Skip to main content

ಮರೆಯಲಾರದ ಮಾಣಿಕ್ಯ

*ಏನ್ ಚಂದ ಕಾಣಸ್ತಿಯಾ ಈಚಲ ಮರದವ್ವ
ನಾನು ನೀನು ಸೇರಿ ಬಿಟ್ಟರೆ ಎಂಥಾ ಮಜನವ್ವ
ಕಷ್ಟದಾಗಿದ್ದರೂ ನಗಸ್ತಿಯಾ,ಸುಖದಾಗಿದ್ದರೂ ನಗಸ್ತಿಯಾ
ಏನ್ ಬಿಟ್ಟರೂ ಬೀಡತೇನ್ ಕಾಣೆ ಈಚಲ ಮರದವ್ವ ಸಾಯೋತನಕಾ ನಿನ್ನ ಅಡಿಯಲ್ಲಿ ಬಾಳ್ತೆವ್ವ ಕಣವ್ವ
  ಎಂದು ಗಟಗಟನೇ ಸೋಮರಸವನ್ನು ಒಂದೇ ಸಲ ಗಟಗಟನೇ ಕುಡಿದುಬಿಟ್ಟ ಚಂಚಲಮನಸ್ಸಿನ ಚೆಲುವಣ್ಣ...ಅದಾಗಲೇ ಕುಡಿತದ ದಾಸನಾಗಿ ಬಿಟ್ಟಿದ್ದ ಚೆಲುವಣ್ಣ ತಾನು B.A.B.Ed... M.A ಮಾಡಿದ್ದು ಮರೆತುಬಿಟ್ಡಿದ್ದ..ಸರಕಾರಿ ನೌಕರಿಗೆ ಪ್ರಯತ್ನ ಪಟ್ಟರೂ ಸಿಕ್ಕಿರಲಿಲ್ಲ..ಬೇರೆ ಯಾವ ಕೆಲಸವನ್ನು ಮಾಡಲು ಮನಸ್ಸು ಒಪ್ಪುತ್ತಿರಲಿಲ್ಲ..ಜಮೀನು ಎರಡು ಎಕರೆಯಿದ್ದರೂ ಅದರಲ್ಲಿ ದುಡಿಯುವ ಮನಸ್ಸು ಇರಲಿಲ್ಲ..ಮಳೆಯ ಆಶ್ರಯ ವಾಗಿದ್ದ ಜಮೀನು ಏನೋ ಅವನಿಗೆ ಹೊಲದಲ್ಲಿ ಕೆಲಸ ಮಾಡುವ ಬಗ್ಗೆ ಆಸಕ್ತಿ ತಳೆಯಲಿಲ್ಲ..ಚೆಲುವಣ್ಣ ನ ತಂದೆ ನೀರಾವರಿ ಇಲಾಖೆಯಲ್ಲಿ SDA ಆಗಿ ಕೆಲಸ ನಿರ್ವಹಿಸುತ್ತಿದ್ದರು..ತಾಯಿ ಗೃಹಿಣಿ..ಚೆಲುವಣ್ಣ ನ ತಮ್ಮ ಚಂದ್ರಣ್ಣ..B.E ಮುಗಿಸಿ ಬೆಂಗಳೂರಿನ ಪ್ರತಿಶ್ಠಿತ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ...ಅವನಿಗೊಬ್ಬಳು ತಂಗಿ ಇದ್ದಳು..
