Skip to main content

ವ್ಯಕ್ತಿತ್ವದ ಮುಕುಟ ವಜ್ರೇಶ -ಕತೆ

ಜೀವನದಲ್ಲಿ ದಿಕ್ಕೆ ತೋಚದಾದಾಗ,ಬದುಕಲ್ಲಿ ಕಷ್ಟಗಳಾ ಸುರಿಮಳೆ ಸುರಿದಾಗಾ,ಬದುಕಲ್ಲಿ ಬಿರುಗಳಿ,ಸುಂಟರಗಾಳಿ ಗಳೆದ್ದಾಗ ಬಂದ ಗೆಳೆಯ ನೀನು..ಬಂದು ನಮ್ಮ‌ ಬದುಕು ಬೆಳಗಿದ ಗೆಳೆಯ ನೀನು...ಆವತ್ತು ದ್ವೀತಿಯ  ಪಿ.ಯು.ಸಿ.ಯಲ್ಲಿ ಕಡಿಮೆ ಅಂಕಗಳು ಬಂದಾಗ ಮನೆಯಲ್ಲಿ ನೀನು‌ ಇನ್ನು ಕಲಿತಿದ್ದು ಸಾಕು...ಯಾವುದಾದರೂ ಒಂದು ಕೆಲಸಕ್ಕೆ ಸೇರಿ ಮನೆ ನಡೆಸು...ನಿಮ್ಮಪ್ಪ ಎಷ್ಡು ಅಂತ ಕಿರಾಣಿ ಅಂಗಡಿಯಲ್ಲಿ ಕೆಲಸ ಮಾಡ್ಬೇಕು ಅಂತ ಹೇಳಿದಾಗ ನೀನೆ ಅಲ್ಲವೇ ನಮ್ಮ ಮನೆಗೆ ಬಂದು,ಅವನು ಡಿಗ್ರಿ ಓದಲಿ..ಮುಂದೆ ಬಿ.ಎಡ್ ಮಾಡಲಿ‌ ಅಂತ ಸಲಹೆ ಕೊಟ್ಟು ಜೊತೆಗೆ ನಮಗೆ ಯಾವುದಾದರೂ ತೊಂದರೆ ಬಂದರೂ ಸಹಾಯಕ್ಕೆಂದು ನಿಂತವನು ನೀನೆ ಅಲ್ಲವೇ...ಈಗ ನಾನು ಸರ್ಕಾರಿ ಪ್ರೌಢ ಶಾಲೆಯಲ್ಲಿ ಶಿಕ್ಷಕನಾಗಿ ಕೆಲಸಕ್ಕೆ ಸೇರಲು,ನೂರಾರು ಮಕ್ಕಳ ಬಾಳು ಬೆಳಗಲು ಕಾರಣವಾದ ಮಹಾನ್ ಜ್ಯೋತಿ ನೀನಲ್ಲವೇ ಗೆಳೆಯ..ಈಗ ಒಂದು ಹೊಸದಾಗಿ ಮನೆ ಕಟ್ಡಿದ್ದೇನೆ...ಮುಂದಿನ ವಾರ ಗೃಹ ಪ್ರವೇಶವಿದೆ..ಕಾರಣ ನೀನು,ನಿನ್ನ ಮಡದಿ,ಮಾತೆ,ಮಗಳು ಎಲ್ಲರೂ ಬರಬೇಕು..ಬಂದು ಈ ಗೆಳೆಯನಿಗೆ ಆಶೀರ್ವದಿಸಿ ಬೇಕೆಂದು ಕೇಳಿಕೊಳ್ಳುವೆ ಎಂದು ಚಂದ್ರಮೌಳಿ ತನ್ನ ಆಪ್ತಮಿತ್ರ ವಜ್ರೇಶ ನಿಗೆ ತಿಳಿಸಿದ...ಆಗಲಿ ಸ್ನೇಹಿತ ಅಂತಾ ವಜ್ರೇಶನೂ ಸಮ್ಮತಿಸಿದನು....
