Skip to main content

ಪ್ರಚಲಿತ ಘಟನೆಗಳು

ಕಿಂಗ್ - ಬಾರೊ ಮಾವ ಏನ ಫುಲ್ ಹವಾ ನಿಂದ
ಸಿಂಗ್ - ನಾ ಏನ ಮಾಡೆನೊ ಮಾರಾಯಾ
ಕಿಂಗ್ - ಮತ್ತೇನಪಾ ಹಣಕಾಸು ಆಯೋಗದ ಅಧ್ಯಕ್ಷ ಆಗಿದಿ
ಸಿಂಗ್ - ಹೊಯ್ಕೋರಿ ಅವನೌನ. ನಾ ಅಲ್ಲಪಾ.ಅವರು ಎನ್ ಕೆ ಸಿಂಗ್
ಕಿಂಗ್ - ಹಂಗ ಮಸ್ಕಿರಿ ಮಾಡಿನಿ ತುಗೊ
ಸಿಂಗ್ - ನಮ್ಮ ಹುಡುಗ ವಿಶ್ವದಾಖಲೆ ಮಾಡ್ಯಾನ ಗೊತ್ತೈತೆನ?
ಕಿಂಗ್ - ಯಾರ?
ಸಿಂಗ್ - ಆರ್ ಅಶ್ವಿನ್ ಟೆಸ್ಟ್ ಕ್ರಿಕೆಟ್ ನಲ್ಲಿ ಅತ್ಯಂತ ವೇಗವಾಗಿ ೩೦೦ ವಿಕೆಟಗಳನ್ನು ಗಳಿಸಿದಾರ. ಈ ಸಾಧನೆ ಮೊದಲು ಆಸ್ಟ್ರೇಲಿಯಾದ ಡೆನೀಸ್ ಲಿಲ್ಲಿ ಅವರ ಹೆಸರಿನಲ್ಲಿ ತ್ತು. ಅವರು ೫೬ ಟೆಸ್ಟ್ ಪಂದ್ಯಗಳಲ್ಲಿ ಈ ಸಾಧನೆಯನ್ನು ಮಾಡಿದ್ದರು. ಆದರೆ ಅಶ್ವೀನ್ ರವರು ೫೪ ಟೆಸ್ಟ  ಪಂದ್ಯಗಳಲ್ಲಿ ಈ ಸಾಧನೆಯನ್ನು ಮಾಡಿದ್ದಾರೆ.
ಕಿಂಗ್ - ಹೊಡೀರಿ ಟುಮಕಿ ಟುಮ್ ಟುಮ್ ಟುಮಕ್
ಸಿಂಗ್ - ವಿಶ್ವ ಸ್ನೂಕರ್ ಚಾಂಪಿಯನ್ ಶಿಪ್ ನಲ್ಲಿ ಪಂಕಜ್ ಅಡ್ವಾಣಿಯವರು ೧೮ನೇಯ ವಿಶ್ವ ಕಿರೀಟವನ್ನು ಮುಡಿಗೇರಿಸಿಕೊಂಡರು.ಇವುಗಳಲ್ಲಿ ೧೩ ಬಿಲಿಯರ್ಡ್ಸ್ ಹಾಗೂ ೫ ಸ್ನೂಕರ್ ಪ್ರಶಸ್ತಿ ಸೇರಿವೆ.
ಕಿಂಗ್ - ಇವನೌನ ಸ್ನೂಕರ ಎಂದರೆನಪಾ
ಸಿಂಗ್ - ಮಳ್ಳ  ಹಳೆ ಮಳ್ಳ  ಸ್ನೂಕರ್ ಅಂದರ ಉದ್ದಂದ ಬಡಗಿಲೆ ಗುಂಡನ ಚೆಂಡ ನೂಕುವುದು.
ಕಿಂಗ್- ತಿಳಿತ ಬಿಡು
ಸಿಂಗ್- ಗುವಹಾಟಿಯಲ್ಲಿ ನಡೆದ ವಿಶ್ವ  ಯೂತ ಮಹಿಳಾ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಭಾರತದ ಮಹಿಳೆಯರು ೫ ಚಿನ್ನದ ಪದಕಗಳನ್ನು ಪಡೆದಾರ.