       ಅವರದು ಹೋಬಳಿ ಮಟ್ಟದ ಊರು..ಆದರೂ ಎರಡೆರಡು ಪ್ರೌಢಶಾಲೆ,ನಾಲ್ಕು ಪ್ರಾಥಮಿಕ ಶಾಲೆ,ನಾಲ್ಕು ಅಂಗನವಾಡಿ ಕೇಂದ್ರ ಗಳು ಹೀಗೆ ಎಲ್ಲ ವ್ಯವಸ್ಥೆ ಯಿಂದ ಕೂಡಿತ್ತು ಆ ಊರು..ತಮ್ಮ ಚಂದ್ರಣ್ಣ ಊರಿನಲ್ಲಿ ನಡೆಯುವ ಶಿವರಾತ್ರಿ ಜಾತ್ರೆಗೆ,ಜಾಗರಣೆಗೆ ತಪ್ಪದೇ ಬಂದು ಹೋಗುತ್ತಿದ್ದನು..ಪ್ರತಿಸಲದಂತೆ ಈ ಸಲವೂ ಚಂದ್ರು ಶಿವರಾತ್ರಿ ಜಾತ್ರೆಗೆ ಬಂದು ಜಾತ್ರಾ ಸನ್ನಿವೇಶವನ್ನೂ ಕಣ್ತುಂಬಿಕೊಂಡು ಸಂತಸಪಡುತ್ತಿದ್ದ...ಆಗ ಇದ್ದಕ್ಕಿದ್ದಂತೆ ಚೆಲವಣ್ಣನು ಏ ಚಂದ್ರು ನೀನು ನನ್ನ ತಮ್ಮನಲ್ಲವೇ??? ಬಾ!! ಬಾರೋ ಕುಣಿದು ಕುಪ್ಪಳಿಸೋಣ ಬಾರೋ ಏ ಎಂದು ಹೇಳಿದಾಗ ಚಂದುವಿಗೆ ದಿಗಿಲೋ ದಿಗಿಲು..ಆಶ್ಚರ್ಯ ವೋ ಆಶ್ಚರ್ಯ!!!! ನಮ್ಮಣ್ಣ ಚೆಲವಣ್ಣ ಕುಡಿತದ ಚಟಕ್ಕೆ ದಾಸನಾಗಿದ್ದಾನೆ ಎಂದು ಅವನನ್ನು ತನ್ನ ಗಾಡಿಯಲ್ಲಿ‌ ಕುಳ್ಳರಿಸಿಕೊಂಡು ಮನೆಗೆ ಬಂದನು..ತನ್ನ ತಂದೆ ತಾಯಿ ತಂಗಿಗೆ ಪ್ರಶ್ನೆಗಳ ಸುರಿಮಳೆಯನ್ನೆ ಹರಿಸಿದನು ಚಂದ್ರಣ್ಣ...ನನ್ನಿಂದ ಈ ವಿಷಯವನ್ನ ಏಕೆ ಮುಚ್ಚಿಟ್ಟಿರಿ ಎಂದು ಎಲ್ಲರನ್ನು ತರಾಟೆಗೆ ತೆಗೆದುಕೊಂಡನಾತ..ಆಗ ಅಪ್ಪನೆಂದನು ಏನು ಮಾಡಲಿ ಮಗನೇ ನಿನ್ನ ಅಣ್ಣನ ದುರಾವಸ್ಥೆಯನ್ನು ಕಂಡು ನಾನು ಮರುಗದ ದಿನಗಳಿಲ್ಲ..ನಿನ್ನವ್ವ ಮಾಡದ ಪೂಜೆ ಪುನಸ್ಕಾರಗಳಿಲ್ಲ..ಎಲ್ಲಾ ವಿಧಿಯ ಆರ್ಭಟ!!!!ಏನು ಮಾಡಲಿ ನಾನು ಎಂದು ತನ್ನ ಮನದಾಳದ ಕೊರಗನ್ನು ತೋಡಿಕೊಂಡನು ಅಪ್ಪ..