ನಿನ್ನ ಹೆರುವಾಗಲೂ ನನಗಿಷ್ಟು ನೋವಾಗಿರಲಿಲ್ಲ ಕಂದಾ
ಈ ಇಳಿವಯಸ್ಸಲ್ಲಿ ನನ್ನ ತೊರೆದು ದೂರಾದೆಯಲ್ಲ ಕಂದಾ
ಮಮತೆಯ ಮುಂದೆ ಮೊಹಬ್ಬತ್ ವಿಜಯದ ನಗೆ ಬೀರಿ
ಗಹಗಹಿಸಿ ನಗುತಿರಲು ನನ್ನಳುವಿಗೆ ಕೊರತೆಯಿಲ್ಲ ಕಂದಾ
ಅಂದು ಪುಟಾಣಿ ಪಾದಗಳಿಂದ ಎದೆಗೊದೆದು ನಗುತ್ತಿದ್ದೆ
ಮುಂದೆಯೂ ಹಾಗೆ ಮಾಡುವೆಯೆಂಬ ಕಲ್ಪನೆಯಿರಲಿಲ್ಲ ಕಂದಾ
ನನ್ನೊಡಲ ಹಸಿವ ಕಡೆಗಣಿಸಿ ನಿನಗೆ ತುತ್ತನೀಯುತ್ತಿದ್ದೆ
ಈ ಅಮ್ಮನ ಎದೆವಾಲಿನಲ್ಲಿ ಎಂದೂ ವಿಷವಿರಲಿಲ್ಲ ಕಂದಾ
ನಾ ನೆಟ್ಟ ಮರ ನೆರಳಾಗಲಿಲ್ಲವೆಂಬ ಕೊರಗಿಹುದೆನೋ ನಿಜ
ಸಾಂತ್ವನದ ತಂಪೆರೆಯಲು 'ಆನಂದ'ನ ಪದ್ಯಗಳಿವೆಯಲ್ಲ ಕಂದಾ
ಇದೇ ಲೇಖಕರ ಕತೆ ಓದಲು ಕ್ಲಿಕ್ ಮಾಡಿ
Very nice sir
ReplyDelete