ಆ ಮುಳ್ಳು ಅಮಾಯಕತೆಯ ಪ್ರತೀಕ ಬಿಡಿ ಚುಚ್ಚಿದ್ದು ನನ್ನವರೆ.
ಆ ಚಿನ್ನದ ಕತ್ತಿಯದೇನೂ ತಪ್ಪಿರಲಿಲ್ಲ ಬೆನ್ನಿಗಿರಿದಿದ್ದು ನನ್ನವರೆ.
ನಂಬಿಕೆಯ ಅರಮನೆ ಸುಡುತಿರಲು ಕರಿ ಬೂದಿಯ ಕಲರವ
ಕಣ್ಣೀರು ಸುರಸಿ ನಂದಿಸಲು ಬರಬೇಡಿ ಸುಟ್ಟಿದ್ದು ನನ್ನವರೆ.
ಸ್ನೇಹದ ಪರಿಮಳದಲ್ಲಿ ಕೊಳೆತ ಶವದ ವಾಸನೆಯು ಬೆರೆತಿದೆ
ಅದು ಮೋಸವೆಂದು ಚಿತ್ಕರಿಸಿ ಸಾರಬೇಡಿ ಮಾಡಿದ್ದು ನನ್ನವರೆ.
ಗಾಜಿನ ಮನಸ್ಸಿಗೆ ಒಡೆವ ಕಲ್ಲಿನ ಮೇಲೆಯೆ ಮೋಹ ಜಾಸ್ತಿ
ತಾಗಿದರೂ ಚುಂಬನವೆಂದು ತಿಳಿದುಬಿಡಿ ಎಸೆದದ್ದು ನನ್ನವರೆ.
ಮೈಮರೆತು ಮಲಗಿದರೂ ಸಮಾಧಿಯೆಳೆದು ಶೋಕಿಸುತ್ತಾರಿಲ್ಲಿ
ಮುಖವಾಡಗಳನು ದೂರುತ್ತಿಲ್ಲ ಅಥರ್ವಾ ತೊಟ್ಟಿದ್ದು ನನ್ನವರೆ
Super
ReplyDeleteನಿಮ್ಮ ಕವನ ಬಹಳ ಸುಂದರವಾಗಿದೆ.
ReplyDeleteಅದರಲ್ಲಿಯ ಹತಾಶೆ,ನೋವು,ಕೊನೆಗೆ ಎಲ್ಲವನ್ನೂ ಒಪ್ಪಿಕೊಳ್ಳುವ ಸಹನೆ ಹಾಗು ಕ್ಷಮಾಗುಣ ಮನಮುಟ್ಟುತ್ತದೆ.
ತಮ್ಮ ಮೆಚ್ವುಗೆಗೆ ಧನ್ಯವಾದಗಳು
Deleteಈ ಕವನ ತುಂಬಾ ಅರ್ಥ ಗರ್ಭಿತವಾಗಿದೆ
ReplyDelete