ಬಸವನೆಂಬ ಜಗಜ್ಯೋತಿಯು
ವೀರಶೈವನೋ ಪಂಚಮಸಾಲಿಯವನೋ
ಮಾನವತೆಯ ತಿರುಳ ಸಾರಲು
ಭೂವಿಗವತರಿಸಿದ ಮಹಾಮಾನವನೋ
ಜಾತಿಬೇಧವ ಮಿರಿ ನಿಂತ
ಮಾನವತಾವದಿಯವನು
ಅವನಿಗು ಜಾತಿಯ ಪಟ್ಟ ಕಟ್ಟಿ
ಬಂಧನದಲಿರಸ ಹೊರಟ
ಮಹಾಮುರ್ಖರಲ್ಲವೆ ನಾವು
ಜಾತಿಧರ್ಮವ ಮೀರಿ ನಿಂತ
ಮಹಾಮಹಿಮ ನೀನು
ನಿನ್ನ ಹೆಸರಿನಲ್ಲಿ ಜಾತಿಧರ್ಮ
ಮೇಲುಕೀಳು ಮಾಡುತಿರುವರು ನಾವು
ವಿಶ್ವ ವಂದಿತ ಮನಕುಲದುದ್ದಾರಕ
ಸಮಾನತೆಯ ಹರಿಕಾರ
ವಚನದಲಿಟ್ಟ ಸಮಾಜದ ಸಾರ
ಜಗದ ಜ್ಯೋತಿ ಬಸವನೆಂಬ ಶೂರ
ವಿಷ್ಣುಪ್ರಿಯ
( ಪಿ ಎಮ್ ನಿಕ್ಕಮ್ಮನವರ)
Comments
Post a Comment
ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