ಗಜಲ್ 2
*********
ನನ್ನ ಮನೆಯ ಹಿತ್ತಲದ ಹೂವು ತತ್ತರಿಸಿ ಹೋಯಿತು ದೊರೆ
ಕತ್ತಲಲ್ಲಿ ಕರಾಮತ್ತು ನಡೆದು ಕತ್ತೆತ್ತಿ ತಿರುಗದಂತಾಯಿತು ದೊರೆ
ಜೀವ ಬತ್ತಿದಾಗ ಮೇಣದ ಬತ್ತಿ ಹಿಡಿದು ಸಾಂತ್ವನವ ನುಡಿದು
ಮಾರು ದೂರು ನಡೆದ ಸಮಾಜ ನಿದ್ದೆಹೋಯಿತು ದೊರೆ
ಅಳುವವರ ಕಣ್ಣೀರು ಬತ್ತಿದರೂ ಆಳುವವರು ಕಣ್ತೆರೆಯಲಿಲ್ಲ
ಕಾಮದ ಮುಷ್ಠಿಯಲಿ ಕೌಮಾರ್ಯ ಕಮರಿ ಹೋಯಿತು ದೊರೆ
ನಡು ಬಜಾರಿನಲ್ಲಿ ಬಡ ಹೆಣ್ಣು ಮಗಳ ಶೀಲ ಬಿಕರಿಯಾಯಿತಂದು
ರೂಪಾಯಿಗೊಂದರಂತೆ ಅವಳ ಮಾನ ಖಾಲಿಯಾಯಿತು ದೊರೆ
ಭಾವಚಿತ್ರ ಸೇರಿದ ಅವಳೆದುರಿಗೆ ದೀಪ ಇನ್ನೂ ತಣ್ಣಗುರಿಯುತಿದೆ
ಬಡಬಾಗ್ನಿಯಾದರೆ ಈ ಜಗದ 'ಆನಂದ'ವೇ ನಂದಿ ಹೋದಿತು ದೊರೆ
ಇವುಗಳನ್ನೂ ಓದಿ
Comments
Post a Comment
ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