ಕಸವನು ಹಸಿ ಒಣವೆಂದು ವಿಂಗಡಿಸಲಾರದವರು ಅದೆಷ್ಟು ಸುಲಭವಾಗಿ ಮನಸ್ಸುಗಳ ವಿಂಗಡಿಸಿಬಿಡುತ್ತಾರೆ ಬಳಸಿ ಡಸ್ಟ ಬಿನ್ ಗೂ ಎಸೆದು ಬಿಡುತ್ತಾರೆ ಕಸಪೊರಕೆಗೂ ಧರ್ಮದ ಅಮಲೇರಿರಬಹುದು ಕೆಲವ ಗುಡಿಸಿ ಕೆಲವ ಪೋಷಿಸಿ ಹೊರಟಿದೆ ಬೀದಿಯಲಿ ಡಸ್ಟಬಿನಗಳೂ ಸದ್ದು ಮಾಡುತಿವೆ ವಿಪರೀತ ಬಹುಶಃ ಚುನಾವಣೆ ಹತ್ತಿರ ಬಂದಿರಬಹುದು ಹಸಿದ ಮೇಕೆಯೊಂದು ನೇತಾರನ ಕೊರಳ ಮಾಲೆಯ ತಿಂದು ಜೈ ಎನುತಿದೆ ಉದರ ಹೊರೆದ ಖುಷಿಯಲಿ ನೋಟಿನ ಮೇಲಿರುವ ಗಾಂಧೀ ಕಣ್ಣಲ್ಲಿ ನೀರು ಜಿನುಗುತ್ತಿದೆ ಬಹುಶಃ ಸುತ್ತಲಿನ ಕಸದ ಕಣವೊಂದು ಬಿದ್ದಿರಬಹುದು ಗಾಂಧಿ ಕನ್ನಡಕ ತೆಗೆಯಬಾರದಿತ್ತು ಸ್ವಾತಂತ್ರ್ಯದ ಹೆಸರಿನಲ್ಲಿ
EDUCATION | ENTERTAINMENT | INFOTAINMENT