Skip to main content

ಸಾನಾಪೂರದ ಸಂಗೀತ ಶಿಲೆಗಳು- ಕತೆ ಭಾಗ ೩ ,

ಹಿಂದಿನ ಸಂಚಿಕೆಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಭಾಗ ೩ ( ಕೊನೆಯ ಭಾಗ)
ಮಾರನೇ ದಿನ ವೆಂಕಟಾಚಲಯ್ಯನವರು ಏನು ಇಷ್ಟು ಹೊತ್ತಾದರೂ ಮೀನಾ ಇನ್ನು ಎದ್ದೆ ಇಲ್ವಲ್ಲಾ ಅಂದುಕೊಂಡು ಅವಳ ರೂಮಿನತ್ತ ಹೋದರೆ ಅವರಿಗೆ ನಿಂತ ನೆಲವೇ ಕುಸಿದುಹೋದಂತಾಯಿತು. ಆ ದೃಶ್ಯ ಕಂಡು ಮೈನಡುಕ ಬಂದಿತು. ಮೀನಾಳ ದೇಹ ಫ್ಯಾನಿಗೆ ನೇತಾಡುತ್ತಿತ್ತು. ಅಯ್ಯೋ ಮಗಳೇ ಎಂದು ಕೂಗಿದ. ಮನೆಯವರೆಲ್ಲರೂ ಬಂದರು. ಅಯ್ಯೋ ಎಂತಹ ಕೆಲಸಾ ಮಾಡ್ಕೊಂಡ ಬಿಟ್ಟವಳೆ ಹುಡುಗಿ ಎನ್ನುತ್ತಾ ಪಾರ್ಥಿವ ಶರೀರವನ್ನು ಕೆಳಗಿಳಿಸಿದರು. ಸುಶಾಂತನಿಗಂತೂ ತನ್ನ ಕಣ್ಣು ತಾನೇ ನಂಬಲಾರದ ಸ್ಥಿತಿ. ಹೀಗೇಕೆ ಮಾಡಿಕೊಂಡೆ ಮೀನಾ ಎಂದು ಕಣ್ಣೀರ ಹಾಕಿದ. ವೆಂಕಟಾಚಲಯ್ಯನವರು ಅಯ್ಯೋ ವಿಧಿಯೇ ನನ್ನ ಗೆಳೆಯ ಸುಬ್ಬುಗೆ ಏನೆಂದು ಉತ್ತರ ಕೊಡಲಿ? ಹೇಗೆ ಮುಖ ತೋರಿಸಲಿ? ಎಂದು ಗೋಳಾಡತೊಡಗಿದರು. ದ್ರಾಕ್ಷಾಯಿಣಿದು ಒಂದೇ ವಟವಟ, ಗುರುತು ಪರಿಚಯ ಇಲ್ಲದವರನ್ನು ಮನೇಲಿ ತಂದಿಟ್ಕೊಬೇಡಾ ಅಂತ ಸಾವಿರ ಸಲ ಬಡಕೊಂಡರೂ ಕೇಳಲಿಲ್ಲ. ಈಗ ಅನುಭವಿಸಿ. ಮನೆಯಲ್ಲ ಇದು ಧರ್ಮಛತ್ರವಾಗಿದೆ ಎಂದು ಸುಶಾಂತನನ್ನೇ ದಿಟ್ಟಿಸಿ ಹಲುಬಿದಳು. ಸುಶಾಂತನನ್ನು ಸಾಕುವುದೂ ಅವಳಿಗೆ ಇಷ್ಟವಿರಲಿಲ್ಲ.
