ಊರ ಮುಂದಿನ ಹೊಲಕ
ನಾ ಕುಂಟೀಯ ಹೂಡಿದರ
ಬಳದಾಯ್ತು ಭಾಳ.. ಕಡದಾಯ್ತು ಕಿರುಗುಳ..ಅಂದೋರೇ ಬಹಳ.
ಸಾಗಿದಂಗ ಹೊಡೀ..ಅಂದವರು ವಿರಳ....!!
ಅಂದವರು ಅನ್ನಲಿ.. ಚಂದ...ನ... ನನ್ನಹೊಲ..ಈ ಸೀಮೆಯೊಳಗ
ಇಲ್ಲಾ ನನ್ನಂಥ ಒಕ್ಕಲಾ..ಕರಿಮಣ್ಣಹೊಲಾ...
ಮೇಳಿಯ ಹಿಡಿದು ಗಳೇಯನು
ಹೊಡೆದರ ಮಣ್ಣೀನ ಹದ..
ಮನಸೀಗೆ ಮುದ....!!
ಒಡ್ಡಿಲ್ಲ..ಒಡಬಲಿಲ್ಲ ಸಮ ತಟ್ಟಿನ ಹೊಲ..
ಮಳೆರಾಯ ಸುರಿದರ ನೀರ
ಗಂಗಾಳಕ ಹಾಲು ಸುರಿದಂಗ..
ಇಂಗಿದ ಉಳಿನೀರು ಸಾಗಲು ತಿಳಿ ನೀರು ಕಲಬಚ್ಚಲ ಕಾವಲು ಕೋಟೆ ನನ್ನ ಹೊಲಕ..
ತುಂಬಿದ ನೀರಿಗೆ ತಂಬಿಟ್ಟಿನಂಗ
ಹದಸಿರೀ ಮಣ್ಣ...!!
ಎತ್ತೆರಡು ನತ್ತಿನಂಗ ರಾಮಣ್ಣ ಭೀಮಣ್ಣ...
ಬಿತ್ತಾ ಕ ಬಂಟರು ಹೊತ್ತುಇಳಿಯುವ ಮುನ್ನ..
ಭೂತಾಯಿ ಮಕ್ಕಳ ಜೀವದ ಕಣ್ಣ...
ಆಸರಿಲ್ಲ ಬ್ಯಾಸರಿಲ್ಲ ನಮ್ಮ ಬಸವಣ್ಣ...!!
ನೆಟ್ಟ ಹೆಜ್ಜೀಯ ಗುಂಟಾ ಕೂರಿಗೆ ಸಾಲ..
ದಿಟ್ಟನಡಿಗಿ ನೋಟಕ ಊರಿಗೆಲ್ಲ
ದಿಗಿಲಾ..
ಸುಗ್ಗೀಯ ಕಾಲಕ ಹಗ್ಗೆಲ್ಲಾ ಮುಗಿಲಾ..
ಕಾಳಿನ ನಿಟ್ಟು ದ್ಯಾಬ್ಯಾಗ ಮ್ಯಾಗರಮ್ಯಾಲ..!!
ತಲಿಮ್ಯಾರಿ ಮ್ಯಾಲ ಬೇವಿನಮರದ ನೆಳ್ಳ...
ಕಾಲದೇಸೀ ಹರದೈತಿ ಜುಳು ಜುಳು ಹಳ್ಳ...
ಕುಡಸಾಲ ಕೂಡ್ಯಾವ ಹೀರಿ ಅವರೀಯ ಬಳ್ಳ..
ಹಳಹಳೀ ಬಿಡಿಸೈತೀ ನನ್ನ ಹಳ್ಳೀ..
ಊರ ಮುಂದಿನ ಹೊಲ..!!
✍🏽 ಸಿದ್ದು ನೇಸರಗಿ (ಮೂಗಬಸವ ) ಸಿ ಆರ್ ಪಿ ಆನಿಗೋಳ..🙏ಹಳ್ಳಿಯ ಹಾಡು ಆಸ್ವಾದಿಸಿ ಅಭಿಪ್ರಯಿಸಿ ಮಿತ್ರರೇ..🙏💐💐
Comments
Post a Comment
ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