   ಹೌದು ನಮ್ಮ ಈ ಕಥೆಯ ನಾಯಕನೇ ವಜ್ರೇಶ..ವಜ್ರದಷ್ಟೆ ಕಠೋರ..ಆದರೆ ಮನಸ್ಸು ಮಲ್ಲಿಗೆಯಷ್ಟೆ ಮೃದು...ನೇರವಾಗಿ ಇದ್ದುದನ್ನು ಇದ್ದ ಹಾಗೆ ಹೇಳುವ ಸ್ವಭಾವದವನು...ಹೀಗಾಗಿ ಎಷ್ಟೋ ಜನರನ್ನು ದೂರವಾಗಿಸಿಕೊಂಡವನು...ಆದರೂ ಈ ವ್ಯಕ್ತಿತ್ವಕ್ಕೆ ಮನಸ್ಸೊತವರು ಇದ್ದರು.ಮೊದಲಿನ ಹಳ್ಳಿಗಳಲ್ಲಿ ಗೌಡರು ಇದ್ದ ಹಾಗೇ ವ್ಯಕ್ತಿತ್ವ ಅಂದರೆ ತಪ್ಪಾಗಲಿಕ್ಕಿಲ್ಲ...HESCOM ಇಲಾಖೆಯಲ್ಲಿ Accountant ಆಗಿ ಕೆಲಸಮಾಡುತ್ತಿದ್ದನು...ಅಂದರೆ Power ಇಲಾಖೆಯಲ್ಲಿ powerful ಖಾತೆ ಅವನದು...ಅಂದರೆ ತನ್ನ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿರುವವರ ಎಲ್ಲ ನೌಕರರ ವೇತನ ತೆಗೆಯುವುದಾಗಿತ್ತು.ವಜ್ರೇಶನನ್ನು ಬಾಲಿವುಡ್ ನ ಮಿಸ್ಟರ್ perfect ಅಮೀರ್ ಖಾನ್ ನಿಗೆ ಹೋಲಿಸುತ್ತಿದ್ದರು...ಯಾವುದೇ ಕೆಲಸವಿದ್ದರೂ ಅದರಲ್ಲಿ ತನು ಮನ ಧನ ಸಮರ್ಪಿಸುವ ವ್ಯಕ್ತಿತ್ವ ಅವನದು...ನೇರ ನುಡಿ,ದಿಟ್ಟ ನಡತೆ,ವಿಶಾಲವಾದ ಹೃದಯವಂತಿಕೆ,ಕೆಲಸದಲ್ಲಿ ಏಕಾಗ್ರತೆ ಇವು ವಜ್ರೇಶನಿಗೆ ಕರತಲಾಮಲವಾಗಿದ್ದವು... ಯಾರಾದರೂ ಕೆಲಸದಲ್ಲಿ ನಿಷ್ಠೆ ತೋರಿಸದಿದ್ದಾಗ ಮುಖಕ್ಕೆ ಹೊಡೆದ ಹಾಗೆ ಏನ್ರೊ ಕೆಲಸದಲ್ಲಿ ಲಕ್ಷಕೊಡ್ರೊ ನಿಮಗ ಯಾವಾಗ ಬುದ್ದಿ ಬರುತ್ತೊ ನನಗಂತೂ ತಿಳಿಯುತ್ತಿಲ್ಲ ಎಂದು ಸರಿಯಾಗಿ ಉಗಿಯುತ್ತಿದ್ದನು..ಕೆಲಸವನ್ನು ಚೆನ್ನಾಗಿ ಮಾಡಬೇಕೆಂಬುದೇ ಅವನ ಉದ್ದೇಶವಾಗಿತ್ತು...ಒಂದೇ ಕ್ಷಣದಲ್ಲಿ ಹತ್ತಾರು ಐಡಿಯಾ ಗಳು ಅವನ ತಲೆಯಲ್ಲಿ ಒಡಾಡುತ್ತಿದ್ದವು...