ವೆಂಕಟಾಚಲಯ್ಯನವರು ಗೆಳೆಯ ಸುಭಾಷಗೆ ಫೋನಾಯಿಸಿ ಸುದ್ದಿ ತಿಳಿಸಿದರು. ಅರಗಿಳಿಯಂಗೆ ಹಾರಾಡಿಕೊಂಡಿದ್ದ ಮಗಳ ಅಕಾಲಿಕ ನಿಧನದ ಸುದ್ದಿಯನ್ನು ಹೆತ್ತವರಿಗೆ ಅರಗಿಸಿಕೊಳ್ಳಲಾಗಲಿಲ್ಲ. ಅವರು ಕೂಡಲೇ ಸಾನಾಪೂರಕ್ಕೆ ಧಾವಿಸಿದರು. ತನ್ನ ಮಗಳು ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಹೇಡಿಯಾಗಿರಲಿಲ್ಲ. ಅದೂ ಅಲ್ಲದೆ ಅವಳು ಮನಸ್ಸಿನಲ್ಲೇನೂ ಇಟ್ಟುಕೊಳ್ಳದೇ ಅನಿಸಿದ್ದನ್ನು ನೇರವಾಗಿ ಹೇಳಿಬಿಡುತ್ತಿದ್ದಳು.ಇದರಲ್ಲೇನೋ ಎಡವಟ್ಟಾಗಿದೆಯೆಂದು ಸುಭಾಷ ಪೊಲೀಸರಿಗೆ ಸುದ್ದಿ ಮುಟ್ಟಿಸಿದ. 
ದ್ರಾಕ್ಷಾಯಿಣಿ ವೆಂಕಟಾಚಲಯ್ಯನವರಿಗೆ ನೋಡು ನನ್ನ ಗೆಳೆಯನ ಮಗಳು ನನ್ನ ಗೆಳೆಯನ ಮಗಳೆಂದು ಅಕ್ಕರೆ ಮಾಡಿದ್ದಕ್ಕೆ ಪೊಲೀಸ ಸ್ಟೇಶನ್ನ ಮೆಟ್ಟಿಲು ಹತ್ತು ಎನ್ನುತ್ತಾ ಗಂಡನ ಮೋತಿಗೆ ತಿವಿದಳು. ಪೋಲೀಸರು ಆಗಮಿಸಿ..ಪೋಸ್ಟ್ ಮಾರ್ಟಮಗಾಗಿ ಶವ ಕಳುಹಿಸುವುದರೊಂದಿಗೆ ತನಿಖೆ ಮುಗಿಯುವವರೆಗೂ ಯಾರೂ ಎಲ್ಲಿಗೂ ಹೋಗುವಂತಿಲ್ಲ ಎಂದು ವಾರ್ನಿಂಗ್ ನೀಡಿ ಹೋದರು.
ಶವಸಂಸ್ಕಾರ ನಡೆಸಿ ಎರಡು ದಿನವಾಗಿರಬೇಕು. ಇನ್ಸ್‌ಪೆಕ್ಟರ್ ಮೀನಾಳ ತಂದೆ ಸುಭಾಷಗೆ ಫೋನ್ ಮಾಡಿ ಪೋಸ್ಟ್ ಮಾರ್ಟಮ ರಿಪೋರ್ಟ ಪ್ರಕಾರ ನಿಮ್ಮ ಮಗಳನ್ನು ರೇಪ್ ಮಾಡಿ ಕೊಲೆ ಮಾಡಲಾಗಿದೆಯೆಂದು ತಿಳಿಸಿದನು. ಕುಪಿತನಾದ ಸುಭಾಷ ಅಪರಾಧಿಗಳನ್ನು‌ ಯಾವುದೇ ಕಾರಣಕ್ಕೂ ಸುಮ್ಮನೆ ಬಿಡಬೇಡಿ. ಅದೇಷ್ಟೆ ಖರ್ಚಾದರೂ ಚಿಂತಿಸಬೇಡಿ ತನಿಖೆ ನಡೆಸಿ ಎಂದು ಹೇಳಿದನು.
