Skip to main content

ಪೈಲ್ವಾನ‌ ಮಾಸ್ತರ್ @ ಸಂದೀಪ ಕುಲಕರ್ಣಿ

ಮಾದಾಪೂರದ ಬೋರೆಗೌಡ್ರು ಊರಿಗೆನೇ ದೊಡ್ಡ ದನಿಗಳು..ತಮ್ಮ ಮಕ್ಕಳನ್ನ ಚೆನ್ನಾಗಿ ಉಗಿತ್ತಿದ್ದರು..ನೋಡರೋ ಆ ಮುದುಕಪ್ಪನ್ನ ಮಕ್ಕಳನ್ನ..ಎಷ್ಟೇ ಬಡತನದಲ್ಲಿದ್ದರೂ ಚೆನ್ನಾಗಿ ತಿಂದು ಕೊಬ್ಬಿದ,ಮಥಿಸಿದ ಗಜಾ ಇದ್ದಂಗ ಇದ್ದರಲ್ಲೋ..ನೀವು ಅದಿರಿ..ಎನ್ ತಿಂದರೂ ಬಡಶುಂಠಿ ಬೇರ ಆಗಿದಿರಲ್ಲೊ..?? ಚಪಾತಿ,ರೊಟ್ಡಿ,ಮುದ್ದೆ,ಗೋದಿ ಪಾಯಸ ಯಾವುದು ನಾಟತಾ ಇಲ್ಲ ನಿಮಗೆ..ನಿಮ್ಮ ಮೊಖಕ್ಕೊಂದು ಉಗಿಯಾ..ಎಂದು ಮಕ್ಕಳನ್ನ ತರಾಟೆಗೆ ತೊಗಿಂಡಿದ್ರು ಊರಗೌಡ್ರು. ಆ ಕಡೆ ಮುದುಕಪ್ಪನ ಮಗ ಮಲ್ಲೇಶ ಒತ್ತಾರೆನೆ ಇದ್ದು ಮೇವು ತಂದಿ ಹೊಳಿ ಕಡೆ ಹೋಗಿ ಒಂದ ಗಂಟೆ ಈಜಾಡಿ ಬಂದು ಗೋದಿ ಪಾಯಸ,ಶೇಂಗಾ ಬೆಲ್ಲ ಎನ ಕೊಟ್ಟಿದ್ದು ಚೆನ್ನಾಗಿ ಚಚ್ಚಿ ಒಳ್ಳೆ ಜವಾರಿ ಎತ್ತಿನ ಮೈಕಟ್ಟನಂಗ ಆಗಿದ್ದ...ಸಾಲಿ ಕಲಿತಿದ್ದು ಟಿ‌ಸಿಎಚ್ ವರೆಗೆ..ಆದರೆ ಕಡಿಮೆ ಅಂಕ ಬಂದಿದ್ದರಿಂದ ನೌಕರಿ ಗಿಟ್ಟಿರಲಿಲ್ಲ..ಹೀಗಾಗಿ ಅಲ್ಲೆ ಇಲ್ಲಿ ನಡಿಯೋ ಕುಸ್ತಿ ಸ್ಪರ್ದೆ ಲಿ ಭಾಗವಹಿಸಿ ಅವರು ಇವರಿಗೆ ಕುಸ್ತಿ ತರಬೇತಿ ಕೊಟ್ಡು ಜೀವನ ಸಾಗಸ್ತಾ ಇದ್ದ..  ಅವನ ಊಟಾ ಮಾಡೋ ಪದ್ದತಿನೂ ಅದ್ಭುತ...ಹಾಲನ್ಯಾಗ ನಾಲ್ಕ ರೊಟ್ಟಿ,ಮೊಸರನ್ಯಾಗ ನಾಲ್ಕ ರೊಟ್ಟಿ,ಮಜ್ಜಗ್ಯಾಗ ನಾಲ್ಕ ರೊಟ್ಡಿ.ಜೊತೆಗೆ ಒಂದ ತಾಟ ಅನ್ನ ಊಟಾ ಮಾಡತಿದ್ದ...ಹಿಂಗ ದೂಸಾ ಕಳದವೂ..ಆದರೂ ನೌಕರಿ ಹತ್ತಲಿಲ್ಲ.. 
     ನೌಕರಿ ನನಗ ಸಿಗೊದಿಲ್ಲ ಅಂತ ಅನ್ನಕೊಂಡು ಬೆಂಗಳೂರಿಗೆ ಬರ್ತಾನೆ ಮಲ್ಲೇಶಪ್ಪ..ಪ್ರಭಾವಿ ರಾಜಕಾರಣಿ ಯೊಬ್ಬರ ಪರಿಚಯವಾಗಿ ಅವರ ಆಫೀಸ್ ಲ್ಲಿ ಗುಮಾಸ್ತ ನಾಗಿ ಕೆಲಸ ಮಾಡಲು ಶುರು ಮಾಡ್ತಾನೆ..ಅಲ್ಲಿ ಅವನ ಅಕ್ಷರ ಬರವಣಿಗೆ,ಅವನ ಶ್ರಧ್ದೆ ನೋಡಿ ಆ ರಾಜಕಾರಣಿ ಇವನಿಗೆ ಅವನೂರಿನಿಂದ ಸುಮಾರು 300 ಕಿ.ಮಿ.