ಶೀಲವಿಲ್ಲದ ಶೀಲಾ, ವಿದ್ಯೆಯಿಲ್ಲದ ಮುಗ್ದೆ ಶೀಲಾ, ಬೆಳ್ಳಗಿರುವುದೆಲ್ಲ ಹಾಲು, ಹೊಳೆಯುವುದೆಲ್ಲಾ ಚಿನ್ನ ಎಂದು ನಂಬಿದ ಶೀಲಾ, ಆಧುನಿಕ ಪ್ರಪಂಚದ ಚಕ್ರವ್ಯೂಹದೊಳಗೆ ಬಂಧಿಯಾದ ಶೀಲಾ....ಶೀಲಾಳ ಕತೆ ಓದುತ್ತಾ ಹೋದಂತೆ ಕಣ್ಣೆವೆಗಳು ಆರ್ದ್ರವಾಗುತ್ತವೆ. ಪ್ರಸ್ತುತ ಲೋಕದ ಕನ್ನಡಿಯಂತೆ ಚಿತ್ರಿತವಾಗಿದೆ ಶ್ರೀಮತಿ ವಿದ್ಯಾರೆಡ್ಡಿಯವರ ಮಂಜು ಮುಸುಕಿದ ಹಾದಿ. ಮಂಜು ಮುಸುಕಿದ ಹಾದಿ ನಮ್ಮೆಲ್ಲರನ್ನೂ ಸುಲಭವಾಗಿ ಓದಿಸಿಕೊಂಡು ಹೋಗುವುದರೊಂದಿಗೆ ಚಿಂತನೆಗೂ ಹಚ್ಚುತ್ತದೆ. ಕಾದಂಬರಿಯ ಪಾತ್ರಗಳು ನಮ್ಮ ಸುತ್ತಲಿನ ವ್ಯಕ್ತಿಗಳಲ್ಲಿಯೇ ಅಂತರ್ಗತವಾಗುತ್ತ ಹೋಗುವುದು ಇದರ ವಿಶೇಷ. ಶ್ರೀಮತಿ ವಿದ್ಯಾರೆಡ್ಡಿಯವರು ಕಾದಂಬರಿಯುದ್ದಕ್ಕೂ ಓದುಗರನ್ನು ಕರೆದುಕೊಂಡು ಹೋಗುತ್ತಾರೆ. ಇಲ್ಲಿ ಓದುಗರಿಗೂ ಹಾಗೂ ನಿರೂಪಕರಿಗೂ ಅರಿವಾಗದಂತೆಯೇ ಒಂದು ರೀತಿ ಆಪ್ತತೆ ಬೆಳೆದು ಬಿಡುತ್ತದೆ. ಕಾದಂಬರಿಯ ಕಥಾವಸ್ತುವಿಗೆ ಬರುವುದಾದರೆ ಇಲ್ಲಿ ಶೀಲಾಳ ಜೀವನವೇ ಪ್ರಮುಖವಾಗಿದ್ದು ಕ್ರೌರ್ಯವು ಹೇಗೆ ಮುಗ್ಧತೆಯನ್ನು ಆವರಿಸಿಕೊಳ್ಳುತ್ತಾ ಹೋಗಿ ಕೊನೆಗೆ ಆಹುತಿಯನ್ನು ಪಡೆಯುತ್ತದೆ ಎಂಬುವುದನ್ನು ಕಾಣಬಹುದಾಗಿದೆ. ನರಸಾಪೂರವೆಂಬ ಹಳ್ಳಿಯ ಕುಟುಂಬವೊಂದರಿಂದ ಆರಂಭವಾಗುವ ಕತೆ ಶೀಲಾಳ ಅಪ್ಪನ ಸಾವಿನೊಂದಿಗೆ ಓಘವನ್ನು ಪಡೆದುಕೊಳ್ಳುತ್ತದೆ. ಸ್ವರ್ಗ ನರಕಗಳು ಬೇರಿಲ್ಲ, ಈಗ ಮಾಡಿರುವುದನ್ನು ಇಲ್ಲಿಯೇ ತೀರಿಸಬೇಕು ಎಂಬ ತತ್ವವನ್ನು ನಾವು ಕತೆಯಲ್ಲಿ ಗಮನಿಸಬಹುದು. ಮುಗ್ಧರ ಸುಲಿ...
EDUCATION | ENTERTAINMENT | INFOTAINMENT