********
ವೆಂಕಟಾಚಲಯ್ಯನವರನ್ನು ಮೂರ್ನಾಲ್ಕು ಬಾರಿ ಸ್ಟೇಶನಗೆ ಕರೆಯಿಸಿಕೊಂಡು ಇನ್ಸ್‌ಪೆಕ್ಟರ್ ತೀವ್ರ ವಿಚಾರಣೆ ನಡೆಸಿದರು. ಅವರು ತನಗೂ ಕೊಲೆಗೂ ಏನೂ ಸಂಬಂಧವಿಲ್ಲ ಎಂದೇ ಹೇಳಿದರು. ಆಮೇಲೆ ಸುಶಾಂತನನ್ನು ಕರೆದು ವಿಚಾರಿಸಿದರು ಆತ ನಾನೇನೂ ಮಾಡಿಲ್ಲ. ಅವಳು ತೀರಿಕೊಂಡಿದ್ದು ನನಗೂ ತುಂಬಾ ದುಃಖವಾಗಿದೆ ಎಂದು ಅಳತೊಡಗಿದನು.ಇಲ್ಲ ನಿಮ್ಮಿಬ್ಬರ ನಡುವೆ ಏನೋ ನಡೆದಿದೆ. ನೀನು ಅವಳನ್ನು ಪ್ರೀತಿಸ್ತಾ ಇದ್ದೆ, ಹೀಗಾಗಿ ಅವಳನ್ನು ದಕ್ಕಿಸಿಕೊಳ್ಳಲು ಪ್ರಯತ್ನಿಸಿರಬೇಕು ಆಗ ಅವಳು ನಿರಾಕರಿಸಿದ್ದಾಳೆ ಅದಕ್ಕಾಗಿಯೇ ಅವಳನ್ನು ಕೊಲೆಗೈದು ನಿನ್ನಾಸೆ ಪೂರೈಸಿಕೊಂಡಿರುವೆ ಹೌದೋ? ಅಲ್ಲವೋ? ನಿಜ ಹೇಳು ಬಡ್ಡಿ ಮಗನೇ ಎಂದು ಇನ್ಸಪೆಕ್ಟರ್ ಲಾಠಿ ಬೀಸಿದ್ದ. ಇಲ್ಲಾ ನಾನು ಪ್ರೀತಿಸ್ತಾಯಿರುವುದು ನಿಜ. ಆದರೆ ನನ್ನ ಮೀನಾನ ನಾನೇ ಕೊಲ್ಲುವಷ್ಟು ಕಟುಕನಲ್ಲ..ಪ್ಲೀಸ್ ನನ್ನ ಮಾತು ನಂಬಿ ಎಂದು ಗೋಗರೆದ ಸುಶಾಂತ. ಇನ್ಸಪೆಕ್ಟರ್ ಏನೋ ವಿಚಾರ ಮಾಡಿ ಹ್ಞುಂ! ಸರಿ ನಾವು ಮತ್ತೆ ಹೇಳಿಕಳುಹಿಸಿದಾಗ ಬರಬೇಕು ಎಂದು ವಾರ್ನಿಂಗ್ ಮಾಡಿ ಅವನನ್ನು ಕಳುಹಿಸಿದರು.
ಈ ಬಗ್ಗೆ ಊರೊಳಗೆ ತನಿಖೆ ಮಾಡುತ್ತಿರಬೇಕಾದರೆ ಪೊಲೀಸರಿಗೆ ಚೆಂದೂ ಸಿಕ್ಕ. ಆತನನ್ನು ಠಾಣೆಗೆ ಎಳೆದೊಯ್ದರು. ಹೇಳೋ ಯಾಕೋ ಮೀನಾ ಅವರ ಕೊಲೆ ಮಾಡಿದೆ? ಎಂದು ಗದರಿಸಿದರು. ಆತ ನಾನೇನೂ ಮಾಡಿಲ್ಲಾ ಸಾರ ಎಂದು ಅಲವತ್ತುಕೊಂಡ. ಪೊಲೀಸರು ನೀನೇ ಅವಳನ್ನು ರೇಪ ಮಾಡಿ ಸಾಯಿಸಿರುವೆ ಎಂದು ಲಾಠಿ ಬೀಸಿದರು. ಆಗ ಚೆಂದೂ ಹೌದು ನಾನೇ ರೇಪ ಮಾಡಿದ್ದು ಆದರೆ ಅವರನ್ನು ಕೊಲೆ ಮಾಡಿಲ್ಲ, ದಯವಿಟ್ಟು ನನ್ನ ಬುಟ್ಟಬಿಡ್ರಿ ಎಂದು ರೋಧಿಸಿದ. ಮಗನೇ ರೇಪ ಮಾಡಿದ್ಯಾ ಅಂತ ನಾಲ್ಕೈದು ಏಟ ಹಾಕಿದರು. ಹ್ಞೂಂ! ಯಾವಾಗ ಮಾಡಿದೆ ಬೊಗಳು ಎಂದು ಇನ್ಸಪೆಕ್ಟರ್ ಅವಾಜ್ ಹಾಕಿದಾಗ ಚೆಂದೂ ಗದಗದ ನಡುಗುತ್ತಲೇ..ಅಂದು..