ಆಗ ಚಂದ್ರು ಇದಕ್ಕೆ ಕಾರಣವೇನೆಂದು ಕೇಳಿದಾಗ ಅವನದು ತಪ್ಪಿದೆ..ಜೊತೆಗೆ ಗಾಯದ ಮೇಲೆ ತುಪ್ಪ ಸುರಿದಂತೆ ಆ ಕಡೆಮನಿ   ಕೆಂಪರಾಜುವಿನ ಮಗ ಕೋದಂಡನ ಕೈವಾಡ...ನಮ್ಮ ಮನೆತನಕ್ಕೂ,ಕೆಂಪರಾಜುವಿನ ಮನೆತನಕ್ಕೂ ತಲತಲಾಂತರಗಳಿಂದ ಕಾದಾಟವಿರುವುದು ನಿನಗೆ ಗೊತ್ತೆಯಿದೆ...ಕೋದಂಡನು ಚೆಲವಣ್ಣನಿಗೆ ಈ ಚಟ ಅಂಟಿಸಿ ಯಾರಿಗೂ ಗೊತ್ತಿಲ್ಲದಂತೆ ತನ್ನ ವ್ಯವಹಾರದಲ್ಲಿ ಮಗ್ನನಾಗಿಬಿಟ್ಡಿದ್ದಾನೆ...ಆದರೆ ನಿಮ್ಮಣ್ಣನಿಗೆ ಬುದ್ದಿ ಬೇಡವೇ... ಅವರ ಬಲೆಗೆ ಬಿದ್ದು ವಿಲಿ ವಿಲಿ ಒದ್ದಾಡುತ್ತಿದ್ದಾನೆ..ಯೋಗಿ ಪಡೆದಿದ್ದು ಯೋಗಿಗೆ..ಜೋಗಿ ಪಡೆದಿದ್ದು ಜೋಗಿಗೆ ಎನ್ನುವಂತಾಗಿದೆ ಚೆಲವಣ್ಣನ ಪರಿಸ್ಥಿತಿ ಎಂದು ಕೊರಗಿದನು ಅವರ ತಂದೆ...ಆಗ ತನ್ನಣ್ಣನ ಈ ಸ್ಥಿತಿ ನೋಡಿ ಮಮ್ಮಲ ಮರುಗಿದನು ತಮ್ಮ ಚಂದ್ರು..ಸಣ್ಣವನಿದ್ದಾಗ ನನಗೆ ಊಟ ಮಾಡಿಸಿದ್ದು,ಆಟ ಆಡಿಸಿದ್ದು,ಈಜು ಕಲಿಸಿದ್ದು,ಜ್ವರ ಬಂದಾಗ ತಂದೆಯಂತೆಯೇ ಜೋಪಾನ ಮಾಡಿದ್ದು ಎಲ್ಲವೂ ಅವನ ಕಣ್ಣ ಮುಂದೆಯೇ ಹಾದು ಹೋಯಿತು..ಎಲ್ಲವನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತನು...
   ಹೇಗಾದರೂ ಮಾಡಿ ಅಣ್ಣನಿಗೆ ಮರುಜನ್ಮ ಕೊಡಬೇಕೆಂದು...ಅವನ ಬಾಳನು ಹಸನು ಮಾಡಬೇಕೆಂದುಕೊಂಡನು ಚಂದ್ರ... ತನ್ನ ತಂದೆ ತಾಯಿಯನ್ನು ಕರೆದು ಈ ವಿಷಯವನ್ನು ತಿಳಿಸಿದನು..ತಾನು‌ ನೌಕರಿಗೆ ಸೇರಿದಾಗಿನಿಂದ ಸುಮಾರು ಹತ್ತು ಲಕ್ಷ ರೂಪಾಯಿಗಳನ್ನು ಉಳಿತಾಯ ಮಾಡಿದ್ದನು. ಅದನ್ನು‌ ಅಣ್ಣನ ಮುಂದಿನ ಭವಿಷ್ಯತ್ತಿಗಾಗಿ ವಿನಿಯೋಗಿಸೋಣವೆಂದು ನಿರ್ಧಸಿದನು...