ಕಿಂಗ್ - ಮಸ್ತ. ಆತ ನೋಡ
ಸಿಂಗ್ - ಇಷ್ಟ. ಅಲ್ಲ. ಸ್ಪೇನನ ಅಲ್ಮೇರಿಯಾದಲ್ಲಿ ನಡೆದ ಸ್ಪ್ಯಾನಿಷ್ ಓಪನ್ ಟೆಬಲ್ ಟೆನಿಸ್‌ಪುರುಷರ ಸಿಂಗಲ್ಸ್ ನಲ್ಲಿ ಭಾರತದ ಜಿ ಸತಿಯನ್ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ.
ಕಿಂಗ್ - ಒಟ್ಟಿನಲ್ಲಿ ಭಾರತದ ವಿಜಯ ಪತಾಕೆ ಹೀಗೆ ಹಾರಾಡುತ್ತಿರಲಿ
ಸಿಂಗ್- ವಾಲ್ಟರಿ ಬೊಟಾಸ್ ಫಾರ್ಮುಲಾ ೧ ಅಬುದಾಬಿ ಗ್ರ್ಯಾನ್ ಫ್ರೀ ರೇಸ್ ೨೦೧೭ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದಾರ.
ಕಿಂಗ್- ಮೊನ್ನೆ  ರೇಸನಲ್ಲಿ ಯಾರೊ ಸತ್ತ ಹೋದರಲೊ
ಸಿಂಗ್- ಹಂಗ ಹುಟ್ಟು ಸಾವು ಸಹಜ ಕಣೊ
ಕಿಂಗ್ - ನೆಲ್ಲಿಕಾಯಿ ತಿಂತಿಯೆನ?
ಸಿಂಗ್- ನೆಲ್ಲಿಕಾಯಿ ಅಂದಕೂಡಲೆ ನೆಂಪ ಆತ ನೋಡ. ಡೆಮಿ ಲಿ ನೆಲ್ ಪೀಟರ್ಸ ಎಂಬ ದ. ಆಫ್ರಿಕಾ ಸುಂದರಿ ೨೦೧೭ ರ ಮಿಸ್ ಯೂನಿವರ್ಸ ಆಗಿ ಆಯ್ಕೆಯಾಗಿದಾರ.
ಕಿಂಗ್ - ಈ ಸ್ಪರ್ಧೆ ಎಲ್ಲಿ ನಡಿತ ಏನ ಸುದ್ದಿ
ಸಿಂಗ್ - ಇದು ಶ್ರೀಲಂಕಾದ ಕೊಲಂಬೊದಲ್ಲಿ ನಡೀತ
ಕಿಂಗ್ - ಮಸ್ತ ಸುದ್ದಿ ಹೇಳಿದಿ ನೋಡ
ಡಿಂಗ್ - ಸಿಂಗಣ್ಣಾ  ಅಕ್ಕಾ  ಕರ್ಯಾತಾಳ
ಕಿಂಗ್ - ಇವ್ಯಾಂವಲಾ ?
ಸಿಂಗ - ಇವ ಊರಿಂದ ಬಂದಾನ
ಕಿಂಗ್- ಏನಪಾ ನಿನ್ನ ಹೆಸರು?
ಡಿಂಗ್ - ನೀರ ಬೇಕೇನ್ರಿ?
ಕಿಂಗ್ - ಏನ್ಲಾ ಇದು ನಾ ಒಂದ ಕೇಳಿರ ಇವೊಂದ ಹೇಳ್ತಾನು
ಸಿಂಗ್ - ಅವನ ಎರಡೂ ಸ್ಪೀಕರ್ ಔಟ್ ಆಗ್ಯಾವು . ನಾವ ಬರ್ತೆವ ನಮ್ಮ ನಮ್ಮ ನಮಸ್ಕಾರ