ಅಂದು ಕಾಲು ಉಳುಕಿತ್ತು..ಕಾಲು..ಉಳುಕಿದಾಗಲೇ ರೇಪ್ ಮಾಡಿದೆ..ಅವರೇ ಹೇಳಿ..ಹೇಳಿಕೊಟ್ಟರು ಎಂದು ಬಿಕ್ಕುತ್ತಲೇ ನುಡಿದ. ಇನ್ಸ್‌ಪೆಕ್ಟರ್ ಗೆ ಈತನ ಮಾತುಗಳು ವಿಚಿತ್ರವೆನಿಸಿದವು. ಇವನನ್ನು ಲಾಕಪಗೆ ಹಾಕಿ ಚೆನ್ನಾಗಿ ರುಬ್ಬಿ ಅಂದರೆ ಬಾಯಿಬಿಡ್ತಾನೆ ಬೋಳಿಮಗಾ ಎಂದು ಕಾನಸ್ಟೇಬಲ್ ಗಳಿಗೆ ಹೇಳಿ ಹೊರಬಂದನು. ಸುಮಾರು ಹೊತ್ತಾದ ಮೇಲೆ ಕಾನ್ಸ್‌ಟೇಬಲ್ ಬಂದು ಸಾಹೇಬರೆ ಆತ ಮುಗ್ದ, ಮೀನಾಳ ಕಾಲಿನ ಉಳುಕು ತೆಗೆದಿರುವುದನ್ನೇ ರೇಪ್ ಎಂದು ಅನ್ಕೊಂಡಿದ್ದಾನೆ ಎಂದನು. ಅದೇ ಸಮಯಕ್ಕೆ ವೆಂಕಟಾಚಲಯ್ಯನವರು ಬಂದು ಚೆಂದೂ ತುಂಬಾ ಮುಗ್ಧ ಅವನಿಗೇನೂ ಗೊತ್ತಿಲ್ಲ, ದಯವಿಟ್ಟು ಬಿಟ್ಟು ಬಿಡಿ ಎಂದು ಮೊರೆಯಿಟ್ಟರು, ಹೀಗಾಗಿ ಚೆಂದೂನನ್ನು ಬಿಡುಗಡೆಗೊಳಿಸಿದರು.
ಇನ್ಸಪೆಕ್ಟರವರು ಶವದ ಭಾವಚಿತ್ರವನ್ನು ಗಮನಿಸುತ್ತಿರುವಾಗ ಅದರ ಬಲತೊಡೆಯಲ್ಲಿ ಯಾವುದೋ ಮಾರ್ಕ ಇರುವಂತೆ ಕಂಡಿತು. ಹೌದು ಅದು ಪ್ರಸಿದ್ದ ಕಂಪನಿಯ ಶೂ‌ ಮಾರ್ಕ. ಕಾನ್ಸ್‌ಟೇಬಲ್ ಈ ಊರಲ್ಲಿ ಯಾರು ಈ ರೀತಿಯ ಶೂ ಹಾಕುತ್ತಾರೆಂದು ಚೆಕ್ ಮಾಡಿ ಇಮಿಡಿಯೆಟ್ ಆಗಿ ರಿಪೋರ್ಟ್ ಮಾಡಿ ಎಂದನು.
ಎರಡು ದಿನಗಳ ತರುವಾಯ ಕಾನ್ಸ್‌ಟೇಬಲ್ ಚೆಲುವ ಎನ್ನುವವನನ್ನು ಎಳೆದುಕೊಂಡು ಬಂದಿದ್ದ. ಹೇಳೋ ಮೀನಾ ಅವರನ್ನೇಕೆ ಕೊಲೆ ಮಾಡಿದೆ? ಎಂದು ವಿಚಾರಣೆ ಶುರುಮಾಡಿದರು. ನನಗೂ ಈ ಕೊಲೆಗೂ ಸಂಬಂಧವಿಲ್ಲವೆಂದು ಆತ ವಾದಿಸಿದ. ಈ ಕಂಪನಿಯ ಬೂಟು ಧರಿಸುವವನು ಈ ಊರಲ್ಲಿ ನೀನೊಬ್ಬನೆ..ನೀನೇ ಅವಳನ್ನು ಕೊಲೆ ಮಾಡಿ ಬೂಟುಗಾಲಿನಿಂದ ತುಳಿದಿರುವೆ. ಅವಳ ತೊಡೆ ಮೇಲೆ ನಿನ್ನ ಬೂಟಿನ ಮಾರ್ಕ ಇದೆ. ಸರಳ ರೀತಿ ಒಪ್ಕೊಂಡ್ರೆ ಓಕೆ. ಇಲ್ಲಾ ಅಂದರೆ ಏರೋಪ್ಲೇನ್ ಎತ್ತಿಸಿಬಿಡುವೆ ಹುಷಾರ್ ಎಂದು ಲಾಠಿಲೆ ದನಕ್ಕ ಬಡಿಯುವಂಗ ಬಡಿದರು. ವಿಧಿಯಿಲ್ಲದೇ ತಾನೇ ರೇಪ್ ಮಾಡಿ ಮೀನಾಳನ್ನು ಕೊಲೆ ಮಾಡಿರುವುದಾಗಿ ಸತ್ಯ ಕಕ್ಕಿದ. 
