ಮಹೇಶ ಹಾಗೂ ಮಹತಿ ಆ ಮನೆಯಲ್ಲಿ ವಾಸಿಸಲು ಪ್ರಾರಂಭಿಸಿ ಇಂದಿಗೆ ಸರಿಸುಮಾರು ಐದು ವರ್ಷವಾಗಿರಬೇಕು. ಅಂದು ಉಟ್ಟ ಬಟ್ಟೆಯಲ್ಲಿಯೇ ಜೀವನದಲಿ ಮುಂದೇನು? ಎಂದು ಚಿಂತಿಸುತ್ತ ಬಂದವರಿಗೆ ಬೈಲಹೊಂಗಲದ ಗಣೇಶ ಗಲ್ಲಿಯ ಮನೆಯು ಆಶ್ರಯ ನೀಡಿತ್ತು. ಪ್ರಾರಂಭದಲ್ಲಿ ಮನೆಯ ಓನರ್ ಇವರಿಗೆ ಬಾಡಿಗೆ ಕೊಡಲು ಹಿಂದೆ ಮುಂದೆ ನೋಡಿದಾಗ ಮಹತಿಯ ಕೊರಳಲ್ಲಿಯ ಮಾಂಗಲ್ಯ ಸರವನ್ನು ಕಂಡು ಒಪ್ಪಿಕೊಂಡಿದ್ದ. ಮೊದಲೇ ಜೋರಾಗಿ ಸುರಿಯುತ್ತಿರುವ ಮಳೆಯಲ್ಲಿ ಇಬ್ರೂ ತೊಯ್ದು ತೊಪ್ಪೆಯಾಗಿ ಬಂದಿದ್ದರು. ಅವರ ಬದುಕಿನ ತಿಳಿನೀಲದಲಿ ಕಾರ್ಮೋಡಗಳಾಗಮಿಸಿ ಕಷ್ಟಗಳ ಸೋನೆಯೇ ಸುರಿದು ತೊಯ್ಯಿಸಿಕೊಂಡವರಿಗೆ ಈ ನೀರ ಮಳೆ ಯಾವ ಲೆಕ್ಕ ಎಂದೆನಿಸದೇ ಇರಲಿಲ್ಲ. ಗಲ್ಲಿಗೆ ಬಂದ ಹೊಸದರಲ್ಲಿ ಎಲ್ಲರೂ ಅಪರಿಚಿತರೇ. ಕೆಲವರು ಮಹತಿಯನ್ನು ತಾನಾಗಿಯೇ ಮೇಲ್ಬಿದ್ದು ಮಾತನಾಡಿಸಿ, ಇವರೇನು ಶಾಸ್ತ್ರೋಕ್ತವಾಗಿ ಮದುವೆಯಾದವರೋ ಅಥವಾ ಓಡಿ ಬಂದವರೋ ಎಂಬುವುದನ್ನು ತಿಳಿಯಲು ಹವಣಿಸಿದವರೇ ಹೆಚ್ಚು. ಕಂಡವರ ವಿಷಯವೆಂದರೆ ಕೆಲವರಿಗೆ ಉಪ್ಪಿನಕಾಯಿ ಚಪ್ಪರಿಸಿದಂತೆ,ಅದಿಲ್ಲದೆ ಊಟವಾದರೂ ಹೇಗೆ ರುಚಿಸಿತು? ಮಹತಿಯು ಕೆಲವೇ ದಿನಗಳಲ್ಲಿ ತನ್ನ ಸಹಜ ಸ್ನೇಹಪರ ನಡುವಳಿಕೆಯಿಂದ ನೆರೆಹೊರೆಯವರಿಗೆ ಆಪ್ತಳಾಗಿ ಬಿಟ್ಟಳು. ತುಟಿಯಂಚಿನಲಿ ಬಾಡಿಹೋದ ನಗುವೆಂಬ ಕುಸುಮ ಮತ್ತೆ ಅರಳಿ, ಕುಚೇಲನ ಜೀವನವಾದರೂ ಸೈ, ಅಲ್ಲಿ ತುಸು ನೆಮ್ಮದಿ ಆಗ ತಾನೆ ಉದಯಿಸುತ್ತಿತ್ತ...
EDUCATION | ENTERTAINMENT | INFOTAINMENT