Skip to main content

Posts

ಗಝಲ್ @ ಆನಂದ ವೀ ಮಾಲಗಿತ್ತಿಮಠ

ಮಣ್ಣು ಹೊತ್ತ ಹೆಗಲಿಗಂದು ಸುರಿಸಿದ ಬೆವರು ಗೊತ್ತಿತ್ತು ಉರಿದ ಕಣ್ಣಿಗಂದು ಧೂಳುದುರಿ ಹರಿದ ‌ಕಣ್ಣೀರು ಗೊತ್ತಿತ್ತು ಇಟ್ಟಿಗೆಗಳ ಜೋಡಿಸುವಾತನು ಬರೀ  ಗೋಡೆಯನು ಕಟ್ಟಿದ ಮೂಢನಿಗಲ್ಲಿ ಮೂಡಿ ಬಂದ ಆಕಾರದ ಹೆಸರು ಗೊತ್ತಿತ್ತು ದಣಿದು ತಾ ಕುಣಿದು ಉಳಿಯು ಮೂಡಿಸಿದ್ದು ಶಿಲ್ಪಚಿತ್ತಾರ ಕಿಡಿಹಾರಲಲ್ಲೂ ಚಳಿಕಾಯಿಸುವ ಜನ ಮೂಳರು ಗೊತ್ತಿತ್ತು ಮಂದಿರವೋ ಮಸೀದಿಯೋ ಮತ್ತೊಂದೋ ಏನಿದೆಯೋ ಗೋಡೆಯ ಗೂನು ಬೆನ್ನಿಗಲ್ಲಿ ಹೊರುವ ತೊಡರು ಗೊತ್ತಿತ್ತು ಮತ್ತೆ ಮತ್ತೆ ಹಳೆಯ ಗೋಡೆಗಳ ಗೊಡವೆಯೇಕೆ 'ಅಥರ್ವಾ' ಗುಂಬಜಕ್ಕೂ ಅಂಬುಜಕ್ಕೂ ಭಾವವೊಂದೇ 'ದೇವರು' ಗೊತ್ತಿತ್ತು

ಸೂಟ್ ಕೇಸ್ @ ಆನಂದ ಮಾಲಗಿತ್ತಿಮಠ ಕತೆ

   ಯಾಕೆ ರಮ್ಯಾ ಹಿಂಗ ಸಿಡಕ್ತಾಯಿದಿಯಾ? ಕುತೂಹಲದಿಂದ ಪ್ರಶ್ನಿಸಿದಳು ಕವಿತಾ.    ನಾನೆಂದರೇನು? ನನ್ನ ಸ್ಟೇಟಸ್ ಅಂದರೇನು? ಚಿಟಿಕೆ ಹೊಡೆದ್ರೆ ಹತ್ತಾರು ಆಳುಗಳು ನಡುಬಗ್ಗಿಸಿ ನಿಲ್ತಾವೆ. ಒಂದು‌ ಸಣ್ಣ ಮುಗುಳ್ನಗೆಗೆ ನೂರಾರು ಹುಡುಗರು ಗುಲಾಮರಾಗಿ ಶರಣಾಗ್ತಾರೆ...ಅಂತಹುದರಲ್ಲಿ ಆ ಸಂಜಯ್ ನನ್ನ ನೋಡಿದ್ರೂ ನೋಡದಂತೆ ಹೋಗ್ತಾನಲ್ಲಾ ಕೊಬ್ಬು ಆತನಿಗೆ..ನಾನೂ ನೋಡ್ತೇನಿ ಎಷ್ಟ ದಿನಾ ಮುಖಾ ತಿರುಗಿಸಿ ಹೋಗ್ತಾನೋ ಎಂದು ಕೋಪದಿಂದ ಕೆಂಪೇರಿದ ಕೆನ್ನೆಯ ಹುಡುಗಿ ರಮ್ಯಾ ನುಡಿದಳು. ****** ಸಂಜಯ್ ಪಾಪ..ಮಿಡ್ಲ ಕ್ಲಾಸು ಹುಡುಗ. ವಯಸ್ಸಲ್ಲಿ ಲವ್ ಮಾಡಬೇಕು ಅಂದ್ರೆ ದುಡ್ಡಿರಲಿಲ್ಲ. ದುಡ್ಡಿದ್ದಾಗ ವಯಸ್ಸಿರಲಿಲ್ಲ. ಹಾಗೂ ಹೀಗೂ ಅವರಪ್ಪ ಕಷ್ಟಪಟ್ಟು ಡಿಗ್ರಿ ಓದಿಸಿದ್ದರು. ಯಾರೋ _"ಲೇ ಸಂಜ್ಯಾ ಕಾಂಪಿಟೇಟಿವ್ ಎಕ್ಸಾಂ ಕಟ್ಟಲಾ ಏನಾದ್ರೂ ಗೌರ್ಮೆಂಟು ಜಾಬ್ ಆದರೆ ಜೀವನಾ ಸುಧಾರಸ್ತದ" ಅಂದರು. ಈತನೋ ಕಟ್ಟಿಯೇ ಕಟ್ಟಿದ...ಒಂದರ ಮೇಲೆ ಒಂದು. ಎಲ್ಲದರಲ್ಲೂ ಗೋತ. ಈ ಕಾಂಪಿಟೇಟಿವ್ ಎಕ್ಸಾಂ ಕಟ್ಟೋ ರೊಕ್ಕದಾಗ ಎರಡ ಚುಲೋ ಮೂಡಲಗಿ ಎಮ್ಮಿ ಕಟ್ಟಬಹುದಾಗಿತ್ತು, ನಾಕ ಕಾಸ ಆದರೂ ಸಂಪಾದನೆಯಾಗ್ತಿತ್ತು ನಿನ್ನ ಹೆಣಾ ಎತ್ಲಿ ಎಂದು ಹಡದವ್ವ ಹಲಗಿ ಹೊಡದಂಗ ಬೈದಳು. ಎರಡ ದಿನದಾಗ ಆಕಿಗೆ ಈತ ಹಲಗಿ ಹಚ್ಚಿದ. ಎಲ್ಲಾ ಬಿಟ್ಟ...ಜೊತೆಗೆ ಗಡ್ಡಾನೂ. ಸಹವಾಸ ಕೆಟ್ಟಿತು. ಹಾಸಿಗೆ ಯಾವುದೋ ಹೇಸಿಗೆ ಯಾವುದೋ ಅನ್ನದ ಕುಡಕುಡದ ಸಿಕ್ಕಲ್ಲ...