**********
ಸುಭಾಷರವರಿಗೆ ಫೋನ್ ಮಾಡಿ ಕೇಸ್ ಬಗೆಹರಿದಿರುವ ವಿಷಯವನ್ನು ಇನ್ಸ್‌ಪೆಕ್ಟರ್ ತಿಳಿಸಿದರು. ವೆಂಕಟಾಚಲಯ್ಯನವರಿಗೂ ಸುದ್ದಿ ತಲುಪಿತು. ವೆಂಕಟಾಚಲಯ್ಯ ಮನೆಗೆ ಬಂದು ದ್ರಾಕ್ಷಾಯಿಣಿಗೆ 'ಲೇ ದ್ರಾಕ್ಷು ಮೀನವ್ವಳನ್ನು ಕೊಂದಿದ್ದು ಆ ಶೋಕಿ ಬಡ್ಡಿಮಗಾ ಚೆಲುವನಂತೆ. ಮುದಿ ವಯಸ್ಸಾದರೂ ಮಗಳ ವಯಸ್ಸಿನವಳ ಮೇಲೆ ಕಣ್ಣ ಹಾಕಿದ್ದಾನೆ ನೋಡು. ಈ ಕಾಲದಲ್ಲಿ ಯಾರನ್ನ ನಂಬಬೇಕು ಯಾರನ್ನ ಬಿಡಬೇಕು ಒಂದೂ ಅರ್ಥವಾಗುತ್ತಿಲ್ಲ' ಎನ್ನುತ್ತಾ ವೆಂಕಟಾಚಾಲ ಸ್ಟೇಶನ್ನಿಗೆ ಹೋಗಿಬರುವೆ ಎಂದು ತಿಳಿಸಿ ಹೊರನಡೆದನು. 
ಇತ್ತ ದ್ರಾಕ್ಷಾಯಿಣಿಯ ಮನಸ್ಸಿನೊಳಗ ತಳಮಳ ಶುರುವಾತು. ಇವರೇಕೆ ಹಾಗಂದು ಹೋದರು. ಯಾರನ್ನು ನಂಬಬೇಕೋ ಯಾರನ್ನ ಬಿಡಬೇಕೋ ಎಂದು ಹಾಗೇಕೆ ಹೇಳಿದರು? ಒಂದು ವೇಳೆ ಚೆಲುವ ಎಲ್ಲಾ ಸತ್ಯವನ್ನು ಬಾಯ್ಬಿಟ್ಟನಾ. ಹೌದು ಬಾಯಿ ಬಿಟ್ಟಿರಬೇಕು ಅದಕ್ಕಾಗಿಯೇ ಇವರು ಹಾಗೆ ಮಾತಾಡಿ ಹೋಗಿದ್ದು, ಇನ್ನು ಈ ದರಿದ್ರ ಮುಖವನ್ನು ಹೇಗೆ ಅವರಿಗೆ ತೋರಿಸಲಿ? ಎಂದು ಚಿಂತಿಸುತ್ತಾ ಕಂಬಕ್ಕೊರಗಿ ಕುಸಿದು ಕುಳಿತುಕೊಂಡಳು.
