Skip to main content

ಪ್ರಚಲಿತ ಘಟನೆಗಳು

ಪ್ರಚಲಿತ ಘಟನೆಗಳು


ಭೂಮಿಗೆ ಕಾಣದ ಚಂದ್ರನ ಭಾಗದಲ್ಲಿ ಭೂಕುಸಿತ ಉಂಟಾಗಿದೆಯೆಂದು ಅಮೇರಿಕಾದ ನಾಸಾ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಲೂನಾರರ ರೆಕಗ್ನೈಸನ್ಸ ಆರ್ಬಿಟಲ್ ಕ್ಯಾಮೆರಾ ಬಳಸಿ ಈ ವಿದ್ಯಮಾನವನ್ನು ಪತ್ತೆ ಹಚ್ಚಿದ್ದಾರೆ.

ಸುಪ್ರಿಂ ಕೋರ್ಟ್ ನ ಕಲಾಪಗಳನ್ನು ನೇರ ಪ್ರಸಾರ ಮಾಡುವ ಪ್ರಸ್ತಾಪ ಜಾರಿ ಕುರಿತು ತಾವು ಗಂಭೀರವಾಗಿ ಪರಿಶೀಲಿಸುತ್ತಿರುವುದಾಗಿ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ತಿಳಿಸಿದ್ದಾರೆ. ಇದೇ ವೇಳೆ ಕೋರ್ಟ ತೀರ್ಪುಗಳನ್ನು ಪತ್ರಕರ್ತರು ಮತ್ತು ಜನಸಾಮಾನ್ಯರಿಗೆ ಸರಳವಾಗಿ ತಿಳಿಸುವ ಇಂಡಿಕೇಟಿವ
ನೋಟ್ಸ ಎಂಬ ಹೊಸ ವ್ಯವಸ್ಥೆಗೂ ಚಾಲನೆ ನೀಡಿದರು.

ಕೊರೋನಾ ಸಂಭವನೀಯ ಮೂರನೇ ಅಲೆ ಎದುರಿಸಲು ನಾರಾಯಣ ಹೆಲ್ತ್ ನ ಮುಖ್ಯಸ್ಥರಾದ ಡಾ ದೇವಿಪ್ರಸಾದ ಶೆಟ್ಟಿಯವರನ್ನು ಟಾಸ್ಕಪೋರ್ಸನ ಅಧ್ಯಕ್ಷರನ್ನಾಗಿ ರಾಜ್ಯ ಸರ್ಕಾರ ಆಯ್ಕೆ ಮಾಡಿದೆ

ರೋಮ್ ದೇಶದ ಮೊದಲ ಮಹಿಳಾ ಗುಪ್ತಚರ ಸಂಸ್ಥೆಯ ಅಧ್ಯಕ್ಷರಾಗಿ ಎಲಿಜಬೆತ್ ಬೆಲೂನಿ ಆಯ್ಕೆಯಾಗಿದ್ದಾರೆ

ಡ್ಯೂಕ್ ಆಫ್ ಎಡಿನ್ಬರ್ಗ ಎಂದೆ ಕರೆಯಿಸಿಕೊಳ್ಳುತ್ತಿದ್ದ, ಇತ್ತೀಚಿಗೆ ನಿಧನರಾದ ಬ್ರಿಟನ್ ರಾಜಕುಮಾರ ಪ್ರಿನ್ಸ್ ಚಾರ್ಲ್ಸ ಅವರ ಸ್ಮರಣಾರ್ಥವಾಗಿ 4 ಅಂಚೆಚೀಟಿ ಗಳನ್ನು ಬ್ರಿಟನ್ ಸರ್ಕಾರ ಬಿಡುಗಡೆಗೊಳಿಸಿತು

ಕರ್ನಾಟಕದ ಮೊದಲ ಮಹಿಳಾ ಶಿಲ್ಪಿಯೆಂದು ಹೆಸರುವಾಸಿಯಾದ ಕನಕಾಮೂರ್ತಿಯವರು ನಿಧನರಾದರು.

