ಸುಮ್ಮನೇ ಸಿಡುಕಬೇಡ ಮನದ ದಳಗಳು ಇನ್ನೂ ಮಿಡಿಯಾಗಿವೆ
ತಪ್ಪುಗಳ ಎತ್ತಿ ತೋರಬೇಡ ಕೈ ಬೆರಳುಗಳು ಇನ್ನೂ ಮಿಡಿಯಾಗಿವೆ
ಕಲ್ಪನೆಯ ಗುಹೆಯೊಳಗೆ ಕುಳಿತು ಬದುಕು ಬರಿಯ ಕತ್ತಲೆನಬೇಡ
ಒಳಬಣ್ಣಗಳನು ಬೆತ್ತಲೆಗೊಳಿಸಲು ಕಿರಣಗಳು ಇನ್ನೂ ಮಿಡಿಯಾಗಿವೆ
ದುರುಳರ ಕಾಮನೆಗಳ ಹಾಯಿದೋಣಿ ಮರುಳಾಗಿ ತೇಲುತಿರಲು
ಅನ್ಯಾಯವೆನಬೇಡ ಮುಳುಗಿಸುವ ಅಲೆಗಳು ಇನ್ನೂ ಮಿಡಿಯಾಗಿವೆ
ಮದಿರೆಯ ಅಮಲಿಗಿಂತ ಧರ್ಮದ ಅಮಲು ರುಚಿಯಾಗಿಹುದು ಸಾಕಿ
ತಿಳಿಯದೆ ಇರಬೇಡ ನಿನಗೆ ತಿಳಿಸುವ ಜಿಹ್ವೆಗಳು ಇನ್ನೂ ಮಿಡಿಯಾಗಿವೆ.
ಗಾಳಿಯ ಗೊಂಬೆಗಳ ಲೋಕದಲ್ಲಿ ಚುಚ್ಚುವ ಸೂಜಿಗೇನು ಕಾಯಕ
ಮುರಿದೆಸೆದುಬಿಡು 'ಆನಂದ' ಎಲ್ಲರ ಬಾಳುಗಳು ಇನ್ನೂ ಮಿಡಿಯಾಗಿವೆ
ಈ ಗಜಲ್ ನ್ನೂ ಓದಿ
Comments
Post a Comment
ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