ಅವರಿಂದಿವರಿಗೆ ಇವರಿಂದವರಿಗೆ ನಡುವೆ ನಮಗೇನಿದೆ
ಯಾರಿಂದ್ಯಾರಿಗೆ ಎಲ್ಲಿಂದೆಲ್ಲಿಗೆ ಸ್ವಾತಂತ್ರ್ಯವೇ ನಮಗೇನಿದೆ
ಕೊಟ್ಟಿಹುದೇನೋ ಪಡೆದಿಹುದೇನೋ ಮಾಯೆಯೊ
ಹಳ್ಳಿಯಿಂದಿಲ್ಲಿಗೂ ನಾಯಕರಾದರೂ ಪ್ರಭುವೇ ನಮಗೇನಿದೆ
ಬಾವುಟ ಹಿಡಿದಿಹ ಬಾಲವ ಬಡಿದಿಹ ಬಂಟರಿಗೇನೊ
ನೆಲದ ಒಡೆತನ ಬದಲಾದರೂ ಕರ್ಮವೇ ನಮಗೇನಿದೆ
ಸೂಜಿಗೂ ತೆರಿಗೆಯಿತ್ತು ಸೂರಿಲ್ಲದೆ ತಿರುಗ್ಯಾರು
ಉಳ್ಳವರೇ ಉತ್ಸವ ಮಾಡ್ಯಾರು ಶಂಭುವೇ ನಮಗೇನಿದೆ
ಮತದಾರರಾದವರು ಅಥರ್ವನ ಕೇಳ್ಯಾರು
ಸ್ವಾತಂತ್ರ್ಯದ ಸವಿಯಲಿ ಪಾಲು ದೈವವೇ ನಮಗೇನಿದೆ
ಇದನ್ನೂ ಓದಿ
Comments
Post a Comment
ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