   ವಜ್ರೇಶನ ಪ್ರವಾಸ ಜ್ಞಾನವಂತೂ ಹೇಳತೀರದು...ದಕ್ಷಿಣ ಭಾರತವಿರಲಿ,ಉತ್ತರಭಾರತವಿರಲಿ,ದಕ್ಷಿಣ ಕರ್ನಾಟಕ ವಿರಲಿ,ಉತ್ತರ ಕರ್ಣಾಟಕವಿರಲಿ ಎಲ್ಲ ಪ್ರವಾಸದ ಕುರಿತು ನಿಖರವಾದ ಮಾಹಿತಿ ಕಲೆ ಹಾಕುತ್ತಿದ್ದನು...ಪ್ರವಾಸದ ಆರಂಭ ಎಲ್ಲಾಗಬೇಕು,ಕೊನೆಯ point ಯಾವುದು ಎನ್ನುವುದನ್ನು ಕರಾರುವಕ್ಕಾಗಿ ಹೇಳಿಬಿಡುತ್ತಿದ್ದನು...ಹೀಗಾಗಿ ಅವನ ಗೆಳೆಯರು ಯಾರೇ ಇರಲಿ ಪ್ರವಾಸಕ್ಕೆ ಹೊರಡುವ ಮೊದಲು ವಜ್ರೇಶ ನ ಬಳಿಯೇ ಮಾಹಿತಿ ಕೇಳುತ್ತಿದ್ದರು...ದೇಶ ಸುತ್ತಿ ನೋಡು,ಕೋಶ ಓದಿ ನೋಡು ಎನ್ನುವ ಗಾದೇ ಅವನಿಗೆ ಒಪ್ಪುವಂತಿತ್ತು...ಅವನೇ ಅತ್ಯುತ್ತಮ Guide ಆಗಿಬಿಟ್ಡಿದ್ದನು..
       ಜೊತೆಗೆ ಜಗತ್ತಿನಲ್ಲಿ ಯಾವ ಯಾವ ಮೂಲಗಳಿಂದ ಸಾಲ ದೊರೆಯುವುದು,ಯಾವ ಯಾವ ಬ್ಯಾಂಕ್ ಗಳಲ್ಲಿ ಸಾಲ ದೊರೆಯುವುದು,ಅದರ ಬಡ್ಡಿ ದರ ಎಷ್ಟಿದೆ ಎಂಬುದನ್ನು ಪಟಾ ಪಟಾ ಅಂತ ಹೇಳುತ್ತಿದ್ದನಲ್ಲದೇ ನಾವು ಸರ್ಕಾರಿ ನೌಕರರು..ನಮಗೆ ಸಂಬಳ ಬಿಟ್ಟು ಬೇರಾವ ಆದಾಯದ ಮೂಲಗಳು ಇರುವುದಿಲ್ಲ.ಜೊತೆಗೆ ಸಾಲ ಮಾಡದೆ ಯಾವುದೆ ಆಸ್ತಿ ಮಾಡಲಾಗುವುದಿಲ್ಲ..ಸಾಲ ಮಾಡಿದರೂ ಕಡಿಮೆ ಬಡ್ಡಿ ಸಿಗುವಲ್ಲಿ ಮಾಡಿದರೆ ಉತ್ತಮ ಎಂದು ವಜ್ರೇಶ ಸಲಿಸಾಗಿ ಹೇಳುತ್ತಿದ್ದನು...ಸಾಲಾನೂ ಮಾಡಬೇಕ,ಅದನ್ನು ತೀರಿಸಲು ರೆಡಿಯಾಗಿರಬೇಕ..ಅದಕ್ಕೆ perfect plan ಮಾಡಿಟ್ಟಕೊಬೇಕ ಅಂತ ತಿಳಿಹೇಳುತ್ತಿದ್ದ ವಜ್ರೇಶ...