ಪೈಲ್ವಾನ‌ ಮಾಸ್ತರ್ @ ಸಂದೀಪ ಕುಲಕರ್ಣಿ

ಮಾದಾಪೂರದ ಬೋರೆಗೌಡ್ರು ಊರಿಗೆನೇ ದೊಡ್ಡ ದನಿಗಳು..ತಮ್ಮ ಮಕ್ಕಳನ್ನ ಚೆನ್ನಾಗಿ ಉಗಿತ್ತಿದ್ದರು..ನೋಡರೋ ಆ ಮುದುಕಪ್ಪನ್ನ ಮಕ್ಕಳನ್ನ..ಎಷ್ಟೇ ಬಡತನದಲ್ಲಿದ್ದರೂ ಚೆನ್ನಾಗಿ ತಿಂದು ಕೊಬ್ಬಿದ,ಮಥಿಸಿದ ಗಜಾ ಇದ್ದಂಗ ಇದ್ದರಲ್ಲೋ..ನೀವು ಅದಿರಿ..ಎನ್ ತಿಂದರೂ ಬಡಶುಂಠಿ ಬೇರ ಆಗಿದಿರಲ್ಲೊ..?? ಚಪಾತಿ,ರೊಟ್ಡಿ,ಮುದ್ದೆ,ಗೋದಿ ಪಾಯಸ ಯಾವುದು ನಾಟತಾ ಇಲ್ಲ ನಿಮಗೆ..ನಿಮ್ಮ ಮೊಖಕ್ಕೊಂದು ಉಗಿಯಾ..ಎಂದು ಮಕ್ಕಳನ್ನ ತರಾಟೆಗೆ ತೊಗಿಂಡಿದ್ರು ಊರಗೌಡ್ರು. ಆ ಕಡೆ ಮುದುಕಪ್ಪನ ಮಗ ಮಲ್ಲೇಶ ಒತ್ತಾರೆನೆ ಇದ್ದು ಮೇವು ತಂದಿ ಹೊಳಿ ಕಡೆ ಹೋಗಿ ಒಂದ ಗಂಟೆ ಈಜಾಡಿ ಬಂದು ಗೋದಿ ಪಾಯಸ,ಶೇಂಗಾ ಬೆಲ್ಲ ಎನ ಕೊಟ್ಟಿದ್ದು ಚೆನ್ನಾಗಿ ಚಚ್ಚಿ ಒಳ್ಳೆ ಜವಾರಿ ಎತ್ತಿನ ಮೈಕಟ್ಟನಂಗ ಆಗಿದ್ದ...ಸಾಲಿ ಕಲಿತಿದ್ದು ಟಿ‌ಸಿಎಚ್ ವರೆಗೆ..ಆದರೆ ಕಡಿಮೆ ಅಂಕ ಬಂದಿದ್ದರಿಂದ ನೌಕರಿ ಗಿಟ್ಟಿರಲಿಲ್ಲ..ಹೀಗಾಗಿ ಅಲ್ಲೆ ಇಲ್ಲಿ ನಡಿಯೋ ಕುಸ್ತಿ ಸ್ಪರ್ದೆ ಲಿ ಭಾಗವಹಿಸಿ ಅವರು ಇವರಿಗೆ ಕುಸ್ತಿ ತರಬೇತಿ ಕೊಟ್ಡು ಜೀವನ ಸಾಗಸ್ತಾ ಇದ್ದ..  ಅವನ ಊಟಾ ಮಾಡೋ ಪದ್ದತಿನೂ ಅದ್ಭುತ...ಹಾಲನ್ಯಾಗ ನಾಲ್ಕ ರೊಟ್ಟಿ,ಮೊಸರನ್ಯಾಗ ನಾಲ್ಕ ರೊಟ್ಟಿ,ಮಜ್ಜಗ್ಯಾಗ ನಾಲ್ಕ ರೊಟ್ಡಿ.ಜೊತೆಗೆ ಒಂದ ತಾಟ ಅನ್ನ ಊಟಾ ಮಾಡತಿದ್ದ...ಹಿಂಗ ದೂಸಾ ಕಳದವೂ..ಆದರೂ ನೌಕರಿ ಹತ್ತಲಿಲ್ಲ..       ನೌಕರಿ ನನಗ ಸಿಗೊದಿಲ್ಲ ಅಂತ ಅನ್ನಕೊಂಡು ಬೆಂಗಳೂರಿಗೆ ಬರ್ತಾನೆ ಮಲ್ಲೇಶಪ್ಪ..ಪ್ರಭಾವ...