ಭವದ ಬಂಧನವ ಹರಿದೊಗೆದು
ದಿವಕೆ ಕುಂದಣನಾಗಿ ಹೊಳೆಯುತಿಹ ಬಸವ..
ಅನುಭಾವದ ಆನಂದದಿ ಜಗ ನಂದನವನ ಮಾಡಿದ ಬಸವ
ಬಸವನೆಂದರೆ ಬಸವನಲ್ಲ ಸುಜ್ಞಾನದ ಪ್ರಸವ!!
ಸರ್ವಶಕ್ತನು ಬಸವ, ಗರ್ವ ಮುಕ್ತನು ಬಸವ, ಭಕ್ತಿ ವರ್ಷವ ಸುರಿದು ಮುಕ್ತಿ ಸ್ಪರ್ಶವ ನೀಡಿದ ಬಸವ, ಯುಗಪುರುಷನು ಬಸವ ಜೀವಪರುಷನು ಬಸವ ಜ್ಞಾನಸಂಗಮನಾದವ ಬಸವ.
ಬಸವನೆಂದರೆ ಬಸವನಲ್ಲ ದೇವಾಂಶ ಸಂಭವ.!!
ಸರ್ವಾಂಗವನೇ ಲಿಂಗಮಯ ಮಾಡಿ, ಇಷ್ಟಲಿಂಗದ ಜಂಗಮನು ಬಸವ, ಗುರು-ಲಿಂಗ-ಜಂಗಮ ಸಂಗಮನಾಗಿ ವಚನ ಸಾಹಿತ್ಯ ಲಾಂಛನ ಬಸವ, ಬಸವನೆಂದರೆ ಬಸವ ನಲ್ಲ ಆತ್ಮದೊಳಗಣ ಶಿವ!!
ಕಾಯಕ ಧರ್ಮದ ನಾಯಕ ಬಸವ, ನ್ಯಾಯನೀತಿಗೆ ಪ್ರಭು ಬಸವ, ಕರಣ ಶುದ್ದಿಯ ಸಿದ್ಧ ಸಂಸಾರಿ.. ಧರ್ಮ ಕಾರಣದ ಬ್ರಹ್ಮ ಬಸವ. ಬಸವನೆಂದರೆ ಬಸವ ನಲ್ಲ ನಿತ್ಯ ಕರ್ಮಕ್ಕೆ ವಾಸ್ತವ ಪ್ರಣವ...!!
ಶರಣ ಚರಣದ ತರುಣನು ಬಸವ, ಅರುಣ ಕಿರಣದ ತೇಜಪುಂಜ ಬಸವ, ನಿತ್ಯಸತ್ಯದ ಮಾರ್ಗವ ತೋರಿ, ಚಿದಾನಂದ ದ ಮುದ್ದುನಗೆಯ ಮೌನಿ ಬಸವ. ಬಸವನೆಂದರೆ ಬಸವ ನಲ್ಲ ಯುಗದ ಮಹಾನುಭಾವ!!
ತಾನು ಹಿರಿಯನಲ್ಲ ಶಿವಭಕ್ತರಿಗಿಂತ ಹಿರಿಯರಿಲ್ಲ
ಶರಣಪರಮಾನ್ನ ಬಡಿಸಿದ ಅಣ್ಣ ಬಸವ, ವಿಚಾರಕ್ಕೆ ವೀರ ಆಚಾರಕ್ಕೆ ಅರಸ, ಬಲ ಬಸವ ಹಂಬಲ ಬಸವ, ಬಸವನೆಂದರೆ ಬಸವ ನಲ್ಲ ನಮ್ಮ ಯಶ, ಹಿಂದಿನ ಕಸುವ..!!
- ಸಿದ್ದು ನೇಸರಗಿ ಮೂಗಬಸವ. ಸಿಆರ್ಪಿ ಆನಿಗೋಳ..
Comments
Post a Comment
ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