  ಗೆಳೆಯ ಚಂದ್ರಮೌಳಿಯಂತೂ ವಜ್ರೇಶ ನಿಂದ ಸಾಕಷ್ಡು ಕಲಿತಿದ್ದನು..ಅವಸರವಾಗಿ ಯಾವುದೇ ಕೆಲಸ ಮಾಡದೇ ನಿಧಾನವೇ ಪ್ರಧಾನ ಎನ್ನುವ ರೀತಿಯಲ್ಲಿ ಮಾಡುವುದು,ಮನೆಮಂದಿಯನ್ನೆಲ್ಲಾ ವರ್ಷಕ್ಕೊಮ್ಮೆ ಪ್ರವಾಸಕ್ಕೆ ಕರೆದುಕೊಂಡು ಹೋಗುವುದು,ಹಿತಮಿತವಾಗಿ ಭೋಜನ ಮಾಡುವುದು, ಅದರಲ್ಲಿಯೂ ಹೊರಗಿನ ತಿಂಡಿ ತಿನಿಸು ಗಳಿಗೆ ಮಹತ್ವ ಕೊಡದೆ ಮನೆಯಲ್ಲಿಯೇ ರುಚಿಯಾದ ಶುಚಿಯಾದ ಅಡುಗೆ ಮಾಡಿಸಿಕೊಂಡು ಉಣ್ಣುವುದು ಹೀಗೆ ಹತ್ತು ಹಲವು ವಿಚಾರಗಳನ್ನು ವಜ್ರೇಶನಿಂದ ಕಲಿತುಕೊಂಡಿದ್ದನು...ಇನ್ನೋಂದು ವಜ್ರೇಶ ನ ಬಾಯಿಂದ ಯಾವಾಗಲೂ ಬರುತ್ತಿತ್ತು..ದೇವರು ಅವಕಾಶ ಕೊಟ್ಟಾಗ ಎಲ್ಲವನ್ನು ಅನುಭವಿಸುವುದು..ಅದು ಹೊಸ ಹೊಸ ಬಟ್ಟೆ ಧರಿಸುವುದಿರಬಹುದು,ಪ್ರವಾಸ ಹೋಗುವುದಿರಬಹುದು.ರುಚಿ ರುಚಿಯಾದ ಊಟ ಸವಿಯುವುದಿರಬಹುದು...
     ಚಂದ್ರಮೌಳಿಯ ಗೃಹ ಪ್ರವೇಶ ದಂದು ವಜ್ರೇಶ ನು ತನ್ನ ಮಾತೆ,ಮಡದಿ,ಮಗಳು ಎಲ್ಲರನ್ನು‌ ಕರೆದುಕೊಂಡು ಬಂದು ಗೆಳೆಯನಿಗೆ ಶುಭಾಶಯಗಳನ್ನು ತಿಳಿಸಿದರು..ಜೊತೆಗೆ ಚಂದ್ರಮೌಳಿಯ ನೆಂಟರು,ಬಂಧು ಬಾಂಧವರು,ಆಪ್ತ ಸ್ನೇಹಿತರು ಎಲ್ಲರೂ ಬಂದು ಶುಭಾಶಯಗಳ ಕೋರಿದರು... ಮನೆ ಕಟ್ಟಿನೋಡು,ಮದುವೆ ಮಾಡಿನೋಡು ಎಂಬ ಗಾದೆಯಂತೆ  ಮನೆಯಂತೂ ಕಟ್ಡಿದ್ದಾಯಿತು..ಈಗ ಮದುವೆಯ ಸರದಿ...ಮನೆಗೆ      ಗೃಹ ಲಕ್ಷ್ಮಿ ಬರುವುದೊಂದೆ ಬಾಕಿ ಎಂದು ಹಾಸ್ಯ ಚಟಾಕೆ ಹಾರಿಸಿದರು..