Skip to main content

Posts

ಕವಿಗೋಷ್ಠಿ - ಹಾಸ್ಯ ಲೇಖನ @ ಆನಂದ ಮಾಲಗಿತ್ತಿಮಠ

ಆಗಾಗ ಕವಿಗೋಷ್ಠಿಯಲ್ಲಿ ಭಾಗವಹಿಸುವುದು ನನ್ನ ಹವ್ಯಾಸ. ನನ್ನ ಈ ಹವ್ಯಾಸವೇ ನನ್ನಾಕೆಗೆ ಚಟವಾಗಿ ಕಾಣುತ್ತದೆ ಎಂಬುವುದೇ ವಿಪರ್ಯಾಸ. ಮುಂಜಾನೆ ಅರಳಿದ ಹೂವಿನ ಮುಖದಲ್ಲಿರುವ ಉತ್ಸಾಹವೆ ಕವಿಗೋಷ್ಠಿಗೆ ಹೋಗುವ ಮುನ್ನ ನನ್ನಲ್ಲಿರುತ್ತದೆ. ಅದನ್ನು ಮುಗಿಸಿ ಬರುವಾಗ ಥೇಟ್ ಬಾಡಿದ ಹೂವು.       ನಮ್ಮಲ್ಲಿ ಮಹಾನವಮಿ ಬಂತೆಂದರೆ ಸಾಕು ಮನೆ ಸ್ವಚ್ಚತೆಯ ಕಾರ್ಯ ನಡೆಯುತ್ತದೆ. ಅದರಲ್ಲಿ ಹಾಸಿಗೆ ಒಗೆದು ಹಾಕುವ ಪರಿ ನೋಡಬೇಕು. ಥೇಟ್ ಒನಕೆ ಓಬವ್ವನಂತೆ ವೀರಗಚ್ಛೆಯನು ಹಾಕಿ ಹೆಣ್ಣು ಮಕ್ಕಳು ಹಾಸಿಗೆಯ ಒಂದು ತುದಿ ಹಿಡಿದರೆ ಅವರ ಗಂಡಂದಿರು ಇನ್ನೊಂದು ತುದಿ. ಯಾವ ಜನುಮದ ಸೇಡೋ ಎನ್ನುವಂತೆ ತಿರು ತಿರುವಿ ಕಲ್ಲಿಗೆ ಹಾಸಿಗೆ ಜಾಡಿಸುತ್ತಿದ್ದರೆ ಅದರೊಳಗಿನ ಕೊಳೆ ಸತ್ತನ್ಯೊ.. ಎಪ್ಪಾ..! ಎಂದು ಜಾಗ ಖಾಲಿ ಮಾಡುತ್ತದೆ.          ಇದೇನು ವಿಷಯಾಂತರ ಎಂದುಕೊಂಡಿರಾ? ಖಂಡಿತ ಅಲ್ಲ. ಕೆಲವು ಕವಿಗೋಷ್ಠಿಯಲ್ಲಿ ನಮ್ಮ ಮೆದುಳು ಕವಿಗಳ ಕೈಗೆ ಸಿಕ್ಕ ಮಹಾನವಮಿ ಹಾಸಿಗೆಯಂತೆ, ಜಾಡಿಸಿ ಜಾಡಿಸಿ ಬರಿ ಕೊಳೆ ತೆಗೆಯುವುದಿಲ್ಲ. ಜೀವಾನೇ ಹಿಂಡಿ ಬಿಡುತ್ತಾರೆ.             ಒಂದು ಬಾರಿ ಜಾತ್ರಾ ಕಮೀಟಿಯವರು ಕವಿಗೋಷ್ಠಿಯನ್ನು ಏರ್ಪಡಿಸಿದ್ದರು. ಕವಿಗೋಷ್ಠಿಯ ಸಮಯ ಸಾಯಂಕಾಲ ಆರು ಗಂಟೆ ಎಂದಿತ್ತು. ಕವಿ ಮಹಾಶಯರೆಲ್ಲರೂ ಸಮಯಕ್ಕೆ ಸರಿಯಾಗಿ ಬಂದಿದ್ದರೂ ಕಾರ್ಯಕ್ರಮದ ಸಿದ್ಧತೆ ಇನ...