Comments

ಇವುಗಳನ್ನೂ ಓದಿ

ಭಾರತದ ಮುಖ್ಯ ವಿವಿದೋದ್ದೇಶ ನದಿಕಣಿವೆ ಯೋಜನೆಗಳು

ಭಾರತದ ಮುಖ್ಯ ವಿವಿದೋದ್ದೇಶ ನದಿಕಣಿವೆ ಯೋಜನೆಗಳು 1) ದಾಮೋದರ್ ನದಿ ಕಣಿವೆ ಯೋಜನೆ:- ದಾಮೋದರ್ ಅಣೆಕಟ್ಟು ಸ್ವತಂತ್ರ್ಯ ಭಾರತದ ಮೊಟ್ಟಮೊದಲ ಬೃಹತ್ ಅಣೆಕಟ್ಟು ಆಗಿದೆ. ದಾಮೋದರ್ ಕಣಿವೆ ಕಾರ್ಪೋರೇಷನ್ ನನ್ನುಜುಲೈ 7, 1948 ರಲ್ಲಿ ಸಂವಿಧಾನ ರಚನಾ ಸಭೆಯ ಕಾಯ್ದೆ ಮೂಲಕ ಸ್ಥಾಪಿಸಲಾಯಿತು. ಇದನ್ನು ಅಮೇರಿಕಾದ ಟೆನಿಸ್ಸಿ ಕಣಿವೆ ಯೋಜನೆ ಮಾದರಿಯಲ್ಲಿ ರಚಿಸಲಾಗಿದೆ. ದಾಮೋದರ್ ಕಣಿವೆ ಯೋಜನೆಯನ್ನುಭಾರತದ ರೋರ್ ಎಂದು ಕರೆಯುತ್ತಾರೆ. ಏಕೆಂದರೇ ದಾಮೋದರ್ ಕಣಿವೆ ಪ್ರದೇಶದಲ್ಲಿ ಅತಿ ಹೆಚ್ಚು ಕೈಗಾರಿಕೆಗಳು ಕಂಡುಬರುತ್ತವೆ. ಆದ್ದರಿಂದ ಇದಕ್ಕೆ ಭಾರತದ ’ರೋರ್’ ಎಂದು ಕರೆಯುತ್ತಾರೆ. ದಾಮೋದರ್ ಕಣಿವೆಯು ಭಾರತದ ಪ್ರಮುಖ ಕೈಗಾರಿಕಾ ಪ್ರದೇಶಗಳಲ್ಲಿ ಒಂದು. ಈ ಪ್ರದೇಶದಲ್ಲಿ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾದ ಕೈಗಾರಿಕೆಗಳಾದ ಬೋಕಾರೋ (ಜಾರ್ಕಂಡ್ ನಲ್ಲಿದೆ), ಬರ್ನಾಪೂರ, ದುರ್ಗಾಪುರ (ಪಶ್ಚಿಮ ಬಂಗಾಳ)ದಲ್ಲಿ ಸ್ಥಾಪನೆಯಾಗಿವೆ. ಇಲ್ಲಿ ಅಧಿಕ ಪ್ರಮಾಣಾದ ಕಲ್ಲಿದ್ದಲು ಗಣಿಗಳಿವೆ. # ದಾಮೋದರ್ ನದಿಯ ಉಪನದಿಯಾದ ಬರ್ಕರ್ ನದಿಗೆ ಅಡ್ದಲಾಗಿ 1953 ರಲ್ಲಿತಿಲಾಯ ಅಣೆಕಟ್ಟು ಕಟ್ಟಲಾಗಿದೆ. # 1995 ರಲ್ಲಿ ದಾಮೋದರ್ ನದಿಯ ಇನ್ನೊಂದು ಉಪನದಿಯಾದ ಕೋನಾರ್ನದಿಗೆ ಅಣೆಕಟ್ಟು ಕಟ್ಟಲಾಗಿದೆ. # ದಾಮೋದರ್ ನದಿಯು ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳ ರಾಜ್ಯದಲ್ಲಿ ಹರಿಯುವ ನದಿಯಾಗಿದೆ. # ದಾಮೋದರ್ ನದಿಯನ್ನು ಪಶ್ಚಿಮ ಬಂಗಾಳದ ಕಣ್ಣೀರಿನ ನ...