ಯಾಕೆ ರಮ್ಯಾ ಹಿಂಗ ಸಿಡಕ್ತಾಯಿದಿಯಾ? ಕುತೂಹಲದಿಂದ ಪ್ರಶ್ನಿಸಿದಳು ಕವಿತಾ. ನಾನೆಂದರೇನು? ನನ್ನ ಸ್ಟೇಟಸ್ ಅಂದರೇನು? ಚಿಟಿಕೆ ಹೊಡೆದ್ರೆ ಹತ್ತಾರು ಆಳುಗಳು ನಡುಬಗ್ಗಿಸಿ ನಿಲ್ತಾವೆ. ಒಂದು ಸಣ್ಣ ಮುಗುಳ್ನಗೆಗೆ ನೂರಾರು ಹುಡುಗರು ಗುಲಾಮರಾಗಿ ಶರಣಾಗ್ತಾರೆ...ಅಂತಹುದರಲ್ಲಿ ಆ ಸಂಜಯ್ ನನ್ನ ನೋಡಿದ್ರೂ ನೋಡದಂತೆ ಹೋಗ್ತಾನಲ್ಲಾ ಕೊಬ್ಬು ಆತನಿಗೆ..ನಾನೂ ನೋಡ್ತೇನಿ ಎಷ್ಟ ದಿನಾ ಮುಖಾ ತಿರುಗಿಸಿ ಹೋಗ್ತಾನೋ ಎಂದು ಕೋಪದಿಂದ ಕೆಂಪೇರಿದ ಕೆನ್ನೆಯ ಹುಡುಗಿ ರಮ್ಯಾ ನುಡಿದಳು. ****** ಸಂಜಯ್ ಪಾಪ..ಮಿಡ್ಲ ಕ್ಲಾಸು ಹುಡುಗ. ವಯಸ್ಸಲ್ಲಿ ಲವ್ ಮಾಡಬೇಕು ಅಂದ್ರೆ ದುಡ್ಡಿರಲಿಲ್ಲ. ದುಡ್ಡಿದ್ದಾಗ ವಯಸ್ಸಿರಲಿಲ್ಲ. ಹಾಗೂ ಹೀಗೂ ಅವರಪ್ಪ ಕಷ್ಟಪಟ್ಟು ಡಿಗ್ರಿ ಓದಿಸಿದ್ದರು. ಯಾರೋ _"ಲೇ ಸಂಜ್ಯಾ ಕಾಂಪಿಟೇಟಿವ್ ಎಕ್ಸಾಂ ಕಟ್ಟಲಾ ಏನಾದ್ರೂ ಗೌರ್ಮೆಂಟು ಜಾಬ್ ಆದರೆ ಜೀವನಾ ಸುಧಾರಸ್ತದ" ಅಂದರು. ಈತನೋ ಕಟ್ಟಿಯೇ ಕಟ್ಟಿದ...ಒಂದರ ಮೇಲೆ ಒಂದು. ಎಲ್ಲದರಲ್ಲೂ ಗೋತ. ಈ ಕಾಂಪಿಟೇಟಿವ್ ಎಕ್ಸಾಂ ಕಟ್ಟೋ ರೊಕ್ಕದಾಗ ಎರಡ ಚುಲೋ ಮೂಡಲಗಿ ಎಮ್ಮಿ ಕಟ್ಟಬಹುದಾಗಿತ್ತು, ನಾಕ ಕಾಸ ಆದರೂ ಸಂಪಾದನೆಯಾಗ್ತಿತ್ತು ನಿನ್ನ ಹೆಣಾ ಎತ್ಲಿ ಎಂದು ಹಡದವ್ವ ಹಲಗಿ ಹೊಡದಂಗ ಬೈದಳು. ಎರಡ ದಿನದಾಗ ಆಕಿಗೆ ಈತ ಹಲಗಿ ಹಚ್ಚಿದ. ಎಲ್ಲಾ ಬಿಟ್ಟ...ಜೊತೆಗೆ ಗಡ್ಡಾನೂ. ಸಹವಾಸ ಕೆಟ್ಟಿತು. ಹಾಸಿಗೆ ಯಾವುದೋ ಹೇಸಿಗೆ ಯಾವುದೋ ಅನ್ನದ ಕುಡಕುಡದ ಸಿಕ್ಕಲ್ಲ...
EDUCATION | ENTERTAINMENT | INFOTAINMENT