ಟೈಮ್ಸ್ ಮಾಧ್ಯಮ ಸಮೂಹದ ಅಧ್ಯಕ್ಷೆ ಇಂದೂ ಜೈನ್ ನಿಧನರಾದರು

ರಾಜ್ಯದ ಅರಬ್ಬೀ ಸಮುದ್ರದಲ್ಲಿ ತೌಖ್ತೆ ಚಂಡಮಾರುತ ಅಪ್ಪಳಿಸಲಿದೆ. ತೌಖ್ತೆ ಎಂದರೆ ಹಲ್ಲಿ. ಈ ಹೆಸರನ್ನು  ಮ್ಯಾನ್ಮಾರ್ ದೇಶದವರು ನೀಡಿದ್ದಾರೆ.

ಅಂತರರಾಷ್ಟ್ರೀಯ ಸಮೀಕ್ಷೆಯ ಜಾಗತಿಕ ಅಪಾಯಕಾರಿ ನಗರಗಳಲ್ಲಿ ದೆಹಲಿ ಹಾಗೂ ಚೆನೈ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ.

ಬ್ರೆಜಿಲ್‌ನ ಸಾವೋ ಪೌಲೊದಲ್ಲಿ ಸ್ನೇಕ ಐಲ್ಯಾಂಡ ಇದೆ. ಸುಮಾರು 4000 ಹಾವುಗಳು ಅಲ್ಲಿವೆಯಂತೆ.

ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಮಾಜಿ ಸ್ಪಿನ್ನರ್ ರಮೇಶ ಕುಮಾರ ಆಯ್ಕೆಯಾಗಿದ್ದಾರೆ.

ಐಸಿಸಿ ಟೆಸ್ಟ್ ರಾಂಕಿಂಗ್ ನಲ್ಲಿ ಭಾರತ ಮೊದಲ ಸ್ಥಾನದಲ್ಲಿದ್ದರೆ ನ್ಯೂಜಿಲೆಂಡ್ ದ್ವಿತೀಯ ಸ್ಥಾನ ಪಡೆದುಕೊಂಡಿದೆ

ಬಸವಶ್ರೀ ಪ್ರಶಸ್ತಿ
ಚಿತ್ರದುರ್ಗದ ಮುರುಘಾಮಠವು ಈ ಪ್ರಶಸ್ತಿಯನ್ನು ನೀಡುತ್ತದೆ.
2019- ರ ಬಸವಶ್ರೀ ಪ್ರಶಸ್ತಿಯನ್ನು ಸರೋದ ವಾದಕರಾದ ಪಂಡಿತ ರಾಜೀವ ತಾರಾನಾಥರು ಪಡೆದಿದ್ದಾರೆ.
2020 ರ ಬಸವಶ್ರೀ ಪ್ರಶಸ್ತಿಗೆ ಡಾ.ಕಸ್ತೂರಿ ರಂಗನ್ ಆಯ್ಕೆಯಾಗಿದ್ದಾರೆ.
ಈ ಪ್ರಶಸ್ತಿಯು ಐದು ಲಕ್ಷ ನಗದು ಹಾಗೂ ಸ್ಮರಣಿಕೆಯನ್ನಹ ಒಳಗೊಂಡಿರುತ್ತದೆ.


