ಸಹಿಸದ ಅಂದಿನ ರಾಜ ರಾಜವರ್ಧನನು ಆತನ ಮೇಲೆ ದಂಡೆತ್ತಿಹೋಗಿ ಸೋಲಿಸಿರುತ್ತಾನೆ. ಮುಂದೆ ಗೌಡ ದೇಶದ ಶಶಾಂಕನು ಮಿತ್ರನ ವೇಷ ಧರಿಸಿ ಬಂದು ರಾಜವರ್ಧನನ ಕೊಲೆ ಮಾಡುತ್ತಾನೆ. ಹರ್ಷವರ್ಧನ ಹರ್ಷವರ್ಧನನು ಬಲುಶಕ್ತಿಶಾಲಿ ಸಾಮ್ರಾಟನಾಗಿದ್ದು ಸುಮಾರು 40 ವರ್ಷಗಳ ಕಾಲ ಆಳ್ವಿಕೆ ನಡೆಸಿದ. ಆತನ ಸಾಮ್ರಾಜ್ಯವು ಉತ್ತರದಲ್ಲಿ