ನಗುವುದಾದರೆ ನಕ್ಕುಬಿಡು
ಅಳುವುದಾದರೆ ಅತ್ತುಬಿಡು
ಸುಃಖ ದುಃಖವಾ ಹಂಚಿಕೋ
ಮರೆಯದಿರು ಮರಳಿ ಬಾರದಿ ಸಮಯ|| ||
ಹಂಚಿಬಿಡು ನಿನ್ನ ನಿಸ್ವಾರ್ಥ ಪ್ರೀತಿಯಾ
ವ್ಯಕ್ತಪಡಿಸು ಮನದಾಳದ ಭಾವನೆಗಳನ್ನ
ತೋರಿಸು ಭಕ್ತಿಯ ಪರಾಕಾಷ್ಠೆಯನ್ನು
ಮರೆಯದಿರು ಮರಳಿ ಬಾರದಿ ಸಮಯ|| ||
ದೀರ್ಘಕಾಲದ ದ್ವೇಷವಾ ಮರೆತುಬಿಡು
ಸುದೀರ್ಘಕಾಲದಿ ಪ್ರೇಮದ ಬೀಜವಾ ಬಿತ್ತಿಬಿಡು
ನೋವು ನಲಿವಿನ ಪಯಣ ಸಾಗಲಿ ನಿರಂತರ
ಮರೆಯದಿರು ಮರಳಿ ಬಾರದಿ ಸಮಯ|| ||
ತಂದೆ ತಾಯಿಯ ಸೇವೆಯ ಮರೆಯದಿರು
ಗುರು ಹಿರಿಯರ ಆಶೀರ್ವಾದ ಸ್ವಿಕರಿಸು ಸದಾ
ಬಂಧು ಬಳಗ ಗೆಳೆಯರಾದಿಯಾಗಿ ಸಂಬಂಧವಾ ಉಳಿಸಿ ಬೆಳೆಸು
ಮರೆಯದಿರು ಮರಳಿ ಬಾರದಿ ಸಮಯ|| ||
ಸಿರಿ ಬಂದಾಗ ಹತ್ತು ಜನರಿಗೆ ಹಂಚಿತಿನ್ನು
ಸುಗ್ಗಿಯ ಕಾಲದಿ ಭೂತಾಯಿಯ ನೆನೆದು ಧನ್ಯನಾಗು
ಹೂವು ಮುಳ್ಳಿನಾ ಬದುಕಿನಲಿ ತನು-ಮನ-ಧನ ಸಮರ್ಪಿಸು
ಮರೆಯದಿರು ಮರಳಿ ಬಾರದಿ ಸಮಯ|| ||
- ಸಂದೀಪ ಕುಲಕರ್ಣಿ
Comments
Post a Comment
ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