Comments

ಇವುಗಳನ್ನೂ ಓದಿ

ವರ್ಧನ ಸಾಮ್ರಾಜ್ಯದ ಇತಿಹಾಸ

ವರ್ಧನ ಸಾಮ್ರಾಜ್ಯದ ಇತಿಹಾಸ ಗುಪ್ತ ಸಾಮ್ರಾಜ್ಯದ ಅವನತಿಯ ನಂತರ ಉತ್ತರ ಭಾರತದಲ್ಲಿ ಅನೇಕ ಚಿಕ್ಕ ಚಿಕ್ಕ ಸಂಸ್ಥಾನಗಳು ಸ್ಥಾಪಿಸಲ್ಪಟ್ಟವು. ಅವುಗಳಲ್ಲಿ ವರ್ಧನ ಸಾಮ್ರಾಜ್ಯವೂ ಒಂದು. ಈ ಸಾಮ್ರಾಜ್ಯದ ಸ್ಥಾಪಕ ಪ್ರಭಾಕರ ವರ್ಧನ. ಅವನ ರಾಜಧಾನಿ ಥಾನೇಶ್ವರ. ಹೀಗಾಗಿ ಇವರನ್ನು ಥಾನೇಶ್ವರದ ವರ್ಧನರೆಂದೂ ಕರೆಯುತ್ತಿದ್ದರು. ಪ್ರಭಾಕರ ವರ್ಧನ ಶಕ್ತಿಶಾಲಿಯೂ ಶೂರನೂ ಆಗಿದ್ದನು. ಆತನಿಗೆ ರಾಜವರ್ಧನ, ಹರ್ಷವರ್ಧನ ಹಾಗೂ ರಾಜಶ್ರೀಯೆಂಬ ಮೂವರು ಮಕ್ಕಳಿದ್ದರು. ಪ್ರಭಾಕರ ವರ್ಧನನ ಮರಣದ ನಂತರ ರಾಜವರ್ಧನನು ಪಟ್ಟಕ್ಕೆ ಬಂದನು. ಆದರೆ ಧುರ್ಧೈವದಿಂದ ಆತನ ಕೊಲೆಯಾಗುತ್ತದೆ. ಹೀಗಾಗಿ ಹರ್ಷವರ್ಧನನು ಕ್ತಿ.ಶ.606 ರಿಂದ ಕ್ರಿ.ಶ 647 ರವರೆಗೆ ರಾಜ್ಯಭಾರ ಮಾಡುತ್ತಾನೆ.  ಹರ್ಷವರ್ಧನನು ಮಾಳ್ವ ಹಾಗೂ ಕನೋಜದ ಮೇಲೆ ದಂಡೆತ್ತಿ ಹೋಗಿ ಸದೆಬಡಿಯುತ್ತಾನೆ.ಹರ್ಷವರ್ಧನನ ತಂಗಿ ರಾಜಶ್ರೀಯನ್ನು ಮೌಖೇರಿಯ ಗೃಹವರ್ಮನಿಗೆ ವಿವಾಹ ಮಾಡಿ ಕೊಡಲಾಗಿರುತ್ತದೆ. ಮಾಳ್ವದ ದೇವಗುಪ್ತನು ಗೃಹವರ್ಮನನ್ನು ಕೊಲೆಗೈದು, ರಾಜಶ್ರಿಯನ್ನು ಬಂಧನದಲ್ಲಿಟ್ಟಿರುತ್ತಾನೆ. ಇದನ್ನು ಸಹಿಸದ ಅಂದಿನ ರಾಜ ರಾಜವರ್ಧನನು ಆತನ ಮೇಲೆ ದಂಡೆತ್ತಿಹೋಗಿ ಸೋಲಿಸಿರುತ್ತಾನೆ. ಮುಂದೆ ಗೌಡ ದೇಶದ ಶಶಾಂಕನು ಮಿತ್ರನ ವೇಷ ಧರಿಸಿ ಬಂದು ರಾಜವರ್ಧನನ ಕೊಲೆ ಮಾಡುತ್ತಾನೆ. ಹರ್ಷವರ್ಧನ ಹರ್ಷವರ್ಧನನು ಬಲುಶಕ್ತಿಶಾಲಿ ಸಾಮ್ರಾಟನಾಗಿದ್ದು ಸುಮಾರು 40 ವರ್ಷಗಳ ಕಾಲ ಆಳ್ವಿಕೆ ನಡೆಸಿದ. ಆತನ ಸಾಮ್ರಾಜ್ಯವು ಉತ್ತರದಲ...