ದೂರ ಇರೋ ಕಡೆ ಶಿಕ್ಷಕ ಕೆಲಸ ಕೊಡಿಸುವರು..ಆಗ ಈ ಮಲ್ಕೇಶಪ್ಪನ ಖುಷಿಗೆ ಪಾರವೇ ಇಲ್ಲ..ಕೆಲಸ ಕೊಡಿಸಿದ ದಣಿಗೆ ಸಾಷ್ಟಾಂಗ ನಮಿಸಿ ಶಿಕ್ಷಕ ವೃತ್ತಿಗೆ ಹಾಜರಾಗುವನು.ಇಷ್ರಲ್ಲಾಗಲೇ ಅವನಿಗೆ 37 ವರ್ಷ ಗತಿಸಿರುತ್ತವೆ..ಕೊನೆಗೂ ಅವನೊಪ್ಪುವಂತಹ ಹುಡುಗಿ ಸಿಗತಾಳೆ..
ಅವಳಿಗೂ ಸರ್ಕಾರಿ ಆಸ್ಪತ್ರೆ ಯಲ್ಲಿ ಸ್ಟಾಫ ನರ್ಸ ಕೆಲಸ ಸಿಗುತ್ತದೆ... ಈಗ ಅವರಿಬ್ಬರೂ ದೇವರಿಗೆ ಕೃತಜ್ಞತೆ ಯ ಸುರಿಮಳೆ ಸುರಿಸುವರು.. ಶಿಕ್ಷಕ ಮಲ್ಲೇಶಪ್ಪ ತಾನು ಕಲಿತ ವಿದ್ಯೆಯಾದ ಕುಸ್ತಿ,ಗುಂಡು ಎಸೆತ,ಕಬಡ್ಡಿ,ಮುಂತಾದ ಆಟಗಳನ್ನು ಮಕ್ಕಳಿಗೆ ಹೇಳಿಕೊಡುವನು..ಮಕ್ಕಳಿಗೆ ವ್ಯಾಯಾಮ,ಆಟೋಟಗಳ ಮಹತ್ವ ಸಾರಿ ಸಾರಿ ತಿಳಿಸುವನು..ಅವರಿಗೆ ಓಟ,ಹೈಜಂಪ,ಲಾಂಗಜಂಪ ಜಿಗಿಯುವ ಕೌಶಲ್ಯಗಳನ್ನು ಬೆಳೆಸುವನು..ಹೀಗಾಗಿ ಶಾಲಾ ಮಕ್ಕಳು ಎಲ್ಲವನ್ನು ಚೆನ್ನಾಗಿ ಕಲಿತು ಮುಂದಿನ ತರಗತಿಗಳಲ್ಲಿ ಅದನ್ನ ಅಳವಡಿಸಿಕೊಂಡರು..ಮುಂದೆ ಆ ಊರಾದ ಪಂಚನಹಳ್ಳಿಯಲ್ಲಿ ಸುಮಾರು ಹುಡುಗರು ಮಿಲಿಟರಿ, ಪೋಲೀಸ್, ಆರ್ಮಿ,ಹೀಗೆ ಹತ್ತು ಹಲವಾರು ಹುದ್ದೆಗಳನ್ನು ಗಿಟ್ಟಿಸಿಕೊಂಡರು..ನಮ್ಮ ಪೈಲ್ವಾನ ಮಲ್ಲೇಶಪ್ಪನವರ ಕನಸುಗಳನ್ನು ಅವರ ವಿದ್ಯಾರ್ಥಿಗಳು ನನಸು ಮಾಡಿದರು‌.ಎಲ್ಲೋ ಒಂದ್ಕಡೆ ಅವರಿಗೆ ನಾನು ಮಾಡದ ಸಾಧನೆ ನಮ್ಮ ಶಾಲಾ ಮಕ್ಕಳು ಮಾಡದರು ಎಂದು ಶಾನೆ ಖುಸಿ ಪಟ್ಟರು..ಎಲ್ರೂ ಅವರನ್ನ ಪೈಲ್ವಾನ ಮೇಷ್ಟ್ರು ಅಂತಲೇ ಕರಿತಾ ಇದ್ದರು..ವಯಸ್ಸು ಆದರೂ ಅವರಿನ್ನು  ನಾಲವತ್ತ ವಯಸ್ಸ ತರಾ ಕಾಣತಾ ಇದ್ದರು..ಕೊನೆಗೆ ಅವರು ನಿವೃತ್ತಿ ಯಾದಾಗ ಇಡೀ ಶಿಕ್ಷಣ ಇಲಾಖೆ,ಆ ಗ್ರಾಮದ ಈಡೀ ಗ್ರಾಮಸ್ಥರು ಅವರಿಗೆ ಅತ್ಯಂತ ಭಾವ ತುಂಬಿದ ಬೀಳ್ಕೋಡುಗೆ ಕೊಟ್ಟರು...ಅವರೆಲ್ಲರ ಸ್ಮೃತಿ ಪಟಲದಲ್ಲಿ ಚಿರಸ್ಥಾಯಿಯಾಗಿ ನಿಂತರು ನಮ್ಮ ಕಥಾ ನಾಯಕ ಪೈಲ್ವಾನ ಮಾಸ್ತರ ಮಲ್ಲೇಶಪ್ಪ ನವರು...