ಇದೇ ಸಂದರ್ಭದಲ್ಲಿ ವಜ್ರೇಶ ನ ಕುರಿತು ತನ್ನ ಬಂಧು ಬಾಂಧವರಿಗೆ ಪರಿಚಯಿಸದನು ಚಂದ್ರಮೌಳಿ..ನೂರಾರು ಗೆಳೆಯರಿಗಿಂತ ಇಂತಹ ಒಬ್ಬ ಗೆಳೆಯನಿದ್ದರೆ ಜೀವನದ ದಿಕ್ಕೆ ಬದಲಾಗುವುದು...ಮಾನವ ರೂಪದ ದೇವರೆಂದರೆ ತಪ್ಪಾಗಲಾರದು‌ ಎಂದು‌ ಗೆಳೆಯನನ್ನು ಕೊಂಡಾಡಿದನು.ಆಗ ವಜ್ರೇಶ ನಾನೇನು ದೊಡ್ಡ ಮನುಷ್ಯನಲ್ಲ..ಕೊಟ್ಟಿದ್ದು ತನಗೆ,ಬಚ್ಚಿಟ್ಟದ್ದು ಪರರಿಗೆ ಎನ್ನುವಂತೆ,ಬಚ್ಚಿಟ್ಟ ಜ್ಞಾನ ಕೊಳಿತು,ಬಿಚ್ಚಿಟ್ಟ ಜ್ಞಾನ ಬೆಳಿತು ಎನ್ನುವಂತೆ ನನಗೆ ಗೊತ್ತಿರುವ    ಜ್ಞಾನ ವನ್ನು ಹಂಚಿಕೊಂಡಿರುವೆ ಅಷ್ಟೇ...ಇರುವ ಮೂರು ದಿನದಲ್ಲಿ ಮನುಷ್ಯನಿಗೆ,ಮಾನವಿಯತೆಗೆ ಬೆಲೆಕೊಡಬೇಕಷ್ಟೇ ಎಂದು ಮಾರ್ಮಿಕವಾಗಿ ಮಾತಾಡಿದನು ವಜ್ರೇಶ....ಕೊನೆಗೆ ಎಲ್ಲರೂ ಇದ್ದರೆ ವಜ್ರೇಶ ನ ವ್ಯಕ್ತಿತ್ವ ವುಳ್ಳ ಗೆಳೆಯನಿರಬೇಕು ಎಂದು ತಮ್ಮ ತಮ್ಮ ಮನದಲ್ಲಿಯೇ ಎಂದುಕೊಂಡರು...ಎಲ್ಲರೂ ರುಚಿ ರುಚಿಯಾದ ಭೋಜನ ಸವಿದು ತಮ್ಮ ತಮ್ಮ ಮನೆಗೆ ತೆರಳಿದರು..ಕೊನೆಗೆ ವಜ್ರೇಶನು‌  ಚಂದ್ರಮೌಳಿಗೆ ಆಯಿತು ಇನ್ನೇನು ಮದುವೆ ಒಂದೇ ಬಾಕಿ...ಹೇಳಿ ಬಿಡು ಅದನ್ನು ಇದೇ ವರ್ಷ ಮಾಡಿಬಿಡೋಣ ಎಂದಾಗ ಬೇಡ ಕಣೊ ಈಗಲೇ..ಮನೆ ಕಟ್ಡಿಸಿ ಹೈರಾಣಾಗಿದ್ದೇನೆ..ಈಗ ವಿವಾಹ ವೆಂದರೆ ಮುಗಿಯಿತು ನನ್ನ ಕತೆ ಅಷ್ಟ ಕಷ್ಟೆ ಎನ್ನುತ್ತಾ ಗೆಳೆಯನನ್ನು ತುಂಬು ಹೃದಯದಿಂದ ಬಿಳ್ಕೊಟ್ಟನು‌ ಚಂದ್ರಮೌಳಿ...