*******
ಇನ್ಸ್‌ಪೆಕ್ಟರ್ ಸಹಿತವಾಗಿ ವೆಂಕಟಾಚಲಯ್ಯನವರು ಮನೆಗೆ ಬಂದರು. ದ್ರಾಕ್ಷಾಯಿಣಿ ದ್ರಾಕ್ಷಾಯಿಣಿ ಎಂದು‌ ಕೂಗಿದರೂ ಒಳಗಿಂದಾರೂ ಓಗೊಡಲಿಲ್ಲ. ದ್ರಾಕ್ಷಾಯಿಣಿ ಕಂಬಕ್ಕೊರಗಿ ಕುಳಿತವಳು ಹಾಗೇ ಕುಳಿತವಳೆ. ದ್ರಾಕ್ಷಾಯಿಣಿ ಎಂದು ವೆಂಕಟಾಚಲ ಮೈದಡವಿದಾಗ ಅವಳ ಪ್ರಾಣಪಕ್ಷಿ ಹಾರಿಹೋಗಿತ್ತು. ನೋಡಿದರೆ ಕೈಯಲ್ಲಿ ವಿಷದ ಬಾಟಲಿಯಿತ್ತು. ವೆಂಕಟಾಚಲ ದ್ರಾಕ್ಷಾಯಿಣೀ ಎಂದು ಕೂಗಿದ. ಇನ್ಸ್‌ಪೆಕ್ಟರ್ ಒಳಗೆ ಬಂದು ದ್ರಾಕ್ಷಾಯಿಣಿಯ ಸಾವು ಕಂಡು ಅವಕ್ಕಾಗಿ ನಿಂತ. ವೆಂಕಟಾಚಲಯ್ಯನವರ ಶೋಕ ಮುಂದುವರೆದಿತ್ತು.
    ಅಷ್ಟರಲ್ಲಾಗಲೇ ಬೆಳಗಾವಿಯಿಂದ ಸುಭಾಷರವರೂ ಬಂದರು. ಒಳಗಡೆ ದ್ರಾಕ್ಷಾಯಿಣಿ ಶವವಾಗಿ ಬಿದ್ದಿರುವುದನ್ನು ಗಮನಿಸಿ, ಹೀಗೇಕೆ ಮಾಡಿದಿರಿ ಇನ್ಸಪೆಕ್ಟರ್. ನಿಮಗೆ ಆ ವಿಷಯವನ್ನು ರಹಸ್ಯವಾಗಿಯೇ ಇಡಬೇಕೆಂದು ಫೋನಿನಲ್ಲಿ ಹೇಳಿರಲಿಲ್ಲವೇ? ಎಂದು ಇನ್ಸಪೆಕ್ಟರ್ ನ್ನು ಹೊರಕರೆದು ಪ್ರಶ್ನಿಸಿದರು. ಆಗ ಇನ್ಸಪೆಕ್ಟರ್ ನಾವೇನೂ ಹೇಳಿಲ್ಲಾ ಸರ್ ಆದರೆ ಚೆಲುವ ಸಿಕ್ಕಿ ಬಿದ್ದ ಸುದ್ಧಿ ಕೇಳಿ ಎಲ್ಲಿ ತನ್ನ ಗುಟ್ಟು ರಟ್ಟಾಗುವುದೆಂದು ತಿಳಿದು ಅವಳೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದನು.     
          ಅದೇನಾಗಿತ್ತೆಂದರೆ ಅಂದು ಸುಶಾಂತನ ಜೊತೆ ಸುತ್ತಾಡಿ ಬಂದ ಮೀನಾ ತನ್ನ ರೂಮಿನಲ್ಲಿ ವಿಶ್ರಮಿಸುತ್ತಿದ್ದಳು. ವೆಂಕಟಾಚಲ ಮಾಮೂಲಿನಂತೆ ಯಾವುದೋ ಕೆಲಸದ ಮೇಲೆ ಪರ ಊರಿಗೆ ಹೋಗಿದ್ದನು. ಸುಶಾಂತನೂ ಹೊರಗೆ ಹೋಗಿರಬೇಕಾದರೆ ಯಾರೋ  ಗಂಡು ಹೆಣ್ಣು ಪಿಸುಗುಟ್ಟುತ್ತಿರುವುದನ್ನು ಕೇಳಿಸಿಕೊಂಡ ಮೀನಾ ಹೊರಬಂದು ಹಿತ್ತಲಿನಲ್ಲಿ ನೋಡಿದರೆ ದ್ರಾಕ್ಷಾಯಿಣಿ ಚೆಲುವನ ತೋಳಿನಲ್ಲಾಡುತಿರುವುದನ್ನು ಕಂಡಳು. ಛಿ ! ಈ ವಯಸ್ಸಲ್ಲೂ ಅದೇನು ಚಪಲ ಎಂದು ಅವರಿಬ್ಬರಿಗೂ ಚೆನ್ನಾಗಿ ಉಗಿದು ರೂಮಿಗೆ ವಾಪಸ್ಸಾಗಿದ್ದಳು. ತಮ್ಮ ಕಳ್ಳ ಸಂಬಂಧದ ಗುಟ್ಟು ರಟ್ಟಾಗುವುದೆಂದು ತಿಳಿದ ಚೆಲುವ ಮತ್ತು ದ್ರಾಕ್ಷಾಯಿಣಿಯರು ಅವಳನ್ನು ಮುಗಿಸುವ ಪ್ಲ್ಯಾನ್ ಮಾಡಿದ್ದರು. ಅಂದು ರಾತ್ರಿ ಮಲಗಿರಬೇಕಾದರೆ ಮೀನಾಳನ್ನು ಉಸಿರುಗಟ್ಟಿಸಿ ಕೊಂದ ನೀಚ ಚೆಲುವ ಆಮೇಲೆ ಅತ್ಯಾಚಾರ ಎಸಗಿ, ಬೂಟುಗಾಲಿನಿಂದ ತಗಣಿ ಒರೆಯುವಂತೆ ಅವಳ ತೊಡೆ ಮೇಲೆ ಕಾಲಿಟ್ಟು ತುಳಿದಿದ್ದನು. ಯಾವಾಗ ಚೆಲುವನನ್ನು ಪೊಲೀಸ್ ರು ಬಂಧಿಸಿದರೆಂಬ ಸುದ್ದಿ ದ್ರಾಕ್ಷಾಯಿಣಿಗೆ ತಿಳಿಯಿತೊ ಇನ್ನು ತನಗುಳಿಗಾಲವಿಲ್ಲವೆಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಳು.
********
     ಸುಭಾಷರವರು ಈ ವಿಷಯವನ್ನೆಂದೂ ಬಾಯಿ ಬಿಡದಂತೆ ಇನ್ಸ್‌ಪೆಕ್ಟರ್ ಗೆ ವಿನಂತಿ ಮಾಡಿಕೊಳ್ಳುತ್ತಾ.. ದ್ರಾಕ್ಷಾಯಿಣಿ ತನ್ನ ಗೆಳೆಯನ ಹೃದಯದಲ್ಲಿ ಎಂದೆಂದಿಗೂ ಗರತಿಯಾಗಿಯೇ ಉಳಿಯಬೇಕು ಎಂಬುವುದೆ ನನ್ನಾಸೆ ಎಂದು ಕೈಮುಗಿದು ಭಿನ್ನವಿಸಿಕೊಂಡರು. ದ್ರಾಕ್ಷಾಯಿಣಿಯ ಸಾವಿನ ನಿಜ ಕಾರಣ ಕಡೆತನಕವೂ ವೆಂಕಟಾಚಲನಿಗೆ ತಿಳಿಯಲೇ ಇಲ್ಲ. ಅವಳು ಮಕ್ಕಳಾಗದಿರುವುದಕ್ಕಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಳೆಂದು ಊರು ತುಂಬ ಸುದ್ದಿಯಾಯಿತು. ಸುಶಾಂತನು ಸಾನಾಪೂರದ ಬೆಟ್ಟವನ್ನೆಲ್ಲಾ ಕಷ್ಟಪಟ್ಟು ತಿರುಗಿ ಸಂಗೀತ ಶಿಲೆಗಳನ್ನು ಕೊನೆಗೂ ಪತ್ತೆ ಹಚ್ಚಿದ. ಅವುಗಳನ್ನು ಮೀನಾಳ ಸಮಾಧಿ ಮೇಲೆ ಪ್ರತಿಷ್ಠಾಪಿಸಿದ. ಇಂದಿಗೂ ಅವರಿಬ್ಬರ ಅಮರ ಪ್ರೇಮದ ಸಂಗೀತವನ್ನು ಮೊಳಗಿಸುತ್ತಿವೆ ಆ ಸಾನಾಪೂರದ ಸಂಗೀತ ಶಿಲೆಗಳು.

