Skip to main content

ಗಝಲ್ @ ಆನಂದ ಮಾಲಗಿತ್ತಿಮಠ

ಆ ಮತ ಈ ಮತವೆಂಬ ಹಂಗೇತಕೋ ಬರಿ ಮತದಾರನಾಗು ಸಾಕು
ಪಟವಾಗಿ ಬಾನೆತ್ತರ ನಾನೇರುವೆ ನೀನದಕೆ ಬರಿ ದಾರವಾಗು ಸಾಕು

ಚಿಗುರಿ ಹಬ್ಬುತ ನಲಿದು ನನ್ನವರಿಗೆ ನೆರಳಾಗಿ ಅವರೂ ಚಿಗುರಬೇಕು
ಬುಡದಲಿ ಬೆವರು ಸುರಿಸುವ ಬಡ ತೊಗಲಿನ ಕೂಲಿಯಾಗು ಸಾಕು

ನಾನಾಳುವವನು ಅಳುವುದಿಲ್ಲ ಅತ್ತರದು ಬರಿ ಬಹಿರಂಗದ ನಾಟಕ
ಮಹಿಯನೊಡೆಯನಾಗಲು ಮಾಡುವ ಪೂಜೆಗೆ ಬಲಿಯಾಗು ಸಾಕು

ಮೈಯೊಣಗಿ ನಾರಿದರೇನು ಕುಶಲವಾಗಿರಲಿ ಕಡೆತನ ತೋರು ಬೆರಳು 
ತೇರಿನಲಿ ಸಾಗುವವನು ನಾನು  ಭಾರ ಹೊರುವ ಗಾಲಿಯಾಗು ಸಾಕು

ಅರ್ಧರಾತ್ರಿಯಲಿ ಅಥರ್ವನಿಗೆ ಎಚ್ಚರಾಗಿ ಬುದ್ದನಾದರೂ ಚಿಂತೆಯಿಲ್ಲ
ಪ್ರಶ್ನಿಸಿ ಪ್ರಬುದ್ಧನಾಗದೇ ನನಗೇ ನೇತಾಡುವ ಬಾವಲಿಯಾಗು ಸಾಕು

ಇದನ್ನೂ ಓದಿ








 

Comments

Post a Comment

ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ

ಇವುಗಳನ್ನೂ ಓದಿ

ಮೌರ್ಯ ಸಾಮ್ರಾಜ್ಯ ,ಆಡಳಿತ

ಮೌರ್ಯ ಸಾಮ್ರಾಜ್ಯದ ಆಡಳಿತ ಭಾರತದ ಮೆಕೈವರ ಎನಿಸಿದ್ದು - ಕೌಟಿಲ್ಯ ಕರ್ನಾಟಕದಲ್ಲಿ ದೊರೆತಿರುವ ಅಶೋಕನ ಒಟ್ಟು ಶಾಸನಗಳು - ೧೮ ಮೌರ್ಯರ ಆಡಳಿತದಲ್ಲಿ ನಗರಾಡಳಿತದ ಅಧಿಕಾರಿ - ನಗರ ವ್ಯವಹಾರಿಕ ಭೂಮಿಯ ಅಳತೆ, ಮಾಲೀಕತ್ವ, ಮತ್ತು ಭೂಕಂದಾಯ ಮೇಲ್ವಿಚಾರಣಾಧಿಕಾರಿ - ರಜ್ಜುಕ ಭೂಮಿಯ ಉತ್ಪನ್ನದಲ್ಲಿ ನೀಡಬೇಕಾದ ಭೂಕಂದಾಯ - ಆರನೆಯ ಒಂದು ಭಾಗ ಧರ್ಮ ಮಹಾಮಾತ್ರರ ಪ್ರಮುಖ ಕಾರ್ಯ - ನ್ಯಾಯ ತೀರ್ಮಾನ ಮತ್ತು ಧರ್ಮ ಪ್ರಚಾರ ಸಾರ್ವಜನಿಕ ಹಿತವನ್ನು ಗಮನಿಸುವ ಅಧಿಕಾರಿ - ವಜ್ರಭೂಮಿಕ ವಜ್ರಭೂಮಿಕನ ಮುಖ್ಯ  ಕಾರ್ಯಗಳು - ಭಾವಿ,ರಸ್ತೆ,ತೋಪುಗಳ ನಿರ್ಮಾಣ ಮೌರ್ಯರ ಕಾಲದಲ್ಲಿಯ ಪ್ರಾಂತ್ಯಗಳು - ಪ್ರಾಚ್ಯ, ( ತಕ್ಷಶಿಲೆ) ಉತ್ತರಾಪಥ (ಉಜ್ಜಯಿನಿ) ಅವಂತೀ ( ಕೋಸಲ) ದಕ್ಷಿಣಾಪಥ ( ಸುವರ್ಣಗಿರಿ) ಅಶೋಕನ ಕಾಲದಲ್ಲಿ ಸೇರಿಸಲ್ಪಟ್ಟ ೫ ನೇ ಪ್ರಾಂತ್ಯ - ಕಳಿಂಗ್ ಗ್ರಾಮಗಳ ಆಡಳಿತ ನಿರ್ವಹಣಾಧಿಕಾರಿ - ಗ್ರಾಮಿಕ ಹತ್ತು ಗ್ರಾಮಗಳ ಮೇಲ್ವಿಚಾರಕ - ಗೋಪ ಪ್ರಾಂತಗಳ ಕೆಳಗಿನ ಜನಪದಗಳ ಮೇಲ್ವಿಚಾರಕ - ಸಮಹರತೃ ಮೌರ್ಯರ ಆಡಳಿತ ಮೊಘಲರ ಆಡಳಿತಕ್ಕಿಂತ ಮೇಲಾಗಿತ್ತು ಎದಿರುವ ಇತಿಹಾಸಜ್ಞ - ವಿನ್ಸೆಂಟ್ ಸ್ಮಿತ್ ಕೌಟಿಲ್ಯನ ಅರ್ಥಶಾಸ್ತ್ರ  ಹಸ್ತಪ್ರತಿಯನ್ನು ಪತ್ತೆ ಹಚ್ಚಿ ಆದುನಿಕ ಜಗತ್ತಿಗೆ ಸಿಗುವಂತೆ ಮುದ್ರಿಸಿ ಪ್ರಕಟಿಸಿದವರು-ಮೈಸೂರಿನ ಶಾಮಾಶಾಸ್ತ್ರಿಗಳು ಮೌರ್ಯರ ಕಾಲದ ಶಿಕ್ಷೆ ಕ್ರಿಮಿನಲ್ ಅಪರಾಧ - ಮರಣದಂಡನೆ ನೀಡಲಾಗುತ್ತಿತ...