Skip to main content

Posts

ಗೋಡೆ @ ಆನಂದ ಮಾಲಗಿತ್ತಿಮಠ ಕವಿತೆ

ಒಂದು ಸಹಾಯ ಮಾಡಿ ಬಡ ಗೋಡೆಯೆಂದು ಹೊರಡಬೇಡಿ ನಡು ಬಾಗಿದರೂ ತೊಲೆ ಹೊತ್ತು ನಿಂತಿರುವೆ ಮುದಿಯೆಂದು ತೆಗಳಬೇಡಿ ಮೈತುಂಬ ಮದರಂಗಿ ಕೆಂಪು ಗಾಯಗಳು ಸಮರದ ಗುಂಡು ತಾಗಿದುದಲ್ಲ ಕಲೆತವರ ಉಳಿಯೇಟಿನ ಕಲೆಗಳವು ಕಲೆಗಾರರು ಚಿತ್ರಿಪ ಸುಂದರ ಶಿಲ್ಪಗಳಲ್ಲ ಸಿಗರೇಟಿನ ಮೋತಿ ನೀಡಿದ ಮುತ್ತುಗಳು ಕನ್ಯೆಯ ಕೆನ್ನೆಗಿಟ್ಟ ದೃಷ್ಠಿ ಬೊಟ್ಟುಗಳಲ್ಲ ಸುಟ್ಟ ಮನದ ಸೋರು ಛಾವಣಿ ಹನಿಗಳು ಕರುಣೆ ಪಡೆಯಲು ಮಾಡಿದ ಪಟ್ಟುಗಳಲ್ಲ ತಾಂಬೂಲು ತಿಂದುಗಿದ ಚಿತ್ತಾರಗಳು ಪಾತಿರ್ವತೆಯ ಕೆಂಪು ಸಿಂಧೂರವಲ್ಲ ಸಾರಾಯಿ ಅಮಲಿನಲಿ ಕಕ್ಕಿದ ಅನ್ನದಗುಳು ಅಂಗಳದಲಿಟ್ಟ ಶುಭ ರಂಗೋಲಿಯಲ್ಲ ಒಂದು ಸಹಾಯ ಮಾಡಿ ನಾನು ಸರ್ಕಾರಿ ಶಾಲೆ ಗೋಡೆ ನಿಲ್ಲಿಸಿಬಿಡಿ ಇಂತಹ ಅತ್ಯಾಚಾರ