ಭಾರತದ ಸಂವಿಧಾನದಲ್ಲಿರುವ ವಿಧಿಗಳು

ಭಾಗ 1 ಸಂಘ ಮತ್ತು ಸಂಘಕ್ಷೇತ್ರ ಅನುಚ್ಛೇದ1: ಸಂಘದ(ರಾಜ್ಯದ)ಹೆಸರು ಮತ್ತು ರಾಜ್ಯಕ್ಷೇತ್ರ ಅನುಚ್ಛೇದ2: ನೂತನ ರಾಜ್ಯಗಳ ಸೇರ್ಪಡೆ ಅಥವಾ ಸ್ಥಾಪನೆ ಅನುಚ್ಛೇದ2ಎ: ನಿರಸನಗೊಳಿಸಲಾಗಿದೆ ಅನುಚ್ಛೇದ3: ನೂತನ ರಾಜ್ಯಗಳ ರಚನೆ ಮತ್ತು ಈಗಿರುವ ರಾಜ್ಯಗಳ ಪ್ರದೇಶಗಳ, ಸರಹದ್ದುಗಳ ಅಥವಾ ಹೆಸರುಗಳ ಬದಲಾವಣೆ ಅನುಚ್ಛೇದ4: 2ನೇ ಮತ್ತು 3ನೇ ಅನುಚ್ಛೇದಗಳ ಮೇರೆಗೆ ಮಾಡಲಾದ ಕಾನೂನುಗಳು ಮೊದಲನೆಯ ಮತ್ತು ನಾಲ್ಕನೇ ಅನುಸೂಚಿಗಳ ತಿದ್ದುಪಡಿಯ ಬಗ್ಗೆ ಮತ್ತು ಪೂರಕ, ಪ್ರಾಸಂಗಿಕ ಮತ್ತು ಅನುಷಂಗಿಕ ವಿಷಯಗಳ ಬಗ್ಗೆ ಉಪಬಂಧವನ್ನು ಕಲ್ಪಿಸುವುದು.

ಗೋಡೆ @ ಆನಂದ ಮಾಲಗಿತ್ತಿಮಠ ಕವಿತೆ

ಒಂದು ಸಹಾಯ ಮಾಡಿ ಬಡ ಗೋಡೆಯೆಂದು ಹೊರಡಬೇಡಿ ನಡು ಬಾಗಿದರೂ ತೊಲೆ ಹೊತ್ತು ನಿಂತಿರುವೆ ಮುದಿಯೆಂದು ತೆಗಳಬೇಡಿ ಮೈತುಂಬ ಮದರಂಗಿ ಕೆಂಪು ಗಾಯಗಳು ಸಮರದ ಗುಂಡು ತಾಗಿದುದಲ್ಲ ಕಲೆತವರ ಉಳಿಯೇಟಿನ ಕಲೆಗಳವು ಕಲೆಗಾರರು ಚಿತ್ರಿಪ ಸುಂದರ ಶಿಲ್ಪಗಳಲ್ಲ ಸಿಗರೇಟಿನ ಮೋತಿ ನೀಡಿದ ಮುತ್ತುಗಳು ಕನ್ಯೆಯ ಕೆನ್ನೆಗಿಟ್ಟ ದೃಷ್ಠಿ ಬೊಟ್ಟುಗಳಲ್ಲ ಸುಟ್ಟ ಮನದ ಸೋರು ಛಾವಣಿ ಹನಿಗಳು ಕರುಣೆ ಪಡೆಯಲು ಮಾಡಿದ ಪಟ್ಟುಗಳಲ್ಲ ತಾಂಬೂಲು ತಿಂದುಗಿದ ಚಿತ್ತಾರಗಳು ಪಾತಿರ್ವತೆಯ ಕೆಂಪು ಸಿಂಧೂರವಲ್ಲ ಸಾರಾಯಿ ಅಮಲಿನಲಿ ಕಕ್ಕಿದ ಅನ್ನದಗುಳು ಅಂಗಳದಲಿಟ್ಟ ಶುಭ ರಂಗೋಲಿಯಲ್ಲ ಒಂದು ಸಹಾಯ ಮಾಡಿ ನಾನು ಸರ್ಕಾರಿ ಶಾಲೆ ಗೋಡೆ ನಿಲ್ಲಿಸಿಬಿಡಿ ಇಂತಹ ಅತ್ಯಾಚಾರ