ಸುಮ್ಮನಿರಲಾರದೆ ಬರಿ ಧರ್ಮವೆಂದೇ ಅಷ್ಟೇ ನಾನೇನೂ ಮಾಡಿರಲಿಲ್ಲ
ಕೋಮುವಾದಿ ಎಂಬ ಬಿರುದು ಕೊಟ್ಟರಂದೇ ನಾನೇನೂ ಮಾಡಿರಲಿಲ್ಲ
ತ್ರಾಸಿನಲಿ ಬರಿ ಪ್ರಾಸಗಳ ಜೋಡಿಸಿ, ಅಕ್ಷರಗಳ ಮಾಲೆ ಹೆಣೆದಿದ್ದೆ ಅಷ್ಟೇ
ಕವಿಯೆಂದು ಕರೆದು ಪ್ರಶಸ್ತಿ ನೀಡಿಯೇ ಬಿಟ್ಟರಂದೇ ನಾನೇನೂ ಬರೆದಿರಲಿಲ್ಲ
ಖಾದಿಯ ತೊಟ್ಟು ಓಣಿಯ ನಾಲ್ಕಾರು ಕದನಗಳನು ಬಗೆಹರಿಸಿದ್ದೆ ಅಷ್ಟೇ
ರಾಜಕಾರಣಿಯೆಂದು ಜನ ಜೈಕಾರ ಹಾಕಿದರಂದೇ ನಾನೇನೂ ಮಾಡಿರಲಿಲ್ಲ
ಪರದೆಯ ಮುಂದೆ ನಿಲ್ಲಿಸಿದಾಗ ಬರಿ ಬಾಯಿ ಬಡಿದೆ ಮೂಗನಂತೆ ಅಷ್ಟೇ
ನಟಚಕ್ರವರ್ತಿಯೆಂದು ಪುತ್ಥಳಿಯನೇ ಮಾಡಿಟ್ಟರಂದೇ ನಾನೇನೂ ನಟಿಸಿರಲಿಲ್ಲ
ಎದೆ ಎದೆ ಬಡಿದುಕೊಂಡು 'ಆನಂದ' ವಿರದೆ ಹಸಿವು ಎಂದು ಕೂಗಿದೆ ಅಷ್ಟೇ
ಅನ್ನದ ಬಟ್ಟಲ ಕಸಿದು ಸಾಯಿ ಮಗನೇ ಅಂದರಂದೇ ನಾನೇನೂ ಬದುಕಲಿಲ್ಲ
ಈ ಗಜಲ್ ನ್ನೂ ಓದಿ
ಗಜಲ್ ನಿಮಗೆ ಸಿದ್ಧಿಸಿದೆ ಅಷ್ಟೇ
ReplyDelete