ಅವ್ವ ಮತ್ತು ಆಲದಮರ @ ಶಿವಾನಂದ ಉಳ್ಳಿಗೇರಿ

    ಶಿವಾನಂದ ಉಳ್ಳಿಗೇರಿ ಅವರ ಅವ್ವ ಮತ್ತು ಆಲದ ಮರ ಕವನ ಸಂಕಲನವು ಒಂದೇ ಗುಕ್ಕಿನಲ್ಲಿ ಓದಿಸಿಕೊಂಡು ಹೋಗುತ್ತದೆ. ಅಂದದ ಮುಖಪುಟ ವಿನ್ಯಾಸ ಹಾಗೂ ಒಳಪುಟಗಳಲ್ಲಿ ಚಂದನೆಯ ಚಿತ್ರಗಳು ಓದುಗರ  ಮನಸೆಳೆಯುತ್ತವೆ. ಅವ್ವನ ಮೇಲಿರುವ ಅವರ ಅತಿಯಾದ ಪ್ರೀತಿಯು ಕಾವ್ಯ ರೂಪವನ್ನು ಪಡೆದಿದೆ.    ಶಿವಾನಂದ್ ಉಳ್ಳಿಗೇರಿ ಅವರ ಬಹಳಷ್ಟು ಕವಿತೆಗಳಲ್ಲಿ ತಮ್ಮನ್ನು ತಾವೇ ಸಂತೈಸಿಕೊಂಡು ಸಾಗುವ, ಬದುಕಿಗೆ ಪ್ರೇರಣೆ ಆಗಬಲ್ಲ, ಬದುಕಿನ ಬಗ್ಗೆ ಆಶಾಕಿರಣ ಮೂಡಿಸಬಲ್ಲ ಸಾಲುಗಳನ್ನು ಬರೆದಿದ್ದಾರೆ. ಕವಿಯ ಹೃದಯದ ತುಮುಲಗಳನ್ನು ಅವರ ಅವ್ವ ಮತ್ತು ಆಲದ ಮರ ಕಾವ್ಯ ಸಂಕಲನದಲ್ಲಿ ಕಾಣಬಹುದು. ಒಮ್ಮೆ ಬರಗಾಲಕ್ಕೆ ಕವಿಯ ಹೃದಯ ಮರುಗಿದರೆ ಮತ್ತೊಮ್ಮೆ ಬಿರುಸಾಗಿ ಸುರಿಯುವ ಮಳೆಯ ಕುರಿತು ಅವರ ಭಾವ ಕಾವ್ಯ ಝರಿಯಾಗಿ ಹರಿಯುತ್ತದೆ.     ಪ್ರೀತಿ ಇಲ್ಲದೆ  ಕವಿತೆ ಸಾಧ್ಯವಿಲ್ಲ ಎನ್ನುವಂತೆ ಪ್ರಸ್ತುತ ಸಂಕಲನದಲ್ಲಿ ತಮ್ಮ ಪ್ರೇಯಸಿಯನ್ನು  ನೆನಪಿಸಿಕೊಳ್ಳದೆ, ಅವಳ ಸುತ್ತ ಕವಿತೆ ಕಟ್ಟದೆ ಇರಲಾಗದೆ ಶಿವಾನಂದರವರು ಸಹಜವಾಗಿಯೇ ಪ್ರೀತಿಯ ಸಾಲುಗಳನ್ನು ಬರೆಯುತ್ತಾರೆ. ಅವ್ವನ ರೂಪವೇ ಅಕ್ಕ ಎನ್ನುವುದನ್ನು ಅವರು ಕವಿತೆಯಲ್ಲಿ ಅಕ್ಕನ ಜೊತೆ ಒಡನಾಡಿದ ಸಂದರ್ಭಗಳನ್ನು ಸೆರೆಹಿಡಿಯುತ್ತಾರೆ. ಅಪ್ಪನ ಪ್ರೀತಿಯಿಂದ ವಂಚಿತರಾದ  ತಮ್ಮ ಮನದ ಆರ್ತನಾದವನ್ನು ಅಪ್ಪ ಎಂಬ ಕವಿತೆಯಲ್ಲಿ ಓದುಗರ ಎದೆಗೆ ಆಪ್ತವಾಗಿ ಇಳಿಸಿ ಬಿಡುತ್ತ...

ನನ್ನವರು@ ಆನಂದ ಮಾಲಗಿತ್ತಿಮಠ 'ಗಜಲ್'

ಆ ಮುಳ್ಳು ಅಮಾಯಕತೆಯ ಪ್ರತೀಕ ಬಿಡಿ ಚುಚ್ಚಿದ್ದು ನನ್ನವರೆ. ಆ ಚಿನ್ನದ ಕತ್ತಿಯದೇನೂ ತಪ್ಪಿರಲಿಲ್ಲ ಬೆನ್ನಿಗಿರಿದಿದ್ದು ನನ್ನವರೆ. ನಂಬಿಕೆಯ ಅರಮನೆ ಸುಡುತಿರಲು ಕರಿ ಬೂದಿಯ ಕಲರವ ಕಣ್ಣೀರು ಸುರಸಿ ನಂದಿಸಲು ಬರಬೇಡಿ ಸುಟ್ಟಿದ್ದು ನನ್ನವರೆ. ಸ್ನೇಹದ ಪರಿಮಳದಲ್ಲಿ ಕೊಳೆತ ಶವದ ವಾಸನೆಯು ಬೆರೆತಿದೆ ಅದು ಮೋಸವೆಂದು ಚಿತ್ಕರಿಸಿ ಸಾರಬೇಡಿ ಮಾಡಿದ್ದು ನನ್ನವರೆ. ಗಾಜಿನ ಮನಸ್ಸಿಗೆ ಒಡೆವ ಕಲ್ಲಿನ ಮೇಲೆಯೆ ಮೋಹ ಜಾಸ್ತಿ ತಾಗಿದರೂ ಚುಂಬನವೆಂದು ತಿಳಿದುಬಿಡಿ ಎಸೆದದ್ದು ನನ್ನವರೆ. ಮೈಮರೆತು ಮಲಗಿದರೂ ಸಮಾಧಿಯೆಳೆದು ಶೋಕಿಸುತ್ತಾರಿಲ್ಲಿ  ಮುಖವಾಡಗಳನು ದೂರುತ್ತಿಲ್ಲ ಅಥರ್ವಾ ತೊಟ್ಟಿದ್ದು ನನ್ನವರೆ