ತನ್ನ ತಂಗಿಯನ್ನು ಕರೆದು ನಿನ್ನ ಮದುವೆಗೆಂದು ತೆಗೆದಿಟ್ಟಿದ್ದ ಹಣವೆಂದು...ಕ್ಷಮಿಸು ಅಣ್ಣನ ಮುಂದಿನ ಬದುಕಿನ ಹಾದಿಗಾಗಿ ಖರ್ಚು ಮಾಡುವ ಪ್ರಸಂಗ ಬಂದಿದೆಯೆಂದು ತಿಳಿಸಿದನು..ಅವಳು ತುಂಬು ಹೃದಯದಿಂದ ಚಂದ್ರಣ್ಣ...ಮೊದಲು ಅಣ್ಣನ ಭವಿಷ್ಯ.. ಆಮೇಲೆ ನನ್ನ ಮದುವೆಯ ಆಲೋಚನೆ ಎಂದು ಚಕ್ಕಂತಾ ಉತ್ತರಿಸಿದಳು ತಂಗಿ ಸುಲೋಚನಾ...ಎಲ್ಲರೂ ಖುಷಿ ಪಟ್ಟರು...ಆದರೆ ಅಣ್ಣ ಚೆಲವನಿಗೆ ಯಾವ ಕೆಲಸ ಮಾಡಿಸಬೇಕು..ಎನ್ನುವ ಚಿಂತೆ ಕಾಡತೊಡಗಿತು...ಅವನನ್ನೆ ಕೇಳಿದರಾಯಿತು...ಚೆಲುವಣ್ಣ ನಿನಗೆ ಯಾವ ಕೆಲಸದಲ್ಲಿ ಆಸಕ್ತಿ ಇದೆ ಎಂದು ಕೇಳಿದರು..ಆಗ ಅವನು ನನಗೆ ನನಗೆ ಹೊಲದಲ್ಲಿ ನೀರು ಬರುವ ವ್ಯವಸ್ಥೆ ಮಾಡಿಕೊಟ್ಟರೆ ವ್ಯವಸಾಯ ಮಾಡುವೆನೆಂದನು...ಆಗ ಎಲ್ಲರೂ ವಿಚಾರ ಮಾಡಿ ತಮ್ಮ ಎರಡು ಎಕರೆ ಜಮೀನನ ಹತ್ತಿರವಿರುವ ಹೊಳೆಯಿಂದ ಪೈಪಲೈನ್ ಮಾಡಿಸಿ ಅಲ್ಲಿ ಕಬ್ಬು ಬೆಳೆದರೆ ಉತ್ತಮವೆಂದು ನಿರ್ಧರಿಸಿ ಹೊಲದಲ್ಲಿ ನೀರಿನ ವ್ಯವಸ್ಥೆ ಮಾಡಿ ಕಬ್ಬು ಬೆಳೆ ತೆಗೆದರು....ಜೊತೆಗೆ ಊರಲ್ಲಿ‌ ಆಗ ತಾನೇ ಪದವಿಪೂರ್ವ ಕಾಲೇಜ ತಲೆಎತ್ತಿತ್ತು..ಅಲ್ಲಿ ಝರಾಕ್ಸ ಮಷಿನ್ ಹಾಗೂ ಕಂಪ್ಯೂಟರ್ ಕೆಲಸದ ಅಗತ್ಯವಿದೆ ಎಂದು ತಿಳಿದು ಚೆಲುವಣ್ಣನಿಗೆ ಎರಡು ಝರಾಕ್ಸ ಮಷಿನ್ ಹಾಗೂ ಒಂದು ಕಂಪ್ಯೂಟರ್ ತಂದು ಅಲ್ಲಿ ಒಬ್ಬ ಕೆಲಸದವರನ್ನು ನೇಮಿಸಿದರು...