ಅಮಿತನಿಗೆ ಅಂದೇಕೋ ಕಳವಳ, ಹತಾಶೆ , ಬೇಸರ,ಜಿಗುಪ್ಸೆ ಬೆಳಿಗ್ಗೆ ಹಾಸ್ಪಿಟಲ್ ಗೆ ಹೋಗಿ ಕೋವಿಡ್ ಟೇಸ್ಟ ಮಾಡಲಿಕ್ಕೆ ಸ್ವ್ಯಾಬ್ ಕೊಟ್ಟು ಬಂದಾಗಿನಿಂದ
ಎದೆಯಲ್ಲಿ ಎನೋ ಒಂಥರಾ ದುಗುಡ ಮೈಯ್ಯಲ್ಲಾ ಬಿಸಿಯಾದಂತ ಅನುಭವ ಗಂಟಲಲ್ಲಿ ತುರಿಕೆಯಾದಂತ ಅನುಭವ . ರಿಜಲ್ಟ ಏನು ಬರತ್ತದೇಯೋ ಎಂಬ ಚಿಂತೆ.
ನೇರವಾಗಿ ತನ್ನ ಕೋಣೆಗೆ ಹೋಗಿ ಬಾಗಿಲನ್ನು ಲಾಕ್ ಮಾಡಿಕೊಂಡು ಯೋಚಿಸುತ್ತಾ ಕುಳಿತ . ಏನಾದರು ರಿಜಲ್ಟ ಕೋವಿಡ್ ಪಾಸಿಟಿವ್ ಎಂದು ಬಂದರೆ ? ಅಯ್ಯೋ ವಿಧಿಯೇ ಇನ್ನು ಸಾವು ಮನೆ ಬಾಗಿಲಿಗೆ ಬಂದಿತೇ? ಜನಾ ನನ್ನ ಹೇಗೆ ನಡೆಸಿಕೊಂಡಾರು ? ಎಂಬ ಭಯ ಆತಂಕ ಮನೆ ಮಾಡಿತು.ಕರೋನಾ ರೋಗದಿಂದ ಸತ್ತವರ ಶವ ಸಂಸ್ಕಾರ ಮಾಡುವುದನ್ನು ಟಿ ವಿ ಯಲ್ಲಿ ದಿನವೀಡಿ ತೋರಿಸುದನ್ನು ನೋಡಿದ್ದ ಆತನಿಗೆ ನನ್ನನ್ನು ಅದೇ ರೀತಿ ಸತ್ತ ಪ್ರಾಣಿಗಳನ್ನು ಚಿಮ್ಮವಂತೆ ಚಿಮ್ಮುತ್ತಾರಲ್ಲ ಎಂದು ಯೋಚಿಸಿದ. ಮತ್ತು ಮೊನ್ನೆ ಯಾರೋ ಒಬ್ಬ ತಾತ ಸತ್ತನಲ್ಲ ಆತ ಹೆಣ ಒಯ್ಯಲು ಯಾರೂ ಬರಲಿಲ್ಲ ಯಾರೋ ಮೂರು ಜನ ತಮ್ಮ ಬೈಕ್ ನಲ್ಲಿ ಒಯ್ದು ದಫನ ಮಾಡಿದ್ದು ಟಿ ವಿ ಯಲ್ಲಿ ನೋಡಿದ್ದು ನೆನಪಾಗಿ ಬಿಕ್ಕಿ ಬಿಕ್ಕಿ ಅತ್ತ .ಒಂದು ಆಲೋಚನೆ ಹೊಳೆಯಿತು. ಹೇಗೂ ನಾನು ಆಸ್ಪತ್ರೆಗೆ ಹೋಗಿ ಟೆಸ್ಟ್ ಮಾಡಿಸಿದ್ದು ಯಾರಿಗೂ ಗೊತ್ತಿಲ್ಲ. ಗೊತ್ತಾಗುವ ಪೂರ್ವದಲ್ಲಿಯೇ ಆತ್ಮಹತ್ಯೆ ಮಾಡಿಕೊಂಡರೆ ಹೇಗೆ ಎಂದುಕೊಂಡ. ಮನಸ್ಸಿಗೆ ಅದೇ ಸರಿ ಎನಿಸಿತು. ತನ್ನವರೆಲ್ಲ ಇದ್ದು ಅನಾಥ ಶವವಾಗಿ ಸಂಸ್ಕಾರವಿಲ್ಲದೆ ಮಣ್ಣು ಸೇರುವುದು ಅವನಿಗೆ ಇಷ್ಟವಿರಲಿಲ್ಲ ಹಾಗಾಗಿ ಇದೇ ಸರಿ ಎನಿಸಿತು ಅಮಿತನಿಗೆ.
