ಆ ಮತ ಈ ಮತವೆಂಬ ಹಂಗೇತಕೋ ಬರಿ ಮತದಾರನಾಗು ಸಾಕು ಪಟವಾಗಿ ಬಾನೆತ್ತರ ನಾನೇರುವೆ ನೀನದಕೆ ಬರಿ ದಾರವಾಗು ಸಾಕು ಚಿಗುರಿ ಹಬ್ಬುತ ನಲಿದು ನನ್ನವರಿಗೆ ನೆರಳಾಗಿ ಅವರೂ ಚಿಗುರಬೇಕು ಬುಡದಲಿ ಬೆವರು ಸುರಿಸುವ ಬಡ ತೊಗಲಿನ ಕೂಲಿಯಾಗು ಸಾಕು ನಾನಾಳುವವನು ಅಳುವುದಿಲ್ಲ ಅತ್ತರದು ಬರಿ ಬಹಿರಂಗದ ನಾಟಕ ಮಹಿಯನೊಡೆಯನಾಗಲು ಮಾಡುವ ಪೂಜೆಗೆ ಬಲಿಯಾಗು ಸಾಕು ಮೈಯೊಣಗಿ ನಾರಿದರೇನು ಕುಶಲವಾಗಿರಲಿ ಕಡೆತನ ತೋರು ಬೆರಳು ತೇರಿನಲಿ ಸಾಗುವವನು ನಾನು ಭಾರ ಹೊರುವ ಗಾಲಿಯಾಗು ಸಾಕು ಅರ್ಧರಾತ್ರಿಯಲಿ ಅಥರ್ವನಿಗೆ ಎಚ್ಚರಾಗಿ ಬುದ್ದನಾದರೂ ಚಿಂತೆಯಿಲ್ಲ ಪ್ರಶ್ನಿಸಿ ಪ್ರಬುದ್ಧನಾಗದೇ ನನಗೇ ನೇತಾಡುವ ಬಾವಲಿಯಾಗು ಸಾಕು ಇದನ್ನೂ ಓದಿ ಗಝಲ್ ಯಾರಿಂದ್ಯಾರಿಗೆ ಎಲ್ಲಿಂದೆಲ್ಲಿಗೆ
EDUCATION | ENTERTAINMENT | INFOTAINMENT