ನೀವು ನಂಬಲಿಕ್ಕಿಲ್ಲ..ಕಬ್ಬು ಅವನ ಬಾಳಿಗೆ ಸಿಹಿಯಾಯಿತು..ಝರಾಕ್ ಮಷಿನ್ ಅವನನ್ನು ಕುಬೇರ ನನ್ನಾಗಿಸಿತು..ಕೇವಲ‌ ಮೂರು ವರ್ಷಗಳಲ್ಲಿ ಅವನ ಆದಾಯ ಹತ್ತತ್ತಿರ ಇಪ್ಪತ್ತರಿಂದ ಇಪ್ಪತ್ತೈದು ಲಕ್ಷವಾಯಿತು...ಮತ್ತೈದು ಎರಡು ಎಕರೆ ಜಮೀನನ್ನು ಕೊಂಡುಕೊಂಡರು..ಜೊತೆಗೆ ಅವರ ತಂದೆ SDA ವೃತ್ತಿ ಯಿಂದ ನಿವೃತ್ತಿ ಹೊಂದಿದರು..ಅವರ ನಿವೃತ್ತಿ Fund ಕೂಡ ಇಪ್ಪತ್ತೈದು ಲಕ್ಷ ದೊರೆಯಿತು...ಒಟ್ಟಾರೆಯಾಗಿ ಈಗ ಚೆಲುವಣ್ಣನ ಜೀವನ ಒಂದು ಹಂತಕ್ಕೆನು‌ ಇಡೀ ಊರಿಗೆ ಮಾದರಿ ಯುವಕನಾದನು..ಆದರ್ಶ ರೈತನಾದನು...ಸಾವಯವ ಕೃಷಿ ಯನ್ನು ಕೈಗೊಂಡ ಚೆಲುವಣ್ಣ ಹತ್ತಾರು,ನೂರಾರು ರೈತರಿಗೆ ಅದರ ರುಚಿಯನ್ನು ಉಣಬಡಿಸಿದನು...ಒಂದ್ಸಲ ತಮ್ಮ‌ ಚಂದ್ರು ಹದಿನೈದು ರಜೆ ಹಾಕಿ ತಂಗಿ ಮದುವೆಯಿದ್ದ ನಿಮಿತ್ಯ ಮನೆಗೆ ಬಂದನು...ಆಗ ಚಂದ್ರಣ್ಣ ಅವನನ್ನು ಗಟ್ಟಿಯಾಗಿ ತಬ್ಬಿಕೊಂಡನು..ನಾನು‌ ದೊಡ್ಡಣ್ಣನಾಗಿ ನಿಮಗೆ ನೆರಳಾಗಬೇಕು...ಅದ ಬಿಟ್ಟು ನಿಮ್ಮಿಂದ ಸಾಕಷ್ಟು ದುಡಿಸಿಕೊಂಡೆನು...ಚಂದ್ರು ನೀನು ವಯಸ್ಸಿನಲ್ಲಿ ಚಿಕ್ಕವನು..ಆದರೆ ಬುದ್ದಿಯಲ್ಲಿ‌ ಎತ್ತರೆತ್ತರ ಎಂದು ಅವನನ್ನು ಕೊಂಡಾಡಿದನು...ಆನಂದದ ಭಾಷ್ಪ ತನ್ನಿಂದ ತಾನೇ ಕೆಳಗುದಿರಿತು...
    ತಮ್ಮ ತಂಗಿಯ ಮದುವೆಯನ್ನು ವಿಜೃಂಭಣೆಯಿಂದ ಮಾಡಿ  ಗಂಡನ ಮನೆಗೆ ಕಳಿಸಿಕೊಟ್ಟರು..ಅವಳಿಗೂ ತನ್ನ ಇಬ್ಬರೂ ಅಣ್ಣಂದಿರು ಜೀವನದಲ್ಲಿ ಮುಂದೆ ಬಂದರು ಎಂದು ಷಾಣೇ ಖುಷಿ ಪಟ್ಟಳು...
