ಒಂದು ಸಹಾಯ ಮಾಡಿ
ಬಡ ಗೋಡೆಯೆಂದು ಹೊರಡಬೇಡಿ
ನಡು ಬಾಗಿದರೂ ತೊಲೆ ಹೊತ್ತು
ನಿಂತಿರುವೆ ಮುದಿಯೆಂದು ತೆಗಳಬೇಡಿ
ಮೈತುಂಬ ಮದರಂಗಿ ಕೆಂಪು ಗಾಯಗಳು
ಸಮರದ ಗುಂಡು ತಾಗಿದುದಲ್ಲ
ಕಲೆತವರ ಉಳಿಯೇಟಿನ ಕಲೆಗಳವು
ಕಲೆಗಾರರು ಚಿತ್ರಿಪ ಸುಂದರ ಶಿಲ್ಪಗಳಲ್ಲ
ಸಿಗರೇಟಿನ ಮೋತಿ ನೀಡಿದ ಮುತ್ತುಗಳು
ಕನ್ಯೆಯ ಕೆನ್ನೆಗಿಟ್ಟ ದೃಷ್ಠಿ ಬೊಟ್ಟುಗಳಲ್ಲ
ಸುಟ್ಟ ಮನದ ಸೋರು ಛಾವಣಿ ಹನಿಗಳು
ಕರುಣೆ ಪಡೆಯಲು ಮಾಡಿದ ಪಟ್ಟುಗಳಲ್ಲ
ತಾಂಬೂಲು ತಿಂದುಗಿದ ಚಿತ್ತಾರಗಳು
ಪಾತಿರ್ವತೆಯ ಕೆಂಪು ಸಿಂಧೂರವಲ್ಲ
ಸಾರಾಯಿ ಅಮಲಿನಲಿ ಕಕ್ಕಿದ ಅನ್ನದಗುಳು
ಅಂಗಳದಲಿಟ್ಟ ಶುಭ ರಂಗೋಲಿಯಲ್ಲ
ಒಂದು ಸಹಾಯ ಮಾಡಿ
ನಾನು ಸರ್ಕಾರಿ ಶಾಲೆ ಗೋಡೆ
ನಿಲ್ಲಿಸಿಬಿಡಿ ಇಂತಹ ಅತ್ಯಾಚಾರ
ಸೊಗಸಾದ ರೂಪಕಗಳಿಂದ ಕಟ್ಟಿದ ಗೋಡೆ
ReplyDeleteಧನ್ಯವಾದಗಳು ಸರ್
ReplyDelete