ನನಗೂ ದೇವರಿಗೂ ನಡುವೆ ಗೋಡೆ ಕಟ್ಟಿದಿರಿ ಗುಡಿಯ ಹೆಸರಿನಲಿ ಸಾಕಿ ಬಯಲಿನಲ್ಲಿಯೇ ಕೈಮುಗಿದು ಬಯಲಾಗಬಯಸಿದ್ದೆ ಕರ್ಪೂರದ ರೀತಿಯಲಿ ಸಾಕಿ ನನಗಿರುವ ಸ್ವಾತಂತ್ರ್ಯ ನನ್ನ ದೇವನಿಗೇಕಿಲ್ಲ ನರಳಬೇಕೇ ಬಂಧನದಲಿ ಬಂದರೆ ಬರಲಿಬಿಡಿ ನನ್ನೊಂದಿಗೆ ಬಡವನ ಗುಡಿಸಲಿಗೂ ಚೆಂದದಲಿ ಸಾಕಿ ನನ್ನನೇಕೋ ಆಲಿಸನು ಮಂದಾದವೇ ಕರ್ಣಗಳು ಗಂಟೆಯ ಠೇಂಕಾರದಲಿ ಮಂದಾರ್ತಿಯ ಮಂದಾನಿಲಕೆ ಮಾದೇವ ಸುಂದಾದನೆ ಓಂಕಾರದಲಿ ಸಾಕಿ ಧನಕನಕಾದಿಗಳಿಗೆ ಗಾಳ ಹಾಕದ ಗರೀಬ್ ನನ್ನು ಗಾಳಿಯಾಗಿಸು ಕರುಣೆಯಲಿ ಎಲ್ಲ ಬಂಧನಗಳ ತೂರಿ ಆ ದೇವನ ಸ್ಪರ್ಶಿಸಿ ಬರುವೆ ತುಡುಗಿನಲಿ ಸಾಕಿ ಇಂದಲ್ಲ ನಾಳೆ ನನಗಾಗಿ ದೇವ ಹೊರಬಂದೇ ಬರುವನು ಜನಜಾತ್ರೆಯಲಿ ಗುಡಿಯಿಂದಾಗಲಿ, ಆನಂದನ ದೇಹದಿಂದಾಗಲಿ ಬಲು ಸಂಭ್ರಮದಲಿ ಸಾಕಿ ಈ ಗಜಲ್ ನ್ನೂ ಓದಿ ನಿನ್ನ ಹೆರುವಾಗಲೂ ನನಗಿಷ್ಟು ನೋವಾಗಿರಲಿಲ್ಲ ಕಂದಾ
EDUCATION | ENTERTAINMENT | INFOTAINMENT