                                                        - ಸಂದೀಪ ಕುಲಕರ್ಣಿ
                       

Comments

ಇವುಗಳನ್ನೂ ಓದಿ

ವರ್ಧನ ಸಾಮ್ರಾಜ್ಯದ ಇತಿಹಾಸ

ವರ್ಧನ ಸಾಮ್ರಾಜ್ಯದ ಇತಿಹಾಸ ಗುಪ್ತ ಸಾಮ್ರಾಜ್ಯದ ಅವನತಿಯ ನಂತರ ಉತ್ತರ ಭಾರತದಲ್ಲಿ ಅನೇಕ ಚಿಕ್ಕ ಚಿಕ್ಕ ಸಂಸ್ಥಾನಗಳು ಸ್ಥಾಪಿಸಲ್ಪಟ್ಟವು. ಅವುಗಳಲ್ಲಿ ವರ್ಧನ ಸಾಮ್ರಾಜ್ಯವೂ ಒಂದು. ಈ ಸಾಮ್ರಾಜ್ಯದ ಸ್ಥಾಪಕ ಪ್ರಭಾಕರ ವರ್ಧನ. ಅವನ ರಾಜಧಾನಿ ಥಾನೇಶ್ವರ. ಹೀಗಾಗಿ ಇವರನ್ನು ಥಾನೇಶ್ವರದ ವರ್ಧನರೆಂದೂ ಕರೆಯುತ್ತಿದ್ದರು. ಪ್ರಭಾಕರ ವರ್ಧನ ಶಕ್ತಿಶಾಲಿಯೂ ಶೂರನೂ ಆಗಿದ್ದನು. ಆತನಿಗೆ ರಾಜವರ್ಧನ, ಹರ್ಷವರ್ಧನ ಹಾಗೂ ರಾಜಶ್ರೀಯೆಂಬ ಮೂವರು ಮಕ್ಕಳಿದ್ದರು. ಪ್ರಭಾಕರ ವರ್ಧನನ ಮರಣದ ನಂತರ ರಾಜವರ್ಧನನು ಪಟ್ಟಕ್ಕೆ ಬಂದನು. ಆದರೆ ಧುರ್ಧೈವದಿಂದ ಆತನ ಕೊಲೆಯಾಗುತ್ತದೆ. ಹೀಗಾಗಿ ಹರ್ಷವರ್ಧನನು ಕ್ತಿ.ಶ.606 ರಿಂದ ಕ್ರಿ.ಶ 647 ರವರೆಗೆ ರಾಜ್ಯಭಾರ ಮಾಡುತ್ತಾನೆ.  ಹರ್ಷವರ್ಧನನು ಮಾಳ್ವ ಹಾಗೂ ಕನೋಜದ ಮೇಲೆ ದಂಡೆತ್ತಿ ಹೋಗಿ ಸದೆಬಡಿಯುತ್ತಾನೆ.ಹರ್ಷವರ್ಧನನ ತಂಗಿ ರಾಜಶ್ರೀಯನ್ನು ಮೌಖೇರಿಯ ಗೃಹವರ್ಮನಿಗೆ ವಿವಾಹ ಮಾಡಿ ಕೊಡಲಾಗಿರುತ್ತದೆ. ಮಾಳ್ವದ ದೇವಗುಪ್ತನು ಗೃಹವರ್ಮನನ್ನು ಕೊಲೆಗೈದು, ರಾಜಶ್ರಿಯನ್ನು ಬಂಧನದಲ್ಲಿಟ್ಟಿರುತ್ತಾನೆ. ಇದನ್ನು ಸಹಿಸದ ಅಂದಿನ ರಾಜ ರಾಜವರ್ಧನನು ಆತನ ಮೇಲೆ ದಂಡೆತ್ತಿಹೋಗಿ ಸೋಲಿಸಿರುತ್ತಾನೆ. ಮುಂದೆ ಗೌಡ ದೇಶದ ಶಶಾಂಕನು ಮಿತ್ರನ ವೇಷ ಧರಿಸಿ ಬಂದು ರಾಜವರ್ಧನನ ಕೊಲೆ ಮಾಡುತ್ತಾನೆ. ಹರ್ಷವರ್ಧನ ಹರ್ಷವರ್ಧನನು ಬಲುಶಕ್ತಿಶಾಲಿ ಸಾಮ್ರಾಟನಾಗಿದ್ದು ಸುಮಾರು 40 ವರ್ಷಗಳ ಕಾಲ ಆಳ್ವಿಕೆ ನಡೆಸಿದ. ಆತನ ಸಾಮ್ರಾಜ್ಯವು ಉತ್ತರದಲ...