ಮಣ್ಣು ಹೊತ್ತ ಹೆಗಲಿಗಂದು ಸುರಿಸಿದ ಬೆವರು ಗೊತ್ತಿತ್ತು
ಉರಿದ ಕಣ್ಣಿಗಂದು ಧೂಳುದುರಿ ಹರಿದ ಕಣ್ಣೀರು ಗೊತ್ತಿತ್ತು
ಇಟ್ಟಿಗೆಗಳ ಜೋಡಿಸುವಾತನು ಬರೀ ಗೋಡೆಯನು ಕಟ್ಟಿದ
ಮೂಢನಿಗಲ್ಲಿ ಮೂಡಿ ಬಂದ ಆಕಾರದ ಹೆಸರು ಗೊತ್ತಿತ್ತು
ದಣಿದು ತಾ ಕುಣಿದು ಉಳಿಯು ಮೂಡಿಸಿದ್ದು ಶಿಲ್ಪಚಿತ್ತಾರ
ಕಿಡಿಹಾರಲಲ್ಲೂ ಚಳಿಕಾಯಿಸುವ ಜನ ಮೂಳರು ಗೊತ್ತಿತ್ತು
ಮಂದಿರವೋ ಮಸೀದಿಯೋ ಮತ್ತೊಂದೋ ಏನಿದೆಯೋ
ಗೋಡೆಯ ಗೂನು ಬೆನ್ನಿಗಲ್ಲಿ ಹೊರುವ ತೊಡರು ಗೊತ್ತಿತ್ತು
ಮತ್ತೆ ಮತ್ತೆ ಹಳೆಯ ಗೋಡೆಗಳ ಗೊಡವೆಯೇಕೆ 'ಅಥರ್ವಾ'
ಗುಂಬಜಕ್ಕೂ ಅಂಬುಜಕ್ಕೂ ಭಾವವೊಂದೇ 'ದೇವರು' ಗೊತ್ತಿತ್ತು
Super sir
ReplyDelete