       ಸಹೋದರಿಯ ವಿವಾಹವಾಗಿ ಒಂದು ವರ್ಷ ಕಳೆಯಿತು..ಈಗ ಒಂದ್ಸಲ್ ಅವಳು ತವರು ಮನೆಗೆ ಬಂದು ಇನ್ನು ಅಪ್ಪ ಅಮ್ಮನಿಗೆ ವಯಸ್ಸಾಗುತ್ತಾ ಬಂದಿತು..ಅಣ್ಣಂದಿರಾ ನೀವಿಬ್ಬರೂ ಮದುವೆಯಾಗಿಬಿಡಿ ಎಂದಳು ಸಹೋದರಿ.. ಅಷ್ಟರಲ್ಲಿ ಯಾರೋ ಮನೆಗೆ ಬಂದಂತಾಯಿತು ನೋಡಿದರೆ  ತಮ್ಮ ಶತ್ರುಗಳಾದ ಕೊದಂಡ,ಕೆಂಪರಾಜು ಹಾಗೂ ಅವನ ಮನೆ ಕಡೆಯವರೆಲ್ಲರಿದ್ದರು...ಅವರೆಲ್ಲರೂ ಚೆಲುವ ಹಾಗೂ ಅವರ ತಂದೆ ತಾಯಿ ಎಲ್ಲರೂ ಕಾಲಿಗೂ ಬಿದ್ದು ನಮ್ಮನ್ನ ಕ್ಷಮಿಸಿರಿ..ನಿಮ್ಮ ಮನೆತನ‌ ಹಾಳು ಮಾಡಲು ಹೋಗಿ ನಮ್ಮ ಮನೆಯೇ ಹಾಳಾಯಿತು..ನಮ್ಮ ವ್ಯವಹಾರವೆಲ್ಲಾ ನಷ್ಟದ ಕೂಪಾಯಿತು...ಸಾಲಗಾರರು ಮನೆಗೆ ಬಂದು ಮುತ್ತಿದಾಗ ಇದೇ ಚೆಲುವಣ್ಣ ಎಲ್ಲ ಸಾಲವನ್ನು ತೀರಿಸಿ ಸಾಕ್ಷಾತ ಭಗವಂತನೇ ಆದ ಎಂದಾಗ ಹೌದೇನು‌ ಅಂದಾಗ ಹೌದು ಅಪ್ಪಾಜಿ ಕೋದಂಡ ಎಷ್ಟಾದರೂ ನನ್ನ ಗೆಳೆಯ ...ಅವಾ ನನಗೆ ಮೋಸ ಮಾಡಿದರೂ ನನ್ನ ಮಾನವೀಯತೆಯ ಭಾವ ತಡೆಯದೇ ಅವನಿಗೂ ಸೇವೆ ಮಾಡಿದೆ ಅಷ್ಟೆ ಎಂದಾಗ ಚೆಲವಣ್ಣನ ತಂದೆ ಭೇಷ ಮಗನೇ ಭೇಷ...ನೀನು ನನ್ನ ಹೊಟ್ಟೆಯಲ್ಲಿ ಹುಟ್ಟಿದ್ದು ಸಾರ್ಥಕವಾಯಿತೆಂದು ಆನಂದ ಭಾಷ್ಪಗಳನ್ನುದುರಿಸಿ ಗಟ್ಡಿಯಾಗಿ ಮಗನನ್ನು ತಬ್ಬಿಕೊಂಡನು...
     ನಂತರ ಚೆಲುವಣ್ಣ ಹಾಗೂ ಚಂದ್ರಣ್ಣ ಮದುವೆಯು ವಿಜೃಂಭಣೆಯಿಂದ ನಡೆಯಿತು..ಇದೇ ಕೆಂಪರಾಜನ ಮನೆಯವರು ಮುಂದೆ ನಿಂತು ಎಲ್ಲ ಕೆಲಸವನ್ನು ಮದುವೆಯ ಎಲ್ಲ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.. ಕೊನೆಯವರೆಗೆ ಎರಡು ಕುಟುಂಬದವರ ಬಾಂಧವ್ಯ ಅತ್ಯುತ್ತಮ ವಾಗಿ ಸಾಗಿತು...ಇತ್ತ ಚಂದ್ರಣ್ಣ ನಿಗೆ ಮರೆಯಲಾರದ ಮಾಣಿಕ್ಯ ನೆಂದು ಇಡೀ ಊರಿನ ಜನ ಕೊಂಡಾಡಿದರು...
*ಓದಿ ಹರಿಸಿ...ಸಾಹಿತ್ಯ ಉಳಿಸಿ..ಬೆಳೆಸಿ.*..