Comments

ಇವುಗಳನ್ನೂ ಓದಿ

ವರ್ಧನ ಸಾಮ್ರಾಜ್ಯದ ಇತಿಹಾಸ

ವರ್ಧನ ಸಾಮ್ರಾಜ್ಯದ ಇತಿಹಾಸ ಗುಪ್ತ ಸಾಮ್ರಾಜ್ಯದ ಅವನತಿಯ ನಂತರ ಉತ್ತರ ಭಾರತದಲ್ಲಿ ಅನೇಕ ಚಿಕ್ಕ ಚಿಕ್ಕ ಸಂಸ್ಥಾನಗಳು ಸ್ಥಾಪಿಸಲ್ಪಟ್ಟವು. ಅವುಗಳಲ್ಲಿ ವರ್ಧನ ಸಾಮ್ರಾಜ್ಯವೂ ಒಂದು. ಈ ಸಾಮ್ರಾಜ್ಯದ ಸ್ಥಾಪಕ ಪ್ರಭಾಕರ ವರ್ಧನ. ಅವನ ರಾಜಧಾನಿ ಥಾನೇಶ್ವರ. ಹೀಗಾಗಿ ಇವರನ್ನು ಥಾನೇಶ್ವರದ ವರ್ಧನರೆಂದೂ ಕರೆಯುತ್ತಿದ್ದರು. ಪ್ರಭಾಕರ ವರ್ಧನ ಶಕ್ತಿಶಾಲಿಯೂ ಶೂರನೂ ಆಗಿದ್ದನು. ಆತನಿಗೆ ರಾಜವರ್ಧನ, ಹರ್ಷವರ್ಧನ ಹಾಗೂ ರಾಜಶ್ರೀಯೆಂಬ ಮೂವರು ಮಕ್ಕಳಿದ್ದರು. ಪ್ರಭಾಕರ ವರ್ಧನನ ಮರಣದ ನಂತರ ರಾಜವರ್ಧನನು ಪಟ್ಟಕ್ಕೆ ಬಂದನು. ಆದರೆ ಧುರ್ಧೈವದಿಂದ ಆತನ ಕೊಲೆಯಾಗುತ್ತದೆ. ಹೀಗಾಗಿ ಹರ್ಷವರ್ಧನನು ಕ್ತಿ.ಶ.606 ರಿಂದ ಕ್ರಿ.ಶ 647 ರವರೆಗೆ ರಾಜ್ಯಭಾರ ಮಾಡುತ್ತಾನೆ.  ಹರ್ಷವರ್ಧನನು ಮಾಳ್ವ ಹಾಗೂ ಕನೋಜದ ಮೇಲೆ ದಂಡೆತ್ತಿ ಹೋಗಿ ಸದೆಬಡಿಯುತ್ತಾನೆ.ಹರ್ಷವರ್ಧನನ ತಂಗಿ ರಾಜಶ್ರೀಯನ್ನು ಮೌಖೇರಿಯ ಗೃಹವರ್ಮನಿಗೆ ವಿವಾಹ ಮಾಡಿ ಕೊಡಲಾಗಿರುತ್ತದೆ. ಮಾಳ್ವದ ದೇವಗುಪ್ತನು ಗೃಹವರ್ಮನನ್ನು ಕೊಲೆಗೈದು, ರಾಜಶ್ರಿಯನ್ನು ಬಂಧನದಲ್ಲಿಟ್ಟಿರುತ್ತಾನೆ. ಇದನ್ನು ಸಹಿಸದ ಅಂದಿನ ರಾಜ ರಾಜವರ್ಧನನು ಆತನ ಮೇಲೆ ದಂಡೆತ್ತಿಹೋಗಿ ಸೋಲಿಸಿರುತ್ತಾನೆ. ಮುಂದೆ ಗೌಡ ದೇಶದ ಶಶಾಂಕನು ಮಿತ್ರನ ವೇಷ ಧರಿಸಿ ಬಂದು ರಾಜವರ್ಧನನ ಕೊಲೆ ಮಾಡುತ್ತಾನೆ. ಹರ್ಷವರ್ಧನ ಹರ್ಷವರ್ಧನನು ಬಲುಶಕ್ತಿಶಾಲಿ ಸಾಮ್ರಾಟನಾಗಿದ್ದು ಸುಮಾರು 40 ವರ್ಷಗಳ ಕಾಲ ಆಳ್ವಿಕೆ ನಡೆಸಿದ. ಆತನ ಸಾಮ್ರಾಜ್ಯವು ಉತ್ತರದಲ್ಲಿ