ಹಿತ್ತಲ ಗಿಡ ಮದ್ದಲ್ಲ
ಎಂದು ಪರಿಭಾವಿಸಿ
ಪಾಶ್ಚ್ಯತ್ಯ ಔಷಧಿಗಳ ದಾಸನಾಗಿ
ಬೆಳ್ಳಗಿರವುದೆಲ್ಲ ಹಾಲೆಂದು ನಂಬಿ ಮೋಸಹೋಗಿಹೆ
ನಿನ್ನ ಅಂತಃಸತ್ವವನು ಮರೆತು
ಆರ್ಷಧರ್ಮದ ಋಷಿಮುನಿಗಳನು
ಮೂಢರೆಂದು ಬಗೆದು
ನಿನಗೆ ನೀನೆ ಮೋಸಮಾಡಿಕೊಂಡಿರುವೆ
ಆಯುರ್ವೇದದ ಮೂಲ
ನಮ್ಮ ಈ ಭರತ ನೆಲ
ಮಣ್ಣ ಕಣಕಣದಲಿ ಇದೆ ಮದ್ದು
ಎದೆಗುಂದದೆ ನಿಲ್ಲು ಎದ್ದು
ದಾಳಿ ನೂರಾದರೂ
ಬಾಳಿ ಬದುಕುತಿಹೆವು ನಾವು
ವೈರಿಯಿರಲಿ ವೈರಾಣುವಿರಲಿ
ಆತ್ಮಸ್ಥೈರ್ಯ ಜೊತೆಗಿರಲಿ
ಆಯುರ್ವೇದವ ಅಪ್ಪಿಕೋ
ಆರ್ಷಧರ್ಮವ ಆಶ್ರಯಿಸಿಕೋ
ಆಯುಷ್ಯವ ವೃದ್ಧಿಸಿಕೋ
ಆತ್ಮ ವಿಶ್ವಾಸವ ನೆಚ್ಚಿಕೋ
ವಿಷ್ಣುಪ್ರಿಯ
(ಪಿ ಎಮ್ ನಿಕ್ಕಮ್ಮನವರ)
Thank you dude
ReplyDelete