Comments

ಇವುಗಳನ್ನೂ ಓದಿ

ವರ್ಧನ ಸಾಮ್ರಾಜ್ಯದ ಇತಿಹಾಸ

ವರ್ಧನ ಸಾಮ್ರಾಜ್ಯದ ಇತಿಹಾಸ ಗುಪ್ತ ಸಾಮ್ರಾಜ್ಯದ ಅವನತಿಯ ನಂತರ ಉತ್ತರ ಭಾರತದಲ್ಲಿ ಅನೇಕ ಚಿಕ್ಕ ಚಿಕ್ಕ ಸಂಸ್ಥಾನಗಳು ಸ್ಥಾಪಿಸಲ್ಪಟ್ಟವು. ಅವುಗಳಲ್ಲಿ ವರ್ಧನ ಸಾಮ್ರಾಜ್ಯವೂ ಒಂದು. ಈ ಸಾಮ್ರಾಜ್ಯದ ಸ್ಥಾಪಕ ಪ್ರಭಾಕರ ವರ್ಧನ. ಅವನ ರಾಜಧಾನಿ ಥಾನೇಶ್ವರ. ಹೀಗಾಗಿ ಇವರನ್ನು ಥಾನೇಶ್ವರದ ವರ್ಧನರೆಂದೂ ಕರೆಯುತ್ತಿದ್ದರು. ಪ್ರಭಾಕರ ವರ್ಧನ ಶಕ್ತಿಶಾಲಿಯೂ ಶೂರನೂ ಆಗಿದ್ದನು. ಆತನಿಗೆ ರಾಜವರ್ಧನ, ಹರ್ಷವರ್ಧನ ಹಾಗೂ ರಾಜಶ್ರೀಯೆಂಬ ಮೂವರು ಮಕ್ಕಳಿದ್ದರು. ಪ್ರಭಾಕರ ವರ್ಧನನ ಮರಣದ ನಂತರ ರಾಜವರ್ಧನನು ಪಟ್ಟಕ್ಕೆ ಬಂದನು. ಆದರೆ ಧುರ್ಧೈವದಿಂದ ಆತನ ಕೊಲೆಯಾಗುತ್ತದೆ. ಹೀಗಾಗಿ ಹರ್ಷವರ್ಧನನು ಕ್ತಿ.ಶ.606 ರಿಂದ ಕ್ರಿ.ಶ 647 ರವರೆಗೆ ರಾಜ್ಯಭಾರ ಮಾಡುತ್ತಾನೆ.  ಹರ್ಷವರ್ಧನನು ಮಾಳ್ವ ಹಾಗೂ ಕನೋಜದ ಮೇಲೆ ದಂಡೆತ್ತಿ ಹೋಗಿ ಸದೆಬಡಿಯುತ್ತಾನೆ.ಹರ್ಷವರ್ಧನನ ತಂಗಿ ರಾಜಶ್ರೀಯನ್ನು ಮೌಖೇರಿಯ ಗೃಹವರ್ಮನಿಗೆ ವಿವಾಹ ಮಾಡಿ ಕೊಡಲಾಗಿರುತ್ತದೆ. ಮಾಳ್ವದ ದೇವಗುಪ್ತನು ಗೃಹವರ್ಮನನ್ನು ಕೊಲೆಗೈದು, ರಾಜಶ್ರಿಯನ್ನು ಬಂಧನದಲ್ಲಿಟ್ಟಿರುತ್ತಾನೆ. ಇದನ್ನು ಸಹಿಸದ ಅಂದಿನ ರಾಜ ರಾಜವರ್ಧನನು ಆತನ ಮೇಲೆ ದಂಡೆತ್ತಿಹೋಗಿ ಸೋಲಿಸಿರುತ್ತಾನೆ. ಮುಂದೆ ಗೌಡ ದೇಶದ ಶಶಾಂಕನು ಮಿತ್ರನ ವೇಷ ಧರಿಸಿ ಬಂದು ರಾಜವರ್ಧನನ ಕೊಲೆ ಮಾಡುತ್ತಾನೆ. ಹರ್ಷವರ್ಧನ ಹರ್ಷವರ್ಧನನು ಬಲುಶಕ್ತಿಶಾಲಿ ಸಾಮ್ರಾಟನಾಗಿದ್ದು ಸುಮಾರು 40 ವರ್ಷಗಳ ಕಾಲ ಆಳ್ವಿಕೆ ನಡೆಸಿದ. ಆತನ ಸಾಮ್ರಾಜ್ಯವು ಉತ್ತರದಲ್ಲಿ