Comments

Post a Comment

ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ

ಇವುಗಳನ್ನೂ ಓದಿ

ಭಾರತದ ಮುಖ್ಯ ವಿವಿದೋದ್ದೇಶ ನದಿಕಣಿವೆ ಯೋಜನೆಗಳು

ಭಾರತದ ಮುಖ್ಯ ವಿವಿದೋದ್ದೇಶ ನದಿಕಣಿವೆ ಯೋಜನೆಗಳು 1) ದಾಮೋದರ್ ನದಿ ಕಣಿವೆ ಯೋಜನೆ:- ದಾಮೋದರ್ ಅಣೆಕಟ್ಟು ಸ್ವತಂತ್ರ್ಯ ಭಾರತದ ಮೊಟ್ಟಮೊದಲ ಬೃಹತ್ ಅಣೆಕಟ್ಟು ಆಗಿದೆ. ದಾಮೋದರ್ ಕಣಿವೆ ಕಾರ್ಪೋರೇಷನ್ ನನ್ನುಜುಲೈ 7, 1948 ರಲ್ಲಿ ಸಂವಿಧಾನ ರಚನಾ ಸಭೆಯ ಕಾಯ್ದೆ ಮೂಲಕ ಸ್ಥಾಪಿಸಲಾಯಿತು. ಇದನ್ನು ಅಮೇರಿಕಾದ ಟೆನಿಸ್ಸಿ ಕಣಿವೆ ಯೋಜನೆ ಮಾದರಿಯಲ್ಲಿ ರಚಿಸಲಾಗಿದೆ. ದಾಮೋದರ್ ಕಣಿವೆ ಯೋಜನೆಯನ್ನುಭಾರತದ ರೋರ್ ಎಂದು ಕರೆಯುತ್ತಾರೆ. ಏಕೆಂದರೇ ದಾಮೋದರ್ ಕಣಿವೆ ಪ್ರದೇಶದಲ್ಲಿ ಅತಿ ಹೆಚ್ಚು ಕೈಗಾರಿಕೆಗಳು ಕಂಡುಬರುತ್ತವೆ. ಆದ್ದರಿಂದ ಇದಕ್ಕೆ ಭಾರತದ ’ರೋರ್’ ಎಂದು ಕರೆಯುತ್ತಾರೆ. ದಾಮೋದರ್ ಕಣಿವೆಯು ಭಾರತದ ಪ್ರಮುಖ ಕೈಗಾರಿಕಾ ಪ್ರದೇಶಗಳಲ್ಲಿ ಒಂದು. ಈ ಪ್ರದೇಶದಲ್ಲಿ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾದ ಕೈಗಾರಿಕೆಗಳಾದ ಬೋಕಾರೋ (ಜಾರ್ಕಂಡ್ ನಲ್ಲಿದೆ), ಬರ್ನಾಪೂರ, ದುರ್ಗಾಪುರ (ಪಶ್ಚಿಮ ಬಂಗಾಳ)ದಲ್ಲಿ ಸ್ಥಾಪನೆಯಾಗಿವೆ. ಇಲ್ಲಿ ಅಧಿಕ ಪ್ರಮಾಣಾದ ಕಲ್ಲಿದ್ದಲು ಗಣಿಗಳಿವೆ. # ದಾಮೋದರ್ ನದಿಯ ಉಪನದಿಯಾದ ಬರ್ಕರ್ ನದಿಗೆ ಅಡ್ದಲಾಗಿ 1953 ರಲ್ಲಿತಿಲಾಯ ಅಣೆಕಟ್ಟು ಕಟ್ಟಲಾಗಿದೆ. # 1995 ರಲ್ಲಿ ದಾಮೋದರ್ ನದಿಯ ಇನ್ನೊಂದು ಉಪನದಿಯಾದ ಕೋನಾರ್ನದಿಗೆ ಅಣೆಕಟ್ಟು ಕಟ್ಟಲಾಗಿದೆ. # ದಾಮೋದರ್ ನದಿಯು ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳ ರಾಜ್ಯದಲ್ಲಿ ಹರಿಯುವ ನದಿಯಾಗಿದೆ. # ದಾಮೋದರ್ ನದಿಯನ್ನು ಪಶ್ಚಿಮ ಬಂಗಾಳದ ಕಣ್ಣೀರಿನ ನ...