ಕೋಣೆಯಲ್ಲಿ ಆ ಕಡೆ ಈ ಕಡೆ ನೋಡಿದ ತನ್ನ ತಂಗಿ ರಾಧಾಳ ವೇಲ್ ಹ್ಯಾಂಗರ್ ನಲ್ಲಿ ನೇತಾಡುತಿತ್ತು. ಅದನ್ನು ತೆಗೆದುಕೊಂಡು ಗಟ್ಟಿಯಾಗಿ ಹಗ್ಗದಂತೆ ಸುತ್ತತೊಡಗಿದ. ಅದು ಬಿಗಿಗೊಂಡು ಹಗ್ಗದಂತೆ ಗಟ್ಟಿಯಾಯಿತು. ಅದರ ಒಂದು ತುದಿಯನ್ನು ಮೇಲೆ ನೇತಾಡುತ್ತಿದ್ದ ಫ್ಯಾನ್ ಗೆ ಸ್ಟೂಲ್ ಇಟ್ಟು ಕಟ್ಟಿದ.ಮತ್ತೊಂದು ತುದಿಯನ್ನು ಕುತ್ತಿಗೆಗೆ ಬಿಗಿಯಾಗಿ ಕಟ್ಟಿ ಇನ್ನೆನು ಜಿಗಿಯಬೇಕು ಮೊಬೈಲ್ ರಿಂಗಾಯಿತು. ಅರೆ ಇದೊಳ್ಳೆ ಎಂದು ಹೇಗಾದರೂ ಸಾಯುವವನಿದ್ದೇನೆ ಕೊನೆಯದಾಗಿ ಯಾರದು ಎಂದು ನೋಡೋಣ ಎಂದು ಕತ್ತಿಗೆ ಸುತ್ತಿದ ವೇಲ್ ಬಿಚ್ಚಿಕೊಂಡು ಮೊಬೈಲ್ ಎತ್ತಿಕೊಂಡು ನೋಡಿದ ಆಸ್ಪತ್ರೆಯಿಂದ ಬಂದ ಮೆಸೆಜ್ ಎನೆಂದು ಒಪನ್ ಮಾಡಿದ. covid - ಎಂದಿತ್ತು. ಅಯ್ಯೋ ದೇವರೇ ನಾನೆಂಥ ಮೂರ್ಖ ಸುಂದರವಾಗಿ ಬಾಳಬೆಕಾದ ಜೀವನವನ್ನು ಕಳೆದುಕೊಂಡು ಬಿಡುತ್ತಿದ್ದೆ . ಕೇವಲ ನನ್ನ ಋಣಾತ್ಮಕ ವಿಚಾರಗಳಿಂದ ಜೀವವನ್ನೆ ಬಲಿಕೊಡುತ್ತಿದ್ದೆನಲ್ಲ ಎಂದು ತನ್ನನ್ನು ಪರಿಪರಿಯಾಗಿ ನಿಂದಿಸಿಕೊಂಡ.೯೦,೧೦೦ ವರ್ಷದ ವೃದ್ದರೆ ಕರೋನಾ ಮಹಾಮಾರಿಯನ್ನು ಗೆದ್ದು ಬಂದು ಸಂತೋಷದಿಂದ ಬದುಕುತ್ತಿರುವಾಗ ನಾನೆಂತ ಮೂರ್ಖ ವಿಚಾರ ಮಾಡಿದೆ ಎನ್ನುತ್ತಾ ಫ್ಯಾನ್ ಗೆ ಕಟ್ಟಿದ ವೇಲ್ ಬಿಚ್ಚುತ್ತಾ "ಬಾರದು ಬಪ್ಪದು ,ಬಪ್ಪದು ತಪ್ಪದು" ದೇವರೆ ನೀ ಕೊಟ್ಟ ಕಾಯವಿದು ನೀನಾಗೆ ಒಯ್ಯುವವರೆಗೆ ಎಷ್ಟೇ ಕಷ್ಟ ಬಂದರೂ ನಾನು ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ ಎಂದು ನಿಶ್ಚಯಿಸಿದನು. ಮಾನವ ಜನ್ಮ ಬಲು ದೊಡ್ಡದು ಅದ ಹಾನಿ ಮಾಡಿಕೊಳ್ಳಬೇಡಿರೋ ಹುಚ್ಚಪ್ಪಗಳಿರಾ ಎಂಬ ಪುರಂದರ ದಾಸರ ಪದದ ಸಾಲುಗಳನ್ನು ಹಾಡುತ್ತ ರೂಮಿನ ಬಾಗಿಲು ತೆರೆದು ಸಂತೋಷದಿಂದ ಹೊರನಡೆದನು .
ವಿಷ್ಣುಪ್ರಿಯ
(ಪಿ ಎಮ್ ನಿಕ್ಕಮ್ಮನವರ)
Comments
Post a Comment
ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